ಮಧ್ಯಪ್ರಾಚ್ಯದಲ್ಲಿ ಕುಸಿಯುತ್ತಿರುವ ‘ಡಾಲರ್’ ಪ್ರಾಬಲ್ಯ: ಕಾರಣ ಏನು?

Date:

Advertisements

ಇರಾಕ್ ಸೇರಿದಂತೆ ಕೆಲವು ಮಧ್ಯಪ್ರಾಚ್ಯ ದೇಶಗಳಲ್ಲಿ ಡಾಲರ್ ಪ್ರಾಬಲ್ಯವು ದಿನೇದಿನೇ ಕುಸಿಯುತ್ತಿದೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದ ವೇಳೆ ಅಮೆರಿಕ ತೆಗೆದುಕೊಂಡ ನಿಲುವುಗಳು ಈ ಬೆಳವಣಿಗೆಗಳಿಗೆ ಕಾರಣ ಎಂದು ವರದಿಯಾಗಿದೆ.

ಇರಾಕ್ ಸರ್ಕಾರವು ಯುಎಸ್ ಡಾಲರ್‌ಗಳಲ್ಲಿ ವೈಯಕ್ತಿಕ ಅಥವಾ ವ್ಯಾಪಾರ ವ್ಯವಹಾರಗಳನ್ನು ಮಾಡುವುದನ್ನು ನಿಷೇಧಿಸುವುದಾಗಿ ಘೋಷಿಸಿದೆ. ಡಾಲರ್ ಬದಲಿಗೆ ಯುವಾನ್ ಬಳಸಿ ಚೀನಾದೊಂದಿಗೆ ವ್ಯಾಪಾರ ಮಾಡುವುದಾಗಿ ಹೇಳಿದೆ.

ಸೌದಿ ಮತ್ತು ಎಮಿರೇಟ್ಸ್‌ ದೇಶಗಳು ತೈಲವನ್ನು ಡಾಲರ್ ರಹಿತವಾಗಿ ಮಾರಾಟ ಮಾಡಲು ಯೋಚನೆ ನಡೆಸಿದ್ದು, ಡಾಲರ್‍‌ಗೆ ಪರ್ಯಾಯವಾಗಿ ಸಂಪೂರ್ಣ ಹೊಸ ಕರೆನ್ಸಿಯನ್ನು ಸ್ಥಾಪಿಸುವ ಯೋಜನೆ ಹಾಕಿಕೊಂಡಿರುವುದಾಗಿ ವರದಿಯಾಗಿದೆ. ಸದ್ಯ ಈ ಬೆಳವಣಿಗೆ ಅಮೆರಿಕಕ್ಕೆ ತಲೆನೋವಾಗುವ ಸಾಧ್ಯತೆ ಇದೆ.

Advertisements

ಕಳೆದ ಮಾರ್ಚ್‌ನಲ್ಲಿ, ಸೌದಿಯ ಇಂಧನ ಸಚಿವ ಪ್ರಿನ್ಸ್ ಅಬ್ದುಲ್ ಅಝೀಝ್ ಬಿನ್ ಸಲ್ಮಾನ್, ಯಾವುದೇ ದೇಶವು ಸೌದಿ ತೈಲ ರಫ್ತಿನ ಮೇಲೆ ಬೆಲೆ ಮಿತಿಯನ್ನು ವಿಧಿಸಲು ಪ್ರಯತ್ನಿಸಿದರೆ, ರಷ್ಯಾಕ್ಕೆ ಮಾಡಿದ ರೀತಿಯಲ್ಲಿಯೇ, ಇನ್ನು ಮುಂದೆ ಅವರೊಂದಿಗೆ ವ್ಯಾಪಾರ ಮಾಡುವುದಿಲ್ಲ ಎಂದು ಹೇಳಿದ್ದರು.

