ಸೊಳ್ಳೆ ಗಾತ್ರದ ಮೈಕ್ರೋ ಡ್ರೋನ್‌ಗಳನ್ನು ತಯಾರಿಸಿದ ಚೀನಾ

Date:

Advertisements

ಸೊಳ್ಳೆ ಗಾತ್ರದ ಮೈಕ್ರೋ ಡ್ರೋನ್‌ʼಗಳನ್ನು ಚೀನಾದ ವಿಜ್ಞಾನಿಗಳು ತಯಾರಿಸಿದ್ದಾರೆ. ಸೊಳ್ಳೆ ಗಾತ್ರದ ಮಿಲಿಟರಿ ಡ್ರೋನ್‌ಗಳ ಗಾತ್ರ 1.3 ಸೆಂಟಿಮೀಟರ್ ಇದ್ದು,ಈ ಮೈಕ್ರೋ ಡ್ರೋನ್‌ ಅನ್ನು ಚೀನಾದ ರಾಷ್ಟ್ರೀಯ ರಕ್ಷಣಾ ತಂತ್ರಜ್ಞಾನ ವಿಶ್ವವಿದ್ಯಾಲಯದ ರೊಬೊಟಿಕ್ಸ್ ಲ್ಯಾಬ್(ಎನ್‌ಯುಡಿಟಿ) ತಯಾರಿಸಿದೆ.

ಚೀನಾದ ಹುನಾನ್ ಪ್ರಾಂತ್ಯದಲ್ಲಿರುವ ಎನ್‌ಯುಡಿಟಿಯ ರೊಬೊಟಿಕ್ಸ್ ಲ್ಯಾಬ್‌ನ ಸಂಶೋಧಕರು ಮಿಲಿಟರಿ ಮತ್ತು ರಕ್ಷಣೆಗಾಗಿ ಈ ಡ್ರೋನ್‌ ಅನ್ನು ವಿನ್ಯಾಸಗೊಳಿಸಿದ್ದಾರೆ.

ಮಾಧ್ಯಮಗಳ ವರದಿಯ ಪ್ರಕಾರ, ಈ ಡ್ರೋನ್‌ ಗಾತ್ರ ಮತ್ತು ವಿನ್ಯಾಸವು ಸೊಳ್ಳೆಯಂತೆಯೇ ಇರುವುದರಿಂದ ಇದನ್ನು ‘ಸೊಳ್ಳೆ ಡ್ರೋನ್ ಎಂದೂ ಕರೆಯಲಾಗುತ್ತಿದೆ. ಈ ಮೈಕ್ರೋ ಡ್ರೋನ್‌ ಮೂಲ ಮಾದರಿಯನ್ನು ಚೀನಾದ ಕೇಂದ್ರ ದೂರದರ್ಶನ ಮಿಲಿಟರಿ ಚಾನಲ್‌ನಲ್ಲಿ ಪ್ರದರ್ಶಿಸಲಾಯಿತು.

Advertisements

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಆಗ ಇರಾಕ್ – ಈಗ ಇರಾನ್: ಅಮೆರಿಕ ಕ್ರೌರ್ಯಕ್ಕೆ ಕೊನೆ ಎಂದು?

ಇದು ಎರಡು ಸಣ್ಣ ರೆಕ್ಕೆಗಳನ್ನು ಹೊಂದಿದ್ದು, ಅವು ಸೊಳ್ಳೆ ರೆಕ್ಕೆಗಳಂತೆ ಕಾಣುತ್ತವೆ. ಇದು ಕೂದಲಿನಷ್ಟು ತೆಳುವಾದ ಮೂರು ಕಾಲುಗಳನ್ನು ಹೊಂದಿದೆ. ಈ ಡ್ರೋನ್ ಅನ್ನು ಸ್ಮಾರ್ಟ್‌ ಫೋನ್ ಮೂಲಕ ನಿಯಂತ್ರಿಸಬಹುದು ಇದರ ಉದ್ದ ಕೇವಲ 1.3 ಸೆಂಟಿ ಮೀಟರ್‌ಗಳು.

ಈ ಮಿಲಿಟರಿ ಡ್ರೋನ್ ಕಾವಲು, ಕಾರ್ಯಾಚರಣೆಗಳನ್ನು ರಹಸ್ಯವಾಗಿ ನಡೆಸಬಲ್ಲದು. ಯುದ್ಧದ ಸಮಯದಲ್ಲಿ, ಚೀನಾದ ಸೈನ್ಯವು ಈ ಸಣ್ಣ ಡ್ರೋನ್ ಸಹಾಯದಿಂದ ಶತ್ರುಗಳ ಮೇಲೆ ಕಣ್ಣಿಡಬಹುದು. ತುರ್ತು ಸಂದರ್ಭದಲ್ಲಿ ಬದುಕುಳಿದವರನ್ನು ಪತ್ತೆ ಹಚ್ಚುವಲ್ಲಿಯೂ ಇದು ಸಹಾಯ ಮಾಡುತ್ತದೆ. ಇವುಗಳಿಂದ ಪರಿಸರ ಪರಿಸ್ಥಿತಿಗಳು, ಗಾಳಿಯ ಗುಣಮಟ್ಟ, ನೀರಿನ ಗುಣಮಟ್ಟ ಇತ್ಯಾದಿಗಳನ್ನು ಅಳೆಯಬಹುದು. ತುಂಬ ಚಿಕ್ಕದಾಗಿರುವುದರಿಂದ ಈ ಡ್ರೋನ್‌ ಹಾರಾಟದ ಸಮಯ ತುಂಬಾ ಕಡಿಮೆಯಿರುತ್ತದೆ. ಸಣ್ಣ ಬ್ಯಾಟರಿಯಿಂದಾಗಿ, ಇದು ಹೆಚ್ಚು ಕಾಲ ಹಾರಾಟ ಮಾಡಲು ಸಾಧ್ಯವಿಲ್ಲ ಎನ್ನಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್‌ ಒತ್ತಡ

ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ...

ಗಾಝಾದಲ್ಲಿ ಹತ್ಯೆಯಾದ ಯುವ ಪತ್ರಕರ್ತರೊಬ್ಬರ ಭಿನ್ನ ಉಯಿಲು !

ನಾನು ಸಾಯುವುದಾದರೆ, ನನ್ನ ಸಿದ್ಧಾಂತಗಳ ಮೇಲೆ ದೃಢವಾಗಿರುವೆ. ದೇವರ ಮುಂದೆ ನಾನು...

ಗಾಝಾದಲ್ಲಿ ಇಸ್ರೇಲ್ ದಾಳಿ: ಐವರು ಅಲ್‌ಜಝೀರಾ ಪತ್ರಕರ್ತರು ಹತ

ಭಾನುವಾರ ಗಾಝಾ ನಗರದಲ್ಲಿ ಅಲ್‌ಜಝೀರಾ ಟೆಂಟ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ...

ದಾವಣಗೆರೆ | ಭಾರತದ ಗ್ರಂಥಾಲಯ ಪಿತಾಮಹ ರಂಗನಾಥ್ ಜನ್ಮದಿನ; ವಿವಿಯಲ್ಲಿ ಗ್ರಂಥಾಲಯ ಕಾರ್ಯಾಗಾರ

ಭಾರತದ ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್. ರಂಗನಾಥನ್ ಅವರ 133ನೇ ಜನ್ಮದಿನದ ಅಂಗವಾಗಿ...

Download Eedina App Android / iOS

X