ಅಮೆರಿಕದ ಸೆಂಟ್ರಲ್ ಟೆಕ್ಸಾಸ್‌ನಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಹಠಾತ್ ಪ್ರವಾಹ ಸಂಭವಿಸಿವೆ. ಡಾಲುಪೆ ನದಿ ನೀರು ಜನವಸತಿ ಪ್ರದೇಶಕ್ಕೆ ನುಗ್ಗಿದ್ದು, ಕೆಲವೇ ನಿಮಿಷಗಳಲ್ಲಿ 26 ಅಡಿಗಳಷ್ಟು ನೀರಿನ ಹರಿವು ಹೆಚ್ಚಾಗಿದೆ. ಪರಿಣಾಮವಾಗಿ ಎದುರಾದ ವಿನಾಶಕಾರಿ ಪ್ರವಾಹದಿಂದ 50 ಜನರು ಸಾವನ್ನಪ್ಪಿದ್ದಾರೆ. ಕೊಚ್ಚಿಹೋಗಿದ್ದ 27 ಮಂದಿಯನ್ನು ರಕ್ಷಣಾ ಕಾರ್ಯಕರ್ತರು ರಕ್ಷಿಸಿದ್ದಾರೆ. ಆದಾಗ್ಯೂ, ಇನ್ನೂ ಹಲವರು ಕಾಣೆಯಾಗಿದ್ದಾರೆ.
ಧಾರಾಕಾರ ಮಳೆಯು ಟೆಕ್ಸಾಸ್‌ನ ಕೆರ್ ಕೌಂಟಿ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಕರೆರ್ ಕೌಂಟಿಯಲ್ಲಿಯೇ 15 ಮಕ್ಕಳು ಸೇರಿದಂತೆ 43 ಜನರು ಸಾವನ್ನಪ್ಪಿದ್ದಾರೆ. ಟ್ರಾವಿಸ್ ಕೌಂಟಿಯಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದರೆ, ಬರ್ನೆಟ್ ಕೌಂಟಿಯಲ್ಲಿ ಇಬ್ಬರು ಮತ್ತು ಟಾಮ್ ಗ್ರೀನ್ ಕೌಂಟಿಯಲ್ಲಿ ಓರ್ವ ಸಾವನ್ನಪ್ಪಿದ್ದಾರೆ.
ಕೆರ್ ಕೌಂಟಿಯಲ್ಲಿರುವ ಕ್ರಿಶ್ಚಿಯನ್ ಹೆಣ್ಣುಮಕ್ಕಳ ಹಾಸ್ಟೆಲ್ ಪ್ರದೇಶದಲ್ಲಿ ಪ್ರವಾಹವಾಗಿದ್ದು, ಹಾಸ್ಟೆಲ್ ಮತ್ತು ಮನೆಗಳಲ್ಲಿದ್ದ ಜನರು ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ. ಹಾಸ್ಟೆಲ್‌ನಲ್ಲಿದ್ದ ಸುಮಾರು 30 ಬಾಲಕಿಯರು ಇನ್ನೂ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.
❗️UPDATE: 37 now DEAD in Texas floods — AP https://t.co/6byrF9m3MP pic.twitter.com/GxJOO5L7TR
— RT (@RT_com) July 5, 2025
ಶೋಧನಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ಕಾಣೆಯಾದವರನ್ನು ಹುಡುಕುವುದು ಸವಾಲಿನ ಕೆಲಸವಾಗಿದೆ. ಆದಾಗ್ಯೂ, ಈವರೆಗೆ 27 ಮಂದಿಯನ್ನು ರಕ್ಷಿಸಲಾಗಿದೆ. ಉಳಿದವರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Timelapse flooding of the Llano River on July 4th pic.twitter.com/59Tnn6NZG7
— Rob Dew (@DewsNewz) July 5, 2025
ಟೆಕ್ಸಾಸ್ ತುರ್ತು ನಿರ್ವಹಣಾ ಇಲಾಖೆಯ ಮುಖ್ಯಸ್ಥ ನಿಮ್ ಕಿಡ್, “ಪ್ರವಾಹಕ್ಕೆ ಸಿಲುಕಿ ಸತ್ತವರ ಮೃತದೇಹಗಳು ಮತ್ತು ಬದುಕುಳಿದಿರುವವರ ಪತ್ತೆಗಾಗಿ ರಕ್ಷಣಾ ಸಿಬ್ಬಂದಿಗಳು ಗ್ವಾಡಾಲುಪೆ ನದಿಯ ಉದ್ದಕ್ಕೂ ಶೋಧ ನಡೆಸುತ್ತಿದ್ದಾರೆ. ಕಾಣೆಯಾದ ಎಲ್ಲರನ್ನು ಕಂಡುಹಿಡಿಯುವವರೆಗೆ ನಾವು ಹುಡುಕಾಟವನ್ನು ಮುಂದುವರಿಸುತ್ತೇವೆ” ಎಂದಿದ್ದಾರೆ.