ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಳ; ಶಾಲೆಗಳಲ್ಲಿ ಲಿಂಗಸಮಾನತೆಯ ಪಾಠದ ಕೊರತೆ

Date:

Advertisements
2022 ರಲ್ಲಿ ಮಹಿಳೆಯರ ವಿರುದ್ಧದ 4,45,256 ಅಪರಾಧ ಪ್ರಕರಣಗಳು ದಾಖಲಾಗಿವೆ. ಇದು 2021ರ ಸಂಖ್ಯೆಗಳಿಂದ 4% ಹೆಚ್ಚಳವಾಗಿದೆ.

ರಾತ್ರಿಯ ಹೊತ್ತಿನಲ್ಲಿ ಒಬ್ಬೊಬ್ಬರೇ ಬಸ್‌ಗಳಲ್ಲಿ ಪ್ರಯಾಣ ಮಾಡುವಾಗ, ಸಾರ್ವಜನಿಕ ಸ್ಥಳಗಳಲ್ಲಿ ಕಳೆಯುವಾಗ ಅತಿಯಾದ ಆತಂಕವಾಗುವುದು ಪುರುಷರಿಗೋ ಅಥವಾ ಮಹಿಳೆಯರಿಗೋ? ಲೈಂಗಿಕ ದೌರ್ಜನ್ಯ ಆದಾಗ ಮಹಿಳೆಯರ ವಸ್ತ್ರದ ಬಗೆಗೆ ಚಿಂತನೆ ಏಕೆ? ಸಮಾಜದಲ್ಲಿ ಲಿಂಗ ತಾರತಮ್ಯ ಏಕೆ ಇವೆ? ಇವೆಲ್ಲವು ಬಹಳ ಸರಳವಾದ ಪ್ರಶ್ನೆಗಳಾದರೂ ಇದಕ್ಕೆ ಉತ್ತರ ಕೊಡುವುದು ಅಷ್ಟೇ ಕಷ್ಟ.

ಇದು ಇತ್ತೀಚಿಗೆ ಬಂದ ಸಮಸ್ಯೆಯಲ್ಲ, ಶತಮಾನಗಳ ಉದ್ದಕ್ಕೂ ಮುಂದುವರೆದ ತೊಂದರೆ. ಮಹಿಳೆಯರ ವಿರುದ್ಧ ಅಪರಾಧಗಳ ಸಂಖ್ಯೆಯು ದಿನೇ ದಿನೇ ಹೆಚ್ಚುತ್ತಲೇ ಇವೆ. 2022 ರಲ್ಲಿ ಮಹಿಳೆಯರ ವಿರುದ್ಧದ 4,45,256 ಅಪರಾಧ ಪ್ರಕರಣಗಳು ದಾಖಲಾಗಿವೆ. ಇದು 2021ರ ಸಂಖ್ಯೆಗಳಿಂದ 4% ಹೆಚ್ಚಳವಾಗಿದೆ. ದೆಹಲಿಯು 144.4 %ರಷ್ಟು ಅಪರಾಧದ ಪ್ರಮಾಣವನ್ನು ದಾಖಲಿಸಿದೆ. ಇದು ಭಾರತದ ಸರಾಸರಿ ದರವಾದ 66.4ಕ್ಕಿಂತ ಹೆಚ್ಚಾಗಿದೆ. ಇದಕ್ಕೆ ತಡೆಯಿಲ್ಲದೆ ವರದಕ್ಷಿಣೆ, ಲೈಂಗಿಕ ದೌರ್ಜನ್ಯ, ಕೌಟುಂಬಿಕ ಹಿಂಸೆ, ಅತ್ಯಾಚಾರ, ಕಿರುಕುಳ, ಮೌಖಿಕ ನಿಂದನೆ ಮುಂತಾದವುಗಳಿಗೆ ಒಳಗಾಗುತ್ತಾರೆ. ಇದರಲ್ಲಿ ಬಹುತೇಕ ಪ್ರಕರಣ ದಾಖಲಾಗಲ್ಲ.

