ದುಬೈನಲ್ಲಿ ಹೊಸ ಸಂಚಾರಿ ನಿಯಮ | ರೂಲ್ಸ್ ಬ್ರೇಕ್ ಮಾಡಿದರೆ 30 ದಿನ ವಾಹನ ಸೀಝ್!

Date:

Advertisements

ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಬಳಸುವುದು ಹೆಚ್ಚಾಗುತ್ತಿದೆ. ಇದರಿಂದಾಗಿ ಹಲವು ಅಪಘಾತಗಳು ಕೂಡಾ ನಡೆದಿದೆ. ಇದನ್ನು ತಡೆಗಟ್ಟಲು ದುಬೈ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

ದುಬೈನಲ್ಲಿ ಹೊಸ ಸಂಚಾರಿ ನಿಯಮವನ್ನು ಜಾರಿ ಮಾಡಲಾಗಿದ್ದು, ನಿಯಮವನ್ನು ಉಲ್ಲಂಘಿಸಿದರೆ 30 ದಿನಗಳವರೆಗೂ ನಿಮ್ಮ ವಾಹನ ಜಪ್ತಿಯಾಗಬಹುದು. ಮುಖ್ಯವಾಗಿ ನೀವು ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಬಳಸಿದರೆ ನೀವು ಭಾರಿ ಬೆಲೆ ತೆರಬೇಕಾಗುತ್ತದೆ.

ಯಾವೆಲ್ಲ ಸಂದರ್ಭದಲ್ಲಿ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳಬಹುದು ಎಂಬ ನಿಯಮದಲ್ಲಿಯೂ ದುಬೈನಲ್ಲಿ ಬದಲಾವಣೆ ತರಲಾಗಿದೆ. ಪಟ್ಟಿಯೂ ಕೂಡಾ ಉದ್ದನೆಯಾಗಿದೆ. ತಕ್ಷಣವೇ ಜಾರಿಗೆ ಬಂದಿರುವ ಈ ಹೊಸ ನಿಯಮವು ದುಬೈನ ರಸ್ತೆಗಳಲ್ಲಿ ಮಾತ್ರ ಅನ್ವಯಿಸುತ್ತದೆ.

Advertisements

ಇದನ್ನು ಓದಿದ್ದೀರಾ? ದುಬೈನಿಂದ ಮರಳಿದ ಕೇರಳದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಈ ಹಿಂದೆ ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಅನ್ನು ಬಳಸಿದರೆ ವಾಹನ ಚಾಲಕರಿಗೆ 800 ದಿರ್ಹಮ್ ದಂಡ ತೆರಬೇಕಾಗಿತ್ತು. ಜೊತೆಗೆ ದುಬೈನಲ್ಲಿ ಸಂಚಾರ ಸುರಕ್ಷತೆಯ ಮಾನದಂಡವಾಗಿ ಪರಿಗಣಿಸಲಾಗುವ ನಾಲ್ಕು ಟ್ರಾಫಿಕ್ ಪಾಯಿಂಟ್‌ (black point) ಹೆಚ್ಚಿಸಲಾಗುತ್ತಿತ್ತು. ಆದರೆ ಈಗ ನಿಯಮ ಬದಲಾಗಿದೆ. ವಾಹನ ಚಲಾಯಿಸುವಾಗ ಮೊಬೈಲ್ ಬಳಸಿದರೆ 30 ದಿನಗಳ ಕಾಲ ನಿಮ್ಮ ವಾಹನವನ್ನು ಸೀಝ್ ಮಾಡಲಾಗುತ್ತದೆ.

2023ರ ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ದುಬೈ ಪೊಲೀಸ್ ಅಂಕಿ-ಅಂಶಗಳ ಪ್ರಕಾರ, ಕಳೆದ ವರ್ಷದ ಮೊದಲ ಎಂಟು ತಿಂಗಳಲ್ಲಿ ಮೊಬೈಲ್ ಫೋನ್ ಬಳಸಿದ ಕಾರಣದಿಂದಾಗಿ ಆದ ರಸ್ತೆ ಅಪಘಾತದಲ್ಲ ಆರು ಮಂದಿ ಸಾವನ್ನಪ್ಪಿದ್ದಾರೆ. ಅದೇ ಅವಧಿಯಲ್ಲಿ ಪೊಲೀಸರು 35,527 ಅಪಘಾತ ಪ್ರಕರಣ ದಾಖಲಿಸಿದ್ದಾರೆ. ಈ ಅಪಘಾತದಲ್ಲಿ 50 ಮಂದಿ ಗಾಯಗೊಂಡಿದ್ದಾರೆ.

ನೂತನ ನಿಯಮ ಏನು ಹೇಳುತ್ತದೆ?

