ಒಂದೇ ದಿನದಲ್ಲಿ ಭೂಕಂಪ, ಸುನಾಮಿ, ಯುದ್ಧ; ಬೆಚ್ಚಿಬೀಳುತ್ತಿದೆ ಜಗತ್ತು!

Date:

ಮಾನವ ಇತಿಹಾಸದಲ್ಲಿ ಕೆಲವು ದಿನಗಳು ಇಡೀ ಜಗತ್ತನ್ನೇ ಏಕಕಾಲದಲ್ಲಿ ಭೀತಿಯ ನೆರಳಿನಲ್ಲಿ ನಿಲ್ಲಿಸಿಬಿಡುತ್ತವೆ. ಇಂತಹುದೇ ಒಂದು ಆತಂಕಕಾರಿ ವಿದ್ಯಮಾನಕ್ಕೆ ಇಂದು (ಜೂನ್ 8) ಭೂಮಂಡಲ ಸಾಕ್ಷಿಯಾಗಿದೆ. ಒಂದೆಡೆ, ಪ್ರಕೃತಿಯ ರೌದ್ರಾವತಾರಕ್ಕೆ ಫಿಲಿಪೈನ್ಸ್‌ ನಲುಗಿಹೋಗಿದೆ. ಮತ್ತೊಂದೆಡೆ, ಮಾನವನ ವಿಕೃತಿಯಿಂದ ಸಂಭವಿಸಿರುವ ಯುದ್ಧದಿಂದ ಇರಾನ್-ಲೆಬನಾನ್ ಹಾಗೂ ಇಸ್ರೇಲ್‌ ತತ್ತರಿಸಿವೆ.

- Advertisement -

ದಕ್ಷಿಣ ಫಿಲಿಪೈನ್ಸ್‌ನ ಮಿಂಡನಾವೊ ಕರಾವಳಿಯಲ್ಲಿ ಸಂಭವಿಸಿದ 7.8 ತೀವ್ರತೆಯ ಭೀಕರ ಭೂಕಂಪವು ಪೆಸಿಫಿಕ್ ವಲಯವನ್ನು ನಡುಗಿಸಿದೆ. ಭೂಮಿಯ ಕೇವಲ 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದ ಈ ಭೂಕಂಪದ ತೀವ್ರತೆಗೆ ದಕ್ಷಿಣದ ಪ್ರಮುಖ ನಗರವಾದ ಜನರಲ್ ಸ್ಯಾಂಟೋಸ್‌ನಲ್ಲಿ ಕನಿಷ್ಠ 15ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ಭೂಕಂಪನದ ತೀವ್ರತೆ ಎಷ್ಟಿತ್ತೆಂದರೆ, ನೆರೆಯ ದೇಶವಾದ ಇಂಡೋನೇಷ್ಯಾದ ಉತ್ತರ ಭಾಗದಲ್ಲೂ ಭಾರಿ ನಡುಕ ಉಂಟಾಗಿದೆ. ಫಿಲಿಪೈನ್ಸ್‌ನಲ್ಲಿ ಹಲವಾರು ಕಟ್ಟಡಗಳು, ವಿದ್ಯುತ್‌ ಕಂಬಗಳು ಕುಸಿದುಬಿದ್ದಿವೆ. ಜನಜೀವನ ಅಸ್ತವ್ಯಕ್ತವಾಗಿದೆ. ಜನರು ಆತಂಕಗೊಂಡಿದ್ದಾರೆ.

ಇದೇ ಹೊತ್ತಿನಲ್ಲಿ, ಫಿಲಿಪೈನ್ಸ್ ಮತ್ತು ಇಂಡೋನೇಷ್ಯಾದ ವಿಪತ್ತು ನಿರ್ವಹಣಾ ಸಂಸ್ಥೆಗಳು ಎರಡೂ ರಾಷ್ಟ್ರಗಳ ಕರಾವಳಿ ಪ್ರದೇಶಗಳಲ್ಲಿ ತಕ್ಷಣವೇ ಸುನಾಮಿ ಅಪ್ಪಳಿಸುವ ಮುನ್ನೆಚ್ಚರಿಕೆ ನೀಡಿವೆ. ಸಮುದ್ರದಲ್ಲಿ ಒಂದು ಮೀಟರ್‌ಗಿಂತಲೂ ಎತ್ತರದ ಅಲೆಗಳು ಏಳುವ ಸಾಧ್ಯತೆಯಿದ್ದು, ಕರಾವಳಿ ಪ್ರದೇಶದ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ಸೂಚಿಸಲಾಗಿದೆ.

