ಕಮಲಾ ಹ್ಯಾರಿಸ್ ವಿರುದ್ಧ ವರ್ಣಭೇದ ನೀತಿ ಅಸ್ತ್ರ ಪ್ರಯೋಗಿಸಿದ ಟ್ರಂಪ್‌: ಸೋಲಿನ ಸೂಚನೆಯೇ?

Date:

Advertisements

ಮೂರು ತಿಂಗಳು ಬಾಕಿಯಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣಾ ಪ್ರಚಾರ ಬಿರುಸುಗೊಂಡಿದ್ದು, ಬೈಡನ್ ಬದಲಿಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್ ಅವರ ಪರ ಒಲವು ಹೆಚ್ಚಿರುವುದು ಜನಾಭಿಪ್ರಾಯ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ತಮ್ಮ ಸೋಲು ಖಚಿತ ಎಂದು ತಿಳಿದುಕೊಂಡಿರುವ ಡೊನಾಲ್ಡ್ ಟ್ರಂಪ್ ಕಮಲಾ ಹ್ಯಾರಿಸ್‌ ವಿರುದ್ಧ ವೈಯಕ್ತಿಕ ಮಟ್ಟದ ಜೊತೆ ಜನಾಂಗೀಯ ನಿಂದನೆಯನ್ನು ಶುರು ಮಾಡಿದ್ದಾರೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಆಕೆ ಗೆದ್ದರೆ ಕೆಟ್ಟ ಅಧ್ಯಕ್ಷೆಯಾಗುತ್ತಾರೆ ಎಂದು ಟ್ರಂಪ್‌ ಹೇಳಿರುವುದು ಕೂಡ ಸೋಲಿನ ಮುನ್ಸೂಚನೆಯಾಗಿದೆ.

ಪ್ರಜಾಪ್ರಭುತ್ವ ರಾಷ್ಟ್ರಗಳ ಪೈಕಿ ಮುಂಚೂಣಿಯಲ್ಲಿರುವ ಹಾಗೂ ವಿಶ್ವದ ಪ್ರಬಲ ರಾಷ್ಟ್ರವಾಗಿರುವ ಅಮೆರಿಕದಲ್ಲಿ ಈ ವರ್ಷದ ನವೆಂಬರ್‌ 5 ರಂದು ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಈಗಾಗಲೇ ಪ್ರಚಾರದ ಕಣ ರಂಗೇರಿದೆ. ಹಾಲಿ ಅಧ್ಯಕ್ಷ ಜೋ ಬೈಡನ್‌ ಕಣದಿಂದ ಹಿಂದೆ ಸರಿದಿರುವುದರಿಂದ ಡೆಮಾಕ್ರಟಿಕ್ ಪಕ್ಷದಿಂದ ಉಪಾಧ್ಯಕ್ಷರಾದ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಉಮೇದುವಾರಿಕೆ ಸಲ್ಲಿಸಿದ್ದರೆ, ರಿಪಬ್ಲಿಕನ್‌ ಪಕ್ಷದಿಂದ ನಿರಂಕುಶವಾದಿ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಸ್ಪರ್ಧಿಸಿದ್ದಾರೆ. ಬಲಪಂಥೀಯ ಸಿದ್ಧಾಂತದಲ್ಲಿ ಉಗ್ರ ನಂಬಿಕೆಯಿಟ್ಟಿರುವ ಟ್ರಂಪ್‌ ವಿರುದ್ಧ ಅಮೆರಿಕದ ಸಂಸತ್ತಿನ(ಕ್ಯಾಪಿಟಲ್) ಮೇಲೆ ದಾಳಿಗೆ ಸಂಚು ಸೇರಿದಂತೆ ಹಲವು ಪ್ರಕರಣಗಳು ಬಾಕಿಯಿವೆ. 2020ರ ಚುನಾವಣೆಯಲ್ಲಿ ಬೈಡನ್‌ ವಿರುದ್ಧ ಸೋತ ಟ್ರಂಪ್‌ ಕಳೆದ 4 ವರ್ಷಗಳಿಂದ ಡೆಮಾಕ್ರಟಿಕ್ ಪಕ್ಷದ ನಾಯಕರ ವಿರುದ್ಧ ಕೆಂಡ ಕಾರುತ್ತಲೇ ಇದ್ದಾರೆ. ಈಗ ಸ್ಪರ್ಧಿಸಿರುವ ಕಮಲಾ ಹ್ಯಾರಿಸ್‌ ವಿರುದ್ಧ ಕೂಡ ಮಹಿಳೆ ಎಂಬುದನ್ನು ಮರೆತು ಅತ್ಯಂತ ಕೆಟ್ಟ ಪದಗಳಲ್ಲಿ ವಾಗ್ದಾಳಿ ನಡೆಸುತ್ತಿದ್ದಾರೆ.

