ಲೆಬನಾನ್ | ಕೈಯ್ಯಲ್ಲಿದ್ದ ಸಾವಿರಾರು ಪೇಜರ್‌ಗಳ ಏಕಾಏಕಿ ಸ್ಫೋಟ: 9 ಸಾವು, 2,800 ಮಂದಿಗೆ ಗಾಯ

Date:

Advertisements

ಲೆಬನಾನ್‌ ದೇಶದಲ್ಲಿ ಹಿಜ್ಬುಲ್ಲಾ ಸಂಘಟನೆಯ ಸಾವಿರಾರು ಮಂದಿ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾಗ, ಮಾರುಕಟ್ಟೆ ಮತ್ತಿತರ ಕಡೆಗಳಲ್ಲಿ ತಮ್ಮ ಪಾಡಿಗೆ ತಾವು ಇದ್ದಾಗ ಅವರ ಕೈಯ್ಯಲ್ಲಿದ್ದ ಅಥವಾ ಪ್ಯಾಂಟ್ ಜೇಬಿನಲ್ಲಿ ಇಟ್ಟುಕೊಂಡಿದ್ದ ಪೇಜರ್‌ಗಳು (ಮೊಬೈಲ್ ಫೋನ್ ಗಳಿಗಿಂತ ಮುಂಚೆ ಇದ್ದ ಸಂವಹನ ಉಪಕರಣ) ಏಕಾಏಕಿ ಸ್ಫೋಟಗೊಂಡಿವೆ.

ಸಿಕ್ರೊನೈಸ್ಡ್ ಬ್ಲಾಸ್ಟಿಂಗ್ ಪರಿಕಲ್ಪನೆಯೊಂದಿಗೆ ದೂರದಲ್ಲೇ ಕುಳಿತು ನಿರ್ದಿಷ್ಟ ವ್ಯಕ್ತಿಗಳು ವಿಶೇಷ ಸಾಫ್ಟ್ ವೇರ್ ಗಳನ್ನು ಬಳಸಿ ಎಲ್ಲ ಪೇಜರ್‌ಗಳು ಏಕಾಏಕಿ ಸ್ಫೋಟಗೊಳ್ಳುವಂತೆ ಮಾಡಲಾಗಿದೆ ಎಂದು ಹೇಳಲಾಗಿದೆ. ಸ್ಫೋಟದ ಪರಿಣಾಮವಾಗಿ, 9 ಮಂದಿ ಸಾವನ್ನಪ್ಪಿದ್ದು, 2,800 ಮಂದಿ ಗಾಯಗೊಂಡಿದ್ದಾರೆ.

ಸ್ಥಳೀಯ ಕಾಲಮಾನ ಮಧ್ಯಾಹ್ನ 3:30ಕ್ಕೆ ಭಾರತೀಯ ಕಾಲಮಾನ ಸಂಜೆ 6:30ಕ್ಕೆ ಈ ಸ್ಫೋಟ ಸಂಭವಿಸಿದೆ. ದಾಳಿಯ ಪರಿಣಾಮ ರಸ್ತೆಯಲ್ಲಿ, ತರಕಾರಿ ಮಾರುಕಟ್ಟೆ, ಕಾರಿನಲ್ಲಿದ್ದ ಸದಸ್ಯರು ಅಲ್ಲೇ ಕುಸಿದು ಬಿದ್ದಿದ್ದಾರೆ. ಲೆಬನಾನ್‌ನಲ್ಲಿದ್ದ ಇರಾನ್‌ ರಾಯಭಾರಿ ಸಹ ಗಾಯಗೊಂಡಿದ್ದಾರೆ. 

Advertisements

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಪ್ರಧಾನಿಯಾಗಿ ನೂರು ದಿನ: ಹಿನ್ನಡೆಯೋ, ಮುನ್ನಡೆಯೋ?

