ಉತ್ತರ, ಮಧ್ಯಭಾರತದಲ್ಲಿ ಶಾಖದ ಅಲೆ ಎಚ್ಚರಿಕೆ; ಕೆಲವು ರಾಜ್ಯಗಳಲ್ಲಿ ಶಾಲೆಗಳು ಬಂದ್

Date:

  • ಶಾಖದ ಅಲೆ ಸ್ಥಿತಿಯಿಂದ ವಾಯುವ್ಯ ಭಾರತದಲ್ಲಿ ಗರಿಷ್ಠ ತಾಪಮಾನ
  • ಅಸ್ಸಾಂ, ಮೇಘಾಲಯಕ್ಕೆ ಭಾರೀ ಮಳೆ ಎಚ್ಚರಿಕೆ ನೀಡಿದ ಐಎಂಡಿ

ಭಾರತದ ಅನೇಕ ಭಾಗಗಳಲ್ಲಿ ಶಾಖದ ಅಲೆ ಪ್ರಮಾಣ ಹೆಚ್ಚಿದ್ದು, ವಾಯುವ್ಯ ಭಾಗದಲ್ಲಿ ಭಾನುವಾರ (ಮೇ 21) 45 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ.

ಈ ಹಿನ್ನೆಲೆಯಲ್ಲಿ ದೆಹಲಿ-ಎನ್‌ಸಿಆರ್‌ ಸೇರಿದಂತೆ ದೆಹಲಿ, ಹರಿಯಾಣ, ಚಂಡೀಗಢ, ಪಶ್ಚಿಮ ಉತ್ತರಪ್ರದೇಶ, ಪಶ್ಚಿಮ ರಾಜಸ್ಥಾನ, ಪೂರ್ವ ಉತ್ತರಪ್ರದೇಶ, ಜಾರ್ಖಂಡ್‌, ಪೂರ್ವ ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಶಾಖದ ಅಲೆಗಳಿಗೆ ಸಾಕ್ಷಿಯಾಗಲಿವೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ.

ಮುಂದಿನ ಮೂರು ದಿನಗಳಲ್ಲಿ ವಾಯುವ್ಯ ಭಾರತದ ಭಾಗಗಳಲ್ಲಿ ಶಾಖದ ಅಲೆ ಪ್ರಮಾಣದಿಂದ 2-3 ಡಿಗ್ರಿ ತಾಪಮಾನ ಹೆಚ್ಚಲಿದ್ದು, ಭಾರತದ ಉಳಿದ ಭಾಗಗಳಲ್ಲಿ ಗರಿಷ್ಠ ತಾಪಮಾನ ಇರಲಿದೆ. ಯಾವುದೇ ಮಹತ್ವದ ಬದಲಾವಣೆ ಕಂಡು ಬರುವುದಿಲ್ಲ ಎಂದು ಐಎಂಡಿ ಪ್ರಕಟಣೆಯಲ್ಲಿ ತಿಳಿಸಿದೆ.

ಮೇ 24ರಿಂದ ಬೀಸುವ ಪಶ್ಚಿಮ ಮಾರುತಗಳಿಂದ ಗರಿಷ್ಠ ತಾಪಮಾನದಲ್ಲಿ 3-5 ಡಿಗ್ರಿ ಕುಸಿತವಾಗಲಿದೆ. ಇದರಿಂದ ಶಾಖದ ಹವಾಮಾನ ತುಸು ತಗ್ಗಲಿದೆ. ಈ ವೇಳೆ ಮೂರರಿಂದ ನಾಲ್ಕು ದಿನಗಳ ಕಾಲ ಸಾಧಾರಣ ಮಳೆಯಾಗಲಿದೆ. ಅಲ್ಲದೆ ಮೋಡ ಮುಸುಕಿದ ವಾತಾವರಣ ಇರಲಿದೆ.

ಶಾಖದ ಅಲೆಗಳ ಪರಿಸ್ಥಿತಿಯ ಎಚ್ಚರಿಕೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ, ಒಡಿಶಾ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಶಾಲೆಗಳನ್ನು ಬಂದ್‌ ಮಾಡಲಾಗಿದೆ ಎಂದು ವರದಿಯಾಗಿದೆ.

