ಹೊಸ ವರ್ಷದ ಮೊದಲ ದಿನವೇ ಭಯಾನಕ ಭೂಕಂಪನದಿಂದ ಸುದ್ದಿಯಾಗಿದ್ದ ಜಪಾನ್‌ನಲ್ಲಿ ಮತ್ತೊಂದು ಭಾರೀ ಅವಘಡ ಸಂಭವಿಸಿದೆ.
ರನ್‌ವೇಯಲ್ಲಿ ಲ್ಯಾಂಡ್ ಆಗುತ್ತಿದ್ದಾಗ ವಿಮಾನವೊಂದು ಇನ್ನೊಂದು ವಿಮಾನಕ್ಕೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಘಟನೆ ಟೋಕಿಯೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
Just IN:— A Japan Airlines plane with 367 people on board has collided with another plane at Tokyo Airport.
— In the video, plane can be seen on massive fire. Fate of 367 passengers onboard is yet unclear. pic.twitter.com/GNgx7y1aHr
— South Asia Index (@SouthAsiaIndex) January 2, 2024
ಜಪಾನಿನ ಟೋಕಿಯೋದಲ್ಲಿರುವ ಹನೆಡಾ ವಿಮಾನ ನಿಲ್ದಾಣದಲ್ಲಿ ಈ ಅವಘಡ ಸಂಭವಿಸಿದ್ದು, ವಿಮಾನದಲ್ಲಿ 360ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿದ್ದರು ಎಂದು ಜಪಾನಿನ ಮಾಧ್ಯಮಗಳು ವರದಿ ಮಾಡಿದೆ. ಈವರೆಗೆ ಸಾವು ನೋವಿನ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.
Japan Airlines flight JL516, an Airbus A350 has collided with a Coast Guard aircraft on the runway at Tokyo-Haneda Airport. The aircraft is on fire with rescue operations underway. pic.twitter.com/BygfKxZBgh
— Breaking Aviation News & Videos (@aviationbrk) January 2, 2024
ವಿಮಾನದಲ್ಲಿದ್ದ ಎಲ್ಲಾ 379 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆಯನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ವರದಿ ಮಾಡಿವೆ.
#WATCH | A Japan Airlines jet was engulfed in flames at Tokyo’s Haneda airport after a possible collision with a Coast Guard aircraft, with the airline saying that all 379 passengers and crew had been safely evacuated: Reuters
(Source: Reuters) pic.twitter.com/fohKUjk8U9
— ANI (@ANI) January 2, 2024
ಜಪಾನ್ ಏರ್‌ಲೈನ್ಸ್‌ನ 516, ಸ್ಥಳೀಯ ಸಮಯ 16:00 ಕ್ಕೆ ನ್ಯೂ ಚಿಟೋಸ್ ವಿಮಾನ ನಿಲ್ದಾಣದಿಂದ ಹೊರಟಿದ್ದು, 17:40 ಕ್ಕೆ ಹನೆಡಾದಲ್ಲಿ ಇಳಿಯಲು ನಿಗದಿಯಾಗಿತ್ತು. ಲ್ಯಾಂಡಿಗ್ ವೇಳೆ ಕೋಸ್ಟ್ ಗಾರ್ಡ್ ವಿಮಾನಕ್ಕೆ ಪ್ರಯಾಣಿಕರ ವಿಮಾನ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ.
#BreakingNews : First visuals from inside the wrecked plane who caught fire at Tokyo International airport #Japan .
People can be heard screaming.#Tsunami #earthquake pic.twitter.com/GnXNYuaCHk— Hsnain🍄 (@Hsnain901) January 2, 2024
ಹೊಸ ವರ್ಷದ ಮೊದಲ ದಿನ ಸಂಭವಿಸಿದ್ದ ಭೂಕಂಪದ ಸಂತ್ರಸ್ತರಿಗೆ ನೆರವನ್ನು ತಲುಪಿಸಲು ಜಪಾನ್ ಕೋಸ್ಟ್ ಗಾರ್ಡ್ DHC-8-315Q ವಿಮಾನವು ನಿಗಾಟಾಗೆ ಹೊರಡಲು ಕಾಯುತ್ತಿರುವಾಗ ಜಪಾನ್ ಏರ್‌ಲೈನ್ಸ್ ವಿಮಾನ ಡಿಕ್ಕಿ ಹೊಡೆದಿರುವುದಾಗಿ ತಿಳಿದುಬಂದಿದೆ. ಘಟನೆಯಿಂದಾಗಿ ಕೋಸ್ಟ್ ಗಾರ್ಡ್ ವಿಮಾನವು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಜೊತೆಗೆ ಪ್ರಯಾಣಿಕರಿದ್ದ ವಿಮಾನ ಕೂಡ ಬೆಂಕಿಯ ಕೆನ್ನಾಲಿಗೆಗೆ ನಾಶವಾಗಿದೆ.
ಕೋಸ್ಟ್ ಗಾರ್ಡಿಗೆ ಸೇರಿದ ವಿಮಾನದಲ್ಲಿ ಕ್ಯಾಪ್ಟನ್ ಸಹಿತ ಆರು ಮಂದಿ ಸಿಬ್ಬಂದಿ ಇದ್ದರು ಎಂದು ತಿಳಿದುಬಂದಿದೆ. ಕ್ಯಾಪ್ಟನ್ ಬಚಾವಾಗಿದ್ದು, ಉಳಿದ ಐದು ಮಂದಿಯ ವಿವರ ಪತ್ತೆಯಾಗಿಲ್ಲ ಎಂದು ಕೋಸ್ಟ್ ಗಾರ್ಡ್ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿರುವುದಾಗಿ ವರದಿಯಾಗಿದೆ.
#InPics: Plane In Flames At Tokyo Airport After Colliding With Another Aircraft https://t.co/d2la1dRjML pic.twitter.com/Wrm7Qa7pl7
— NDTV (@ndtv) January 2, 2024