ಇದರ ಬೆನ್ನಲ್ಲೇ, ಏಷ್ಯಾದ ಮತ್ತೊಂದೆಡೆ ಭೂತಾನ್ ದೇಶದಲ್ಲೂ 5.6 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದೆ. ಜನರು ಮಧ್ಯರಾತ್ರಿಯಲ್ಲಿ ದಿಕ್ಕಾಪಾಲಾಗಿ ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ.

ಇದೆಲ್ಲವೂ ಸೋಮವಾರ ಪ್ರಕೃತಿಯ ವಿಕೋಪದಿಂದ ಸಂಭವಿಸಿದ್ದರೆ, ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ ಕವಿದುಕೊಂಡಿದೆ. ಅಮೆರಿಕ-ಇಸ್ರೇಲ್ ಪಡೆಗಳು ಇರಾನ್‌ನ ನೈಋತ್ಯ ಭಾಗದಲ್ಲಿರುವ ಮಹ್ಶಹರ್ ಪೆಟ್ರೋಕೆಮಿಕಲ್ ಸಂಕೀರ್ಣದ ಮೇಲೆ ಭಾರಿ ವೈಮಾನಿಕ ದಾಳಿ ನಡೆಸಿವೆ. ಇರಾನ್‌ನ ಇಂಧನ ಮತ್ತು ಆರ್ಥಿಕ ಮೂಲಗಳನ್ನೇ ಗುರಿಯಾಗಿಸಿಕೊಂಡು ನಡೆಸಿರುವ ಈ ದಾಳಿಯು ಇಡೀ ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಿಡಿಯನ್ನು ಹೊತ್ತಿಸಿದೆ.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಇಸ್ರೇಲ್‌ನ ಪ್ರಮುಖ ವಾಣಿಜ್ಯ ಮತ್ತು ಕೈಗಾರಿಕಾ ನಗರವಾದ ಹೈಫಾದಲ್ಲಿರುವ ಪೆಟ್ರೋಕೆಮಿಕಲ್ ಪ್ಲಾಂಟ್ ಮತ್ತು ವಾಯುನೆಲೆಗಳ ಮೇಲೆ ಸರಣಿ ಬ್ಯಾಲಿಸ್ಟಿಕ್ ಕ್ಷಿಪಣಿಗಳ ದಾಳಿ ನಡೆಸಿದೆ.

ಇರಾನ್ ಅಧಿಕಾರಿಗಳು “ಇದು ಕೇವಲ ಒಂದು ದಿನದ ದಾಳಿಯಲ್ಲ, ಶತ್ರುಗಳು ತಮ್ಮ ಅಪರಾಧವನ್ನು ನಿಲ್ಲಿಸುವವರೆಗೂ ಮುಂದಿನ ಏಳು ದಿನಗಳ ಕಾಲ ಹಗಲು-ರಾತ್ರಿ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳು ಮುಂದುವರಿಯಲಿವೆ” ಎಂದು ಎಚ್ಚರಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ಮೇಘಾಲಯದ ಖಾಸಿ ರೈತರ ಮಣ್ಣು ಸಂರಕ್ಷಣೆ ಹೇಗಿದೆ ಗೊತ್ತೇ? ಇಲ್ಲಿದೆ ನೋಡಿ ಪ್ರೇರಣಾದಾಯಕ ಕಥೆ

ಈ ಯುದ್ಧದ ತೀವ್ರತೆಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಒಮ್ಮೆಗೆ 3%ಗಿಂತಲೂ ಹೆಚ್ಚು ಏರಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ ಬೆಲೆ 96 ಡಾಲರ್ ದಾಟಿದೆ. ಇದು ಜಾಗತಿಕ ಇಂಧನ ಕೊರತೆ ಮತ್ತು ತೀವ್ರ ಆರ್ಥಿಕ ಹಣದುಬ್ಬರಕ್ಕೆ ಮತ್ತಷ್ಟು ದಾರಿ ಮಾಡಿಕೊಡುತ್ತಿದೆ. ಭಾರತ ಸರ್ಕಾರವು ಈಗಾಗಲೇ ಇರಾನ್‌ನಲ್ಲಿರುವ ತನ್ನ ನಾಗರಿಕರಿಗೆ ತಕ್ಷಣವೇ ದೇಶ ತೊರೆಯುವಂತೆ ತುರ್ತು ಮಾರ್ಗಸೂಚಿಯನ್ನು ಹೊರಡಿಸಿದೆ.