ದೆಹಲಿಯಲ್ಲಿ ಭಾನುವಾರ ಗರಿಷ್ಠ 45 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ನಜರ್‌ಗಢದಲ್ಲಿಯೂ ಗರಿಷ್ಠ 46.3 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ.

ಈ ಸುದ್ದಿ ಓದಿದ್ದೀರಾ? ಅಸ್ಸಾಂ | ಶಾಲಾ ಶಿಕ್ಷಕರು ಜೀನ್ಸ್ ಧರಿಸದಂತೆ ವಸ್ತ್ರ ಸಂಹಿತೆ ಹೊರಡಿಸಿದ ಸರ್ಕಾರ

ಶಾಖದ ಅಲೆ ಪ್ರಮಾಣ ಕರಾವಳಿಯ ಭಾಗಗಳಾದ ಆಂಧ್ರಪ್ರದೇಶ, ಯಾನಂ, ರಾಯಲಸೀಮಾ, ಕೇರಳ ಹಾಗೂ ಮಾಹೆಗಳಲ್ಲೂ ಹೆಚ್ಚಾಗಿದ್ದು, ಗರಿಷ್ಠ ತಾಪಮಾನದ ವಾತಾವರಣವಿದೆ ಎಂದು ಐಎಂಡಿ ಹೇಳಿದೆ.

ಅಲ್ಲದೆ ಅಸ್ಸಾಂ ಹಾಗೂ ಮೇಘಾಲಯದಲ್ಲಿ ಸೋಮವಾರ ಭಾರೀ ಮಳೆ ಉಂಟಾಗಲಿದೆ. ಮುಂದಿನ ದಿನಗಳಲ್ಲಿಯೂ ಭಾರತದ ಕೆಲವು ಭಾಗಗಳಲ್ಲಿ ಮಳೆ ಸುರಿಯಬಹುದು. ಕೆಲವೆಡೆ ಗರಿಷ್ಠ ತಾಪಮಾನವೂ ದಾಖಲಾಗಲಿದೆ ಎಂದು ಐಎಂಡಿ ಹೇಳಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಹಜೀವನ ಸಂಗಾತಿಯನ್ನು ತುಂಡುತುಂಡಾಗಿ ಕತ್ತರಿಸಿ ಕುಕ್ಕರಲ್ಲಿ ಬೇಯಿಸಿದ!

ವ್ಯಕ್ತಿಯೊಬ್ಬ ತನ್ನ ಸಹ ಜೀವನ ಸಂಗಾತಿ ಮಹಿಳೆಯನ್ನು ಕೊಂದು, ಮೃತದೇಹವನ್ನು ತುಂಡುತುಂಡಾಗಿ...

ಕೇಂದ್ರದ ಸುಗ್ರೀವಾಜ್ಞೆ | ಎಎಪಿಗೆ ಸಮಾಜವಾದಿ ಪಕ್ಷ ಬೆಂಬಲ

ಸಮಾಜವಾದಿ ಪಕ್ಷ ಏರ್ಪಡಿಸಿದ್ದ ಸಭೆಯಲ್ಲಿ ಅರವಿಂದ್ ಕೇಜ್ರಿವಾಲ್ ಭಾಗಿ ದೆಹಲಿ ಅಧಿಕಾರಿಗಳ ನೇಮಕಾತಿ...

ಆರ್‌ಬಿಐ ಹಣಕಾಸು ನೀತಿ ಸಭೆ ಮುಕ್ತಾಯ; ರೆಪೊ ದರ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧಾರ

ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿಯು ರೆಪೊ ದರದಲ್ಲಿ ಯಥಾಸ್ಥಿತಿ...

ಖ್ಯಾತ ಟಿವಿ ನಿರೂಪಕಿ ಗೀತಾಂಜಲಿ ಅಯ್ಯರ್ ನಿಧನ

ದೂರದರ್ಶನದ ಮೊದಲ ಇಂಗ್ಲಿಷ್ ಸುದ್ದಿ ನಿರೂಪಕರಲ್ಲಿ ಒಬ್ಬರಾಗಿದ್ದ ಗೀತಾಂಜಲಿ ಅಯ್ಯರ್ ಬುಧವಾರ...