ಭಾರತ & ಚೀನಾದ H-1B ಉದ್ಯೋಗಿಗಳಿಂದ ಅಮೆರಿಕನ್ನರ ಉದ್ಯೋಗಕ್ಕೆ ಕುತ್ತು; ಸಂಸದ ರಿಲೆ ಮೂರ್ ಆರೋಪ

Date:

ಅಮೆರಿಕದ ಕಂಪ್ಯೂಟರ್‌ ಸೈನ್ಸ್‌ ಪದವೀಧರರ ಉದ್ಯೋಗಾವಕಾಶಗಳನ್ನು ಭಾರತ ಮತ್ತು ಚೀನಾದಿಂದ ಬರುವ H-1B ವೀಸಾದಾರರು ಕಸಿದುಕೊಳ್ಳುತ್ತಿದ್ದಾರೆ. ಕಡಿಮೆ ವೇತನಕ್ಕೆ ಕೆಲಸ ಮಾಡಲು ಸಿದ್ಧರಿರುವ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಮೂಲಕ ಅಮೆರಿಕದ ಯುವ ಪದವೀಧರರಿಗೆ ಅನ್ಯಾಯವಾಗುತ್ತಿದೆ ಎಂದು ಅಮೆರಿಕದ ಸಂಸದ ರಿಲೆ ಮೂರ್ ಆರೋಪಿಸಿದ್ದಾರೆ.

- Advertisement -

ಸಾಮಾಜಿಕ ಜಾಲತಾಣ Xನಲ್ಲಿ ತಮ್ಮ ದೂರದರ್ಶನ ಸಂದರ್ಶನದ ತುಣುಕನ್ನು ಹಂಚಿಕೊಂಡಿರುವ ಮೂರ್, H-1B ವೀಸಾ ಮತ್ತು ಆಪ್ಷನಲ್ ಪ್ರಾಕ್ಟಿಕಲ್ ಟ್ರೈನಿಂಗ್ (OPT) ಕಾರ್ಯಕ್ರಮಗಳನ್ನು ‘ವಂಚನೆ’ ಎಂದು ಕರೆದಿದ್ದಾರೆ. ಈ ಕಾರ್ಯಕ್ರಮಗಳು ಅಮೆರಿಕದ ಉದ್ಯೋಗಿಗಳ ವೇತನ ಮತ್ತು ಉದ್ಯೋಗಾವಕಾಶಗಳ ಮೇಲೆ ಪರಿಣಾಮ ಬೀರುತ್ತಿವೆ ಎಂಬುದು ಅವರ ಆರೋಪ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

ಶಿವಮೊಗ್ಗ | ಅಸುರಕ್ಷತೆಯ ತಾಣವಾದ ರೈಲ್ವೆ ನಿಲ್ದಾಣ: ಪ್ರಯಾಣಿಕರ...

ಕುಡಿಯುವ ನೀರಿಲ್ಲದಿರುವುದು, ಹಾಳಾದ ಶೌಚಾಲಯಗಳು, ರಾತ್ರಿ ವೇಳೆ ಬೀದಿದೀಪ ಹಾಗೂ ಕಾವಲುಗಾರರ ಕೊರತೆಯಿಂದಾಗಿ ಈ ನಿಲ್ದಾಣವು ನಿರ್ಜನ ಪ್ರದೇಶದಂತೆ ಭಾಸವಾಗುತ್ತಿದೆ. ಇದರೊಂದಿಗೆ ಕಳ್ಳತನ, ಅನೈತಿಕ ಚಟುವಟಿಕೆಗಳು ಹೆಚ್ಚಾಗಿರುವುದು ಜೊತೆಗೆ ಸಿಸಿಟಿವಿ ಕ್ಯಾಮೆರಾಗಳೂ ಇಲ್ಲದಿರುವುದು...

