ಸಿನಿಮಾ ನಿರ್ದೇಶಕರು, ನಿರ್ಮಾಪಕರು, ನಟರು ಹಾಗೂ ವಿವಿಧ ಕ್ಷೇತ್ರ ಗಣ್ಯರು ಒಳಗೊಂಡು ಬಿಬಿಸಿಯ 100ಕ್ಕೂ ಹೆಚ್ಚು ಸಿಬ್ಬಂದಿ, ಬಿಬಿಸಿಯ ನಿರ್ದೇಶಕ ಟಿಮ್ ಡೇವಿ ಮತ್ತು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಡೆಬೊರಾ ಟರ್ನೆಸ್ ಅವರಿಗೆ ಪತ್ರ ಬರೆದಿದ್ದು, ಬಿಬಿಸಿಯು ಇಸ್ರೇಲ್ ಸರ್ಕಾರ ಮತ್ತು ಸೇನೆಯ ಪರವಾಗಿ “ಪಿಆರ್” (ಸಾರ್ವಜನಿಕ ಸಂಪರ್ಕ) ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಗಾಜಾದ ಮೇಲಿನ ಇಸ್ರೇಲ್‌ನ ದಾಳಿಯ ಕುರಿತಾದ ಬಿಬಿಸಿಯ ವರದಿಗಳು, ಸಂಸ್ಥೆಯ ಸ್ವಂತ ಸಂಪಾದಕೀಯ ಮಾನದಂಡಗಳನ್ನು ಪದೇ ಪದೇ ಉಲ್ಲಂಘಿಸಿವೆ. ಈ ವಿಷಯದಲ್ಲಿ ಬಿಬಿಸಿಯ ಬಹುತೇಕ ವರದಿಗಳು ಪ್ಯಾಲೆಸ್ಟೀನ್ ವಿರೋಧಿ ರೀತಿಯಲ್ಲಿ ರೂಪುಗೊಂಡಿವೆ ಎಂದು ತಿಳಿಸಿದ್ದಾರೆ.
“ನಮ್ಮ ಪ್ರೇಕ್ಷಕರಿಗಾಗಿ ಬಿಬಿಸಿಯು ಉತ್ತಮವಾಗಿ ವರದಿ ಮಾಡಬೇಕು. ಪಕ್ಷಪಾತವಿಲ್ಲದೆ, ಭಯವಿಲ್ಲದೆ ಹಾಗೂ ನಿಷ್ಠೆಯಿಂದ ವರದಿ ಮಾಡುವ ನಮ್ಮ ಮೌಲ್ಯಗಳಿಗೆ ಬದ್ಧವಾಗಬೇಕು” ಎಂಬುದಾಗಿ ಪತ್ರದಲ್ಲಿ ತಿಳಿಸಲಾಗಿದೆ.
ನಟಿ ಮಿರಿಯಮ್ ಮಾರ್ಗೊಲಿಯೆಸ್, ಚಿತ್ರ ನಿರ್ಮಾಪಕ ಮೈಕ್ ಲೀ, ನಟ ಚಾರ್ಲ್ಸ್ ಡಾನ್ಸ್ ಮತ್ತು ಇತಿಹಾಸಕಾರ ವಿಲಿಯಂ ಡಾಲ್‌ರಿಂಪಲ್ ಸೇರಿದಂತೆ ಹಲವರು ಪತ್ರಕ್ಕೆ ಸಹಿ ಹಾಕಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅತ್ತ ಮೋದಿ ಕೃಷಿಕರ ಕತ್ತು ಹಿಸುಕಿದ್ದಾರೆ, ಇತ್ತ ಸಿದ್ದು ಕೈ ಜೋಡಿಸಿದ್ದಾರೆ!
ಬಿಬಿಸಿಯು ತಾನೇ ಪ್ರಸಾರ ಮಾಡಲು ನಿರ್ಧರಿಸಿದ್ದ “ಗಾಜಾ: ಡಾಕ್ಟರ್ಸ್ ಅಂಡರ್ ಅಟ್ಯಾಕ್” ಎಂಬ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡದಿರಲು ನಿರ್ಧರಿಸಿರುವುದನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಸಾಕ್ಷ್ಯಚಿತ್ರವನ್ನು ಈಗ ಚಾನಲ್ 4 ಪ್ರಸಾರ ಮಾಡಲಿದೆ. ಈ ಸಾಕ್ಷ್ಯಚಿತ್ರವು ಪಕ್ಷಪಾತದ ಗ್ರಹಿಕೆಯನ್ನು ಸೃಷ್ಟಿಸಬಹುದು ಹಾಗೂ ಪತ್ರಿಕೋದ್ಯಮದ ಗುಣಮಟ್ಟವನ್ನು ಪ್ರತಿಬಿಂಬಿಸುವುದಿಲ್ಲ” ಎಂದು ತಿರಸ್ಕರಿಸಲಾಗಿದೆ ಪತ್ರದಲ್ಲಿ ತಿಳಿಸಲಾಗಿದೆ.
“ಆದರೆ ಈ ನಿರ್ಧಾರವು ಇಸ್ರೇಲ್ ಸರ್ಕಾರದ ವಿರುದ್ಧ ಟೀಕೆ ಮಾಡುವುದನ್ನು ಕಾಣಿಸಿಕೊಳ್ಳುವ ಭಯದಿಂದ ಬಿಬಿಸಿಯು ನಿಷ್ಕ್ರಿಯವಾಗಿರುವುದನ್ನು ತೋರಿಸುತ್ತದೆ” ಎಂದು ಪತ್ರದಲ್ಲಿ ಹೇಳಲಾಗಿದೆ.
ಇಸ್ರೇಲ್ ಸರ್ಕಾರವನ್ನು ಟೀಕಿಸುವ ಸುದ್ದಿಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಕ್ಕಾಗಿ ಕೆಲವು ಸಿಬ್ಬಂದಿಯ ವಿರುದ್ಧ ಆರೋಪ ಮಾಡಲಾಗಿದೆ.
ಈ ಆರೋಪಗಳಿಗೆ ಬಿಬಿಸಿ ಪ್ರತಿಕ್ರಿಯೆ ನೀಡಿದ್ದು, “ನಮ್ಮ ಸಂಪಾದಕೀಯ ತಂಡಗಳ ನಡುವೆ ಉಂಟಾಗುವ ಚರ್ಚೆಗಳು ಬಿಬಿಸಿಯ ಕಾರ್ಯಪದ್ಧತಿಯ ಪ್ರಮುಖ ಭಾಗವಾಗಿವೆ. ನಾವು ನಿರಂತರವಾಗಿ ನಮ್ಮ ವರದಿಗಳ ಬಗ್ಗೆ ಪರಿಶೀಲನೆ ಮಾಡುತ್ತೇವೆ ಮತ್ತು ಸಿಬ್ಬಂದಿಗಳ ಪ್ರತಿಕ್ರಿಯೆಗಳಿಗೆ ಸ್ಪಂದಿಸುತ್ತೇವೆ. ಇವು ಆಂತರಿಕವಾಗಿ ನಡೆಸಬೇಕಾದ ಮಾತುಕತೆಗಳು. ಅಲ್ಲದೆ ಬಿಬಿಸಿ ತನ್ನ ಗಾಜಾ ಕುರಿತ ವರದಿಗೆ ಸಂಪೂರ್ಣವಾಗಿ ನಿಷ್ಠೆಯನ್ನು ಅನುಸರಿಸುತ್ತಿದೆ” ಎಂದು ಹೇಳಿದೆ.