ಇನ್ನೂ 30-40 ವರ್ಷ ಬದುಕುವ ಆಶಯ ಹೊಂದಿದ್ದೇನೆ: ದಲೈಲಾಮಾ

Date:

ತನ್ನ ಉತ್ತರಾಧಿಕಾರಿಯ ಬಗ್ಗೆ ಚರ್ಚೆ ನಡೆಯುತ್ತಿರುವ ನಡುವೆ ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈಲಾಮಾ, “ಜನರಿಗೆ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಇನ್ನೂ 30 ರಿಂದ 40 ವರ್ಷ ಬದುಕುವ ಆಶಯವನ್ನು ಹೊಂದಿದ್ದೇನೆ” ಎಂದು ಹೇಳಿದ್ದಾರೆ.

- Advertisement -

ಭಾನುವಾರ ತಮ್ಮ 90ನೇ ಹುಟ್ಟುಹಬ್ಬಕ್ಕೆ ಮುಂಚಿತವಾಗಿ ಮೆಕ್ಲಿಯೋಡ್ಗಂಜ್‌ನ ಮುಖ್ಯ ದಲೈಲಾಮಾ ದೇವಾಲಯವಾದ ತ್ಸುಗ್ಲಾಗ್‌ಖಾಂಗ್‌ನಲ್ಲಿ ನಡೆದ ದೀರ್ಘಾಯುಷ್ಯ ಪ್ರಾರ್ಥನಾ ಸಮಾರಂಭದಲ್ಲಿ ಮಾತನಾಡಿದ 14ನೇ ದಲೈಲಾಮಾ ಟೆನ್ಜಿನ್ ಗ್ಯಾಟ್ಸೊ, “ಅವಲೋಕಿತೇಶ್ವರನ ಆಶೀರ್ವಾದ ನನ್ನೊಂದಿಗೆ ಇದೆ ಎಂಬ ಸ್ಪಷ್ಟ ಚಿಹ್ನೆಗಳು ಮತ್ತು ಸೂಚನೆಗಳನ್ನು ನಾನು ಪಡೆದಿದ್ದೇನೆ” ಎಂದು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿಜಯಪುರ | ಪ್ಲಾಟ್‌ಫಾರ್ಮ್‌ ಮೇಲೆ ಹರಿವ ಚರಂಡಿ ನೀರು;...

"ಚರಂಡಿ ನೀರಿನ್ಯಾಗ ದಿನ ಹೋಗಾಕ ಹತ್ತಿವಿ…" ಇದು ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ಪ್ರತಿನಿತ್ಯ ಆಗಮಿಸುವ ಸಾವಿರಾರು ಪ್ರಯಾಣಿಕರ ಅಳಲು. ಪ್ಲಾಟ್‌ಫಾರ್ಮ್‌-1ರಲ್ಲಿ ಕೊಳಚೆ ನೀರು ಹರಿಯುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಜವಾಬ್ದಾರಿಯಿಂದ...

ಏಷ್ಯನ್ ಗೇಮ್ಸ್ : ತಂಡಗಳ ಯಶಸ್ಸಿನ ನಡುವೆ ವೈಯಕ್ತಿಕ...

ಭಾರತದ ಸಾಂಪ್ರದಾಯಿಕ ಕ್ರೀಡಾ ಶಕ್ತಿಗಳಾದ ಅಥ್ಲೆಟಿಕ್ಸ್ ಮತ್ತು ಶೂಟಿಂಗ್ ವಿಭಾಗಗಳು ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಮಿಂಚದೆ ಹಿನ್ನಡೆ ಅನುಭವಿಸಿವೆ. ಕಳೆದ ಹಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಈ ಎರಡು ವಿಭಾಗಗಳಿಂದ ಬರೋಬ್ಬರಿ 51...

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಇದನ್ನು ಓದಿದ್ದೀರಾ? ಉತ್ತರ ಕನ್ನಡ | ಮುಂಡಗೋಡದಲ್ಲಿ ಧರ್ಮಗುರು ದಲೈಲಾಮಾರ 90ನೇ ವರ್ಷದ ಜನ್ಮ ದಿನಾಚರಣೆ

“ಹಲವು ಭವಿಷ್ಯವಾಣಿಗಳನ್ನು ನೋಡುವಾಗ, ಅವಲೋಕಿತೇಶ್ವರರ ಆಶೀರ್ವಾದಗಳು ನನ್ನೊಂದಿಗಿವೆ ಎಂದು ನಾನು ಭಾವಿಸುತ್ತೇನೆ. ನಾನು ಇಲ್ಲಿಯವರೆಗೆ ನನ್ನ ಕೈಲಾದಷ್ಟು ಮಾಡಿದ್ದೇನೆ. ಇನ್ನೂ 30-40 ವರ್ಷ ಬದುಕಬೇಕೆಂದು ನಾನು ಭಾವಿಸುತ್ತೇನೆ. ನಿಮ್ಮ ಪ್ರಾರ್ಥನೆಗಳು ಇಲ್ಲಿಯವರೆಗೆ ಫಲ ನೀಡಿವೆ” ಎಂದರು.