H-1B ವೀಸಾ ಎನ್ನುವುದು ಅಮೆರಿಕದಲ್ಲಿ ವಿಶೇಷ ಕೌಶಲ್ಯ ಮತ್ತು ವೃತ್ತಿಪರ ಅರ್ಹತೆ ಅಗತ್ಯವಿರುವ ಉದ್ಯೋಗಗಳಲ್ಲಿ ವಿದೇಶಿ ಪ್ರಜೆಗಳು ಕೆಲಸ ಮಾಡಲು ನೀಡುವ ತಾತ್ಕಾಲಿಕ ಉದ್ಯೋಗ ವೀಸಾ. ಐಟಿ, ಸಾಫ್ಟ್‌ವೇರ್, ಎಂಜಿನಿಯರಿಂಗ್, ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ವಿದೇಶಿ ಉದ್ಯೋಗಿಗಳು ಈ ವೀಸಾ ಪಡೆಯುತ್ತಾರೆ. ಸಾಮಾನ್ಯವಾಗಿ ಅಮೆರಿಕದ ಉದ್ಯೋಗದಾತರು ಉದ್ಯೋಗಿಯ ಪರವಾಗಿ ವೀಸಾಕ್ಕಾಗಿ ಅರ್ಜಿ ಸಲ್ಲಿಸಬೇಕು. ಆರಂಭದಲ್ಲಿ ಈ ವೀಸಾವನ್ನು ಮೂರು ವರ್ಷಗಳವರೆಗೆ ನೀಡಲಾಗುತ್ತದೆ; ಸಾಮಾನ್ಯವಾಗಿ ಒಟ್ಟು ಆರು ವರ್ಷಗಳವರೆಗೆ ವಿಸ್ತರಿಸಬಹುದು. ಆದರೆ ಕೆಲವು ಸಂದರ್ಭಗಳಲ್ಲಿ ವಿನಾಯಿತಿಗಳೂ ಇವೆ.

Advertisements

ಕಳೆದ ವರ್ಷ ಅಮೆರಿಕದಲ್ಲಿ ಕಂಪ್ಯೂಟರ್‌ ಸೈನ್ಸ್‌ ಮತ್ತು ಕಂಪ್ಯೂಟರ್‌ ಪ್ರೋಗ್ರಾಮಿಂಗ್‌ಗೆ ಸಂಬಂಧಿಸಿದ ಪದವಿಗಳನ್ನು ಸುಮಾರು 6.5 ಲಕ್ಷ ವಿದ್ಯಾರ್ಥಿಗಳು ಪಡೆದಿದ್ದಾರೆ. ಆದರೆ, ಅವರ ಬದಲಿಗೆ ಭಾರತ ಮತ್ತು ಚೀನಾದಿಂದ ಹೆಚ್ಚಾಗಿ ಬಂದಿರುವ ಸುಮಾರು 5 ಲಕ್ಷ H-1B ವೀಸಾದಾರರನ್ನು ನೇಮಿಸಿಕೊಳ್ಳಲಾಗುತ್ತಿದೆ ಎಂದು ಮೂರ್ ಹೇಳಿದ್ದಾರೆ. ಈ ಅಂಕಿಅಂಶಗಳನ್ನು ಅವರು ತಮ್ಮ ಸಂದರ್ಶನದಲ್ಲಿ ಉಲ್ಲೇಖಿಸಿದ್ದಾರೆ. ದಿ ಸ್ಕಾಟ್ ಜೆನ್ನಿಂಗ್ಸ್ ಶೋ ಕಾರ್ಯಕ್ರಮದಲ್ಲಿ ಮಾತನಾಡಿರುವ ಮೂರ್, ವಿದೇಶಿ ಉದ್ಯೋಗಿಗಳು ಕಡಿಮೆ ವೇತನಕ್ಕೆ ಕೆಲಸ ಮಾಡಲು ಸಿದ್ಧರಿರುವುದರಿಂದ ಅಮೆರಿಕದ ಯುವ ಪದವೀಧರರು ಉದ್ಯೋಗಾವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ವಾದಿಸಿದ್ದಾರೆ. ಈ ಸಂದರ್ಶನವು ಸಾಲೆಮ್ ನ್ಯೂಸ್ ಚಾನೆಲ್‌ನಲ್ಲಿ ಪ್ರಸಾರವಾಗಿತ್ತು.