ವಿಶ್ವವು ಗಮನಿಸುವ ದೇಶದ ಪ್ರತಿಷ್ಠಿತ ಚುನಾವಣೆ ಎಂಬುದನ್ನು ಅರಿಯದೆ ವೈಯಕ್ತಿಕವಾಗಿ ನಿಂದಿಸುತ್ತಿದ್ದಾರೆ. ಟ್ರಂಪ್‌ ಇತ್ತೀಚಿನ ವಾಗ್ದಾಳಿಗಳಲ್ಲಿ ಕಮಲಾ ಹ್ಯಾರಿಸ್‌ ಬಗ್ಗೆ ಟೈಮ್‌ ಮ್ಯಾಗಜೀನ್‌ ಭಾವಚಿತ್ರದ ಹೇಳಿಕೆಗಳಂತೂ ತೀರ ಅಸಹ್ಯ ಹುಟ್ಟಿಸುವಂತಿದ್ದು, ವರ್ಣಭೇದ ನೀತಿಯನ್ನು ಬಲವಾಗಿ ಪ್ರೋತ್ಸಾಹಿಸುವ ರೀತಿಯಲ್ಲಿ ಮಾತನಾಡಿದ್ದಾರೆ. ”ನಾನು ಹ್ಯಾರಿಸ್ ಅವರಿಗಿಂತ ಚೆನ್ನಾಗಿ ಕಾಣುತ್ತೇನೆ. ಮ್ಯಾಗಜೀನ್‌ ಮಾಧ್ಯಮದವರ ಬಳಿ ಹ್ಯಾರಿಸ್ ಅವರ ಒಂದು ಚಿತ್ರವೂ ಇರದ ಕಾರಣ ಅವರು ಚಿತ್ರಕಲಾವಿದನನ್ನು ನೇಮಿಸಿಕೊಂಡು ಊಹಿಸಲಾಗದಂತ ಅವರ ಚಿತ್ರವನ್ನು ಬಿಡಿಸಿಕೊಂಡಿದ್ದಾರೆ. ನಂಬಲಾಗದ ಈ ಕಲಾವಿದ ಅವರ ಭಾವಚಿತ್ರವನ್ನು ಚಿತ್ರಿಸಿದ್ದಾರೆ. ಕಮಲಾ ಅವರು ನನ್ನ ಪತ್ನಿ ಮೆಲಾನಿಯಾ ಟ್ರಂಪ್‌ನಂತೆ ಕಾಣುತ್ತಿದ್ದಾರೆ. ನಾನು ಆಕೆಗಿಂತ ಸುಂದರವಾಗಿದ್ದೇನೆ, ಹ್ಯಾರಿಸ್‌ ಅವರು ಭಾರತೀಯರೋ? ಕಪ್ಪುವರ್ಣೀಯರೋ? ನನಗೆ ಗೊತ್ತಿಲ್ಲ” ಎಂಬಂತಹ ಅಸಭ್ಯ, ಜನಾಂಗೀಯ ಪದಗಳನ್ನು ಬಳಸಿ ವಾಗ್ದಾಳಿ ನಡೆಸುತ್ತಿರುವುದು ನಿಜಕ್ಕೂ ಕಳವಳಕಾರಿಯಾಗಿ ಪರಿಣಮಿಸಿದೆ.

