389 ಪ್ರಯಾಣಿಕರು ಮತ್ತು 13 ಸಿಬ್ಬಂದಿಗಳೊಂದಿಗೆ ಪ್ಯಾರಿಸ್‌ಗೆ ತೆರಳುತ್ತಿದ್ದ ಕೆನಡಾದ ವಿಮಾನವೊಂದು ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಬೆಂಕಿ ಹೊತ್ತಿಕೊಂಡ ಘಟನೆ ಜೂನ್ 5ರಂದು ನಡೆದಿದ್ದು, ತಡವಾಗಿ ವರದಿಯಾಗಿದೆ. ಬೆಂಕಿ ಹೊತ್ತಿಕೊಂಡ ದೃಶ್ಯವು ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.
ಏರ್ ಕೆನಡಾ ಸಂಸ್ಥೆಗೆ ಸೇರಿದ AC872 ವಿಮಾನವು ಜೂನ್ 5 ರಂದು ಟೊರೊಂಟೋದಿಂದ ಪ್ಯಾರಿಸ್‌ಗೆ ಹೊರಟಿತ್ತು. ಇದು ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
An Air Canada flight en route to Paris with 389 passengers and 13 crew members caught fire just minutes after taking off from Toronto Pearson International Airport. #AirCanada #flight #fire #Paris #Toronto pic.twitter.com/Wv6SBPzRMp
— IndiaToday (@IndiaToday) June 8, 2024
ಬೆಂಕಿ ಕಾಣಿಸಿಕೊಂಡ ಕೂಡಲೇ ಏರ್ ಕಂಟ್ರೋಲ್ ಅಧಿಕಾರಿಯು ಪೈಲಟ್‌ಗಳಿಗೆ ಮಾಹಿತಿ ನೀಡಿದ್ದರಿಂದ ಅರ್ಧಗಂಟೆಯ ಬಳಿಕ ಮತ್ತೆ ಟೊರೊಂಟೊಗೆ ಮರಳಿ, ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.
Air Canada Boeing 777: June 5th, 2024- Toronto -> Paris pic.twitter.com/7rwuHgHrpu
— Alex Sanglez (@realalexsanglez) June 7, 2024
ಘಟನೆಯ ಬಗ್ಗೆ ಮಾಹಿತಿ ನೀಡಿರುವ ಏರ್ ಕೆನಡಾ, “AC872 ವಿಮಾನವು ಜೂನ್ 5 ರಂದು ಟೊರೊಂಟೋದಿಂದ ಪ್ಯಾರಿಸ್‌ಗೆ ಹೊರಟಿತ್ತು. ಇಂಜಿನ್‌ನಲ್ಲಿನ ದೋಷದಿಂದಾಗಿ ಟೇಕಾಫ್ ವೇಳೆ ಬೆಂಕಿ ಕಾಣಿಸಿದೆ. ನಿರ್ಗಮಿಸಿದ ಸ್ವಲ್ಪ ಸಮಯದ ನಂತರ ಟೊರೊಂಟೊಗೆ ಮರಳಿತು. ವಿಮಾನವು ಸುರಕ್ಷಿತವಾಗಿ ಇಳಿಯಿತು. ಬೋಯಿಂಗ್ 777 ವಿಮಾನದಲ್ಲಿ 389 ಪ್ರಯಾಣಿಕರು ಮತ್ತು 13 ಸಿಬ್ಬಂದಿ ಇದ್ದರು. ಪ್ರಯಾಣಿಕರನ್ನು ಅಂದೇ ಸಂಜೆಯ ಬಳಿಕ ಮತ್ತೊಂದು ವಿಮಾನದಲ್ಲಿ ಕಳುಹಿಸಿ ಕೊಡಲಾಗಿದೆ” ಎಂದು ತಿಳಿಸಿದೆ.
Update on flight AC872 from June 5: pic.twitter.com/lkruMaM7KH
— Air Canada (@AirCanada) June 7, 2024
“ನಮ್ಮ ಪೈಲಟ್‌ಗಳು ಹೆಚ್ಚು ನುರಿತ ವೃತ್ತಿಪರರು. ಇಂತಹ ಘಟನೆಗಳ ಸಂದರ್ಭದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡುವ ಬಗ್ಗೆ ಚೆನ್ನಾಗಿ ತರಬೇತಿ ಪಡೆದಿದ್ದಾರೆ. ಕೇವಲ ಇಂಜಿನ್ ಮಾತ್ರವಲ್ಲದೇ, ವಿವಿಧ ಅಂಶಗಳಿಂದ ಕೂಡ ಇಂತಹ ಘಟನೆಗಳು ಉಂಟಾಗುತ್ತದೆ” ಎಂದು ಸಂಸ್ಥೆ ತಿಳಿಸಿದೆ.
An #AirCanada flight bound for Paris was forced to turn back to Toronto after experiencing issues with the engine during take-off.
The Boeing 777 was carrying nearly 400 passengers on Air Canada flight #AC872 to France when it was forced to return to Toronto pic.twitter.com/1YeLfxzn8M
— TruthGateOfficial (@TruthGateOff) June 7, 2024

Can you please write a news article about me please? Thank you.