H-1B ವೀಸಾ ಕಾರ್ಯಕ್ರಮದ ಮೂಲ ಉದ್ದೇಶವು ಅಮೆರಿಕದಲ್ಲಿ ಲಭ್ಯವಿಲ್ಲದ ಅಥವಾ ಸಾಕಷ್ಟು ಪ್ರಮಾಣದಲ್ಲಿ ದೊರೆಯದ ವಿಶೇಷ ಕೌಶಲ ಹೊಂದಿರುವ ಪ್ರತಿಭಾವಂತರನ್ನು ನೇಮಿಸಿಕೊಳ್ಳಲು ಅವಕಾಶ ನೀಡುವುದಾಗಿದೆ. ಆದರೆ, ಈ ಕಾರ್ಯಕ್ರಮದ ಹೆಸರಿನಲ್ಲಿ ವಿದೇಶಿ ಉದ್ಯೋಗಿಗಳನ್ನು ಕಡಿಮೆ ವೇತನಕ್ಕೆ ನೇಮಿಸಿಕೊಳ್ಳಲಾಗುತ್ತಿದೆ ಎಂಬುದು ಮೂರ್ ಅವರ ಆಕ್ಷೇಪ. “ಅತ್ಯುತ್ತಮ ಪ್ರತಿಭೆಗಳನ್ನು ಕರೆತಂದು, ಅಮೆರಿಕದಲ್ಲಿ ಭರ್ತಿ ಮಾಡಲು ಸಾಧ್ಯವಾಗದ ಹುದ್ದೆಗಳನ್ನು ತುಂಬಲಾಗುತ್ತದೆ ಎಂದು H-1B ಕಾರ್ಯಕ್ರಮವನ್ನು ಸಮರ್ಥಿಸಲಾಗಿತ್ತು. ಆದರೆ, ವಾಸ್ತವದಲ್ಲಿ ನಡೆಯುತ್ತಿರುವುದು ಅಗ್ಗದ ಕಾರ್ಮಿಕರನ್ನು ಆಮದು ಮಾಡಿಕೊಂಡು, ಕಾಲೇಜುಗಳಿಂದ ಪದವಿ ಪಡೆದು ಉದ್ಯೋಗಕ್ಕೆ ಸಿದ್ಧರಾಗಿರುವ ಯುವಕರ ಅವಕಾಶಗಳನ್ನು ಕುಗ್ಗಿಸುವ ಪ್ರಕ್ರಿಯೆ” ಎಂದು ಅವರು ಆರೋಪಿಸಿದ್ದಾರೆ.

ವೀಸಾದಾರರು ಅಮೆರಿಕಕ್ಕೆ ಬಂದಾಗ ತಮ್ಮ ಕುಟುಂಬದ ಸದಸ್ಯರನ್ನೂ ಕರೆತರುತ್ತಾರೆ. ಸಾಮಾನ್ಯವಾಗಿ ಒಬ್ಬ H-1B ವೀಸಾದಾರನೊಂದಿಗೆ ಕುಟುಂಬದ ಹತ್ತು ಮಂದಿ ಬರುತ್ತಾರೆ. ಇದನ್ನು ‘ಚೈನ್ ಮೈಗ್ರೇಶನ್’ ಎಂದು ಕರೆಯಲಾಗುತ್ತದೆ ಎಂಬುದನ್ನೂ ಮೂರ್‌ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಡಿಸಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಬಿಜೆಪಿ MLC ರವಿಕುಮಾರ್‌ ವಿರುದ್ಧ ಜಾಮೀನು ರಹಿತ ವಾರಂಟ್‌

