ಅಮೆರಿಕದ ಗಾಜಾ ನಡೆ ವಿರೋಧಿಸಿ ಪಿ.ಹೆಚ್‌ಡಿ, ಎಂಎಸ್‌ಸಿ ಪದವಿಗಳನ್ನು ಮರಳಿಸಿದ ಸಾಮಾಜಿಕ ಕಾರ್ಯಕರ್ತ ಸಂದೀಪ್ ಪಾಂಡೆ

Date:

Advertisements

ಇಸ್ರೇಲ್ – ಪ್ಯಾಲಿಸ್ತೀನ್ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಗಾಜಾ ವಿರೋಧಿ ನೀತಿ ಅನುಸರಿಸುತ್ತಿರುವ ಅಮೆರಿಕದ ನಡೆ ಖಂಡಿಸಿ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಚಳುವಳಿಗಾರ ಸಂದೀಪ್ ಪಾಂಡೆ ಕ್ಯಾಲಿಫೋರ್ನಿಯ ವಿವಿಯ ಪಿ.ಹೆಚ್‌ಡಿ ಪದವಿಯನ್ನು ಮರಳಿಸಿದ್ದಾರೆ.

ಗಾಜಾದಲ್ಲಿ ಇಸ್ರೇಲ್‌ ನಡೆಸುತ್ತಿರುವ ಪೈಶಾಚಿಕ ಕೃತ್ಯವನ್ನು ಸಹಕರಿಸುತ್ತಿರುವ ಅಮೆರಿಕದ ನಡೆಯನ್ನು ವಿರೋಧಿಸಿ ಈ ವರ್ಷದ ಜನವರಿಯಲ್ಲಿ ತಮ್ಮ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಕೂಡ ಮರಳಿಸಿದ್ದರು. 2002ರಲ್ಲಿ ಸಂದೀಪ್ ಪಾಂಡೆ ರೊಮನ್‌ ಮ್ಯಾಗ್ಸೆಸೆ ಪ್ರಶಸ್ತಿಗೆ ಪಾತ್ರರಾಗಿದ್ದರು

ಪಾಂಡೆ ಅವರು ಅಮೆರಿಕದ ಸೈರಸ್‌ಕಾಸ್‌ ವಿವಿಯ ಎರಡು ಎಂಎಸ್‌ಸಿ ಪದವಿಗಳನ್ನು ಕೂಡ ವಾಪಸ್‌ ಮಾಡಿದ್ದಾರೆ.

Advertisements

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಡಿಕೆ ಕದ್ದ ಕಳ್ಳ ಜೈಲಿಗೆ, ಆನೆ ಕದ್ದ ಕಳ್ಳ ಎಲ್ಲಿಗೆ?

ತಮ್ಮ ಪದವಿಗಳನ್ನು ಮರಳಿಸಿ ವಿವಿಗಳಿಗೆ ಪತ್ರ ಬರೆದಿರುವ ಪಾಂಡೆ ಪ್ರಸ್ತುತ ನಡೆಯುತ್ತಿರುವ ಇಸ್ರೇಲ್‌-ಪ್ಯಾಲೆಸ್ತೀನ್ ಯುದ್ಧದಲ್ಲಿ ಅಮೆರಿಕದ ಪಾತ್ರವು ಶೋಚನೀಯವಾಗಿದೆ ಎಂದು ಖಂಡಿಸಿದ್ದಾರೆ.

“ಇಸ್ರೇಲ್ – ಪ್ಯಾಲಿಸ್ತೀನ್‌ ಯುದ್ಧದಲ್ಲಿ ಅಮೆರಿಕವು ಮಧ್ಯಸ್ಥಿಕೆ ಪಾತ್ರ ವಹಿಸಿ ಯುದ್ಧವನ್ನು ಅಂತ್ಯಗೊಳಿಸಿ ಶಾಶ್ವತ ಪರಿಹಾರದ ಜೊತೆಗೆ ಪ್ಯಾಲಿಸ್ತೀನ್‌ಗೆ ಸ್ವತಂತ್ರ ದೇಶದ ಸ್ಥಾನಮಾನ ದೊರಕಿಸಿಕೊಡಬಹುದೆಂದು ನಂಬಿದ್ದೆ. ಆದರೆ ಇದರ ಬದಲಿಗೆ ಅಮೆರಿಕವು ಅಪಾರವಾಗಿ ಸೇನಾ ನೆರವು ನೀಡಿ ಇಸ್ರೇಲ್‌ನ ಆಕ್ರಮಣಕಾರಿ ನೀತಿಗೆ ಕಾರಣವಾಗಿ ಸಾವಿರಾರು ಅಮಾಯಕ ಮಕ್ಕಳ ಸಾವಿಗೆ ಕಾರಣವಾಗಿದೆ” ಎಂದು ತಮ್ಮ ಪತ್ರದಲ್ಲಿ ಸಂದೀಪ್‌ ಪಾಂಡೆ ತಿಳಿಸಿದ್ದಾರೆ.

ಪ್ರಜಾಪ್ರಭುತ್ವ ಹಾಗೂ ಮಾನವ ಹಕ್ಕುಗಳಿಗಾಗಿ ಅಮೆರಿಕದ ನಿಲುವನ್ನು ನಂಬಲು ಕಷ್ಟಸಾಧ್ಯವಾಗಿದೆ ಎಂದು ಪಾಂಡೆ ತಿಳಿಸಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶೇ.200 ತೆರಿಗೆ ವಿಧಿಸಿ ಚೀನಾವನ್ನು ನಾಶಪಡಿಸಬಲ್ಲೆ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ಚೀನಾ ಅಪರೂಪದ ಅಯಸ್ಕಾಂತ(earth magnets) ಅನ್ನು ಪೂರೈಸಬೇಕು, ಇಲ್ಲವಾದರೆ ಶೇಕಡ 200ರಷ್ಟು...

ಅಣ್ಣಾಮಲೈ ಕೈಯಿಂದ ಪ್ರಶಸ್ತಿ ಪಡೆಯಲು ವಿದ್ಯಾರ್ಥಿ ನಕಾರ

ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿದ್ದ ವಿದ್ಯಾರ್ಥಿಯೊಬ್ಬ ಬಿಜೆಪಿ ನಾಯಕ ಕೆ ಅಣ್ಣಾಮಲೈ ಅವರಿಂದ...

ಆಸ್ಪತ್ರೆ ನಿರ್ಮಾಣ ಹಗರಣ: ಎಎಪಿಯ ಸೌರಭ್ ಭಾರದ್ವಾಜ್ ನಿವಾಸದ ಮೇಲೆ ಇಡಿ ದಾಳಿ

ದೆಹಲಿ ಆರೋಗ್ಯ ಸಚಿವರಾಗಿದ್ದ ಅವಧಿಯಲ್ಲಿ ಆಸ್ಪತ್ರೆಗಳ ನಿರ್ಮಾಣದಲ್ಲಿ ಹಗರಣ ನಡೆದಿದೆ ಎಂಬ...

ಭಾರತ-ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ: ಡೊನಾಲ್ಡ್ ಟ್ರಂಪ್ ಪುನರುಚ್ಚಾರ

ವಿಶ್ವದಲ್ಲಿ ನಡೆದ ಹಲವು ಯುದ್ಧಗಳನ್ನು ನಿಲ್ಲಿಸಿದ ಶ್ರೇಯಸ್ಸನ್ನು ನಿರಂತರವಾಗಿ ತಮ್ಮ ಮೇಲೆ...

Download Eedina App Android / iOS

X