ಆಫ್ರಿಕಾಗೆ ಭೂಪಟದಲ್ಲೂ ಸಿಗಲಿದೆ ನ್ಯಾಯ; ನಕ್ಷೆ ಬದಲಿಸಲು 164 ರಾಷ್ಟ್ರಗಳ ಸಮ್ಮತಿ; ಅಮೆರಿಕ ವಿರೋಧ!

Date:

ವಿಶ್ವದ ಭೂಪಟದಲ್ಲಿ ಶತಮಾನಗಳಿಂದ ಮುಂದುವರಿದಿದ್ದ ಭೌಗೋಳಿಕ ಅಸಮಾನತೆಯನ್ನು ಸರಿಪಡಿಸುವ ಮಹತ್ವದ ಪ್ರಯತ್ನಕ್ಕೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಸಮ್ಮತಿ ನೀಡಿದೆ. ಆಫ್ರಿಕಾ ಖಂಡದ ನೈಜ ಭೌಗೋಳಿಕ ಗಾತ್ರವನ್ನು ಸರಿಯಾಗಿ ಪ್ರತಿಬಿಂಬಿಸುವ ಹೊಸ ಮಾದರಿಯ ನಕ್ಷೆ ಬಳಕೆಗೆ ಉತ್ತೇಜನ ನೀಡುವ ‘ಕರೆಕ್ಟ್ ದಿ ಮ್ಯಾಪ್’ (Correct the Map) ನಿರ್ಣಯಕ್ಕೆ 164 ರಾಷ್ಟ್ರಗಳು ಬೆಂಬಲ ಸೂಚಿಸಿವೆ. ಭಾರತ, ಫ್ರಾನ್ಸ್, ಬ್ರಿಟನ್ ಸೇರಿದಂತೆ ಬಹುತೇಕ ಪ್ರಮುಖ ರಾಷ್ಟ್ರಗಳು ಈ ಐತಿಹಾಸಿಕ ನಿರ್ಣಯದ ಪರವಾಗಿ ಮತ ಚಲಾಯಿಸಿವೆ. ಆದರೆ, ಅಮೆರಿಕ ಮಾತ್ರ ಇದನ್ನು ವಿರೋಧಿಸಿದೆ. ಅಲ್ಲದೆ, ಆರು ರಾಷ್ಟ್ರಗಳು ಮತದಾನ ಪ್ರಕ್ರಿಯೆಯಿಂದ ದೂರ ಉಳಿದಿವೆ.

- Advertisement -

ಮತದಾನಕ್ಕೂ ಮುನ್ನ ರಾಜತಾಂತ್ರಿಕ ಮಹತ್ವದ ಮಾತುಗಳನ್ನಾಡಿದ ಟೋಗೊದ ವಿದೇಶಾಂಗ ಸಚಿವ ರಾಬರ್ಟ್ ಡುಸ್ಸಿ, “ನ್ಯಾಯಯುತ ಜಗತ್ತು ಎನ್ನುವುದು ಮೊದಲಿಗೆ ನ್ಯಾಯಯುತ ನಕ್ಷೆಯಿಂದಲೇ ಆರಂಭವಾಗುತ್ತದೆ. ನಕ್ಷೆಗಳು ಕೇವಲ ಭೌಗೋಳಿಕ ಮಾಹಿತಿಯನ್ನು ನೀಡುವುದಿಲ್ಲ, ಬದಲಾಗಿ ಅವು ಪ್ರಪಂಚದ ದೇಶಗಳು, ಜನರು ಹಾಗೂ ಖಂಡಗಳ ಸ್ಥಾನಮಾನವನ್ನು ಸಮಾಜ ಗ್ರಹಿಸುವ ವಿಧಾನದ ಮೇಲೆ ಆಳವಾದ ಪ್ರಭಾವ ಬೀರುತ್ತವೆ. ಆದ್ದರಿಂದ ಖಂಡಗಳ ನೈಜ ಗಾತ್ರವನ್ನು ತೋರುವ ನಿಖರ ಭೂಪಟವು ಸಾಮಾಜಿಕ ನ್ಯಾಯದ ಭಾಗವಾಗಿದೆ” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ...

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ...

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ...

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್‌ ಖಾಲಿದ್‌ ರೀತಿಯಲ್ಲೇ ಸೌರವ್ ದಾಸ್,...

ಎಚ್ಚೆತ್ತುಕೊಳ್ಳುತ್ತಿವೆ DMK, YSRCP; ಡಿಲಿಮಿಟೇಷನ್‌ ಮಸೂದೆ ಮತ್ತೆ ಸೋಲುವ...