ಡಾಲರ್ ಐತಿಹಾಸಿಕವಾಗಿ ಮಧ್ಯಪ್ರಾಚ್ಯದಲ್ಲಿ ಸರ್ವೋಚ್ಚ ಆಳ್ವಿಕೆಯನ್ನು ಹೊಂದಿದ್ದರೂ, ಇತ್ತೀಚಿನ ಕೆಲವೊಂದು ಬೆಳವಣಿಗೆಗಳು ಅದರ ಪ್ರಾಬಲ್ಯ ಕಡಿಮೆಯಾಗುತ್ತಿರುವುದನ್ನು ತೋರಿಸುತ್ತಿದೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದ ವೇಳೆ, ಅಮೆರಿಕ ಮತ್ತು ನ್ಯಾಟೊ ದೇಶಗಳು ರಷ್ಯಾದ ಮೇಲೆ ಆರ್ಥಿಕ ನಿರ್ಬಂಧಗಳನ್ನು ವಿಧಿಸಿರುವುದೇ ಈ ಎಲ್ಲ ಬೆಳವಣಿಗೆಗೆ ಕಾರಣ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ವಿಶ್ವದ ಹಲವು ರಾಷ್ಟ್ರಗಳು ಯಾವುದೇ ಸರಕು ಮತ್ತು ಸೇವೆಯನ್ನು ಡಾಲರ್‌ನ ಮೌಲ್ಯದ ಲೆಕ್ಕಾಚಾರದಲ್ಲಿ ಮಾರಾಟ ಮಾಡುತ್ತವೆ ಮತ್ತು ಖರೀದಿಸುತ್ತವೆ. ಉಕ್ರೇನ್ ಮತ್ತು ರಷ್ಯಾ ನಡುವಣ ಯುದ್ಧ ಆರಂಭವಾದ ಬಳಿಕ, ಅಮೆರಿಕ ಮತ್ತು ನ್ಯಾಟೊ ದೇಶಗಳು ರಷ್ಯಾ ಮೇಲೆ ಆರ್ಥಿಕ ನಿರ್ಬಂಧಗಳನ್ನು ಹೇರಿದ್ದವು. ಯಾವ ದೇಶವೂ ರಷ್ಯಾ ಜತೆಗೆ ವ್ಯಾಪಾರ ವಹಿವಾಟು ನಡೆಸಬಾರದು ಎಂದು ತಾಕೀತು ಮಾಡಿತ್ತು.

ಅಮೆರಿಕವು ಡಾಲರ್ ರೂಪದಲ್ಲಿದ್ದ ರಷ್ಯಾದ ಮೀಸಲು ಹಣವನ್ನು ಜಪ್ತಿ ಮಾಡಿತ್ತು. ಅಮೆರಿಕದಲ್ಲಿದ್ದ ರಷ್ಯಾದ ಬ್ಯಾಂಕ್‌ಗಳನ್ನು ದೇಶದಿಂದ ಹೊರಗಟ್ಟಿತ್ತು. ರಷ್ಯಾವು ಜಾಗತಿಕ ಮಟ್ಟದಲ್ಲಿ ವ್ಯಾಪಾರ ನಡೆಸಲು ಸಾಧ್ಯವಾಗದೇ ಇರುವ ಸ್ಥಿತಿ ನಿರ್ಮಿಸಿ, ಅದನ್ನು ಇಕ್ಕಟ್ಟಿಗೆ ಸಿಲುಕಿಸುವ ಉದ್ದೇಶ ಈ ಕ್ರಮದ ಹಿಂದೆ ಇತ್ತು. ಆದರೆ, ರಷ್ಯಾ ಆ ನಿರ್ಬಂಧವನ್ನೂ ಮೀರಿ ಜಾಗತಿಕ ಮಟ್ಟದಲ್ಲಿ ವ್ಯಾಪಾರ ನಡೆಸಿತ್ತು.

ರಷ್ಯಾ, ತನ್ನ ಕರೆನ್ಸಿಯಾದ ರೂಬಲ್‌ ಮೂಲಕ ಖರೀದಿಸುವುದಾದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆಗಿಂತ ಕಡಿಮೆ ಬೆಲೆಗೆ ಕಚ್ಚಾತೈಲ ಪೂರೈಸುವುದಾಗಿ ಘೋಷಿಸಿತ್ತು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಮೆರಿಕದ ಡಾಲರ್‌ ಅನ್ನು ಬದಿಗಿಟ್ಟು ತಮ್ಮದೇ ಕರೆನ್ಸಿ ಮೂಲಕ ವಹಿವಾಟು ನಡೆಸಬೇಕು ಎಂಬ ದೊಡ್ಡಮಟ್ಟದ ಕೂಗು ಕೇಳಿ ಬಂದಿರುವುದಾಗಿ ವರದಿಯಾಗಿದೆ.