Advertisements

ಟ್ರಂಪ್‌ ಅವರ ಈ ಉದ್ಧಟತನದ ಹೇಳಿಕೆಯು ಅಮೆರಿಕದ ಮತದಾರರನ್ನು ಇಬ್ಬಾಗಿಸುವ ಹಾಗೂ ಅಭ್ಯರ್ಥಿಗಳಿಗೆ ಅಗೌರವ ತೋರುವ ಹಳೆಯ ತಂತ್ರಗಳಾಗಿವೆ. ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಆಗುವವರೆಗೂ ಕಮಲಾ ಹ್ಯಾರಿಸ್ ಭಾರತೀಯ ಮೂಲ ಎಂದು ಒತ್ತಿ ಹೇಳುತ್ತಿದ್ದ ಟ್ರಂಪ್‌ ಈಗ ಜನಾಭಿಪ್ರಾಯ ಹಾಗೂ ಪ್ರಚಾರದಲ್ಲಿ ಮುನ್ನಡೆ ಸಾಧಿಸುತ್ತಿರುವುದರಿಂದ ಇದ್ದಕ್ಕಿದ್ದಂತೆ ಕಪ್ಪುವರ್ಣೀಯರೆಂದು ಹೇಳುತ್ತಿರುವುದು ಮತದಾರರಲ್ಲಿ ಜನಾಂಗೀಯ ಭಾವನೆಯಲ್ಲಿ ಒಡಕು ಉಂಟುಮಾಡುತ್ತಿರುವುದೇ ಹೊರತು ಮತ್ತೇನಿಲ್ಲ.

59 ವರ್ಷದ ಕಮಲಾ ಹ್ಯಾರಿಸ್ ತಾಯಿ ಶ್ಯಾಮಲಾ ಗೋಪಾಲನ್‌ ಅವರು ಭಾರತದ ಚೆನ್ನೈ ಮೂಲದವರಾಗಿದ್ದು, ತಂದೆ ಡೊನಾಲ್ಡ್‌ ಜೆ ಹ್ಯಾರಿಸ್ ಜಮೈಕಾದವರು. ಉದ್ಯೋಗದ ನಿಮಿತ್ತ ಅಮೆರಿಕದಲ್ಲಿ ಬಂದು ನೆಲೆಸಿದ್ದರು. ಕ್ಯಾಲಿಫೋರ್ನಿಯಾದಲ್ಲಿ ಜನಿಸಿದ ಕಮಲಾ ಹ್ಯಾರಿಸ್, ವಾಷಿಂಗ್ಟನ್‌ನಲ್ಲಿ ಕಪ್ಪುವರ್ಣಿಯರಿಗಾಗಿಯೇ ಇರುವ ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಸ್ಕಾನ್‌ಫ್ರಾನ್ಸಿಸ್ಕೋದಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಲಾ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಕಮಲಾ, ಕಪ್ಪುವರ್ಣೀಯ ಕಾನೂನು ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾಗಿದ್ದರು.  

ಮೂರು ತಿಂಗಳು ಬಾಕಿಯಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣಾ ಪ್ರಚಾರ ಬಿರುಸುಗೊಂಡಿದ್ದು, ಬೈಡನ್ ಬದಲಿಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್ ಅವರ ಪರ ಒಲವು ಹೆಚ್ಚಿರುವುದು ಜನಾಭಿಪ್ರಾಯ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ತಮ್ಮ ಸೋಲು ಖಚಿತ ಎಂದು ತಿಳಿದುಕೊಂಡಿರುವ ಡೊನಾಲ್ಡ್ ಟ್ರಂಪ್ ಕಮಲಾ ಹ್ಯಾರಿಸ್‌ ವಿರುದ್ಧ ವೈಯಕ್ತಿಕ ಮಟ್ಟದ ಜೊತೆ ಜನಾಂಗೀಯ ನಿಂದನೆಯನ್ನು ಶುರು ಮಾಡಿದ್ದಾರೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಆಕೆ ಗೆದ್ದರೆ ಕೆಟ್ಟ ಅಧ್ಯಕ್ಷೆಯಾಗುತ್ತಾರೆ ಎಂದು ಟ್ರಂಪ್‌ ಹೇಳಿರುವುದು ಕೂಡ ಸೋಲಿನ ಮುನ್ಸೂಚನೆಯಾಗಿದೆ. ಕಮಲಾ ಹೆಚ್ಚು ಮೂಲಭೂತವಾದಿ, ಎಡಪಂಥೀಯ ಎಂದು ಹೇಳುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಗ್ರ ಬಲಪಂಥೀಯವಾದಿ. ಅಧಿಕಾರಿಕ್ಕಾಗಿ ತಾನು ಏನು ಬೇಕಾದರೂ ಮಾಡಬಲ್ಲರು ಎಂಬುದು ಈತನ 4 ವರ್ಷಗಳ ಅಧಿಕಾರಾವಧಿಯಲ್ಲಿ ಜಗತ್ತಿಗೆ ಪರಿಚಯವಾಗಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ನಾಗರಿಕ ಸಮಾಜ

