ಗಾಝಾದಲ್ಲಿನ ಕ್ಷಾಮ ಪರಿಸ್ಥಿತಿ ಮತ್ತಷ್ಟು ಹೆಚ್ಚಳವಾಗಿದೆ ಮತ್ತು ಅದು ಸುತ್ತಮುತ್ತಲಿನ ಪ್ರದೇಶಗಳಿಗೂ ಹಬ್ಬುತ್ತಿದೆ ಎಂದು ಜಾಗತಿಕ ಹಸಿವು ಮತ್ತು ಆಹಾರ ಭದ್ರತಾ ಮೇಲ್ವಿಚರಣಾ ಅಂತಾರಾಷ್ಟ್ರೀಯ ವ್ಯವಸ್ಥೆ ವರದಿ ಹೇಳಿದೆ.
ವಿಶ್ವಸಂಸ್ಥೆ ಬೆಂಬಲಿತ ಸಮಗ್ರ ಆಹಾರ ಭದ್ರತಾ ಹಂತದ ವರ್ಗೀಕರಣ (ಐಪಿಸಿ) ಗಾಝಾ ಗವರ್ನೆಟ್ (Gaza Governorate) ಕ್ಷಾಮ ಪರಿಸ್ಥಿತಿ ಅತ್ಯುನ್ನತ ಮಟ್ಟವಾದ 5ನೇ ಹಂತಕ್ಕೆ ಏರಿದೆ ಎಂದು ಹೇಳಿದೆ. ಹಸಿವು, ನಿರ್ಗತಿಕತೆ ಮತ್ತು ಸಾವಿನ ಪ್ರಮಾಣ ಆಧಾರದಲ್ಲಿ ಕ್ಞಾಮದ ಹಂತ ನಿರ್ಧರಿಸಲಾಗುತ್ತದೆ.
ಇದನ್ನು ಓದಿದ್ದೀರಾ? ಗಾಝಾ ಪಟ್ಟಿಯನ್ನು ತಲೆಕೆಳಗಾಗಿ ದುರ್ಬೀನು ಹಿಡಿದು ನೋಡಬೇಡಿ
ಸೆಪ್ಟೆಂಬರ್ ಅಂತ್ಯದ ವೇಳೆಗೆ, ಕ್ಷಾಮಾ ಸ್ಥಿತಿಯು ಮಧ್ಯ ಗಾಝಾದ ಡೀರ್ ಎಲ್-ಬಲಾಹ್ ಮತ್ತು ದಕ್ಷಿಣದ ಖಾನ್ ಯೂನಿಸ್‌ಗೂ ವಿಸ್ತರಿಸುವ ಸಾಧ್ಯತೆಯಿದೆ. ಇದು 500,000ಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ.
1.07 ಮಿಲಿಯನ್ ಗಾಝಾ ನಿವಾಸಿಗಳ ಜನಸಂಖ್ಯೆಯಲ್ಲಿ ಶೇಕಡ 54ರಷ್ಟು 4ನೇ ಹಂತದ ‘ತುರ್ತು’ ಪರಿಸ್ಥಿತಿಗಳಲ್ಲಿದ್ದಾರೆ. ಅಂತೆಯೇ 3,96,000 (ಶೇಕಡ 20) ಜನರು 3ನೇ ಹಂತದ ಅಥವಾ ‘ಬಿಕ್ಕಟ್ಟಿನ’ ಪರಿಸ್ಥಿತಿಗಳಲ್ಲಿದ್ದಾರೆ.
ಗಾಝಾದಲ್ಲಿ ಉಂಟಾಗುತ್ತಿರುವ ಬರಗಾಲಕ್ಕೆ ಪ್ರತಿಕ್ರಿಯಿಸಿದ ಐಪಿಸಿಯು ತನ್ನ 59 ಪುಟಗಳ ವರದಿಯಲ್ಲಿ “ಗಾಝಾ ಕ್ಷಾಮಕ್ಕೆ ಶೀಘ್ರವಾಗಿ ಪ್ರತಿಕ್ರಿಯೆಯ ಅಗತ್ಯವಿದೆ. ಈ ಬಗ್ಗೆ ಯಾರ ಮನಸ್ಸಿನಲ್ಲಿಯೂ ಯಾವುದೇ ಸಂದೇಹವೂ ಇರಬಾರದು” ಎಂದು ಹೇಳಿದೆ.
