ಇಸ್ಲಾಮಿಕ್ ಸ್ಟೇಟ್ ಬೆಂಬಲಿತ ಬಂಡುಕೋರರು ಪೂರ್ವ ಕಾಂಗೋದ ಚರ್ಚ್ ಆವರಣದಲ್ಲಿ ಭಾನುವಾರ ದಾಳಿ ನಡೆಸಿದ್ದು, ಕನಿಷ್ಠ 21 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಅಲೈಡ್ ಡೆಮಾಕ್ರಟಿಕ್ ಫೋರ್ಸ್ (ಎಡಿಎಫ್) ಸದಸ್ಯರು ಬೆಳಗಿನ ಜಾವ 1 ಗಂಟೆ ಸುಮಾರಿಗೆ ಪೂರ್ವ ಕಾಂಗೋದ ಕೊಮಾಂಡಾದಲ್ಲಿರುವ ಕ್ಯಾಥೋಲಿಕ್ ಚರ್ಚ್ ಆವರಣದೊಳಗೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಹಲವು ಮನೆಗಳು ಮತ್ತು ಅಂಗಡಿಗಳು ಸುಟ್ಟುಹೋಗಿವೆ.
ಇದನ್ನು ಓದಿದ್ದೀರಾ? ಹೌದಿಗಳ ಮೇಲೆ ಅಮೆರಿಕ ದಾಳಿ; 24 ಮಂದಿ ಬಂಡುಕೋರರು ಸಾವು
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅಧಿಕಾರಿ ಡಿಯುಡೋನ್ ಡುರಾಂತಬೊ, “21ಕ್ಕೂ ಹೆಚ್ಚು ಮಂದಿ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಈ ಪೈಕಿ ಮೂವರು ದೇಹ ಸುಡಲಾಗಿತ್ತು. ಹಲವು ಮನೆಗಳಿಗೆ ಬೆಂಕಿ ಹಾಕಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಕೊಮಾಂಡಾ ಇರುವ ಇಟುರಿ ಪ್ರಾಂತ್ಯದ ಕಾಂಗೋಲೀಸ್ ಸೇನೆಯ ವಕ್ತಾರರು 10 ಮಂದಿ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದರು.