ಟ್ರಂಪ್‌ ಅವರ ವೈಯಕ್ತಿಕ ಮಟ್ಟದ ವಾಗ್ದಾಳಿಗಳಿಗೆ ಕಮಲಾ ಹ್ಯಾರಿಸ್ ಕೂಡ ಎದೆಗುಂದಿಲ್ಲ. ಪ್ರತಿ ಪ್ರಚಾರ ಸಭೆಯಲ್ಲೂ ಕಮಲಾ ಪರವಾಗಿ ಜನಾಭಿಪ್ರಾಯಗಳು ಹೆಚ್ಚಾಗುತ್ತಿದೆ. ತಮ್ಮ ಸಾರ್ವಜನಿಕ ಜೀವನದಲ್ಲಿ ಜಿಲ್ಲಾ ಆಟಾರ್ನಿ, ಆಟಾರ್ನಿ ಜನರಲ್ ಮತ್ತು ಕೋರ್ಟ್‌ರೂಮ್ ಪ್ರಾಸಿಕ್ಯೂಟರ್ ಮುಂತಾದ ಹಲವು ಹುದ್ದೆಗಳನ್ನು ನಿಭಾಯಿಸಿದ್ದಾರೆ. ಟ್ರಂಪ್ ರೀತಿಯ ಕ್ಷುಲ್ಲಕ ಮನಸ್ಸಿನ ನೂರಾರು ಮಂದಿಯ ಸವಾಲುಗಳನ್ನು ಎದುರಿಸಿದ್ದಾರೆ. ಭಾರತ ಸಂಜಾತರಾದ ಅಮೆರಿಕ ಅಧ್ಯಕ್ಷೆ ಕಮಲಾ ಅವರು ಅಮೆರಿಕದವರಿಗೆ ಮಾತ್ರವಲ್ಲದೆ ಅಮೆರಿಕದಲ್ಲಿ ನೆಲೆಸಿರುವ 44 ಲಕ್ಷ ಭಾರತೀಯ ಮೂಲದ ಅಮೆರಿಕನ್ನರ ಭರವಸೆ ಮತ್ತು ಪ್ರಾತಿನಿಧ್ಯದ ಸಂಕೇತವಾಗಿದ್ದಾರೆ.

ಅಮೆರಿಕದಲ್ಲಿ ಪ್ರಭಾವಶಾಲಿಯಾಗಿರುವ ಭಾರತ ಮೂಲದ ಅಮೆರಿಕನ್ನರ ಸಮುದಾಯವು ಅಧ್ಯಕ್ಷೀಯ ಚುನಾವಣೆಯಲ್ಲಿ ವಿವಿಧ ರಾಜ್ಯಗಳ ಅಭ್ಯರ್ಥಿಗಳ ಗೆಲುವು ಮತ್ತು ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ. ಟ್ರಂಪ್‌ ಅವರಂತಹ ವಿಲಕ್ಷಣ ಮನಸ್ಥಿತಿಯ ಕೆಲವರನ್ನು ಹೊರತುಪಡಿಸಿ ಎಲ್ಲ ರೀತಿಯ ಮತದಾರರಿಂದ ಕಮಲಾ ಅವರಿಗೆ ಬೆಂಬಲ ದೊರೆಯುತ್ತಿದೆ. ಅಲ್ಲದೆ ಅಮೆರಿಕದಲ್ಲಿ ಪ್ರಜಾಪ್ರಭುತ್ವ ಬಲಪಡಿಸುವುದು, ಅಮೆರಿಕನ್ನರಿಗೆ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸುವುದು, ಹಣದುಬ್ಬರ ನಿವಾರಣೆ ಸೇರಿ ಅನೇಕ ಸವಾಲುಗಳಿವೆ. ಇವೆಲ್ಲವುಗಳು ಕಮಲಾ ಹ್ಯಾರಿಸ್‌ ಅವರಿಂದ ಸಾಧ್ಯವಿದೆ. ಅಲ್ಲದೆ ಟ್ರಂಪ್‌ ಗೆದ್ದರೆ ಪ್ರಜಾಪ್ರಭುತ್ವಕ್ಕೆ ಅಪಾಯವಾಗಲಿದ್ದಾರೆ ಎಂದು ರಿಪಬ್ಲಿಕ್‌ ಪ್ರಮುಖ ನಾಯಕರುಗಳೆ ಹೇಳುತ್ತಿದ್ದಾರೆ. ಟ್ರಂಪ್‌ ಅವರ ಚುನಾವಣಾ ಪ್ರಣಾಳಿಕೆಯಲ್ಲಿ, ದುಡಿಯುವ ಕುಟುಂಬಗಳ ಮೇಲೆ ಹೆಚ್ಚಿನ ತೆರಿಗೆ, ಸಾರ್ವಜನಿಕರಿಗೆ ಕೈಗೆಟಕುವ ಆರೈಕೆ ಕಾಯ್ದೆಯ ಸ್ಥಗಿತ ಸೇರಿದಂತೆ ಅಪಾಯಕಾರಿ ಯೋಜನೆಗಳಿವೆ.

