ಖಲಿಸ್ತಾನಿ ಉಗ್ರಗಾಮಿ ಹರ್‌ದೀಪ್ ಸಿಂಗ್ ನಿಜ್ಜರ್ ಸಾವಿನ ಮೊದಲ ವರ್ಷದ ನೆನಪಿಗಾಗಿ ಕೆನಡಾ ಸಂಸತ್ತಿನ ಕೆಳಮನೆ ಹೌಸ್ ಆಫ್ ಕಾಮನ್ಸ್‌ನಲ್ಲಿ ಮಂಗಳವಾರ ಮೌನಾಚರಣೆ ಹಮ್ಮಿಕೊಳ್ಳಲಾಗಿತ್ತು.
ಕೆನಡಾದ ಮೌನಾಚರಣೆಗೆ ಭಾರತದ ರಾಯಭಾರಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದೆ. 1985ರಲ್ಲಿ ಏರ್ ಇಂಡಿಯಾ ಕಾನಿಷ್ಕ ವಿಮಾನ ಸ್ಫೋಟದಲ್ಲಿ ಮೃತಪಟ್ಟ 329 ಜನರಿಗೆ ಗೌರವ ಸೂಚಿಸಲು ಇದೇ ಭಾನುವಾರ ಸ್ಮರಣಾರ್ಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದೆ.
ಜೂ.22 ರಂದು ಸ್ಟ್ಯಾನ್ಲಿ ಪಾರ್ಕ್‌ನ ಕೇಪರ್‌ಲೇ ಮೈದಾನದಲ್ಲಿ ಸಂಜೆ 6.30 ಕ್ಕೆ ಸ್ಮರಣಾರ್ಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಭಾರತೀಯ ರಾಯಭಾರಿ ಕಚೇರಿ, “ಭಯೋತ್ಪಾದನೆಯನ್ನು ನಿಗ್ರಹಿಸುವ ಭಾರತ ತನ್ನ ನಿಲುವಿನಲ್ಲಿ ಮುಂಚೂಣಿಯಲ್ಲಿದೆ. ಈ ಜಾಗತಿಕ ಬೆದರಿಕೆಯನ್ನು ನಿಗ್ರಹಿಸಲು ಎಲ್ಲ ರಾಷ್ಟ್ರಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ. ಕಾನಿಷ್ಕಾದ ಏರ್ ಇಂಡಿಯಾ ವಿಮಾನ ಸ್ಫೋಟಿಸಿ 86 ಮಕ್ಕಳು ಒಳಗೊಂಡು 329 ಅಮಾಯಕರನ್ನು ಹೇಡಿತನದ ಭಯೋತ್ಪಾದನೆಯ ಮೂಲಕ ಅತ್ಯಂತ ಹೀನವಾಗಿ ಹತ್ಯೆ ಮಾಡಲಾಗಿತ್ತು. ಇದರ 39ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಕಾರ್ಯಕ್ರಮ ಜೂನ್ 23, 2014ರಂದು ಹಮ್ಮಿಕೊಳ್ಳಲಾಗಿದೆ” ಎಂದು ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೇವದಾರಿ ಗಣಿಗಾರಿಕೆಯ ಹಿಂದೆ ಇರುವುದು ಅಭಿವೃದ್ಧಿಯೋ, ಅಧ್ವಾನವೋ?
ಹರ್‌ದೀಪ್ ಸಿಂಗ್ ನಿಜ್ಜರ್ ಖಲಿಸ್ತಾನಿ ಟೈಗರ್ ಫೋರ್ಸ್‌ನ ಮುಖ್ಯಸ್ಥನಾಗಿದ್ದು,ಕಳೆದ ವರ್ಷ ಕೆನಡಾದ ಸರ್ರೆಯ ಬ್ರಿಟಿಷ್ ಕೊಲಂಬಿಯಾ ಗುರುದ್ವಾರದ ಹೊರಭಾಗದಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಭಾರತ ಸರ್ಕಾರ ಈತನು ಒಳಗೊಂಡಂತೆ 40 ಮಂದಿಯನ್ನು ‘ನಿಯೋಜಿತ ಉಗ್ರಗಾಮಿಗಳು’ ಎಂದು ಘೋಷಿಸಿತ್ತು.
ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಮೂಲದ ನಾಲ್ವರು ಭಾಗಿಯಾಗಿದ್ದಾರೆ ಎಂದು ಕೆನಡಾ ಆರೋಪಿಸಿದೆ. ನಿಜ್ಜರ್ ಕೊಲೆಯಲ್ಲಿ ಭಾರತ ಸರ್ಕಾರ ನೇರವಾಗಿ ಭಾಗಿಯಾಗಿದೆ ಕೆನಡಾ ಆರೋಪಿಸಿದ್ದು, ಎರಡೂ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಸಂಬಂಧಕ್ಕೆ ಧಕ್ಕೆಯುಂಟಾಗಿದೆ.
ಈ ನಡುವೆ ಇತ್ತೀಚಿಗಷ್ಟೆ ಇಟಲಿಯಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೇಯು ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