2023ರ ಜಾರ್ಜ್‌ಟೌನ್ ಇನ್‌ಸ್ಟಿಟ್ಯೂಟ್‌ ಮಹಿಳಾ ಸುರಕ್ಷತೆ ಮತ್ತು ಭದ್ರತಾ ಸೂಚ್ಯಂಕದ ಪ್ರಕಾರ, ಮಹಿಳೆಯರ ಸುರಕ್ಷತೆಯಲ್ಲಿ ಭಾರತವು 177 ದೇಶಗಳಲ್ಲಿ 128ನೇ ಸ್ಥಾನದಲ್ಲಿದೆ. ದಿನೇ ದಿನೇ ಹೆಚ್ಚುತ್ತಿರುವ ಈ ಅಪರಾಧಗಳನ್ನು ಎದುರಿಸಲು ಸರ್ಕಾರವು ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಅಷ್ಟೇ ಅಲ್ಲದೆ ಶಾಲೆಗಳಲ್ಲಿ ಸುರಕ್ಷಿತವಾದ ವಾತಾವರಣವನ್ನು ನಿರ್ಮಾಣ ಮಾಡಿ, ಲೈಂಗಿಕ ಶಿಕ್ಷಣವನ್ನೂ ನೀಡುವ ಅಗತ್ಯವಿದೆ.

Advertisements

ಚಿತ್ರದುರ್ಗದ ಒಂದು ಖಾಸಗಿ ಶಾಲೆಯಲ್ಲಿ ಹತ್ತನೆಯ ತರಗತಿಯ ಮಕ್ಕಳಿಗೆ ಮಾರ್ಗದರ್ಶನ ನೀಡುವುದಕ್ಕೆ ವಿಶೇಷ ಉಪನ್ಯಾಸ ನೀಡಲು ಸಂಪನ್ಮೂಲ ವ್ಯಕ್ತಿಯೊಬ್ಬರನ್ನು ಕರೆಸಲಾಗಿತ್ತು. ಅವರು ಮುಖ್ಯವಾಗಿ ಭಾರತದ ಸಂಸ್ಕೃತಿಯ ಮಹತ್ವದ ಬಗೆಗೆ ಹೇಳಿದರು. ಜೊತೆಗೆ ಅವರು ಮಹಿಳೆಯರ ಉಡುಪುಗಳ ಬಗ್ಗೆ ಬೇರೆ ರೀತಿಯ ಅಭಿಪ್ರಾಯವನ್ನು ಹೊಂದಿದ್ದರು. ಹೇಗೆ ಮಹಿಳೆಯರು ಬಟ್ಟೆ ತೊಡುವುದರ ಮೊದಲು ತಮ್ಮ ಕರ್ತವ್ಯಗಳ ಬಗೆಗೆ ಯೋಚಿಸಬೇಕು ಎಂದು ಮಹಿಳೆಯರ ಬಗೆಗೆ ವಿವಾದಾತ್ಮಕವಾದ ವಿಷಯವನ್ನು ಎತ್ತಿದರು. ಅವರು ಹುಡುಗಿಯರು ಸಣ್ಣಸಣ್ಣ ಬಟ್ಟೆಗಳನ್ನು ಧರಿಸುವುದರ ಬಗೆಗೆ ಟೀಕಿಸುತ್ತಿದ್ದರು. ಇದು ಅಹಿತಕರವಾದ ಸಂಗತಿ. ಹೀಗೆ ಆ ಶಾಲೆಯ ಸಭೆಯಲ್ಲಿ ಕುಳಿತಿದ್ದ ವಿದ್ಯಾರ್ಥಿನಿಯೊಬ್ಬಳು ತನ್ನ ಬೇಸರವನ್ನು ವ್ಯಕ್ತಪಡಿಸಿದಳು.

ಹತ್ತನೆಯ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳು ಆ ವಯಸ್ಸಿನಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಬೆಳೆಯುತ್ತಿರುತ್ತಾರೆ. ಹೀಗಾಗಿ ಇಂತಹ ವಿಚಾರಗಳು ಅವರ ಮೇಲೆ ಋಣಾತ್ಮಕವಾದ ಪರಿಣಾಮಗಳನ್ನು ಬೀರುವ ಸಾಧ್ಯತೆಗಳಿವೆ.