ಮೋದಿಯವರ ಅಹಂಕಾರದ ಆಡಳಿತಕ್ಕೆ ದಕ್ಷಿಣ ಭಾರತವು ಎಂದಿಗೂ ತಲೆಬಾಗುವುದಿಲ್ಲ, ಮತ್ತು ಈ ಬಾರಿಯ ಅವರ ಹತಾಶೆಯ ರಾಜಕೀಯ ಕುತಂತ್ರಗಳು ಅವರ ಪಾಲಿಗೆ ತಿರುಗುಬಾಣವಾಗಿ ದೇಶದ ಪ್ರಜಾಪ್ರಭುತ್ವವು ಗೆಲ್ಲುವುದು ಖಚಿತ ಮಹಿಳಾ ಮೀಸಲಾತಿ ಎಂಬ ಪವಿತ್ರ...

ಮರ್ಕೇಟರ್ ನಕ್ಷೆಯ 500 ವರ್ಷಗಳ ಹಳೆಯ ದೋಷ

ಈ ಇಡೀ ವಿವಾದದ ಮೂಲ ಇರುವುದು 1569ರಲ್ಲಿ ಬೆಲ್ಜಿಯಂ ಮೂಲದ ಖಗೋಳಶಾಸ್ತ್ರಜ್ಞ ಗೆರಾರ್ಡಸ್ ಮರ್ಕೇಟರ್ ರೂಪಿಸಿದ ‘ಮರ್ಕೇಟರ್ ನಕ್ಷೆ’ಯಲ್ಲಿ. ಶತಮಾನಗಳಿಂದ ವಿಶ್ವದಾದ್ಯಂತ ಅತ್ಯಂತ ಹೆಚ್ಚಾಗಿ ಬಳಸಲ್ಪಡುತ್ತಿರುವ ಈ ನಕ್ಷೆಯ ಮುಖ್ಯ ದೋಷವೆಂದರೆ, ಗೋಳಾಕಾರದಲ್ಲಿರುವ ಭೂಮಿಯನ್ನು ಸಮತಟ್ಟಾದ ಕಾಗದದ ಮೇಲೆ ತೋರಿಸುವಾಗ ಪ್ರಾಂತ್ಯಗಳ ನೈಜ ಗಾತ್ರವು ತಿರುಚಿಲ್ಪಟ್ಟಿದೆ. ಇದರಿಂದಾಗಿ, ಸಮಭಾಜಕ ರೇಖೆಯಿಂದ ದೂರವಿರುವ ಉತ್ತರ ಧ್ರುವದ ಸಮೀಪದ ಗ್ರೀನ್‌ಲ್ಯಾಂಡ್‌, ರಷ್ಯಾ ಮತ್ತು ಯುರೋಪ್‌ನಂತಹ ಪ್ರದೇಶಗಳು ವಾಸ್ತವಕ್ಕಿಂತ ಭಾರೀ ದೊಡ್ಡದಾಗಿ ಕಾಣಿಸುತ್ತವೆ. ಅದೇ ಸಮಯದಲ್ಲಿ ಸಮಭಾಜಕ ವೃತ್ತದ ಬಳಿಯಿರುವ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದಂತಹ ವಿಶಾಲ ಖಂಡಗಳು ತಮ್ಮ ನೈಜ ಗಾತ್ರಕ್ಕಿಂತ ಅತ್ಯಂತ ಚಿಕ್ಕದಾಗಿ ಗೋಚರಿಸುತ್ತವೆ.

ವಿಶ್ವದ ಎರಡನೇ ಅತಿ ದೊಡ್ಡ ಖಂಡವಾಗಿರುವ ಆಫ್ರಿಕಾ ಭೂಪಟದಲ್ಲಿ ಸಣ್ಣದಾಗಿ ಕಾಣಿಸುವುದು ಕೇವಲ ತಾಂತ್ರಿಕ ಲೋಪವಲ್ಲ, ಅದು ವಸಾಹತುಶಾಹಿ ಕಾಲದಿಂದಲೂ ಮುಂದುವರಿದುಕೊಂಡು ಬಂದಿರುವ ಮಾನಸಿಕ ಮತ್ತು ರಾಜಕೀಯ ಶ್ರೇಣೀಕೃತ ಚಿತ್ರಣಕ್ಕೆ ಪ್ರಮುಖ ಕಾರಣವಾಗಿದೆ ಎಂಬುದು ಆಫ್ರಿಕನ್ ಯೂನಿಯನ್ ರಾಷ್ಟ್ರಗಳ ಬಲವಾದ ವಾದವಾಗಿದೆ.

ವಾಸ್ತವದಲ್ಲಿ ಆಫ್ರಿಕಾ ಎಷ್ಟು ದೊಡ್ಡದು?