ಜಾಗತಿಕ ತೈಲ ಪೂರೈಕೆಯ ಕೇಂದ್ರವಾಗಿರುವ ಮಧ್ಯಪ್ರಾಚ್ಯದಲ್ಲಿ ಯುದ್ಧ ತೀವ್ರಗೊಂಡಿರುವುದರಿಂದ ಮುಂಬರುವ ದಿನಗಳಲ್ಲಿ ಜಗತ್ತಿನಾದ್ಯಂತ ಸಾರಿಗೆ, ಉದ್ಯಮ ಹಾಗೂ ಆಹಾರ ಧಾನ್ಯಗಳ ಬೆಲೆ ಮತ್ತಷ್ಟು ಗಗನಕ್ಕೇರಲಿದೆ. ಬಡ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳು ಈ ಆರ್ಥಿಕ ಯಾತನೆಯನ್ನು ತಡೆದುಕೊಳ್ಳುವುದು ಕಷ್ಟಸಾಧ್ಯವಾಗಲಿದೆ.

ಒಂದೇ ದಿನದಲ್ಲಿ ಸಂಭವಿಸಿರುವ ಈ ಎಲ್ಲ ದುರಂತಗಳು ಜಾಗತಿಕ ನಾಯಕರಿಗೆ ಮತ್ತು ಇಡೀ ಮಾನವಕುಲಕ್ಕೆ ಎಚ್ಚರಿಕೆ ನೀಡಿದೆ. ಪ್ರಕೃತಿಯ ಸವಾಲುಗಳನ್ನು ಎದುರಿಸಲು ಜಗತ್ತು ಸನ್ನದ್ಧುಗೊಳ್ಳಬೇಕಿರುವ ಸಮಯದಲ್ಲಿ, ಮಾನವ ನಿರ್ಮಿತ ಯುದ್ಧಗಳು ಜಗತ್ತನ್ನು ಮತ್ತಷ್ಟು ವಿನಾಶದತ್ತ ತಳ್ಳುತ್ತಿವೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಯದ ಗುರುತುಗಳಿಲ್ಲವೆಂದು ಪೋಕ್ಸೋ ಸಂತ್ರಸ್ತೆಗೆ ಪರಿಹಾರ ನಿರಾಕರಿಸುವಂತಿಲ್ಲ: ಅಲಹಾಬಾದ್‌ ಹೈಕೋರ್ಟ್

ಲೈಂಗಿಕ ದೌರ್ಜನ್ಯ ಪ್ರಕರಣದ ವೈದ್ಯಕೀಯ ವರದಿಯಲ್ಲಿ ದೈಹಿಕ ಗಾಯಗಳ ಗುರುತುಗಳು ದಾಖಲಾಗಿಲ್ಲ...

ಶಿವಮೊಗ್ಗ | ಹಲ್ಲೆಗೊಳಗಾಗಿ ರೈಲ್ವೆ ಹಳಿ ಮೇಲೆ ಬಿದ್ದಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು

ಶಿವಮೊಗ್ಗ ರೈಲ್ವೆ ಹಳಿ ಬಳಿ ಗಂಭೀರ ಗಾಯಗಳೊಂದಿಗೆ ಪತ್ತೆಯಾಗಿದ್ದ 26 ವರ್ಷದ...

ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ; ತರಾತುರಿಯಲ್ಲಿ ಅಂತ್ಯಕ್ರಿಯೆ, ಕಾರಣ ನಿಗೂಢ!

ಸೊರಬ ತಾಲೂಕಿನ ಮುಟಗುಪ್ಪೆ ಗ್ರಾಮದಲ್ಲಿ 22 ವರ್ಷದ ಯುವತಿಯೊಬ್ಬರು ಮನೆಯಲ್ಲಿ ನೇಣು...