ದಿಡೀರ್ ಆಗಿ ವಾಹನ ತಿರುಗಿಸಿದ ಕಾರಣ ಯಾವುದೇ ಆಸ್ತಿಗೆ ಅಥವಾ ಜನರಿಗೆ ಅಪಾಯವಾದರೆ, ವಾಹನಗಳ ನಡುವೆ ಸುರಕ್ಷಿತ ಅಂತರ ಕಾಯ್ದುಕೊಳ್ಳದಿದ್ದರೆ, ಪೋನ್ ಅಥವಾ ಬೇರೆ ಸಾಧನ ಬಳಸುತ್ತಾ ವಾಹನ ಚಲಾಯಿಸಿದರೆ ವಾಹನಗಳನ್ನು 30 ದಿನಗಳವರೆಗೆ ಜಪ್ತಿ ಮಾಡಲಾಗುತ್ತದೆ.

ಇದನ್ನು ಓದಿದ್ದೀರಾ? ಮರುಭೂಮಿ ದೇಶ ದುಬೈನಲ್ಲಿ ಭಾರೀ ಮಳೆಯಿಂದ ಪ್ರವಾಹ; ಒಮಾನ್​ನಲ್ಲಿ 18 ಮಂದಿ ಸಾವು

ರಸ್ತೆಯಲ್ಲಿ ಯಾವುದೇ ವಾಹನವಿದೆ ಎಂಬುದನ್ನು ಖಚಿತಪಡಿಸಿಕೊಳ್ಳದೆ ಒಮ್ಮೆಲೇ ವಾಹನ ನುಗ್ಗಿಸಿದರೆ, ಜನರಿಗೆ ಅಥವಾ ಆಸ್ತಿಗಳಿಗೆ ಹಾನಿಯಾಗುವಂತೆ ವಾಹನ ರಿವರ್ಸ್ ತೆಗೆದರೆ, ಕಡ್ಡಾಯವಾಗಿ ಲೇನ್‌ನಲ್ಲಿ ಸಾಗುವ ನಿಯಮವನ್ನು ಅನುಸರಿಸುವಲ್ಲಿ ವಿಫಲವಾದರೆ, ಕಾರಣವಿಲ್ಲದೆ ರಸ್ತೆಯ ಮಧ್ಯದಲ್ಲಿ ವಾಹನ ನಿಲ್ಲಿಸಿದರೆ, ಅಪಾಯಕಾರಿಯಾಗಿ ಇತರೆ ವಾಹನಗಳನ್ನು ಓವರ್‌ಟೇಕ್ ಮಾಡಿದರೆ 14 ದಿನಗಳ ಕಾಲ ವಾಹನವನ್ನು ಸೀಝ್ ಮಾಡಲಾಗುತ್ತದೆ.

ಅಸುರಕ್ಷಿತವಾಗಿ ವಾಹನ ಚಲಾಯಿಸಿದರೆ, ತುರ್ತು ಇಲ್ಲದ ಸಂದರ್ಭದಲ್ಲಿ ಅತೀ ವೇಗದಲ್ಲಿ ವಾಹನ ಚಲಾಯಿಸಿದರೆ, ವಾಹನದಲ್ಲಿ ನಂಬರ್ ಪ್ಲೇಟ್ ಇಲ್ಲದಿದ್ದರೆ, ಇತರೆ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುವಂತೆ ವಾಹನ ಚಲಾಯಿಸಿದರೆ, ಅನುಮತಿಯಿಲ್ಲದೆ ವಾಹನದ ಬಣ್ಣ ಬದಲಾಯಿಸಿದರೆ 14 ದಿನಗಳ ಕಾಲ ವಾಹನವನ್ನು ಜಪ್ತಿ ಮಾಡಲಾಗುತ್ತದೆ ಎಂದು ನೂತನ ನಿಯಮದಲ್ಲಿ ಉಲ್ಲೇಖಿಸಲಾಗಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್‌ ಒತ್ತಡ

ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ...

ಗಾಝಾದಲ್ಲಿ ಹತ್ಯೆಯಾದ ಯುವ ಪತ್ರಕರ್ತರೊಬ್ಬರ ಭಿನ್ನ ಉಯಿಲು !

ನಾನು ಸಾಯುವುದಾದರೆ, ನನ್ನ ಸಿದ್ಧಾಂತಗಳ ಮೇಲೆ ದೃಢವಾಗಿರುವೆ. ದೇವರ ಮುಂದೆ ನಾನು...

ಗಾಝಾದಲ್ಲಿ ಇಸ್ರೇಲ್ ದಾಳಿ: ಐವರು ಅಲ್‌ಜಝೀರಾ ಪತ್ರಕರ್ತರು ಹತ

ಭಾನುವಾರ ಗಾಝಾ ನಗರದಲ್ಲಿ ಅಲ್‌ಜಝೀರಾ ಟೆಂಟ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ...

ಟ್ರಂಪ್‌ ಕೊಟ್ಟ ಏಟಿಗೆ ಚೀನಾದತ್ತ ತಿರುಗಿದ ಪ್ರಧಾನಿ; ಚೀನೀ ಭಜನೆ ಮಾಡುತ್ತಿದೆ ಮೋದಿ ಭಕ್ತ ಗಣ

ಅಮೆರಿಕ ಭಾರೀ ಮೊತ್ತದ ತೆರಿಗೆ ಹೇರಿದ ಬೆನ್ನಲ್ಲೇ, ಭಾರತವು ಚೀನಾದೊಂದಿಗೆ ಆರ್ಥಿಕ...

Download Eedina App Android / iOS

X