ಗಾಜಾಗೆ ತೆರಳುತ್ತಿದ್ದ ದೊಡ್ಡ ದೋಣಿ ವಶಕ್ಕೆ: ಗ್ರೆಟಾ ಥನ್‌ಬರ್ಗ್ ಇಸ್ರೇಲ್‌ನಿಂದ ಗಡಿಪಾರು

Date:

ಗಾಜಾಕ್ಕೆ ನೆರವು ಸಾಮಗ್ರಿಗಳನ್ನು ಹೊತ್ತು ತೆರಳಿದ್ದ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್ ಮತ್ತು ಇತರರು ಇದ್ದ ದೊಡ್ಡ ದೋಣಿಯನ್ನು ಇಸ್ರೇಲ್ ವಶಕ್ಕೆ ಪಡೆದಿದೆ. ಇದಾದ ಒಂದು ದಿನದಲ್ಲೇ ಗ್ರೆಟಾ ಥನ್‌ಬರ್ಗ್ ಅವರನ್ನು ಮಂಗಳವಾರ ಇಸ್ರೇಲ್‌ನಿಂದ ಗಡಿಪಾರು ಮಾಡಲಾಗಿದೆ

- Advertisement -

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಇಸ್ರೇಲ್ ವಿದೇಶಾಂಗ ಸಚಿವಾಲಯ, ವಿಮಾನದಲ್ಲಿರುವ ಥನ್‌ಬರ್ಗ್ ಅವರ ಫೋಟೋವನ್ನು ಹಂಚಿಕೊಂಡಿದೆ. “ಗ್ರೆಟಾ ಥನ್‌ಬರ್ಗ್ ಗಡಿಪಾರಾಗಿದ್ದಾರೆ. ಇಸ್ರೇಲ್‌ನಿಂದ ಹೊರಟಿರುವ ಅವರು ಫ್ರಾನ್ಸ್‌ ಮೂಲಕ ಸ್ವೀಡನ್‌ಗೆ ತೆರಳಲಿದ್ದಾರೆ” ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು...

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ ನೆನಪಾಗುತ್ತವೆ. ಅಲ್ಲಿನ ಜನರ ಬದುಕಿನ ಶಿಸ್ತು, ಸಾರ್ವಜನಿಕ ಸ್ಥಳಗಳ ಮೇಲಿನ ಅವರ ಹೊಣೆಗಾರಿಕೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಇರುವ...

ʼಹಿಂದೆ ಸರಿಯುವ ಮಾತೇ ಇಲ್ಲʼ; ದೆಹಲಿ ಬೀದಿಗಳಲ್ಲಿ ಅಬ್ಬರಿಸುತ್ತಿರುವ...

ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರು...

ಇದನ್ನು ಓದಿದ್ದೀರಾ? ನಾವಿರುವ ದೊಡ್ಡ ದೋಣಿಯನ್ನು ಇಸ್ರೇಲ್ ಅಪಹರಿಸಿದೆ: ಪರಿಸರ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್

ಥನ್‌ಬರ್ಗ್ ಮತ್ತು ಇತರ ಕಾರ್ಯಕರ್ತರನ್ನು ಪ್ರತಿನಿಧಿಸುವ ಇಸ್ರೇಲ್‌ನಲ್ಲಿರುವ ಕಾನೂನು ಹಕ್ಕುಗಳ ಗುಂಪು ಅದಾಲಾ, ಥನ್‌ಬರ್ಗ್, ಇತರ ಇಬ್ಬರು ಕಾರ್ಯಕರ್ತರು ಮತ್ತು ಪತ್ರಕರ್ತೆಯೊಬ್ಬರು ಗಡಿಪಾರು ಮತ್ತು ಇಸ್ರೇಲ್ ಅನ್ನು ತೊರೆಯಲು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಹಾಗೆಯೇ ಇತರರು ಗಡಿಪಾರು ನಿರಾಕರಿಸಿದ್ದು ಅವರನ್ನು ಬಂಧನದಲ್ಲಿಡಲಾಗಿದೆ. ಅವರ ಪ್ರಕರಣವನ್ನು ಇಸ್ರೇಲಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಲಿದ್ದಾರೆ ಎಂದು ಅದಾಲಾ ಹೇಳಿದೆ.