ಈ ಕೃತ್ಯದ ಹಿಂದೆ ಇಸ್ರೇಲ್ ಕೈವಾಡ ಇದೆ. ಅತ್ಯಾಧುನಿಕ ರಿಮೋಟ್ ತಂತ್ರಜ್ಞಾನ ಬಳಸಿ, ಸ್ಫೋಟ ನಡೆಸಲಾಗಿದೆ ಎಂದು ಲೆಬನಾನ್ ಸರ್ಕಾರದ ಅಧಿಕಾರಿಗಳು ಆರೋಪಿಸಿದ್ದಾರೆ. ಈ ಆರೋಪಗಳ ಕುರಿತು ಪ್ರತಿಕ್ರಿಯಿಸಲು ಇಸ್ರೇಲ್ ಸೇನೆ ನಿರಾಕರಿಸಿದೆ. ಲೆಬನಾನ್ ಪ್ರಧಾನಿ ನಜೀಬ್ ಮಿಕಾತಿ ಅವರು, ‘ಇಸ್ರೇಲ್ ನಡೆಸಿದ ಈ ಕ್ರಿಮಿನಲ್ ಆಕ್ರಮಣವು, ಲೆಬನಾನ್‌ನ ಸಾರ್ವಭೌಮತೆಯ ಉಲ್ಲಂಘನೆ’ ಎಂದು ಟೀಕಿಸಿದ್ದಾರೆ.

ಸಿರಿಯಾದಲ್ಲಿ 14 ಮಂದಿಗೆ ಗಾಯ

ಡಮಾಸ್ಕಸ್ ಮತ್ತು ದೇಶದ ಇತರ ಕೆಲವೆಡೆ ಮಂಗಳವಾರ ಪೇಜರ್ ಸ್ಪೋಟದಿಂದ 14 ಮಂದಿ ಗಾಯಗೊಂಡಿದ್ಧಾರೆ ಎಂದು ಸಿರಿಯಾದಲ್ಲಿರುವ ಮಾನವ ಹಕ್ಕುಗಳ ವೀಕ್ಷಕರೊಬ್ಬರು ತಿಳಿಸಿದ್ದಾರೆ.

ಪೇಜರ್ ಬಳಕೆ ಏಕೆ?
ಮೊಬೈಲ್ ಫೋನ್‌ಗಳು ಬರುವ ಮುನ್ನ ಪೇಜರ್‌ಅನ್ನು ಸಂವಹನ ಸಾಧನವಾಗಿ ಬಳಸಲಾಗುತ್ತಿತ್ತು. ಆದರೆ
ಹಿಜ್ಬುಲ್ಲಾ ಬಂಡುಕೋರರು ಪರಸ್ಪರ ಸಂವಹನ ನಡೆಸಲು ಈಗಲೂ ಪೇಜರ್‌ಅನ್ನು ಬಳಸುತ್ತಿದ್ದಾರೆ. ಪೇಜರ್
ಮೂಲಕ ಕಳುಹಿಸುವ ಸಂದೇಶಗಳು ರಹಸ್ಯವಾಗಿ ಇರುತ್ತದೆ ಎಂಬುದೇ ಇದಕ್ಕೆ ಕಾರಣ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಝಾದಲ್ಲಿ ನರಮೇಧ: ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ಇಸ್ರೇಲ್ ರಾಯಭಾರಿ ನಡುವೆ ವಾಕ್ಸಮರ

ಗಾಝಾದಲ್ಲಿ 'ಅಲ್‌ಝಝೀರಾ' ಸಂಸ್ಥೆಯ ಪತ್ರಕರ್ತನನ್ನು ಇಸ್ರೇಲ್ ಹತ್ಯೆಗೈದಿದೆ. ಈ ಹತ್ಯೆಯನ್ನು ಕಾಂಗ್ರೆಸ್‌...

ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್‌ ಒತ್ತಡ

ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ...

ಗಾಝಾದಲ್ಲಿ ಹತ್ಯೆಯಾದ ಯುವ ಪತ್ರಕರ್ತರೊಬ್ಬರ ಭಿನ್ನ ಉಯಿಲು !

ನಾನು ಸಾಯುವುದಾದರೆ, ನನ್ನ ಸಿದ್ಧಾಂತಗಳ ಮೇಲೆ ದೃಢವಾಗಿರುವೆ. ದೇವರ ಮುಂದೆ ನಾನು...

ಗಾಝಾದಲ್ಲಿ ಇಸ್ರೇಲ್ ದಾಳಿ: ಐವರು ಅಲ್‌ಜಝೀರಾ ಪತ್ರಕರ್ತರು ಹತ

ಭಾನುವಾರ ಗಾಝಾ ನಗರದಲ್ಲಿ ಅಲ್‌ಜಝೀರಾ ಟೆಂಟ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ...

Download Eedina App Android / iOS

X