ಮತ್ತೊಂದು ವಾಹನಕ್ಕೆ ಡಿಕ್ಕಿಯಾಗಿ ಇಂಧನ ಟ್ಯಾಂಕರ್ ಸ್ಫೋಟಗೊಂಡು ಕನಿಷ್ಠ 48 ಮಂದಿ ಭಾನುವಾರ ಸಾವನ್ನಪ್ಪಿರುವ ಘಟನೆ ಉತ್ತರ-ಮಧ್ಯ ನೈಜೀರಿಯಾದಲ್ಲಿ ನಡೆದಿದೆ ಎಂದು ನೈಜೀರಿಯಾ ಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.
ಪ್ರಯಾಣಿಕರು ಮತ್ತು ಜಾನುವಾರುಗಳನ್ನು ಸಾಗಿಸುತ್ತಿದ್ದ ಟ್ರಕ್‌ಗೆ ಇಂಧನ ಟ್ಯಾಂಕರ್ ಡಿಕ್ಕಿ ಹೊಡೆದಿದೆ ಎಂದು ಉತ್ತರ-ಮಧ್ಯ ನೈಜರ್ ರಾಜ್ಯದ ರಾಜ್ಯ ತುರ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ. ಇನ್ನೂ ಹಲವಾರು ವಾಹನಗಳು ಅಪಘಾತದಲ್ಲಿ ಸಿಲುಕಿವೆ ಎಂದು ಉಲ್ಲೇಖಿಸಲಾಗಿದೆ.
ಏಜೆನ್ಸಿಯ ವಕ್ತಾರ ಹುಸೇನಿ ಇಬ್ರಾಹಿಂ ಪ್ರಕಾರ ಈ ಅವಘಡದಿಂದಾಗಿ 48 ಮಂದಿ ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಇನ್ನೂ ಕೂಡಾ ಘಟನೆಯ ಸ್ಥಳದಲ್ಲಿ ರಕ್ಷಣೆ, ತೆರವು ಕಾರ್ಯಾಚರಣೆಯನ್ನು ನಡೆಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಅಸ್ಸಾಂ | ತಾಂತ್ರಿಕ ಕಾರಣದಿಂದ 19 ಕಡೆ ಇರಿಸಿದ್ದ ಬಾಂಬ್‌ಗಳು ಸ್ಪೋಟಗೊಳ್ಳಲಿಲ್ಲ; ಉಲ್ಫಾ ಸಂಘಟನೆ
ನೈಜೀರಿಯಾದ ಸರ್ಕಾರಿ ಸ್ವಾಮ್ಯದ ಸಂಸ್ಥೆ ಎನ್‌ಎನ್‌ಪಿಸಿ ಲಿಮಿಟೆಡ್ ಕಳೆದ ವಾರ ಗ್ಯಾಸೋಲಿನ್‌ನ ಬೆಲೆಯನ್ನು ಕನಿಷ್ಠ ಶೇಕಡ 39ರಷ್ಟು ಹೆಚ್ಚಿಸಿದೆ. ಆದರೂ ಕೂಡಾ ಇಂಧನ ಕೊರತೆಯು ಮುಂದುವರೆದಿದೆ.
ದೇಶದ ಪ್ರಮುಖ ನಗರಗಳು ಮತ್ತು ಪಟ್ಟಣಗಳಲ್ಲಿ ವಾಹನ ಚಾಲಕರು ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತು ಇಂಧನ ಹಾಕಿಸಿಕೊಳ್ಳಬೇಕಾದ ಸ್ಥಿತಿಯಿದೆ. ಈ ನಡುವೆ ಇಂಧನ ಟ್ಯಾಂಕರ್ ಟ್ರಕ್ ಸ್ಫೋಟಗೊಂಡಿದೆ.
🚨🇳🇬 | NIGERIA FUEL TANKER TRAGEDY
— Weather monitor (@Weathermonitors) September 9, 2024
DEADLY EXPLOSION CLAIMS 48 LIVES
– Fuel tanker collision sparks inferno in Niger state, #Nigeria
– 48 confirmed dead, mass burial underway
– Governor Umaru Bago offers condolences to victims' families
Source: BBC News, Reuters, DD news
📹… pic.twitter.com/kToRvkHwPk
