2024ರಲ್ಲಿ 40 ಬಿಲಿಯನ್ ಡಾಲರ್ ಕಳೆದುಕೊಂಡ ಎಲಾನ್ ಮಸ್ಕ್; ಬಿಲಿಯನೇರ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ!

Date:

Advertisements

ಈ ಹಿಂದೆ ವಿಶ್ವದ ಅತೀ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದ ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಆದಾಯವನ್ನು ಕಳೆದುಕೊಳ್ಳುತ್ತಿದ್ದು ಬ್ಲೂಬರ್ಗ್ ಪ್ರಕಾರ ಮಸ್ಕ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ವರದಿ ಪ್ರಕಾರ ಎಕ್ಸ್ (ಟ್ವಿಟ್ಟರ್) ಮಾಲೀಕ ಮಸ್ಕ್ 2024ರ ಈ ಎರಡು ತಿಂಗಳ ಅವಧಿಯಲ್ಲೇ ಬರೋಬ್ಬರಿ 40 ಬಿಲಿಯನ್ ಡಾಲರ್ ನಷ್ಟ ಕಂಡಿದ್ದಾರೆ.

ಬ್ಲೂಬರ್ಗ್ ಬಿಲಿಯನೇರ್ ಇಂಡೆಕ್ಸ್ ಪ್ರಕಾರ ಎಲಾನ್ ಮಸ್ಕ್ 189 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿದ್ದು ಫೋರ್ಬ್ಸ್ ರಿಯಲ್ ಟೈಮ್ ಪ್ರಕಾರ 195.1 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಬ್ಲೂಬರ್ಗ್ ಇಂಡೆಕ್ಸ್‌ನಂತೆ ಪ್ರಸ್ತುತ ಫ್ಯಾಷನ್ ಬ್ರ್ಯಾಂಡ್ ಲೂಯಿ ವಿಟಾನ್‌ನ ಮಾಲೀಕ ಬರ್ನಾರ್ಡ್ ಅರ್ನೌಲ್ಟ್ 201 ಬಿಲಿಯನ್ ಡಾಲರ್‌ನೊಂದಿಗೆ ವಿಶ್ವದ ಶ್ರೀಮಂತ ವ್ಯಕ್ತಿಯಾಗಿದ್ದು 198 ಬಿಲಿಯನ್ ಡಾಲರ್ ಆಸ್ತಿ ಹೊಂದಿರುವ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೊಸ್‌ ಎರಡನೇ ಸ್ಥಾನದಲ್ಲಿದ್ದಾರೆ.

Advertisements

ಈ ವಾರದ ಆರಂಭದಲ್ಲಿ ಜೆಫ್ ಬೆಜೊಸ್‌ ವಿಶ್ವದ ಶ್ರೀಮಂತ ವ್ಯಕ್ತಿ ಎಂಬ ಸ್ಥಾನವನ್ನು ಅಲಂಕರಿಸಿದ್ದು, ಕೆಲವೇ ದಿನಗಳಲ್ಲಿ ಜೆಫ್ ಬೆಜೊಸ್‌ರನ್ನು ಹಿಂದಿಕ್ಕಿ ಬರ್ನಾರ್ಡ್ ಅರ್ನೌಲ್ಟ್ ಅಗ್ರ ಸ್ಥಾನಕ್ಕೆ ಏರಿದ್ದಾರೆ. ಆದರೆ ಎಲಾನ್ ಮಸ್ಕ್ ಮಾತ್ರ ಆದಾಯ ಕಳೆದುಕೊಳ್ಳುತ್ತಾ ಪಟ್ಟಿಯಿಂದ ಕೆಳಕ್ಕಿಳಿಯುತ್ತಿದ್ದಾರೆ.

ಮಸ್ಕ್‌ಗೆ ಟೆಸ್ಲಾ ನೀಡಿದ ಪೆಟ್ಟು

ಟೆಸ್ಲಾದಲ್ಲಿ ಶೇಕಡ 21ರಷ್ಟು ಪಾಲು ಹೊಂದಿರುವ ಮಸ್ಕ್‌ನ ಆದಾಯಕ್ಕೆ ಟೆಸ್ಲಾ ಸಂಸ್ಥೆಯ ಕೊಡುಗೆ ಅಧಿಕ. ಆದರೆ ಸಂಸ್ಥೆಯ ಷೇರುಗಳು ನಿರಂತರವಾಗಿ ಕುಸಿಯುತ್ತಿದ್ದು, ಇದು ಮಸ್ಕ್ ಆದಾಯದ ಮೇಲೆ ಪ್ರಭಾವಿಸಿದೆ. ಟೆಸ್ಲಾ ಷೇರು ಈ ವರ್ಷದಲ್ಲಿ ಶೇಕಡ 29ರಷ್ಟು ಕುಸಿದಿದ್ದು, ಕಳೆದ ವಹಿವಾಟಿನ ಅಂತ್ಯದಲ್ಲಿ ಶೇಕಡ 1.85ರಷ್ಟು ಇಳಿದು 175.34ಕ್ಕೆ ತಲುಪಿದೆ.