ಸಾಮಾನ್ಯ ನಕ್ಷೆಗಳಲ್ಲಿ ಸಣ್ಣದಾಗಿ ಬಿಂಬಿತವಾಗಿರುವ ಆಫ್ರಿಕಾ ಪ್ರಪಂಚದ ಅತ್ಯಂತ ವಿಶಾಲವಾದ ಖಂಡಗಳಲ್ಲಿ ಒಂದಾಗಿದೆ. ಸುಮಾರು 3 ಕೋಟಿ ಚದರ ಕಿಲೋಮೀಟರ್‌ಗಿಂತಲೂ ಹೆಚ್ಚು ವಿಸ್ತೀರ್ಣ ಹೊಂದಿರುವ ಆಫ್ರಿಕಾ ಖಂಡದೊಳಗೆ ಚೀನಾ, ಭಾರತ, ಅಮೆರಿಕ ಹಾಗೂ ಇಡೀ ಯುರೋಪಿನ ಬಹುತೇಕ ದೇಶಗಳನ್ನು ಒಟ್ಟಾಗಿ ಇರಿಸಬಹುದಾದಷ್ಟು ಜಾಗವಿದೆ.

ಈ ಲೇಖನ ಓದಿದ್ದೀರಾ?: ಬ್ರಾಹ್ಮಣ್ಯದ ಪರಮಾಧಿಕಾರ ಸ್ಥಾಪಿಸಿದ್ದ ಮನುಸ್ಮೃತಿ

ಆದರೆ, ಪ್ರಸ್ತುತ ಚಾಲ್ತಿಯಲ್ಲಿರುವ ಮರ್ಕೇಟರ್ ನಕ್ಷೆಯಲ್ಲಿ ಆಫ್ರಿಕಾ ಮತ್ತು ಗ್ರೀನ್‌ಲ್ಯಾಂಡ್‌ ಒಂದೇ ಗಾತ್ರದಂತೆ ಕಾಣುತ್ತವೆ. ಆದರೆ, ವಾಸ್ತವದಲ್ಲಿ ಆಫ್ರಿಕಾವು ಗ್ರೀನ್‌ಲ್ಯಾಂಡ್‌ಗಿಂತ ಬರೋಬ್ಬರಿ 14 ಪಟ್ಟು ದೊಡ್ಡದಾಗಿದೆ. ಈ ಭಾರೀ ಅಂತರವು ಪಾಶ್ಚಿಮಾತ್ಯ ಜಗತ್ತಿನ ಕಲ್ಪಿತ ಶ್ರೇಷ್ಠತೆ ಮತ್ತು ವಸಾಹತುಶಾಹಿ ಕಾಲದ ಪೂರ್ವಾಗ್ರಹ ಪೀಡಿತ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ ಎಂದು ಭೂಗೋಳ ತಜ್ಞರು ವಿಶ್ಲೇಷಿಸುತ್ತಾರೆ.

ಅಧಿಕಾರದ ಸಂಕೇತವಾಗಿ ಭೂಪಟಗಳು

ಭೂಪಟಗಳನ್ನು ಸಾಮಾನ್ಯವಾಗಿ ತಟಸ್ಥ ದಾಖಲೆಗಳೆಂದು ಭಾವಿಸಲಾಗುತ್ತದೆಯಾದರೂ, ಇತಿಹಾಸದುದ್ದಕ್ಕೂ ಅವು ರಾಜಕೀಯ ಅಧಿಕಾರದ ಬಲವಾದ ಸಾಧನಗಳಾಗಿಯೇ ಹೆಚ್ಚು ಬಳಕೆಯಾಗಿವೆ. ಯಾವ ಪ್ರದೇಶ ದೊಡ್ಡದಾಗಿ ಕಾಣಬೇಕು ಮತ್ತು ಕೇಂದ್ರದಲ್ಲಿರಬೇಕು ಎಂಬುದು ಸಾಂಸ್ಕೃತಿಕ ಮತ್ತು ಪ್ರಭುತ್ವದ ಪ್ರಭಾವವನ್ನು ನಿರ್ಧರಿಸುತ್ತದೆ. ವಸಾಹತುಶಾಹಿ ಕಾಲದಲ್ಲಿ ಯುರೋಪಿಯನ್ ರಾಷ್ಟ್ರಗಳು ಜಗತ್ತಿನ ಮೇಲೆ ತಮ್ಮ ಆಧಿಪತ್ಯ ಸ್ಥಾಪಿಸಲು ಯುರೋಪಿನ ಪ್ರಾಮುಖ್ಯತೆಯನ್ನು ಅತಿಯಾಗಿ ತೋರಿಸುವ ನಕ್ಷೆಗಳನ್ನು ಜಾರಿಗೆ ತಂದವು. ಆಫ್ರಿಕನ್ ರಾಷ್ಟ್ರಗಳ ಪ್ರಕಾರ, ಈ ಅಸಮಾನ ನಕ್ಷೆಯು ಆಫ್ರಿಕಾವನ್ನು ‘ಕಡಿಮೆ ಪ್ರಾಮುಖ್ಯತೆ ಹೊಂದಿರುವ ಪ್ರದೇಶ’ ಎಂದು ಜಗತ್ತು ಭಾವಿಸುವಂತೆ ಮಾಡಿದೆ.