ಅಲ್ಲಿ ಹಾಜರಿದ್ದ ಒಬ್ಬ ಪೋಷಕರು ಹೀಗೆ ಹೇಳಿದರು. “ಆ ವ್ಯಕ್ತಿಯು ಹತ್ತನೇ ತರಗತಿ ಪರೀಕ್ಷೆ ಮತ್ತು ಮುಂದಿನ ಶಿಕ್ಷಣದ ಬಗೆಗೆ ಕೆಲವು ಮಾರ್ಗಸೂಚಿಗಳನ್ನು ನೀಡುತ್ತಾರೆ ಎಂದು ನಾವು ನಿರೀಕ್ಷಿಸಿದ್ದೆವು. ಆದರೆ, ಅವರು ಸಂಸ್ಕಾರದ ವಿಷಯಕ್ಕೆ ಅಂಶಕ್ಕೆ ಹೆಚ್ಚು ಒತ್ತು ನೀಡಿದರು. ಅವರು ಹುಡುಗರಿಗೆ ಬುದ್ಧಿಮಾತನ್ನು ಹೇಳದೆ ಹುಡುಗಿಯರ ವಸ್ತ್ರದ ಬಗ್ಗೆ ಮಾತಾಡಿದ್ದು ನಮಗೆ ಸರಿ ಎನ್ನಿಸಲಿಲ್ಲ”.

ಲಿಂಗ ತಾರತಮ್ಯ ಎಂಬುದು ನಿಯಂತ್ರಣಕ್ಕೆ ಬರುವುದು ಶಿಕ್ಷಣದಲ್ಲಿ ಸಮಾನತೆ ಇದ್ದಾಗ. ಆದರೆ ಶಾಲೆಗಳಲ್ಲೇ ಮಕ್ಕಳಿಗೆ ಈ ರೀತಿಯಲ್ಲಿ ಕಲಿಕೆಯನ್ನು ನೀಡಿದರೆ ಅವರು ಮುಂದೆ ಒಳ್ಳೆಯ ನಾಗರಿಕರಾಗಲು ಸಾಧ್ಯವೇ? ಮಹಿಳೆಯರ ಬಟ್ಟೆಗಳಲ್ಲಿ ದೋಷವಿದ್ದಿದ್ದರೆ ಚಿಕ್ಕ ಮಕ್ಕಳ ಮೇಲೆ ಲೈಂಗಿಕ ಬಲಾತ್ಕಾರ ಆಗುವ ಸಾಧ್ಯತೆಯೇ ಇರುತ್ತಿರಲಿಲ್ಲ. NCRB ಬಿಡುಗಡೆ ಮಾಡಿದ 2022ರ ವರದಿಯ ಪ್ರಕಾರ ಮಕ್ಕಳ ಮೇಲಿನ ಅಪರಾಧಗಳ ಪ್ರಕರಣಗಳು 2021ಕ್ಕೆ ಹೋಲಿಸಿದರೆ 8.7%ರಷ್ಟು ಹೆಚ್ಚಳವನ್ನು ತೋರಿಸಿದೆ. ಈ ಪ್ರಕರಣಗಳಲ್ಲಿ ಹೆಚ್ಚಿನವು ಅಪಹರಣಕ್ಕೆ ಸಂಬಂಧಿಸಿದೆ (45.7%) ಮತ್ತು 39.7%ರಷ್ಟು ಲೈಂಗಿಕ ಅಪರಾಧಗಳಾಗಿವೆ. ಇದನ್ನು ಪೋಕ್ಸೊ ಅಡಿ ಒಳಗೆ ದಾಖಲಿಸಲಾಗಿದೆ.

