ತನ್ನ ಉತ್ತರಾಧಿಕಾರಿಯ ಬಗ್ಗೆ ಚರ್ಚೆ ನಡೆಯುತ್ತಿರುವ ನಡುವೆ ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈಲಾಮಾ, “ಜನರಿಗೆ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಇನ್ನೂ 30 ರಿಂದ 40 ವರ್ಷ ಬದುಕುವ ಆಶಯವನ್ನು ಹೊಂದಿದ್ದೇನೆ” ಎಂದು ಹೇಳಿದ್ದಾರೆ.
ಭಾನುವಾರ ತಮ್ಮ 90ನೇ ಹುಟ್ಟುಹಬ್ಬಕ್ಕೆ ಮುಂಚಿತವಾಗಿ ಮೆಕ್ಲಿಯೋಡ್ಗಂಜ್‌ನ ಮುಖ್ಯ ದಲೈಲಾಮಾ ದೇವಾಲಯವಾದ ತ್ಸುಗ್ಲಾಗ್‌ಖಾಂಗ್‌ನಲ್ಲಿ ನಡೆದ ದೀರ್ಘಾಯುಷ್ಯ ಪ್ರಾರ್ಥನಾ ಸಮಾರಂಭದಲ್ಲಿ ಮಾತನಾಡಿದ 14ನೇ ದಲೈಲಾಮಾ ಟೆನ್ಜಿನ್ ಗ್ಯಾಟ್ಸೊ, “ಅವಲೋಕಿತೇಶ್ವರನ ಆಶೀರ್ವಾದ ನನ್ನೊಂದಿಗೆ ಇದೆ ಎಂಬ ಸ್ಪಷ್ಟ ಚಿಹ್ನೆಗಳು ಮತ್ತು ಸೂಚನೆಗಳನ್ನು ನಾನು ಪಡೆದಿದ್ದೇನೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಉತ್ತರ ಕನ್ನಡ | ಮುಂಡಗೋಡದಲ್ಲಿ ಧರ್ಮಗುರು ದಲೈಲಾಮಾರ 90ನೇ ವರ್ಷದ ಜನ್ಮ ದಿನಾಚರಣೆ
“ಹಲವು ಭವಿಷ್ಯವಾಣಿಗಳನ್ನು ನೋಡುವಾಗ, ಅವಲೋಕಿತೇಶ್ವರರ ಆಶೀರ್ವಾದಗಳು ನನ್ನೊಂದಿಗಿವೆ ಎಂದು ನಾನು ಭಾವಿಸುತ್ತೇನೆ. ನಾನು ಇಲ್ಲಿಯವರೆಗೆ ನನ್ನ ಕೈಲಾದಷ್ಟು ಮಾಡಿದ್ದೇನೆ. ಇನ್ನೂ 30-40 ವರ್ಷ ಬದುಕಬೇಕೆಂದು ನಾನು ಭಾವಿಸುತ್ತೇನೆ. ನಿಮ್ಮ ಪ್ರಾರ್ಥನೆಗಳು ಇಲ್ಲಿಯವರೆಗೆ ಫಲ ನೀಡಿವೆ” ಎಂದರು.
“ನಾವು ನಮ್ಮ ದೇಶವನ್ನು ಕಳೆದುಕೊಂಡು ಭಾರತದಲ್ಲಿ ದೇಶಭ್ರಷ್ಟರಾಗಿ ವಾಸಿಸುತ್ತಿದ್ದರೂ, ನಾನು ಇಲ್ಲಿ ಧರ್ಮಶಾಲಾದಲ್ಲಿ ವಾಸಿಸುವವರಿಗೆ ಸಾಕಷ್ಟು ಸಹಾಯ ಮಾಡಲು ಸಾಧ್ಯವಾಯಿತು. ಇನ್ನೂ ಈ ಸೇವೆಯನ್ನು ಮುಂದುವರಿಸುವ ಆಶಯವನ್ನು ಹೊಂದಿದ್ದೇನೆ” ಎಂದು ತಿಳಿಸಿದರು.
ದಲೈಲಾಮಾ ಅವರ ಉತ್ತರಾಧಿಕಾರಿಯ ನೇಮಕದ ಬಗ್ಗೆ ಸ್ಥಾಪಿತ ಸಂಸ್ಥೆ ಮತ್ತು ಟಿಬೆಟಿಯನ್ ಬೌದ್ಧರ ನಾಯಕ ನಿರ್ಧರಿಸುತ್ತಾರೆ. ಮುಂದಿನ ದಲೈಲಾಮಾ ಯಾರಾಗುತ್ತಾರೆ ಎಂಬುದನ್ನು ಅವರೇ ತೀರ್ಮಾನಿಸುತ್ತಾರೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದ್ದರು.
ಇದನ್ನು ಓದಿದ್ದೀರಾ? ಕೆಂಗಣ್ಣು ಬಿಟ್ಟು ಚೀನೀಯರನ್ನು ಹೆದರಿಸಬೇಕೆಂದು ಮೂದಲಿಸುತ್ತಿದ್ದ ಮೋದಿ, ಆ ಮಾತನ್ನೇ ಮರೆತರೇಕೆ?! (ಭಾಗ-2)
2015ರಲ್ಲಿ ದಲೈಲಾಮಾ ಅವರೇ ಸ್ಥಾಪಿಸಿದ ಗಾಡೆನ್ ಫೋಡ್ರಾಂಗ್ ಟ್ರಸ್ಟ್‌ನ ಮೂಲಕವೇ ಉತ್ತರಾಧಿಕಾರಿಯ ನೇಮಕವಾಗಲಿದೆ. ತಮ್ಮ ಪುನರ್ಜನ್ಮದ ಮೂಲಕವೇ ಭವಿಷ್ಯದ ದಲೈ ಲಾಮಾ ಅಧಿಕಾರಕ್ಕೆ ಬರಲಿದ್ದು, ಅವರನ್ನು ಗುರುತಿಸುವ ಅಧಿಕಾರ ತನಗೆ ಇರುವುದು ಎಂದು ಈ ಹಿಂದೆಯೇ ದಲೈಲಾಮಾ ಹೇಳಿದ್ದಾರೆ.
ಈ ವಿಚಾರದಲ್ಲಿ ಈಗಾಗಲೇ ಈ ವಿಚಾರದಲ್ಲಿ ಚೀನಾ ಪ್ರತಿಕ್ರಿಯಿಸಿದೆ. ಟಿಬೆಟ್ ವಿಷಯದಲ್ಲಿ ಭಾರತ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದೆ. ಉತ್ತರಾಧಿಕಾರಿಯ ಆಯ್ಕೆಗೆ ತನ್ನ ಸಮ್ಮತಿ ಅಗತ್ಯ ಎಂದು ಚೀನಾ ಪ್ರತಿಪಾದಿಸಿದೆ. ಆದರೆ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಅಧಿಕಾರವನ್ನು ಅವರೇ(ಬೌದ್ಧರು)ಹೊಂದಿದ್ದಾರೆ ಎಂದು ಭಾರತ ಸರ್ಕಾರ ಹೇಳಿದೆ. ಈ ವಿಷಯದಲ್ಲಿ ಭಾರತ ಮತ್ತು ಚೀನಾದ ನಡುವೆ ವಾಕ್ಸಮರ ನಡೆಯುತ್ತಿದೆ.