ಟ್ರಂಪ್‌ ಸೋಲು ಎಂದು ಹೇಳುತ್ತಿರುವ ಸಮೀಕ್ಷೆಗಳು

ನ್ಯೂಯಾರ್ಕ್ ಟೈಮ್ಸ್/ಸಿಯನ್ನಾ ಮುಂತಾದ ಸಮೀಕ್ಷೆಗಳ ಪ್ರಕಾರ ಹಲವು ರಾಜ್ಯಗಳಲ್ಲಿ ಟ್ರಂಪ್‌ಗಿಂತ ಶೇಕಡವಾರು ಮತದಾನದಲ್ಲಿ ಕಮಲಾ ಹ್ಯಾರಿಸ್‌ ಮುಂದಿದ್ದಾರೆ. ಇತ್ತೀಚಿನ ಸಮೀಕ್ಷೆಗಳು ಕೂಡ ಮತ್ತೊಮ್ಮೆ ಡೊನಾಲ್ಡ್ ಟ್ರಂಪ್ ಸೋಲು ಗ್ಯಾರಂಟಿ ಎಂಬ ಭವಿಷ್ಯ ನುಡಿಯುತ್ತಿವೆ. ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅಧಿಕಾರದಿಂದ ಕೆಳಗೆ ಇಳಿದಾಗ ಡೊನಾಲ್ಡ್ ಟ್ರಂಪ್ ಪ್ರಮುಖವಾಗಿ ಅಮೆರಿಕವನ್ನು ದೊಡ್ಡ ಸಂಕಷ್ಟಗಳಿಂದ ಪಾರು ಮಾಡಬೇಕಿತ್ತು. ಆದರೆ ಟ್ರಂಪ್‌ ಯಾವ ಮಹತ್ವದ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲಿಲ್ಲ. ಅಮೆರಿಕವು ಮೊದಲಿಗಿಂತ ಹೀನಾಯ ಪರಿಸ್ಥಿತಿ ತಲುಪಿತ್ತು. ಕೋವಿಡ್ ಸಮಯದಲ್ಲಿ ಲಕ್ಷಾಂತರ ಜನರು ಸೂಕ್ತ ಚಿಕಿತ್ಸೆ, ಔಷಧ ಸಿಗದೆ ಪ್ರಾಣ ಕಳೆದುಕೊಂಡಿದ್ದರು. ಇವೆಲ್ಲ ಬೆಳವಣಿಗೆಗಳು ಅಮೆರಿಕದ ಕೋಟ್ಯಂತರ ಜನರನ್ನು ಸಂಕಷ್ಟದ ಸರಮಾಲೆಗೆ ನೂಕಿತು. ಇವೆಲ್ಲ ಕಾರಣಗಳು ಡೊನಾಲ್ಡ್ ಟ್ರಂಪ್ ಅವರನ್ನು 2020ರ ಅಧ್ಯಕ್ಷೀಯ ಚುನಾವಣೆಯಲ್ಲಿಅಮೆರಿಕದ ಜನರು ಸೋಲಿನ ರುಚಿ ತೋರಿಸಿದರು. 2024 ರಲ್ಲೂ ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ದಟ್ಟವಾಗಿದೆ ಎನ್ನುತ್ತಿವೆ ಸಮೀಕ್ಷೆಗಳು. ಹೀಗಾಗಿ ಕಮಲಾ ಹ್ಯಾರಿಸ್‌ ವಿರುದ್ಧ ಜನಾಂಗೀಯ ನಿಂದನೆಯಂಥ ಹೊಸ ಅಸ್ತ್ರಗಳನ್ನು ರಿಪಬ್ಲಿಕನ್‌ ಪಕ್ಷದ ನಾಯಕರು ತಮ್ಮ ಹರಕುಬಾಯಿಯಿಂದ ಪ್ರಯೋಗಿಸುತ್ತಿದ್ದಾರೆ. ಇದು ಡೊನಾಲ್ಡ್‌ ಟ್ರಂಪ್‌ ಅವನತಿಯ ಹಾದಿಯಾಗಲಿದೆ.

