ಪ್ಯಾಲೆಸ್ತೀನ್‌ನ ಹಮಾಸ್‌ನ ಪೊಲಿಟಿಕಲ್ ಬ್ಯೂರೋ ಮುಖ್ಯಸ್ಥರಾಗಿದ್ದ ಇಸ್ಮಾಯಿಲ್ ಹನಿಯೇಹ್ ಅವರನ್ನು ಇರಾನ್‌ನ ಟೆಹ್ರಾನ್‌ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಇರಾನ್ ಮೂಲದ ಪ್ರೆಸ್ ಟಿವಿ ವರದಿ ಮಾಡಿದೆ.
ಸುಮಾರು 1,195 ಜನರ ಸಾವಿಗೆ ಕಾರಣವಾದ ಅಕ್ಟೋಬರ್ 7ರ ದಾಳಿಯ ನಂತರ ಇಸ್ಮಾಯಿಲ್ ಹನಿಯೇಹ್ ಅವರನ್ನು ಕೊಂದು ಹಮಾಸ್ ಗುಂಪನ್ನು ನಾಶಮಾಡುವುದಾಗಿ ಇಸ್ರೇಲ್ ಪ್ರತಿಜ್ಞೆ ಮಾಡಿತ್ತು. ಆದ್ದರಿಂದ ಹತ್ಯೆಯ ಹಿಂದೆ ಇಸ್ರೇಲ್‌ನ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.
ಇನ್ನು ಘಟನೆಯಲ್ಲಿ ಇಸ್ಮಾಯಿಲ್ ಹನಿಯೇಹ್ ಅವರ ಅಂಗರಕ್ಷಕ ಕೂಡ ಹತರಾಗಿದ್ದಾರೆ ಎಂದು ಪ್ರೆಸ್ ಟಿವಿ ವರದಿ ಮಾಡಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಕೂಡ ಬಹಿರಂಗಗೊಂಡಿಲ್ಲ.
ಇರಾನ್ ಅಧ್ಯಕ್ಷರಾಗಿ ಚುನಾಯಿತರಾದ ಮಸೂದ್ ಪೆಜೆಶ್ಕಿಯಾನ್ ಅವರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಇಸ್ಮಾಯಿಲ್ ಹನಿಯೇಹ್ ಟೆಹ್ರಾನ್‌ನಲ್ಲಿದ್ದರು.
ಇದನ್ನು ಓದಿದ್ದೀರಾ? ಇಸ್ರೇಲ್ ಹಮಾಸ್ ಯುದ್ಧ| ರಫಾದಲ್ಲಿ ಇಸ್ರೇಲ್ ದಾಳಿಗೆ 35 ಮಂದಿ ಬಲಿ
ಇಸ್ರೇಲ್ ಹಾಗೂ ಗಾಝಾ ನಡುವಿನ ಸಂಘರ್ಷ ಮುಂದುವರಿಯುತ್ತಿರುವ ನಡುವೆಯೇ ಈ ಬೆಳವಣಿಗೆ ನಡೆದಿದ್ದು, ಇಸ್ಮಾಯಿಲ್ ಹನಿಯೇಹ್ ಹತ್ಯೆಯ ಹಿಂದೆ ಇಸ್ರೇಲ್‌ನ ಕೈವಾಡ ಇರುವುದಾಗಿ ಶಂಕಿಸಲಾಗಿದೆ.