ಹದಿಹರೆಯದ ಮಕ್ಕಳಲ್ಲಿ, ಲೈಂಗಿಕ ಬಲಾತ್ಕಾರದ ಅನುಭವವು ಹತಾಶೆ, ಆತ್ಮಹತ್ಯಾ
ಆಲೋಚನೆಗಳನ್ನು ಉಂಟುಮಾಡುತ್ತದೆ. ಮಕ್ಕಳು ಹೆಚ್ಚಾಗಿ ಮುಜುಗರದ ಕಾರಣದಿಂದ ಸತ್ಯವನ್ನು ಬಹಿರಂಗಪಡಿಸುವುದಿಲ್ಲ ಮತ್ತು ಮೌನವಾಗಿರುತ್ತಾರೆ. ಲೈಂಗಿಕ ಬಲಾತ್ಕಾರ ಸಾಮಾನ್ಯವಾಗಿ ಭಯ, ಅನಿಶ್ಚಿತತೆ, ಅವಮಾನ, ಅಪರಾಧ, ಕ್ರೋಧ, ಅಸಹಾಯಕತೆ, ಖಿನ್ನತೆ ಮತ್ತು ಯಾತನೆ ಸೇರಿದಂತೆ ಬಹಳಷ್ಟು ಭಾವನೆಗಳನ್ನು ಪ್ರಚೋದಿಸುತ್ತದೆ. 2022ರ NCRB ವರದಿಯಿಂದ ಬಹಿರಂಗಗೊಂಡಂತೆ ನಮ್ಮ ಸಮಾಜದಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಹಿಂದಿನ ವರ್ಷಕ್ಕಿಂತ ಹೆಚ್ಚಿರುವುದು ನಿರಾಶಾದಾಯಕವಾಗಿದೆ.

WhatsApp Image 2024 06 18 at 13.03.43 32ba4a75
ಸುಹಾ ಅಹಮದ್‌
+ posts

ಪತ್ರಿಕೋದ್ಯಮ ವಿದ್ಯಾರ್ಥಿನಿ, ಕ್ರೈಸ್ಟ್‌ ಯುನಿವರ್ಸಿಟಿ, ಬೆಂಗಳೂರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಸುಹಾ ಅಹಮದ್‌
ಸುಹಾ ಅಹಮದ್‌
ಪತ್ರಿಕೋದ್ಯಮ ವಿದ್ಯಾರ್ಥಿನಿ, ಕ್ರೈಸ್ಟ್‌ ಯುನಿವರ್ಸಿಟಿ, ಬೆಂಗಳೂರು

2 COMMENTS

  1. It’s time to wake up for our children and it’s our responsibility to.for our children we should overcome like this types of thinking. If we are saying girl and boy equal then we should treat them same.

  2. I am little daughters mother I know today’s society and their behaviour. Some time I think when they will come as adults even know itself they are save? Because everyone judge a girl! Everyone judge not only by men also by women harsh but true.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದರೋಡೆ ಮಾಡಿ ಕೊಡುಗೆ ನೀಡುವ ಮಾಡರ್ನ್ ರಾಬಿನ್ ಹುಡ್- ಮೋದಿ!

ಇಂಗ್ಲೆಂಡಿನ ಜನಪದ ಕಳ್ಳ ರಾಬಿನ್ ಹುಡ್ ಶ್ರೀಮಂತರ ಬಂಗಲೆಗಳನ್ನು ದರೋಡೆ ಮಾಡಿ...

ಚಿತ್ರದುರ್ಗ | ಜಮೀನಿನಲ್ಲಿ ಗೊಬ್ಬರ ಹಾಕುವಾಗ ಚಿರತೆ ದಾಳಿ, ಮಹಿಳೆ ಪ್ರಾಣಾಪಾಯಾದಿಂದ ಪಾರು

ಜಮೀನಿನಲ್ಲಿ ಮುಸುಕಿನ ಜೋಳಕ್ಕೆ ಗೊಬ್ಬರ ಹಾಕುತ್ತಿರುವ ಸಮಯ ಮಹಿಳೆ ಮೇಲೆ ಚಿರತೆ...

ಸಹಕಾರ ಖಾತೆ | ಡಿಕೆ ಶಿವಕುಮಾರ್ ಗುಂಪಿಗೋ, ಜಾರಕಿಹೊಳಿ ಗುಂಪಿಗೋ?

ಕೆ.ಎನ್. ರಾಜಣ್ಣ ಅವರ ಸಹಕಾರ ಖಾತೆ ತೆರವಾಗಿದೆ. ಯಾರಿಗೆ ಎನ್ನುವುದು ಪ್ರಶ್ನೆಯಾಗಿದೆ....

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

Download Eedina App Android / iOS

X