ಸೌದಿ ಅರೇಬಿಯಾ, ಪ್ಯಾಲೆಸ್ತೀನ್ ಸೇರಿದಂತೆ ಹಲವು ದೇಶಗಳಲ್ಲಿ ಮಾ.1ರಂದೇ ಮುಸ್ಲಿಮರ ಪವಿತ್ರ ರಮಝಾನ್ ತಿಂಗಳ ಉಪವಾಸ ಆರಂಭಗೊಂಡಿದೆ.
ಹಮಾಸ್‌ನಿಂದ ರಾಕೆಟ್ ದಾಳಿಯ ಬಳಿಕ ಪ್ಯಾಲೆಸ್ತೀನ್ ಹಾಗೂ ಇಸ್ರೇಲ್ ನಡುವೆ 2023ರ ಅಕ್ಟೋಬರ್ 7ರಂದು ಆರಂಭವಾಗಿದ್ದ ಕದನಕ್ಕೆ ಕಳೆದ ಜನವರಿಯಲ್ಲಿ ನಡೆದ ಮಾತುಕತೆಯ ನಂತರ ವಿರಾಮ ಘೋಷಿಸಲಾಗಿತ್ತು.
Palestinians gathered in Rafah, Southern Gaza, to have their first Iftar of Ramadan.
— Suppressed News. (@SuppressedNws) March 1, 2025
This Iftar was prepared by a Kuwaiti initiative. Despite the destruction and pain, they remain steadfast, holding on to their land and traditions while cherishing every aspect of life. pic.twitter.com/goFWHw3qEF
ಈ ಎಲ್ಲ ಬೆಳವಣಿಗೆಯ ನಡುವೆಯೇ ರಮಝಾನ್ ತಿಂಗಳ ಉಪವಾಸ ಕೂಡ ಆರಂಭಗೊಂಡಿದ್ದು, ಮಾ.1ರಂದು ಮೊದಲ ಇಫ್ತಾರ್ ಕೂಡ ಮುಗಿದಿದೆ. ಈ ನಡುವೆಯೇ ಯುದ್ಧದ ಅವಶೇಷಗಳ ಮಧ್ಯವೇ ಕೂತು ಗಾಝಾದ ಜನರು, 2025ರ ಮೊದಲ ಉಪವಾಸದ ಮೊದಲ ಇಫ್ತಾರ್ ಕೂಟ ನಡೆಸಿದ್ದು, ಫೋಟೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಈ ಇಫ್ತಾರ್ ಕೂಟವನ್ನು ಗಾಝಾದ ಜನರಿಗಾಗಿ ದಕ್ಷಿಣ ಗಾಝಾದ ರಫಾ ಪ್ರದೇಶದಲ್ಲಿ ಕುವೈತ್ ದೇಶದ ವತಿಯಿಂದ ಆಯೋಜಿಸಲಾಗಿತ್ತು ಎಂದು ವರದಿಯಾಗಿದೆ.

2025ರ ಜ.19ರಿಂದ 6 ವಾರಗಳ ಮೊದಲ ಹಂತದ ಕದನ ವಿರಾಮ ಜಾರಿಗೆ ಬಂದಿತ್ತು. ಎರಡನೇ ಹಂತದ ಮಾತುಕತೆ ಇನ್ನಷ್ಟೇ ಆರಂಭವಾಗಬೇಕಿದ್ದು, ರಮಝಾನ್ ಉಪವಾಸದ ತಿಂಗಳಾದ್ದರಿಂದ ಮುಂದಿನ ನಾಲ್ಕು ವಾರಗಳ ಕಾಲ ಕದನ ವಿರಾಮವನ್ನು ಮುಂದುವರಿಸುವ ಬಗ್ಗೆ ಹಮಾಸ್ ಹಾಗೂ ಇಸ್ರೇಲ್ ಒಲವು ತೋರಿರುವುದಾಗಿ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.
ಇನ್ನಿರುವ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕಾದರೆ, ಕದನ ವಿರಾಮದ ಆಶ್ವಾಸನೆ ನೀಡಬೇಕು ಎಂದು ಹಮಾಸ್ ಈಗಾಗಲೇ ಹೇಳಿದ್ದು, ಗಾಜಾದಲ್ಲಿ ಕದನ ವಿರಾಮ ಸಂಬಂಧ ಎರಡನೇ ಹಂತದ ಮಾತುಕತೆಗೆ ಸಿದ್ದ ಎಂದು ಹೇಳಿದೆ.
ಇಸ್ರೇಲ್ ಜೈಲಿನಲ್ಲಿದ್ದ ಹಲವಾರು ಪ್ಯಾಲೆಸ್ಟೀನಿ ನಾಗರಿಕರನ್ನು ಇಸ್ರೇಲ್ ರಾತ್ರೋರಾತ್ರಿ ಬಿಡುಗಡೆ ಮಾಡಿದ ಬಳಿಕ ಹಮಾಸ್‌ನಿಂದ ಈ ಹೇಳಿಕೆ ಹೊರ ಬಿದ್ದಿದೆ. ಇದಕ್ಕೂ ಮುನ್ನ ನಾಲ್ವರು ಒತ್ತೆಯಾಳುಗಳ ಶವವನ್ನು ಇಸ್ರೇಲ್‌ಗೆ ಹಮಾಸ್ ಹಸ್ತಾಂತರಿಸಿತ್ತು.
‘ಉಳಿದ 59 ಒತ್ತೆಯಾಳುಗಳನ್ನು ಹಿಂದಿರುಗಿಸುವುದು ಪ್ರಮುಖ ಆದ್ಯತೆಯಾಗಿದೆ. ಆದರೆ ಗಾಝಾದಲ್ಲಿ ಹಮಾಸ್ ಅವರನ್ನು ಹಾಗೆಯೇ ಬಿಟ್ಟರೆ ಎರಡನೇ ಹಂತದ ಕದನ ವಿರಾಮದ ಬಗ್ಗೆ ಯಾವುದೇ ಒಪ್ಪಂದವಿರುವುದಿಲ್ಲ. ನಮ್ಮ ಬೇಡಿಕೆ ಸ್ಪಷ್ಟವಾಗಿದೆ ‘ ಎಂದು ಇಸ್ರೇಲ್‌ನ ಇಂಧನ ಸಚಿವ ಎಲಿ ಕೋಹೆನ್ ಹೇಳಿಕೆ ನೀಡಿದ್ದರು.
ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತ ಭಾರಿ ಬಾಂಬ್‌ಗಳನ್ನು ಕಳುಹಿಸಿಕೊಟ್ಟಿದ್ದಾರೆ. ಆದರಿಂದಾಗಿ ನಾವು ಇನ್ನಷ್ಟು ಬಲಶಾಲಿಗಳಾಗಿದ್ದೇವೆ ಎಂದೂ ಅವರು ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ.


