ಫ್ರಾನ್ಸ್‌ನಲ್ಲಿ ಭಾರೀ ಜನಾಕ್ರೋಶ: 4 ಲಕ್ಷಕ್ಕೂ ಹೆಚ್ಚು ಜನರ ಪ್ರತಿಭಟನೆ

Date:

ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಆಡಳಿತಾವಧಿಯ ಕೊನೆಯ ಹಂತದಲ್ಲಿ ದೇಶಾದ್ಯಂತ ಜನಾಕ್ರೋಶ ತೀವ್ರಗೊಂಡಿದೆ. ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಮತ್ತು ಶಿಕ್ಷಕರ ನೇಮಕಾತಿಗೆ ಆಗ್ರಹಿಸಿ ಹಾಗೂ ದಿನೇದಿನೆ ಹೆಚ್ಚಾಗುತ್ತಿರುವ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಫ್ರಾನ್ಸ್‌ನಾದ್ಯಂತ 4 ಲಕ್ಷಕ್ಕೂ ಹೆಚ್ಚು ಜನರು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

- Advertisement -

ರಾಜಧಾನಿ ಪ್ಯಾರಿಸ್ ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ವಾರಾಂತ್ಯದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತೀವ್ರ ಘರ್ಷಣೆ ನಡೆದಿದೆ. ಈ ಪ್ರತಿಭಟನೆಯನ್ನು ಹತೋಟಿಗೆ ತರಲು ಭದ್ರತಾ ಪಡೆಗಳು ದೇಶಾದ್ಯಂತ ಸುಮಾರು 1,000 ಪ್ರತಿಭಟನಾಕಾರರನ್ನು ಬಂಧಿಸಿವೆ ಎಂದು ಸರ್ಕಾರ ತಿಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೈಸೂರಿನ ಬೀದಿಗಳಲ್ಲಿ ಕ್ರಿಕೆಟ್ ಆಡಿ ಬೆಳೆದ ಮನ್ವಂತ್‌ಕುಮಾರ್, ಈಗ...

ಮೈಸೂರಿನ ಗಲ್ಲಿಗಳಿಂದ ಕಾಲೇಜ್ ಕ್ರಿಕೆಟ್ ಮೈದಾನಕ್ಕೆ ಜಿಗಿದ ಯುವಕನೊಬ್ಬ ಕರ್ನಾಟಕದ ರಣಜಿ ತಂಡದಲ್ಲಿ ಸ್ಥಾನ ಪಡೆದು, ಐಪಿಎಲ್ ತಂಡದ ಗಮನ ಸೆಳೆದು, ದೇಶೀಯ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿ, ಕರ್ನಾಟಕ ಕ್ರಿಕೆಟ್‌ನ ಭರವಸೆಯ ಆಟಗಾರನಾಗಿ...

ಬೆಳಗಾವಿ | ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಬೆಂಕಿಗಾಹುತಿ:...

ಬರಗಾಲದಿಂದ ಬೆಳೆ ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಇದೀಗ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್ ಮತ್ತೊಂದು ಹೊಡೆತ ನೀಡಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆಸಿದ ಕಬ್ಬು ಕಟಾವಿಗೆ ಬರುವ ಹೊತ್ತಿನಲ್ಲಿ ಬೆಂಕಿಗೆ ಆಹುತಿಯಾಗಿದ್ದು,...

ಹಾವೇರಿ | ಡಿಜಿಟಲ್ ಜನನ ಪ್ರಮಾಣ ಪತ್ರ ಗೊಂದಲ:...

ಹಳೆ ಮಾದರಿಯ ಕೈಬರಹ ಜನನ ಪ್ರಮಾನ ಪತ್ರದ ವಿಧಾನವನ್ನು ಬಿಟ್ಟು, ಡಿಜಿಟಲ್ ಜನನ ಪ್ರಮಾಣ ಪತ್ರ ನಿಯಮ ಜಾರಿಗೊಳಿಸಿದ್ದರಿಂದ ಹಲವು ಸಮಸ್ಯೆಗಳು ಎದುರಾಗಿದ್ದು, ಹದಿನಾರು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ತಿದ್ದುಪಡಿ...