ಇದೇ ವೇಳೆ, H-1B ಮತ್ತು L-1 ಸೇರಿದಂತೆ ತಾತ್ಕಾಲಿಕ ಉದ್ಯೋಗ ವೀಸಾಗಳ ವಿಸ್ತರಣೆಗೆ ಸಲ್ಲಿಸುವ ಅರ್ಜಿಗಳ ಪರಿಶೀಲನೆಯನ್ನು ಬದಲಾಯಿಸುವ ನಿಯಮವೊಂದನ್ನು ಅಮೆರಿಕದ ಗೃಹ ಭದ್ರತಾ ಇಲಾಖೆ (DHS) ಪ್ರಸ್ತಾಪಿಸಿದೆ ಎಂದು ವರದಿಯಾಗಿದೆ. ಈ ಪ್ರಸ್ತಾವನೆ ಜಾರಿಯಾದರೆ, ಭಾರತೀಯ ವೃತ್ತಿಪರರು ಸೇರಿದಂತೆ ವಿದೇಶಿ ಉದ್ಯೋಗಿಗಳ ವೀಸಾ ವಿಸ್ತರಣೆ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಬಹುದು. ಪ್ರಸ್ತಾವಿತ ಬದಲಾವಣೆಯ ಪ್ರಕಾರ, ಹಿಂದಿನ ಅರ್ಜಿಗೆ ಅನುಮೋದನೆ ದೊರೆತಿದ್ದರೂ, ಅದೇ ಪರಿಸ್ಥಿತಿಯಲ್ಲಿ ಸಲ್ಲಿಸಲಾದ ಹೊಸ ಅರ್ಜಿಯ ಅರ್ಹತೆಯನ್ನು ವಲಸೆ ಅಧಿಕಾರಿಗಳು ಮತ್ತೆ ಪರಿಶೀಲಿಸಬಹುದು. ಪ್ರಸ್ತುತ ನಿಯಮದಡಿ, ಒಂದೇ ಪಕ್ಷಗಳು ಮತ್ತು ಒಂದೇ ಮೂಲಭೂತ ವಾಸ್ತವಾಂಶಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಪರಿಶೀಲಿಸುವಾಗ, ಹಿಂದಿನ ಅನುಮೋದನೆಗೆ ಸಾಮಾನ್ಯವಾಗಿ ಆದ್ಯತೆ ನೀಡಲಾಗುತ್ತದೆ. ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ (USCIS) ಹಿಂದಿನ ಅನುಮೋದನೆಗೆ ನೀಡುವ ಆದ್ಯತೆಯನ್ನು ಒಳಗೊಂಡಿರುವ 8 CFR 214.1(c)(5) ನಿಯಮವನ್ನು ತೆಗೆದುಹಾಕಲು DHS ಪ್ರಸ್ತಾಪಿಸಿದೆ. ಈ ಪ್ರಸ್ತಾವನೆ ಇನ್ನೂ ಜಾರಿಗೆ ಬಂದಿಲ್ಲ. ಪ್ರಸ್ತಾವಿತ ನಿಯಮದ ಸಂಪೂರ್ಣ ರೂಪುರೇಷೆಯ ಕುರಿತು ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಆಹ್ವಾನಿಸಲಾಗಿದೆ. ಈ ಬದಲಾವಣೆ ಜಾರಿಯಾದರೆ, ಉದ್ಯೋಗದಾತರು ವಿದೇಶಿ ಉದ್ಯೋಗಿಗಳ ವೀಸಾ ವಿಸ್ತರಣೆ ಅಥವಾ ನವೀಕರಣಕ್ಕೆ ಅರ್ಜಿ ಸಲ್ಲಿಸುವಾಗ ಹಿಂದಿನ ಅನುಮೋದನೆಯೊಂದನ್ನೇ ಅವಲಂಬಿಸುವ ಅವಕಾಶ ಕಡಿಮೆಯಾಗಬಹುದು. ಆದರೆ, ಪ್ರಸ್ತಾವಿತ ನಿಯಮವು ಅಂತಿಮವಾಗಿ ಯಾವ ರೂಪದಲ್ಲಿ ಜಾರಿಯಾಗಲಿದೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ.

ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ (USCIS) ದತ್ತಾಂಶದ ಪ್ರಕಾರ, 2025ರ ಹಣಕಾಸು ವರ್ಷದಲ್ಲಿ H-1B ವೀಸಾ ಫಲಾನುಭವಿಗಳಲ್ಲಿ ಭಾರತೀಯ ಪ್ರಜೆಗಳ ಪಾಲು ಸುಮಾರು ಶೇ. 70ರಷ್ಟಿತ್ತು. ಹೀಗಾಗಿ, H-1B ವೀಸಾ ಕಾರ್ಯಕ್ರಮಕ್ಕೆ ಸಂಬಂಧಿಸಿದ ನೀತಿ ಬದಲಾವಣೆಗಳು ಭಾರತೀಯ ತಂತ್ರಜ್ಞಾನ ವೃತ್ತಿಪರರು ಮತ್ತು ಅಮೆರಿಕದಲ್ಲಿ ಉದ್ಯೋಗದಲ್ಲಿರುವ ಭಾರತೀಯರ ಮೇಲೆ ಮಹತ್ವದ ಪರಿಣಾಮ ಬೀರಬಹುದಾಗಿದೆ. ಆದರೆ, H-1B ವೀಸಾದಾರರು ಅಮೆರಿಕದ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂಬುದು ರಿಲೆ ಮೂರ್ ಅವರ ಆರೋಪ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ರೈತರಿಗೆ ಎಕರೆಗೆ ರೂ.25 ಸಾವಿರ ಪರಿಹಾರ ನೀಡಿ: ಭೀಮ್ ರಾಜ್ಯ ದಲಿತ ಸೇವಾ ಸಮಿತಿ ಆಗ್ರಹ

ಮಳೆ ಕೊರತೆಯಿಂದ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಪ್ರತಿ ಎಕರೆಗೆ ಕನಿಷ್ಠ...

14 ಎಸೆತಗಳಲ್ಲಿ ಅರ್ಧಶತಕ: ಮೆಕ್‌ಗರ್ಕ್‌ ಸಿಡಿಲಾಟ, ವೈಭವ್‌ ವಿಶ್ವದಾಖಲೆ ಅಬಾಧಿತ

ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್‌ ಜೇಕ್‌ ಫ್ರೇಸರ್‌ ಮೆಕ್‌ಗರ್ಕ್‌ ಕೇವಲ 14...

ರಷ್ಯಾ-ಉಕ್ರೇನ್ ಸಂಘರ್ಷ: ನಿರ್ಬಂಧ ವಿನಾಯಿತಿ ಪುಟಿನ್‌ಗೆ ಟ್ರಂಪ್ ನೀಡಿದ ಬಹುಮಾನ ಎಂದ‌ ಝೆಲೆನ್ಸ್ಕಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಷ್ಯಾದ ಮೇಲಿನ ಪ್ರಮುಖ ನಿರ್ಬಂಧಗಳನ್ನು...

CJPಯ ತಿರಂಗಾ ಯಾತ್ರೆಗೆ ಮುನ್ನ ಬಂಧನ; ಅಭಿಜೀತ್ ದೀಪ್ಕೆಗೆ ಷರತ್ತುಬದ್ಧ ಜಾಮೀನು

ಕನ್ನಾಟ್ ಪ್ಲೇಸ್‌ನಲ್ಲಿ ಆಯೋಜಿಸಲಾಗಿದ್ದ ‘ಲೇಹ್ರಾ ದೋ ತಿರಂಗಾ’ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ...