ಕದನ ವಿರಾಮಕ್ಕಾಗಿ ಇಸ್ರೇಲ್ ಜೊತೆ ಮಾತುಕತೆಗೆ ಹತ್ತಿರವಾಗುತ್ತಿದ್ದೇವೆ: ಹಮಾಸ್

Date:

Advertisements

ಇಸ್ರೇಲ್‌ ಹಾಗೂ ಹಮಾಸ್ ನಡುವೆ ಕಳೆದ ಅಕ್ಟೋಬರ್ 7ರಿಂದ ನಡೆಯುತ್ತಿರುವ ಸಂಘರ್ಷವು 45ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಹೇಳಿಕೆ ನೀಡಿರುವ ಹಮಾಸ್, ಇಸ್ರೇಲ್‌ನೊಂದಿಗೆ ಕದನ ವಿರಾಮದ ಒಪ್ಪಂದಕ್ಕೆ ಸಮೀಪಿಸುತ್ತಿರುವುದಾಗಿ ಹೇಳಿದೆ.

ಈ ಬಗ್ಗೆ ಮಂಗಳವಾರ ಟೆಲಿಗ್ರಾಂ ಮೂಲಕ ಮಾಹಿತಿ ನೀಡಿರುವ ಹಮಾಸ್‌ ನಾಯಕ ಇಸ್ಮಾಯಿಲ್ ಹನಿಯೆಹ್, ಯುದ್ಧ ವಿರಾಮದ ಕುರಿತಂತೆ ಕತಾರ್‌ನ ಮಧ್ಯವರ್ತಿಗಳ ಮೂಲಕ ಮಾತುಕತೆ ನಡೆಯುತ್ತಿದೆ. ಅವರಿಗೆ ನಮ್ಮ ಪ್ರತಿಕ್ರಿಯೆಯನ್ನು ನೀಡಿರುವುದಾಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆದರೆ ಯುದ್ದ ವಿರಾಮಕ್ಕೆ ಸಂಬಂಧಿಸಿದಂತೆ ಹಮಾಸ್ ಮುಖಂಡ ಹೆಚ್ಚಿನ ವಿವರಗಳನ್ನು ಇನ್ನೂ ನೀಡಿಲ್ಲ. ಆದರೆ ಮಾಹಿತಿಯ ಪ್ರಕಾರ ಮೂರರಿಂದ ಐದು ದಿನಗಳವರೆಗೆ ಕದನ ವಿರಾಮ ಇರಬಹುದು ಎಂದು ‘ಅಲ್ ಜಝೀರಾ‘ ವರದಿ ಮಾಡಿದೆ.

Advertisements

ಹಮಾಸ್‌ನೊಂದಿಗಿನ ಮಾತುಕತೆಗೆ ಮಧ್ಯಸ್ಥಿಕೆ ವಹಿಸಲು ಇಸ್ರೇಲ್ ಪರವಾಗಿ ಅಮೆರಿಕ ಮತ್ತು ಹಮಾಸ್ ಪರವಾಗಿ ಕತಾರ್ ಇರಲಿದೆ ಎಂದು ವರದಿಯಾಗಿದೆ. ಗಾಜಾದಲ್ಲಿ ತಾತ್ಕಾಲಿಕ ಕದನ ವಿರಾಮ ಮತ್ತು ಹೆಚ್ಚಿನ ಮಾನವೀಯ ನೆರವಿನ ಪ್ರವೇಶ ಮತ್ತು ಒತ್ತೆಯಾಳುಗಳ ಬಿಡುಗಡೆಯ ಕುರಿತು ವಾರಗಳವರೆಗೆ ಮಾತುಕತೆ ನಡೆಸುತ್ತಿವೆ.