ಪ್ಯಾರಿಸ್‌ನಲ್ಲಿ ಶನಿವಾರ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಆರಂಭದಲ್ಲಿ ಶಾಂತಿಯುತವಾಗಿಯೇ ಇತ್ತು. ಆದರೆ, ದಕ್ಷಿಣ-ಪೂರ್ವ ಪ್ಯಾರಿಸ್‌ನಲ್ಲಿ ಮೆರವಣಿಗೆಯ ಮುಕ್ತಾಯದ ಹಂತ ತಲುಪುತ್ತಿದ್ದಂತೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಮುಖಮೂಡ ಧರಿಸಿದ್ದ ನೂರಾರು ಪ್ರತಿಭಟನಾಕಾರರು ಭದ್ರತಾ ಸಿಬ್ಬಂದಿಯತ್ತ ಕಲ್ಲು, ಪಟಾಕಿ ಮತ್ತು ವಿವಿಧ ವಸ್ತುಗಳನ್ನು ತೂರಿದರು. ಇದಕ್ಕೆ ಪ್ರತಿಯಾಗಿ ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿಗಳನ್ನು ಬಳಸಿ ಗುಂಪನ್ನು ಚದುರಿಸಲು ಯತ್ನಿಸಿದರು. ಪೊಲೀಸರ ಕಠಿಣ ಕ್ರಮದಿಂದಾಗಿ ಭೀತಿಗೊಳಗಾದ ಪ್ರತಿಭಟನಾಕಾರರು ಕಿರುಚಾಡುತ್ತಾ ಓಡಲಾರಂಭಿಸಿದರು. ಆಂತರಿಕ ಸಚಿವಾಲಯದ ಪ್ರಕಾರ ಫ್ರಾನ್ಸ್‌ನಾದ್ಯಂತ ಒಟ್ಟು 4,10,000 ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರೆ, ಸಿಜಿಟಿ ಕಾರ್ಮಿಕ ಸಂಘಟನೆಯು ಈ ಸಂಖ್ಯೆ 8 ಲಕ್ಷಕ್ಕೂ ಅಧಿಕ ಎಂದು ಪ್ರತಿಪಾದಿಸಿದೆ. ಪ್ಯಾರಿಸ್ ಒಂದರಲ್ಲೇ 1 ಲಕ್ಷಕ್ಕೂ ಹೆಚ್ಚು ಜನರು ಬೀದಿಗಿಳಿದಿದ್ದರು ಎಂದು ಹೇಳಿದೆ.

ಪ್ಯಾರಿಸ್‌ನ ಆಗ್ನೇಯ ಭಾಗದ ಪ್ರೌಢಶಾಲೆಯೊಂದರಲ್ಲಿ ಶಿಕ್ಷಕರ ಕೊರತೆ ಖಂಡಿಸಿ ತಿಂಗಳ ಹಿಂದೆ ಆರಂಭವಾದ ಸಣ್ಣ ಮಟ್ಟದ ಪ್ರತಿಭಟನೆ, ಇಂದು ಇಡೀ ದೇಶವನ್ನು ವ್ಯಾಪಿಸಿದ ಬೃಹತ್ ಜನಾಂದೋಲನವಾಗಿ ಬದಲಾಗಿದೆ. ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳಿಗೆ ಮೂಲಸೌಕರ್ಯ ಮತ್ತು ಹೆಚ್ಚಿನ ಅನುದಾನಕ್ಕೆ ಆಗ್ರಹಿಸುತ್ತಿದ್ದರೆ, ಸಾಮಾನ್ಯ ನಾಗರಿಕರು ಮತ್ತು ಉದ್ಯೋಗಿಗಳು ಇಂಧನ ಮತ್ತು ದಿನಬಳಕೆ ವಸ್ತುಗಳ ಬೆಲೆ ಏರಿಕೆಯ ವಿರುದ್ಧ ಧ್ವನಿ ಎತ್ತಿದ್ದಾರೆ.

ದೇಶದಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಇಂಧನ ದರ ಶೇಕಡಾ 21.3ರಷ್ಟು ಏರಿಕೆಯಾಗಿದ್ದು, ಹಣದುಬ್ಬರ ಶೇಕಡಾ 3.1ಕ್ಕೆ ತಲುಪಿದೆ. ಇಂಜಿನಿಯರಿಂಗ್ ಮತ್ತು ಸ್ನಾತಕೋತ್ತರ ಪದವಿ ಪಡೆದರೂ ಉದ್ಯೋಗ ಸಿಗದೆ ಯುವಜನತೆ ಕಂಗಾಲಾಗಿದ್ದು, ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಹೆಚ್ಚಾಗುತ್ತಿರುವುದು ಜನರ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ.

ಮುಂದಿನ ವರ್ಷದ ಮೇ ತಿಂಗಳಿನಲ್ಲಿ ಫ್ರಾನ್ಸ್ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಈ ಬೃಹತ್ ಪ್ರತಿಭಟನೆಯು ಮ್ಯಾಕ್ರನ್ ಅವರ ರಾಜಕೀಯ ಭವಿಷ್ಯಕ್ಕೆ ದೊಡ್ಡ ಹೊಡೆತ ನೀಡಿದೆ. ಬಲಪಂಥೀಯ ‘ನ್ಯಾಷನಲ್ ರ್ಯಾಲಿ’ ಪಕ್ಷವು ಸಾರ್ವಜನಿಕರನ್ನು ರಕ್ಷಿಸುವಲ್ಲಿ ಮ್ಯಾಕ್ರನ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದೆ. ಮುಂಬರುವ ಚುನಾವಣೆಯಲ್ಲಿ ಮರೀನ್ ಲೆ ಪೆನ್ ಅವರನ್ನು ಬೆಂಬಲಿಸುವಂತೆ ಜನರಿಗೆ ಕರೆ ನೀಡಿದೆ. ಪ್ರತಿಯಾಗಿ ಎಡಪಂಥೀಯ ನಾಯಕ ಜೀನ್-ಲ್ಯೂಕ್ ಮೆಲೆಂಚನ್ ಪ್ರತಿಭಟನಾಕಾರರಿಗೆ ತಮ್ಮ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ.

ಪ್ರತಿಭಟನೆಯ ತೀವ್ರತೆಯಿಂದಾಗಿ ಪ್ಯಾರಿಸ್‌ನ ಲ್ಯೂವ್ರ್ ಸೇರಿದಂತೆ ಪ್ರಮುಖ ವಸ್ತುಸಂಗ್ರಹಾಲಯಗಳನ್ನು ಮುಚ್ಚಲಾಗಿತ್ತು. ವ್ಯಾಪಾರಿಗಳು ತಮ್ಮ ಮಳಿಗೆಗಳ ರಕ್ಷಣೆಗೆ ಮರದ ಹಲಗೆಗಳನ್ನು ಅಳವಡಿಸಿಕೊಂಡಿದ್ದರು. ಅಂತರರಾಷ್ಟ್ರೀಯ ಮಟ್ಟದ ‘ಆರ್ಟ್ ಬಾಸೆಲ್’ ಕಲಾ ಮೇಳವನ್ನೂ ರದ್ದುಗೊಳಿಸಲಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಿನ್ನಮತದ ಹಕ್ಕಿಗೆ ಸಂಚಕಾರ; ಶಾಂತಿ ಬಾಂಡ್‌ಗೆ ಸಹಿ ಹಾಕುವ ಪ್ರಶ್ನೆಯೇ ಇಲ್ಲ ಎಂದ ನೇಹಾ ಬೋರಾ

ದೆಹಲಿ ಹೈಕೋರ್ಟ್‌ನಲ್ಲಿ ರಿಲೀಫ್ ಸಿಗದ ಹಿನ್ನೆಲೆಯಲ್ಲಿ, ದೆಹಲಿ ಪೊಲೀಸರು ವಿಧಿಸಿರುವ 10,000...

ದಸರಾ ಸೇರಿ ಎಲ್ಲಾ ಉತ್ಸವಗಳಲ್ಲಿ ಆನೆಗಳ ಬಳಕೆ ನಿಷೇಧಿಸಿ, ರೋಬೋಟಿಕ್ ಆನೆ ಬಳಸಿ: ಅರಣ್ಯ ಸಚಿವರಿಗೆ ಮನವಿ

ನಾಡಹಬ್ಬ ಮೈಸೂರು ದಸರಾ ಮತ್ತು ಜಿಲ್ಲಾವಾರು ದಸರಾ ಆಚರಣೆಗಳು ಸೇರಿದಂತೆ ಯಾವುದೇ...

ಔರಾದ(ಬಿ) ಬಿಜೆಪಿ ಮಂಡಲದ ನೂತನ ಅಧ್ಯಕ್ಷರಾಗಿ ಅನಿರುದ್ಧ ವಾಡೇಕರ್ ಆಯ್ಕೆ

ಭಾರತೀಯ ಜನತಾ ಪಕ್ಷದ ಔರಾದ(ಬಿ) ಮಂಡಲದ ನೂತನ ಅಧ್ಯಕ್ಷರಾಗಿ ಅನಿರುದ್ಧ ವಾಡೇಕರ್...

ಆಂಧ್ರಪ್ರದೇಶ | ರಸ್ತೆ ಕಾಮಗಾರಿ ವೇಳೆ ಜೆಲಾಟಿನ್ ಸ್ಫೋಟ; ಶಾಲಾ ಶಿಕ್ಷಕಿ ಸೇರಿದಂತೆ ಹಲವರ ಸಾವು

ರಸ್ತೆ ಕಾಮಗಾರಿಗಾಗಿ ಬಳಸಲಾಗುತ್ತಿದ್ದ ಜೆಲಾಟಿನ್ ಸ್ಟಿಕ್‌ಗಳು ಅನಿರೀಕ್ಷಿತವಾಗಿ ಸ್ಫೋಟಗೊಂಡು, ಶಾಲಾ ಶಿಕ್ಷಕಿಯೊಬ್ಬರು...