ಈ ಸುದ್ದಿ ಓದಿದ್ದೀರಾ? ಉತ್ತರ, ಮಧ್ಯಭಾರತದಲ್ಲಿ ಶಾಖದ ಅಲೆ ಎಚ್ಚರಿಕೆ; ಕೆಲವು ರಾಜ್ಯಗಳಲ್ಲಿ ಶಾಲೆಗಳು ಬಂದ್

ಆದರೆ, ಡಾಲರ್ ಬದಲಿಗೆ ಬೇರೆ ಯಾವ ಕರೆನ್ಸಿಯನ್ನು ವ್ಯಾಪಾರ–ವಹಿವಾಟಿನ ಮಾಧ್ಯಮವನ್ನಾಗಿ ಬಳಸಬೇಕು ಎಂಬ ದೊಡ್ಡ ಪ್ರಶ್ನೆಯೂ ಈಗ ಹಲವು ರಾಷ್ಟ್ರಗಳಿಗೆ ಎದುರಾಗಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.

ಡಾಲರ್‌ ಅನ್ನು ಹೊರಗಿಟ್ಟು, ತಮ್ಮದೇ ಕರೆನ್ಸಿಯಲ್ಲಿ ವಹಿವಾಟು ನಡೆಸಬೇಕು ಎಂದು ಗಟ್ಟಿಯಾಗಿ ಹೇಳುತ್ತಿರುವ ದೇಶಗಳ ಹೆಚ್ಚಿನವು ಅಮೆರಿಕ ವಿರೋಧಿ ದೇಶಗಳೇ ಆಗಿವೆ. ಅಂತಹ ದೇಶಗಳಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ, ರಷ್ಯಾ ಎರಡನೇ ಸ್ಥಾನದಲ್ಲಿದೆ.

ಡಾಲರ್ ಪಾರಮ್ಯವು, ಜಾಗತಿಕ ಮಟ್ಟದಲ್ಲಿ ಅಮೆರಿಕದ ಪಾರಮ್ಯಕ್ಕೂ ಕಾರಣವಾಗಿದೆ. ಡಾಲರ್‌ನ ಪಾರಮ್ಯವನ್ನು ಸರಿಗಟ್ಟುವ ಮೂಲಕ, ಅಮೆರಿಕದ ಪಾರಮ್ಯವನ್ನೂ ಕಡಿಮೆ ಮಾಡಬಹುದು. ಇದು ಜಾಗತಿಕ ಶಕ್ತಿ ರಾಜಕಾರಣದ ಚಿತ್ರಣವನ್ನು ಬದಲಿಸಲಿದೆ. ಅಮೆರಿಕ ಮಾತ್ರವಲ್ಲದೆ, ಬೇರೆ ದೇಶಗಳೂ ನಿರ್ಣಾಯಕ ಸ್ಥಾನ ಪಡೆಯುವ ಅವಕಾಶವಿರುತ್ತದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಝಾದಲ್ಲಿ ನರಮೇಧ: ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ಇಸ್ರೇಲ್ ರಾಯಭಾರಿ ನಡುವೆ ವಾಕ್ಸಮರ

ಗಾಝಾದಲ್ಲಿ 'ಅಲ್‌ಝಝೀರಾ' ಸಂಸ್ಥೆಯ ಪತ್ರಕರ್ತನನ್ನು ಇಸ್ರೇಲ್ ಹತ್ಯೆಗೈದಿದೆ. ಈ ಹತ್ಯೆಯನ್ನು ಕಾಂಗ್ರೆಸ್‌...

ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್‌ ಒತ್ತಡ

ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ...

ಗಾಝಾದಲ್ಲಿ ಹತ್ಯೆಯಾದ ಯುವ ಪತ್ರಕರ್ತರೊಬ್ಬರ ಭಿನ್ನ ಉಯಿಲು !

ನಾನು ಸಾಯುವುದಾದರೆ, ನನ್ನ ಸಿದ್ಧಾಂತಗಳ ಮೇಲೆ ದೃಢವಾಗಿರುವೆ. ದೇವರ ಮುಂದೆ ನಾನು...

ಗಾಝಾದಲ್ಲಿ ಇಸ್ರೇಲ್ ದಾಳಿ: ಐವರು ಅಲ್‌ಜಝೀರಾ ಪತ್ರಕರ್ತರು ಹತ

ಭಾನುವಾರ ಗಾಝಾ ನಗರದಲ್ಲಿ ಅಲ್‌ಜಝೀರಾ ಟೆಂಟ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ...

Download Eedina App Android / iOS

X