ಈ ಕಾರು ತಯಾರಕ ಸಂಸ್ಥೆಯ ಉತ್ಪನ್ನಗಳ ಮಾರಾಟ ಚೀನಾದಲ್ಲಿ ಕಡಿಮೆಯಾಗುತ್ತಿದ್ದು, ಬರ್ಲಿನ್‌ನಲ್ಲಿರುವ ಟೆಸ್ಲಾ ಫ್ಯಾಕ್ಟರಿ ಉತ್ಪಾದನೆಯನ್ನೇ ಸ್ಥಗಿತಗೊಳಿಸಿದೆ. ಇದು ಟೆಸ್ಲಾ ಷೇರಿನ ಮೇಲೆ ಪರಿಣಾಮ ಬೀರಿದ್ದು, 2021ರ ಬೆಲೆಗಿಂತ ಶೇಕಡ 50ರಷ್ಟು ಇಳಿಕೆಯಾಗಿದೆ.

ಅದಾನಿ ಆದಾಯ ಏರಿಕೆ!

ವಿಶ್ವದಲ್ಲಿ ಅತೀ ಶ್ರೀಮಂತರ ಆದಾಯ ಕುಸಿಯುತ್ತಿರುವಾಗ ಷೇರುಪೇಟೆಯಲ್ಲಿ ವಂಚನೆಯ ಆರೋಪ ಹೊತ್ತಿರುವ ಅದಾನಿ ಸಂಸ್ಥೆಯ ಷೇರುಗಳು ಜಿಗಿಯುತ್ತಿದ್ದು, ಗೌತಮ್ ಅದಾನಿ ಆದಾಯ ಏರಿಕೆಯಾಗಿದೆ. ಭಾರತೀಯರ ಪೈಕಿ ಅಧಿಕ ಆದಾಯ ಗಳಿಸಿರುವವರು ಗೌತಮ್ ಅದಾನಿಯಾಗಿದ್ದಾರೆ. ವಿಶ್ವದ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಮುಕೇಶ್ ಅಂಬಾನಿ 11 ಸ್ಥಾನದಲ್ಲಿದ್ದರೆ, ಗೌತಮ್ ಅದಾನಿ 13ನೇ ಸ್ಥಾನದಲ್ಲಿದ್ದಾರೆ.

?s=150&d=mp&r=g
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್‌ ಒತ್ತಡ

ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ...

ಗಾಝಾದಲ್ಲಿ ಹತ್ಯೆಯಾದ ಯುವ ಪತ್ರಕರ್ತರೊಬ್ಬರ ಭಿನ್ನ ಉಯಿಲು !

ನಾನು ಸಾಯುವುದಾದರೆ, ನನ್ನ ಸಿದ್ಧಾಂತಗಳ ಮೇಲೆ ದೃಢವಾಗಿರುವೆ. ದೇವರ ಮುಂದೆ ನಾನು...

ಗಾಝಾದಲ್ಲಿ ಇಸ್ರೇಲ್ ದಾಳಿ: ಐವರು ಅಲ್‌ಜಝೀರಾ ಪತ್ರಕರ್ತರು ಹತ

ಭಾನುವಾರ ಗಾಝಾ ನಗರದಲ್ಲಿ ಅಲ್‌ಜಝೀರಾ ಟೆಂಟ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ...

ಟ್ರಂಪ್‌ ಕೊಟ್ಟ ಏಟಿಗೆ ಚೀನಾದತ್ತ ತಿರುಗಿದ ಪ್ರಧಾನಿ; ಚೀನೀ ಭಜನೆ ಮಾಡುತ್ತಿದೆ ಮೋದಿ ಭಕ್ತ ಗಣ

ಅಮೆರಿಕ ಭಾರೀ ಮೊತ್ತದ ತೆರಿಗೆ ಹೇರಿದ ಬೆನ್ನಲ್ಲೇ, ಭಾರತವು ಚೀನಾದೊಂದಿಗೆ ಆರ್ಥಿಕ...

Download Eedina App Android / iOS

X