ಹೊಸ ನಕ್ಷೆಯಿಂದಾಗುವ ಬದಲಾವಣೆ ಹಾಗೂ ಪರ್ಯಾಯಗಳು

ವಿಶ್ವಸಂಸ್ಥೆಯ ಈ ನೂತನ ನಿರ್ಣಯವು ಮರ್ಕೇಟರ್ ನಕ್ಷೆಯನ್ನು ಸಂಪೂರ್ಣವಾಗಿ ನಿಷೇಧಿಸುವುದಿಲ್ಲ, ಬದಲಾಗಿ ಶಿಕ್ಷಣ, ಆಡಳಿತ ಹಾಗೂ ಸಾರ್ವಜನಿಕ ಬಳಕೆಗಾಗಿ ಖಂಡಗಳ ನೈಜ ಗಾತ್ರವನ್ನು ನಿಖರವಾಗಿ ಪ್ರತಿಬಿಂಬಿಸುವ ‘ಈಕ್ವಲ್ ಅರ್ಥ್ ಪ್ರೊಜೆಕ್ಷನ್’ನಂತಹ ಪರ್ಯಾಯ ನಕ್ಷೆಗಳನ್ನು ಬಳಸಲು ಉತ್ತೇಜಿಸುತ್ತದೆ. ಶಾಲಾ ಹಂತದಲ್ಲೇ ಮಕ್ಕಳಿಗೆ ಸರಿಯಾದ ನಕ್ಷೆಗಳನ್ನು ಬೋಧಿಸುವುದರಿಂದ ಜಾಗತಿಕ ವಿಷಯಗಳ ಕುರಿತು ಅವರಲ್ಲಿ ಸರಿಯಾದ ಅರಿವು ಮೂಡಲು ಸಾಧ್ಯವಾಗುತ್ತದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾತ್ರೋರಾತ್ರಿ ತುರ್ತು ವಿಚಾರಣೆ ಕೋರಿ ದೆಹಲಿ ಹೈಕೋರ್ಟ್ ಮೊರೆಹೋದ ಸಿಜೆಪಿ ನಾಯಕರು

ತಮ್ಮ ನ್ಯಾಯಾಂಗ ಬಂಧನ ವಿಸ್ತರಣೆಯನ್ನು ಪ್ರಶ್ನಿಸಿ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ)...

ಹೊರದೇಶಗಳ ದೊಂಬಿಯನ್ನು ಭಾರತದ ಯುವ ಹೋರಾಟಕ್ಕೆ ಸಮೀಕರಿಸುತ್ತಿರುವ ʼಮಡಿಲ ಮಾಧ್ಯಮʼಗಳು; ಇದೇನಾ ಪತ್ರಿಕೋದ್ಯಮ?

ಹೊರದೇಶಗಳ ಬೀದಿಗಳಲ್ಲಿ ನಡೆಯುವ ದೊಂಬಿ, ಲೂಟಿಗೂ, ಭಾರತದ ಯುವಕರು ಸಂವಿಧಾನದತ್ತ ಹಕ್ಕಿಗಾಗಿ...

ಪ್ರಧಾನಿ ಮೋದಿ ಜೊತೆ ನಾಳೆ ಖರ್ಗೆ ಸಭೆ: ಎಸ್‌ಐಆರ್, ಕ್ಷೇತ್ರ ಪುನರ್‌ವಿಂಗಡಣೆ, ಮಹಿಳಾ ಮೀಸಲಾತಿ ಕುರಿತು ಚರ್ಚೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್), ಕ್ಷೇತ್ರ ಮರುವಿಂಗಡಣೆ ಮತ್ತು...

ಏಷ್ಯನ್ ಪ್ಯಾರಾ ಗೇಮ್ಸ್: ಮಹಿಳೆಯರ 200 ಮೀಟರ್ಸ್ ಓಟದಲ್ಲಿ ಸಿಮ್ರಾನ್‌ಗೆ ಚಿನ್ನ, ತೇಜಲ್‌ಬೆನ್‌ಗೆ ಕಂಚು

ಮಂಗಳವಾರ ಜಪಾನಿನ ನಗೋಯಾದಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನ ಮಹಿಳೆಯರ 200...