ಅಮೆರಿಕದ ಸಂಸತ್ತಿನ ಮೇಲೆ ದಾಳಿ ಮಾಡಿಸಿದ್ದ ಟ್ರಂಪ್

ಅಮೆರಿಕದ ಪ್ರಜಾಪ್ರಭುತ್ವದಲ್ಲಿ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿರುವ ಕ್ಯಾಪಿಟಲ್ ಹಿಲ್ಸ್‌ಗೆ ಮಹತ್ವದ ಸ್ಥಾನವಿದೆ. “ಯುಎಸ್ ಕ್ಯಾಪಿಟಲ್” ಎಂಬ ಹೆಸರಿನ ಸಂಸತ್ ಭವನದ ಜತೆಗೆ ಅಲ್ಲಿನ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಕ್ಕೆ ಸಂಬಂಧಿಸಿದ ಹಲವು ಕಟ್ಟಡಗಳು ಇಲ್ಲಿವೆ. 2020ರ ಅಧ್ಯಕ್ಷೀಯ ಚುನಾವಣೆಯ ನಂತರ ಈ ಕಟ್ಟಡದ ಮೇಲೆ ದಾಳಿ ನಡೆದಿತ್ತು. ಚುನಾವಣೆಯಲ್ಲಿ ತಮ್ಮ ಸೋಲು ಖಚಿತವೆಂದು ತಿಳಿದ ನಂತರ ಕ್ಯಾಪಿಟಲ್ ಕಟ್ಟಡದ ಮೇಲೆ ಡೊನಾಲ್ಡ್ ಟ್ರಂಪ್‌ ದಾಳಿ ನಡೆಸಲು ತಮ್ಮ ರಿಪಬ್ಲಿಕನ್‌ ಪಕ್ಷದ ಕಾರ್ಯಕರ್ತರಿಗೆ ಪ್ರಚೋದಿಸಿದ್ದರು. ಆಗ 2021ರ ಜನವರಿ 6ರಂದು ಟ್ರಂಪ್‌ ಬೆಂಬಲಿಗರು ಕ್ಯಾಪಿಟಲ್‌ ಕಟ್ಟಡದ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯನ್ನು ಅಮೆರಿಕದ ಪ್ರಜಾಪ್ರಭುತ್ವದ ಅತ್ಮದ ಮೇಲೆ ನಡೆದ ದಾಳಿ ಎಂದೇ ಬಿಂಬಿತವಾಗಿವೆ.

ಜಾರ್ಜಿಯಾದಲ್ಲಿ ನಡೆದ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಇಬ್ಬರು ಅಮೆರಿಕದ ಸೆನೆಟ್‌ಗೆ ಆರಿಸಿ ಬಂದಿದ್ದರು. ಸೆನೆಟ್‌ನಲ್ಲಿ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷದ ಬಲಾಬಲ ಸಮವಾಗಿತ್ತು. ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್ ಅವರ ಮತವೂ ಸೇರಿ ಡೆಮಾಕ್ರಟಿಕ್ ಪಕ್ಷಕ್ಕೆ ಬಹುಮತ ದೊರೆತ್ತಿತ್ತು. ಈ ಬೆಳವಣಿಗೆಯ ನಂತರ ಅಮೆರಿಕದ ಸಂಸತ್ತು ಬೈಡನ್ ಅವರ ಗೆಲುವನ್ನು ಅನುಮೋದಿಸಲು ಚಾಲನೆ ನೀಡಿತ್ತು.