‘ಕದನ ವಿರಾಮ ಎಷ್ಟು ಕಾಲ ಇರಲಿದೆ. ಗಾಝಾಕ್ಕೆ ಪರಿಹಾರ ರವಾನೆ ಬಗ್ಗೆ ಸಿದ್ದತೆ ಮತ್ತು ಒತ್ತೆಯಾಳುಗಳ ವಿನಿಮಯ ಮಾಡಿಕೊಳ್ಳುವ ಬಗ್ಗೆ ಮಾತುಕತೆಗಳು ನಡೆಯುತ್ತಿದೆ. ಎರಡೂ ಕಡೆಯವರು ಮಹಿಳೆಯರು ಮತ್ತು ಮಕ್ಕಳನ್ನು ಮುಕ್ತಗೊಳಿಸಿದ್ದಾರೆ. ಈ ಕುರಿತು ಮಾತುಕತೆಗಳಿಗೆ ಮಧ್ಯಸ್ಥಿಕೆ ವಹಿಸುವ ಕತಾರ್ ವಿವರಗಳನ್ನು ಘೋಷಿಸುತ್ತದೆ’ ವರದಿಯಾಗಿದೆ.

ಒಪ್ಪಂದವು ಕದನ ವಿರಾಮ, ಗಾಝಾದ ಎಲ್ಲ ಪ್ರದೇಶಗಳಿಗೆ ಪರಿಹಾರ ಸಾಮಗ್ರಿಗಳ ಪೂರೈಸಲು ಟ್ರಕ್‌ಗಳ ವ್ಯವಸ್ಥೆ ಮತ್ತು ಗಾಯಗೊಂಡವರನ್ನು ಚಿಕಿತ್ಸೆಗಾಗಿ ಬೇರೆ ದೇಶಗಳಿಗೆ ಕಳುಹಿಸುವ ವಿಷಯವೂ ಒಳಗೊಂಡಿರುತ್ತದೆ. ಎರಡೂ ದೇಶಗಳ ನಡುವೆ ವಾರಗಳಿಂದ ಮಾತುಕತೆ ನಡೆಯುತ್ತಿದೆ. ಇಸ್ರೇಲ್‌ ಕಡೆಯವರು ಒಪ್ಪಂದದ ಒಮ್ಮತಕ್ಕೆ ಬರುತ್ತಿಲ್ಲ ಎಂದು ಹಮಾಸ್‌ನ ಎಲ್-ರೆಶಿಕ್ ಹೇಳಿದ್ದಾರೆ.

ಇದೇ ವೇಳೆ ಹಮಾಸ್‌, ಭೂ ಮತ್ತು ವಾಯು ಮಾರ್ಗದ ಮೂಲಕ ಗಾಝಾದಲ್ಲಿ ಇಸ್ರೇಲ್‌ ವಿಮಾನಗಳ ಚಟುವಟಿಕೆಯನ್ನು ನಿಷೇಧಿಸುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ ಎಂದು ವರದಿಯಾಗಿದೆ.