ಆದರೆ ಈ ವರದಿಯನ್ನು “ಸುಳ್ಳು ಮತ್ತು ಪಕ್ಷಪಾತ” ಎಂದು ಇಸ್ರೇಲ್ ತಳ್ಳಿಹಾಕಿದೆ. ಗಾಝಾಗೆ ನೆರವು ವಿತರಣೆಯ ಮೇಲ್ವಿಚಾರಣೆ ಮಾಡುವ ಮಿಲಿಟರಿ ಸಂಸ್ಥೆಯು “ಐಪಿಸಿಯ ವರದಿಯು ಹಮಾಸ್ ಭಯೋತ್ಪಾದಕ ಸಂಘಟನೆಯಿಂದ ಹುಟ್ಟಿದ ಭಾಗಶಃ ಡೇಟಾವನ್ನು ಅವಲಂಬಿಸಿದೆ” ಎಂದು ಹೇಳಿಕೊಂಡಿದೆ.
ಇದನ್ನು ಓದಿದ್ದೀರಾ? ಗಾಝಾದ ಆಸ್ಪತ್ರೆಯ ಮೇಲೆ ಇಸ್ರೇಲ್ ದಾಳಿ: ಬೈಡನ್ ಜೊತೆಗಿನ ಸಭೆ ರದ್ದುಗೊಳಿಸಿದ ಅರಬ್ ದೇಶಗಳ ನಾಯಕರು
ಐಪಿಸಿ ಪ್ರಕಾರ, ಒಂದು ಪ್ರದೇಶವನ್ನು ಕ್ಷಾಮ ಪೀಡಿತ ಪ್ರದೇಶ ಎಂದು ವರ್ಗೀಕರಿಸಬೇಕಾದರೆ, ಕನಿಷ್ಠ ಶೇಕಡ 20ರಷ್ಟು ಜನರು ತೀವ್ರ ಆಹಾರದ ಕೊರತೆಯನ್ನು ಎದುರಿಸಬೇಕಾಗುತ್ತದೆ. ಮೂರು ಮಕ್ಕಳಲ್ಲಿ ಒಬ್ಬರು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರಬೇಕು ಮತ್ತು ಪ್ರತಿ 10,000 ಜನರಲ್ಲಿ ಇಬ್ಬರು ಪ್ರತಿದಿನ ಹಸಿವು ಅಥವಾ ಹಸಿವು ಸಂಬಂಧಿತ ಕಾಯಿಲೆಯಿಂದ ಸಾವನ್ನಪ್ಪಿಬೇಕು.
ಈ ಮಿತಿಯನ್ನು ಮೀರದಿದ್ದರೂ ಕೂಡಾ ಇಲ್ಲಿನ ಮನೆಗಳು ಬರಗಾಲದ ಪರಿಸ್ಥಿಯನ್ನು ಎದುರಿಸುತ್ತಿವೆ. ಇದು ಹಸಿವು ಬಡತನ ಮತ್ತು ಸಾವನ್ನು ವ್ಯಾಖ್ಯಾನಿಸುತ್ತದೆ ಎಂದು ಐಪಿಸಿಯು ತೀರ್ಮಾನ ನೀಡಿದೆ.
“ಗಾಝಾದಲ್ಲಿನ ಬರಗಾಲವು ಇಸ್ರೇಲ್ ಸರ್ಕಾರ ಕೈಗೊಂಡ ಕ್ರಮಗಳ ನೇರ ಪರಿಣಾಮವಾಗಿದೆ ಮತ್ತು ಹಸಿವಿನಿಂದ ಉಂಟಾದ ಸಾವುಗಳು ಯದ್ದಾಪರಾಧಗಳಿಗೆ ಕಾರಣವಾಗಬಹುದು” ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥ ವೋಲ್ಕರ್ ಟರ್ಕ್ ಎಚ್ಚರಿಸಿದ್ದಾರೆ.
“ಇಸ್ರೇಲ್ ಮತ್ತು ಹಮಾಸ್ ನಡುವಿನ ಸುಮಾರು ಎರಡು ವರ್ಷಗಳ ಯುದ್ಧದ ಭೀಕರತೆಯಲ್ಲಿ ಉಂಟಾದ ಮಾನವೀಯ ಬಿಕ್ಕಟ್ಟು ಊಹಿಸಲಾಗದ ಮಟ್ಟವನ್ನು ತಲುಪಿದೆ” ಎಂಬ ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ ಮತ್ತು ಹಲವಾರು ಯುರೋಪಿಯನ್ ರಾಜ್ಯಗಳ ಎಚ್ಚರಿಕೆಗಳನ್ನು ಐಪಿಸಿ ಸಂಶೋಧನೆಯು ಪರಿಗಣಿಸಿದೆ.
