ಉತ್ತರ ಫ್ರಾನ್ಸ್‌ನಲ್ಲಿ ಇಂಗ್ಲಿಷ್ ಕಾಲುವೆ ಅನ್ನು ದಾಟಲು ಪ್ರಯತ್ನಿಸಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ಫ್ರೆಂಚ್ ಕಡಲ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಈ ಘಟನೆಯು ಶುಕ್ರವಾರ ಮಧ್ಯರಾತ್ರಿಯ ಮೊದಲು ಸಂಭವಿಸಿದೆ. ಉತ್ತರದ ಪಟ್ಟಣವಾದ ಅಂಬ್ಲೆಟ್ಯೂಸ್‌ನ ಕಡಲತೀರದ ಬಳಿ ಹಲವಾರು ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿಯನ್ನು ಅಧಿಕಾರಿಗಳು ಗಮನಿಸಿದ್ದರು ಎಂದು ವರದಿಯಾಗಿದೆ.
ಫ್ರೆಂಚ್ ರಕ್ಷಣಾ ಹಡಗನ್ನು ಪ್ರದೇಶಕ್ಕೆ ನಿಯೋಜಿಸಲಾಗಿದೆ. ಸಮುದ್ರತೀರದಲ್ಲಿ 53 ವಲಸಿಗರಿಗೆ ವೈದ್ಯಕೀಯ ನೆರವು ನೀಡಲಾಗಿದೆ ಎಂದು ಇಂಗ್ಲಿಷ್ ಕಾಲುವೆ ಮತ್ತು ಉತ್ತರ ಸಮುದ್ರದ ಉಸ್ತುವಾರಿ ವಹಿಸಿರುವ ಫ್ರೆಂಚ್ ಕಡಲ ಅಧಿಕಾರಿಗಳ ಹೇಳಿಕೆ ತಿಳಿಸಿದೆ.
ಇದನ್ನು ಓದಿದ್ದೀರಾ? ಯುಎಸ್‌ನ ಪ್ರತಿ ಐವರು ವಲಸಿಗ ವೈದ್ಯರಲ್ಲಿ ಒಬ್ಬರು ಭಾರತೀಯರು!
“ತುರ್ತು ಆರೈಕೆಯ ಹೊರತಾಗಿಯೂ, ಎಂಟು ಜನರು ಸಾವನ್ನಪ್ಪಿದ್ದಾರೆ” ಎಂದು ಹೇಳಿಕೆ ಉಲ್ಲೇಖಿಸಿದೆ. ಸಮುದ್ರದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಬೇರೆ ಯಾವುದೇ ಜನರು ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.
ಎರಡು ವಾರಗಳ ಹಿಂದೆ ಉತ್ತರ ಫ್ರಾನ್ಸ್‌ನಿಂದ ಬ್ರಿಟನ್‌ಗೆ ತಲುಪಲು ಪ್ರಯತ್ನಿಸುತ್ತಿದ್ದ ವೇಳೆ 13 ಮಂದಿ ವಲಸಿಗರು ಸಾವನ್ನಪ್ಪಿದ್ದರು.