ಯುದ್ಧದಿಂದ ಹಾನಿಗೊಳಗಾದ ಗಾಜಾದಲ್ಲಿರುವ ಜನರಿಗೆ ಸಹಾಯವನ್ನು ಸಾಗಿಸುವ ದೊಡ್ಡ ದೋಣಿ ಮೂಲಕ ಗ್ರೆಟಾ ಥನ್‌ಬರ್ಗ್ ಸೇರಿ 12 ಅಂತಾರಾಷ್ಟ್ರೀಯ ಕಾರ್ಯಕರ್ತರು ಹೊರಟಿದ್ದರು. ಗ್ರೆಟಾ ಮಾತ್ರವಲ್ಲದೇ ಈ ದೊಡ್ಡ ದೋಣಿಯಲ್ಲಿ ಮಾನವ ಹಕ್ಕು ಹೋರಾಟಗಾರ್ತಿ ರಿಮಾ ಹಸನ್, ಸಾಮಾಜಿಕ ಕಾರ್ಯಕರ್ತರಾದ ರೇವಾ ವಿಯಾರ್ಡ್, ಬ್ಯಾಪ್ಟಿಸ್ಟ್ ಆಂಡ್ರೆ, ಪ್ಯಾಸ್ಕಲ್ ರೇಮಂಡ್ ಮೌರಿಯರಾಸ್, ಯಾನಿಸ್ ಮಹಮ್ಡಿ(ಇವರೆಲ್ಲರೂ ಫ್ರಾನ್ಸ್‌ನವರು), ಸೆರ್ಗಿಯೊ ಟೊರಿಬಿಯೊ (ಸ್ಪೇನ್), ಮಾರ್ಕ್ ವ್ಯಾನ್ ರೆನ್ನೆಸ್ (ಡೆನ್ಮಾರ್ಕ್), ಹುಸೇಯಿನ್ ಶುಯೆಬ್ ಒರ್ಡು (ಟರ್ಕಿ), ಯಾಸೆಮಿನ್ ಅಕಾರ್ (ಜರ್ಮನಿ), ಮತ್ತು ಥಿಯಾಗೊ ಅವಿಲಾ (ಬ್ರೆಜಿಲ್) ಇದ್ದರು.

ಆದರೆ ಈ ದೊಡ್ಡ ದೋಣೆಯನ್ನು ಇಸ್ರೇಲಿ ನೌಕಾ ಪಡೆಗಳು ಸೋಮವಾರ ಮುಂಜಾನೆ ಗಾಜಾದ ಕರಾವಳಿಯಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿ ವಶಕ್ಕೆ ಪಡೆದಿದೆ. ಈ ಬೆನ್ನಲ್ಲೇ “ನಾವಿರುವ ದೊಡ್ಡ ದೋಣಿಯನ್ನು ಇಸ್ರೇಲ್ ಅಪಹರಿಸಿದೆ” ಎಂದು ಗ್ರೆಟಾ ಹೇಳಿದ್ದರು. ಆದರೆ ಇಸ್ರೇಲ್ ಈ ಆರೋಪವನ್ನು ಅಲ್ಲಗಳೆದು “ದೊಡ್ಡ ದೋಣಿ ಸುರಕ್ಷಿತವಾಗಿ ಇಸ್ರೇಲ್ ತೀರಕ್ಕೆ ತಲುಪಿದೆ. ಅವರು(ಕಾರ್ಯಕರ್ತರು) ತಮ್ಮ ತಮ್ಮ ದೇಶಗಳಿಗೆ ಮರಳುವ ನಿರೀಕ್ಷೆಯಿದೆ” ಎಂದು ಇಸ್ರೇಲ್ ಹೇಳಿತ್ತು. ಇದೀಗ ಗ್ರೆಟಾ ಗಡಿಪಾರು ಮಾಡಲಾಗಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತನ್ನ ಕಾದಂಬರಿಗಳ ಪಾತ್ರಗಳಂತೆಯೇ ಜೀವಿಸಿದ್ದ ಜನಪ್ರಿಯ ಕಾದಂಬರಿಕಾರ ಜೆಫ್ರಿ ಆರ್ಚರ್!

ಜನಪ್ರಿಯ ಕಾದಂಬರಿಕಾರ ಜೆಫ್ರಿ ಆರ್ಚರ್, ತಮ್ಮ 86ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಸೇನೆ,...

‘ಡಾವ್ನ್‌ ಆಫ್ ಯೆಮನ್’ ಕಾರ್ಯಾಚರಣೆ: ಅಲ್-ವಝೀಯಾ ಮರಳಿ ಪಡೆಯಲು ಯೆಮನ್ ಪಡೆಗಳ ದಾಳಿ

ಸನಾ: ಯೆಮನ್‌ನ ಅಂತಾರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಸರ್ಕಾರದ ಪಡೆಗಳು, ಹೂತಿಗಳ ವಶದಲ್ಲಿರುವ ಪರ್ವತ...

ಈಜಿಪ್ಟ್‌ನ ಪುರಾತನ ಸೇನಾ ಕೋಟೆಯಲ್ಲಿ 3 ಸಾವಿರ ವರ್ಷಗಳ ಹಳೆಯ ಕುದುರೆಯ ಅಸ್ಥಿಪಂಜರ ಪತ್ತೆ

ಈಜಿಪ್ಟ್‌ನ ಪಶ್ಚಿಮ ನೈಲ್ ಡೆಲ್ಟಾ ಭಾಗದಲ್ಲಿರುವ ಪುರಾತನ ಸೇನಾ ಕೋಟೆಯೊಂದರಲ್ಲಿ ಸುಮಾರು...