“ನಾವು ನಮ್ಮ ದೇಶವನ್ನು ಕಳೆದುಕೊಂಡು ಭಾರತದಲ್ಲಿ ದೇಶಭ್ರಷ್ಟರಾಗಿ ವಾಸಿಸುತ್ತಿದ್ದರೂ, ನಾನು ಇಲ್ಲಿ ಧರ್ಮಶಾಲಾದಲ್ಲಿ ವಾಸಿಸುವವರಿಗೆ ಸಾಕಷ್ಟು ಸಹಾಯ ಮಾಡಲು ಸಾಧ್ಯವಾಯಿತು. ಇನ್ನೂ ಈ ಸೇವೆಯನ್ನು ಮುಂದುವರಿಸುವ ಆಶಯವನ್ನು ಹೊಂದಿದ್ದೇನೆ” ಎಂದು ತಿಳಿಸಿದರು.

ದಲೈಲಾಮಾ ಅವರ ಉತ್ತರಾಧಿಕಾರಿಯ ನೇಮಕದ ಬಗ್ಗೆ ಸ್ಥಾಪಿತ ಸಂಸ್ಥೆ ಮತ್ತು ಟಿಬೆಟಿಯನ್ ಬೌದ್ಧರ ನಾಯಕ ನಿರ್ಧರಿಸುತ್ತಾರೆ. ಮುಂದಿನ ದಲೈಲಾಮಾ ಯಾರಾಗುತ್ತಾರೆ ಎಂಬುದನ್ನು ಅವರೇ ತೀರ್ಮಾನಿಸುತ್ತಾರೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದ್ದರು.

ಇದನ್ನು ಓದಿದ್ದೀರಾ? ಕೆಂಗಣ್ಣು ಬಿಟ್ಟು ಚೀನೀಯರನ್ನು ಹೆದರಿಸಬೇಕೆಂದು ಮೂದಲಿಸುತ್ತಿದ್ದ ಮೋದಿ, ಆ ಮಾತನ್ನೇ ಮರೆತರೇಕೆ?! (ಭಾಗ-2)

2015ರಲ್ಲಿ ದಲೈಲಾಮಾ ಅವರೇ ಸ್ಥಾಪಿಸಿದ ಗಾಡೆನ್ ಫೋಡ್ರಾಂಗ್ ಟ್ರಸ್ಟ್‌ನ ಮೂಲಕವೇ ಉತ್ತರಾಧಿಕಾರಿಯ ನೇಮಕವಾಗಲಿದೆ. ತಮ್ಮ ಪುನರ್ಜನ್ಮದ ಮೂಲಕವೇ ಭವಿಷ್ಯದ ದಲೈ ಲಾಮಾ ಅಧಿಕಾರಕ್ಕೆ ಬರಲಿದ್ದು, ಅವರನ್ನು ಗುರುತಿಸುವ ಅಧಿಕಾರ ತನಗೆ ಇರುವುದು ಎಂದು ಈ ಹಿಂದೆಯೇ ದಲೈಲಾಮಾ ಹೇಳಿದ್ದಾರೆ.

ಈ ವಿಚಾರದಲ್ಲಿ ಈಗಾಗಲೇ ಈ ವಿಚಾರದಲ್ಲಿ ಚೀನಾ ಪ್ರತಿಕ್ರಿಯಿಸಿದೆ. ಟಿಬೆಟ್ ವಿಷಯದಲ್ಲಿ ಭಾರತ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದೆ. ಉತ್ತರಾಧಿಕಾರಿಯ ಆಯ್ಕೆಗೆ ತನ್ನ ಸಮ್ಮತಿ ಅಗತ್ಯ ಎಂದು ಚೀನಾ ಪ್ರತಿಪಾದಿಸಿದೆ. ಆದರೆ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಅಧಿಕಾರವನ್ನು ಅವರೇ(ಬೌದ್ಧರು)ಹೊಂದಿದ್ದಾರೆ ಎಂದು ಭಾರತ ಸರ್ಕಾರ ಹೇಳಿದೆ. ಈ ವಿಷಯದಲ್ಲಿ ಭಾರತ ಮತ್ತು ಚೀನಾದ ನಡುವೆ ವಾಕ್ಸಮರ ನಡೆಯುತ್ತಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಾಮೀನಿನ ಮೇಲೆ ಹೊರಬಂದು ಅತ್ಯಾಚಾರ ಸಂತ್ರಸ್ತೆಯ ವೀಡಿಯೋ ಲೀಕ್ ಮಾಡಿದ ದುಷ್ಕರ್ಮಿ: ಶೀಘ್ರ ಬಂಧನಕ್ಕೆ ಒತ್ತಾಯ

ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದ ಆರೋಪಿಯೊಬ್ಬ, ಸಂತ್ರಸ್ತೆಯ ಖಾಸಗಿ...

ತಮಿಳುನಾಡು | ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ

ತಮಿಳುನಾಡು ಸರ್ಕಾರವು ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರಿ ಬಸ್‌ಗಳಲ್ಲಿ ಜಾರಿಗೆ...

ಉತ್ತರಾಖಂಡ | ₹135.95 ಕೋಟಿ ಸಂಸದರ ನಿಧಿಯಲ್ಲಿ ಬಳಕೆಯಾಗಿದ್ದು ಕೇವಲ ಶೇ.18 ಮಾತ್ರ

ಉತ್ತರಾಖಂಡದ ಲೋಕಸಭೆ ಮತ್ತು ರಾಜ್ಯಸಭೆಯ ಹಾಲಿ ಸಂಸದರು ತಮಗೆ ಅಭಿವೃದ್ಧಿ ಕಾಮಗಾರಿಗಳಿಗಾಗಿ...