ಅಕ್ಟೋಬರ್‌ 7ರಂದು ಇಸ್ರೇಲ್‌ ಪ್ಯಾಲೆಸ್ತೀನ್‌ ಮೇಲೆ ಯುದ್ಧ ಘೋಷಿಸಿದ ಬಳಿಕ ಈವರೆಗೆ ಪ್ಯಾಲೆಸ್ತೀನ್‌ನಲ್ಲಿ ಮೃತರ ಸಂಖ್ಯೆ 15,000ಕ್ಕೂ ಅಧಿಕ ಇದೆ ಎಂದು ಯುರೋ-ಮೆಡ್ ಮಾನವ ಹಕ್ಕುಗಳ ಸಂಸ್ಥೆ ಹೇಳಿದೆ. ಮೃತರಲ್ಲಿ 6,403 ಮಕ್ಕಳು ಮೃತಪಟ್ಟಿದ್ದಾರೆ. ಮೃತರಲ್ಲಿ 3,561 ಮಂದಿ ಮಹಿಳೆಯರು ಸೇರಿದ್ದಾರೆ. ಯುದ್ಧದಲ್ಲಿ 30,000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಹಮಾಸ್‌ನೊಂದಿಗಿನ ಒತ್ತೆಯಾಳುಗಳ ಒಪ್ಪಂದದ ಕುರಿತು ಕತಾರ್ ಇಸ್ರೇಲ್‌ಗೆ ಎರಡು ಸಲಹೆಗಳನ್ನು ಕೂಡ ನಿನ್ನೆ ನೀಡಿತ್ತು. ಮೊದಲನೆಯದಾಗಿ 3 ದಿನಗಳ ಕದನ ವಿರಾಮ ಮತ್ತು ಗಾಝಾ ಪಟ್ಟಿಗೆ ನಿರ್ದಿಷ್ಟ ಪ್ರಮಾಣದ ಇಂಧನದ ಪೂರೈಕೆಗೆ ಬದಲಾಗಿ 53 ಮಕ್ಕಳು ಮತ್ತು ಮಹಿಳೆಯರನ್ನು ಹಮಾಸ್‌ನಿಂದ ಬಿಡುಗಡೆ ಮಾಡುವುದಾಗಿದೆ.

ಪ್ಯಾಲೆಸ್ತೀನ್ ಮಹಿಳೆಯರು, ಮಕ್ಕಳು ಮತ್ತು ಕೆಲವು ಭದ್ರತಾ ಖೈದಿಗಳ ಬಿಡುಗಡೆ, 5 ದಿನಗಳ ಕದನ ವಿರಾಮ ಮತ್ತು ಹೆಚ್ಚಿನ ಪ್ರಮಾಣದ ಇಂಧನದ ಪೂರೈಕೆಗೆ ಬದಲಾಗಿ ಹಮಾಸ್ 87 ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಬಗ್ಗೆ ಎರಡನೆಯ ಸಲಹೆಯನ್ನು ನೀಡಲಾಗಿದೆ ಎಂದು ಪ್ಯಾಲೆಸ್ತೀನ್‌ ಮೂಲಗಳನ್ನು ಉಲ್ಲೇಖಿಸಿ ಕೆಲವೊಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿಗಳು ತಿಳಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಝಾದಲ್ಲಿ ನರಮೇಧ: ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ಇಸ್ರೇಲ್ ರಾಯಭಾರಿ ನಡುವೆ ವಾಕ್ಸಮರ

ಗಾಝಾದಲ್ಲಿ 'ಅಲ್‌ಝಝೀರಾ' ಸಂಸ್ಥೆಯ ಪತ್ರಕರ್ತನನ್ನು ಇಸ್ರೇಲ್ ಹತ್ಯೆಗೈದಿದೆ. ಈ ಹತ್ಯೆಯನ್ನು ಕಾಂಗ್ರೆಸ್‌...

ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್‌ ಒತ್ತಡ

ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ...

ಗಾಝಾದಲ್ಲಿ ಹತ್ಯೆಯಾದ ಯುವ ಪತ್ರಕರ್ತರೊಬ್ಬರ ಭಿನ್ನ ಉಯಿಲು !

ನಾನು ಸಾಯುವುದಾದರೆ, ನನ್ನ ಸಿದ್ಧಾಂತಗಳ ಮೇಲೆ ದೃಢವಾಗಿರುವೆ. ದೇವರ ಮುಂದೆ ನಾನು...

ಗಾಝಾದಲ್ಲಿ ಇಸ್ರೇಲ್ ದಾಳಿ: ಐವರು ಅಲ್‌ಜಝೀರಾ ಪತ್ರಕರ್ತರು ಹತ

ಭಾನುವಾರ ಗಾಝಾ ನಗರದಲ್ಲಿ ಅಲ್‌ಜಝೀರಾ ಟೆಂಟ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ...

Download Eedina App Android / iOS

X