ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಪರವಾಗಿ ಯುದ್ಧದಲ್ಲಿ ಪಾಲ್ಗೊಂಡಿದ್ದ ಹೈದರಾಬಾದಿನ ಯುವಕರೊಬ್ಬರು ಮೃತಪಟ್ಟಿದ್ದಾರೆ.
ಮೊಹಮ್ಮದ್ ಅಫ್ಸಾನ್ ಮೃತರು. ಜೀವನೋಪಾಯಕ್ಕಾಗಿ ರಷ್ಯಾಕ್ಕೆ ತೆರಳಿದ್ದ ಮೊಹಮ್ಮದ್ ಅಫ್ಸಾನ್ ಅವರನ್ನು ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಪಾಲ್ಗೊಳ್ಳಲು ರಷ್ಯಾ ಸರ್ಕಾರ ಬಲವಂತವಾಗಿ ಕಳಿಸಲಾಗಿತ್ತು. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಅಫ್ಸಾನ್ ಅವರ ಹಿರಿಯ ಸಹೋದರ ಇಮ್ರಾನ್, “ ಏಜೆಂಟ್ ಒಬ್ಬರ ನಂಬಿಕೆಯ ಮೇಲೆ ಭಾಷೆ ಬಾರದ ಅಫ್ಸಾನ್ ಅವರನ್ನು ಒಂದು ವರ್ಷದ ಒಪ್ಪಂದದೊಂದಿಗೆ ನವೆಂಬರ್ 13ರಂದು ಚೆನ್ನೈ ಮತ್ತು ಶಾರ್ಜಾ ಮೂಲಕ ರಷ್ಯಾಕ್ಕೆ ತೆರಳಿದ್ದರು. ಅಲ್ಲಿಗೆ ತೆರಳಿದ ನಂತರ ಅವರನ್ನು ರಷ್ಯಾ ಪರವಾದ ಯುದ್ಧಕ್ಕೆ ನಿಯೋಜಿಸಲಾಗಿತ್ತು. ಈ ಬೆಳವಣಿಗೆಯ ಹೊರತಾಗಿಯೂ ಟ್ರಾವೆಲ್ ಏಜೆಂಟ್ ನಮ್ಮ ಸಹೋದರನನ್ನು ಯುದ್ಧದಲ್ಲಿ ತೊಡಗಿಸುಕೊಳ್ಳುವುದಿಲ್ಲ ಎಂದು ಮಾತು ಕೊಟ್ಟಿದ್ದ ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವಿದೇಶಿ ಪ್ರವಾಸಿ ಮೇಲೆ ಅತ್ಯಾಚಾರ; ʼಅತಿಥಿ ದೇವೋಭವʼ ಎಂದ ದೇಶದಲ್ಲಿ ಇದೆಂಥಾ ಕ್ರೌರ್ಯ!
ಸಂಸದ ಹಾಗೂ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಸುದ್ದಿಗಾರರೊಂದಿಗೆ ಮಾತನಾಡಿ,ಹಲವು ಪ್ರಯತ್ನಗಳ ನಂತರ ಅಂತಿಮವಾಗಿ ಅಫ್ಸಾನ್ ಸಾವಿನ ಸುದ್ದಿ ಇಂದು(ಮಾ.06) ಸಂತ್ರಸ್ತರ ಕುಟುಂಬಕ್ಕೆ ತಲುಪಿದೆ. ಭಾರತೀಯ ರಾಯಭಾರಿ ಅಧಿಕಾರಿಯೊಬ್ಬರು ಅಫ್ಸಾನ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಆದರೆ ಯಾವ ಕಾರಣಕ್ಕಾಗಿ ಮೃತಪಟ್ಟಿದ್ದಾರೆ ಎಂಬ ವಿಷಯ ಸ್ಪಷ್ಟವಾಗಿಲ್ಲ” ಎಂದು ತಿಳಿಸಿದ್ದಾರೆ
ತೆಲಂಗಾಣದ ನಾರಾಯಣಪೇಟೆಯ ಮೊಹಮದ್ ಸುಫೈನ್ ಅವರು ರಷ್ಯಾದಲ್ಲಿ ಸಿಲುಕಿಕೊಂಡಿದ್ದು, ಸುಫೈನ್ ಸಂಕಷ್ಟದಲ್ಲಿರುವ ಬಗ್ಗೆ ಅವರ ಸಹೋದರ ಮಾಹಿತಿ ನೀಡಿದ್ದಾರೆ..
ಮೋಸ ಹಾಗೂ ಕಳ್ಳ ಸಾಗಣೆಯ ಮೂಲಕ ತಮ್ಮ ಮಕ್ಕಳನ್ನು ರಷ್ಯಕ್ಕೆ ಕಳುಹಿಸಲಾಗಿದ್ದು, ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಮಧ್ಯಸ್ಥಿಕೆಯಿಂದ ಭಾರತಕ್ಕೆ ವಾಪಸ್ ಕರೆ ತರಬೇಕೆಂದು ಕುಟುಂಬದ ಸದಸ್ಯರು ಮನವಿ ಮಾಡಿದ್ದಾರೆ.
ರಷ್ಯಾದಲ್ಲಿರುವ ಯುವಕರನ್ನು ವಾಪಸ್ ಕರೆತರಲು ಸಂಸದ ಓವೈಸಿ ಅವರು ಮಾಸ್ಕೋದಲ್ಲಿರುವ ಭಾರತದ ರಾಯಭಾರಿಗೆ ಪತ್ರ ಬರೆದಿದ್ದಾರೆ. ಹತಾಶಗೊಂಡಿರುವ ನಿರುದ್ಯೋಗಿ ಯುವಕರ ಲಾಭ ಪಡೆದುಕೊಂಡು ಟ್ರಾವೆಲ್ ಏಜೆಂಟರು ವಂಚನೆವೆಸಗುತ್ತಿದ್ದು, ಇಂತಹ ನಯವಂಚಕರನ್ನು ಜೈಲಿಗೆ ತಳ್ಳಬೇಕು ಎಂದು ಓವೈಸಿ ಆಗ್ರಹಿಸಿದ್ದಾರೆ.
