ಜರ್ಮನಿ ಅಧ್ಯಕ್ಷ ಫ್ರಾಂಕ್-ವಾಲ್ಟರ್ ಸ್ಟೈನ್ಮಿಯರ್ ಅವರ ಅಧಿಕೃತ ಎಕ್ಸ್ ಖಾತೆಯನ್ನು ಹ್ಯಾಕ್ ಮಾಡಿ ಬಿಹಾರ ಸರಕಾರದ ಜಲಸಂಪನ್ಮೂಲ ಇಲಾಖೆಯ ಎಕ್ಸ್ ಖಾತೆ ಎಂಬಂತೆ ಮಾರ್ಪಾಡು ಮಾಡಲಾಗಿದೆ.
ಈ ಕುರಿತು ‘ಎಕ್ಸ್’ ಬಳಕೆದಾರರು ಸ್ಕ್ರೀನ್ ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಜರ್ಮನಿ ಸರಕಾರ ಭಾರತದ ಜೊತೆ ಯಾವುದೇ ಅಧಿಕೃತ ಸಂವಹನ ನಡೆಸಿಲ್ಲ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಮೆರಿಕ ನೆಲದಲ್ಲಿ ಮೋದಿ ಸಾಧಿಸಿದ್ದಕ್ಕಿಂತ ತಲೆ ಬಾಗಿದ್ದೇ ಹೆಚ್ಚು
ಈ ಮೊದಲು ಹ್ಯಾಕರ್‌ಗಳು ಜರ್ಮನಿ ಅಧ್ಯಕ್ಷ ಫ್ರಾಂಕ್-ವಾಲ್ಟರ್ ಸ್ಟೈನ್ಮಿಯರ್ ಅವರ ಎಕ್ಸ್ ಖಾತೆಯನ್ನು ಹ್ಯಾಕ್ ಮಾಡಿ ನಾಝಿ ಪಕ್ಷದ ಮುಖ್ಯಸ್ಥ ಅಡಾಲ್ಫ್ ಹಿಟ್ಲರ್ ಫೋಟೊ ಮತ್ತು ಹೆಸರನ್ನು ಹಾಕಿ ಹಿಟ್ಲರ್‌ನ ಅಧಿಕೃತ ಖಾತೆ ಎಂಬಂತೆ ಮಾರ್ಪಾಡು ಮಾಡಿದ್ದರು.
ಬ್ರಿಕ್ಸ್ ನ್ಯೂಸ್ ಈ ಕುರಿತು ಪರಿಶೀಲನೆ ನಡೆಸಿದ್ದು, ಎಕ್ಸ್ ಖಾತೆಯು ಜರ್ಮನಿಯ ಅಧ್ಯಕ್ಷರಿಗೆ ಸೇರಿದೆ ಮತ್ತು ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಿದೆ. ಖಾತೆಯನ್ನು ಬಳಿಕ ಸರಿಪಡಿಸಲಾಗಿತ್ತು. ಆದರೆ, ಆ ಬಳಿಕ ಅದರ ಹೆಸರನ್ನು ಬಿಹಾರ ಸರಕಾರದ ಜಲಸಂಪನ್ಮೂಲ ಇಲಾಖೆ ಎಂದು ಮಾರ್ಪಾಡು ಪಡಿಸಲಾಗಿದೆ.
