ಮಂಗಳವಾರ ಆಸ್ಟ್ರಿಯನ್ ನಗರದ ಗ್ರಾಜ್‌ನಲ್ಲಿರುವ ಶಾಲೆಯಲ್ಲಿ ಗುಂಡಿನ ದಾಳಿ ನಡೆದಿದ್ದು ಕನಿಷ್ಠ ಎಂಟು ಮಂದಿ ಸಾವನ್ನಪ್ಪಿದ್ದಾರೆ, ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ರಾಷ್ಟ್ರೀಯ ಸುದ್ದಿ ವಾಹಿನಿ ಒಆರ್‌ಎಫ್ ಸೇರಿದಂತೆ ಆಸ್ಟ್ರಿಯನ್ ರಾಜ್ಯ ಮಾಧ್ಯಮಗಳು, ಈ ದಾಳಿಯಿಂದಾಗು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೇರಿದಂತೆ ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಿದೆ.
ಇದನ್ನು ಓದಿದ್ದೀರಾ? ಸರ್ಬಿಯಾ | ಮತ್ತೊಂದು ಗುಂಡಿನ ದಾಳಿಗೆ 8 ಮಂದಿ ಸಾವು
ಆಸ್ಟ್ರಿಯನ್ ರಾಜಧಾನಿ ಡ್ರೀಯರ್ಸ್ಚುಟ್ಜೆಂಗಾಸ್ಸೆ ಎಂಬಲ್ಲಿರುವ ಶಾಲೆಯಲ್ಲಿ ಈ ದಾಳಿ ನಡೆದಿದೆ. ಮಾಧ್ಯಮಿಕ ಶಾಲೆ ಇದಾಗಿದ್ದು, ಹೆಚ್ಚಿನ ಪ್ರತಿಕ್ರಿಯೆ ನೀಡಲು ಪೊಲೀಸರು ನಿಕಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.
ಪೊಲೀಸರು ಕಟ್ಟಡವನ್ನು ಸ್ಥಳಾಂತರಿಸುತ್ತಿದ್ದಾರೆ ಎಂದು ORF ತಿಳಿಸಿದೆ. ಇನ್ನು ಮೃತರಲ್ಲಿ ಈ ದಾಳಿ ಆರಂಭಿಸಿದವನೂ ಇದ್ದಾನೆಯೇ ಎಂಬುದು ಈವರೆಗೆ ಸ್ಪಷ್ಟವಾಗಿಲ್ಲ.