ಅಮೆರಿಕ ಪ್ರಜಾಪ್ರಭುತ್ವದಲ್ಲಿ ಚುನಾವಣೆಯ ಬಳಿಕ ಹಾಲಿ ಅಧ್ಯಕ್ಷರು ನಿಯೋಜಿತ ಅಧ್ಯಕ್ಷರಿಗೆ ಅಧಿಕಾರವನ್ನು ಶಾಂತಿಯುತವಾಗಿ ಹಸ್ತಾಂತರಿಸುವುದು ಮಹತ್ವದ ಘಟ್ಟವಾಗಿದೆ. 1963ರ ಕಾಯ್ದೆ ಮತ್ತು ತಿದ್ದುಪಡಿಗಳು ಇದಕ್ಕೆ ಸ್ಪಷ್ಟ ನಿಯಮಾವಳಿಗಳನ್ನು ರೂಪಿಸಿವೆ. ಆದರೆ ಡೊನಾಲ್ಡ್‌ ಟ್ರಂಪ್‌ ಈ ಚುನಾವಣೆಯಲ್ಲಿ ತಮಗೆ ಮೋಸವಾಗಿದೆ. ಯಾವುದೇ ಕಾರಣಕ್ಕೂ ತಾವು ಅಧಿಕಾರ ಬಿಟ್ಟುಕೊಡುವುದಿಲ್ಲ ಎಂದು ನಿರಂತರವಾಗಿ ಹೇಳಿದ ಪರಿಣಾಮವಾಗಿ, ಟ್ರಂಪ್ ಬೆಂಬಲಿಗರು ಕ್ಯಾಪಿಟಲ್ ಕಟ್ಟಡದ ಮೇಲೆ ದಾಳಿ ನಡೆಸಿದ್ದರು. ದಾಳಿಯಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಸೇರಿ ಐವರು ಮೃತಪಟ್ಟಿದ್ದರು. ಕ್ಯಾಪಿಟಲ್ ಕಟ್ಟಡದ ಮೇಲೆ ಈವರೆಗೆ ಹಲವು ಬಾರಿ ದಾಳಿಯಾಗಿದೆ. ಆದರೆ 2020ರಲ್ಲಿ ನಡೆದ ದಾಳಿ ಅತ್ಯಂತ ದೊಡ್ಡದಾಳಿ ಎನ್ನಲಾಗಿದೆ. ಈ ಪ್ರಕರಣ ಕೂಡ ನ್ಯಾಯಾಲಯದಲ್ಲಿದ್ದು, ಚುನಾವಣೆಗೂ ಮುನ್ನ ತೀರ್ಪು ಪ್ರಕಟವಾದರೆ ಕಮಲಾ ಹ್ಯಾರಿಸ್‌ ಗೆಲುವು ಮತ್ತಷ್ಟು ಸುಲಭವಾಗಲಿದೆ.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಝಾದಲ್ಲಿ ಕದನ ವಿರಾಮ ಪ್ರಸ್ತಾಪಕ್ಕೆ ಒಪ್ಪಿಕೊಂಡ ಹಮಾಸ್: ವರದಿ

ಗಾಝಾದ ಮೇಲೆ ಇಸ್ರೇಲ್ ದಾಳಿ ಕೊನೆಗೊಳಿಸುವ ನಿಟ್ಟಿನಲ್ಲಿ ಕದನ ವಿರಾಮ ಪ್ರಸ್ತಾಪದ...

ದಾವಣಗೆರೆ | ಗಣೇಶ ಚತುರ್ಥಿ, ಈದ್ ಮಿಲಾದ್ ಹಬ್ಬ ಸಾಂಪ್ರದಾಯಿಕ, ಸೌಹಾರ್ಧತೆಯಿಂದ ಆಚರಿಸಿ; ಡಿಸಿ ಜಿ.ಎಂ.ಗಂಗಾಧರಸ್ವಾಮಿ

"ಕಲೆ ಸಾಂಸ್ಕೃತಿಕತೆಗೆ ಹೆಸರುವಾಸಿಯಾದ ದೇಶದಲ್ಲಿ ಪರಿಸರ ಸ್ನೇಹಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪರಿಸರ...

ಚುನಾವಣೆ ಆಯೋಗದ ಪತ್ರಿಕಾಗೋಷ್ಠಿ ಆರೋಪಗಳಿಗೆ ಉತ್ತರ ಕೊಟ್ಟಿತೆ? ಉಳಿದಿರುವ ಪ್ರಶ್ನೆಗಳೇನು?

ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ಆಯೋಗದ ಈ ನಡೆಯನ್ನು "ಸಂವಿಧಾನಕ್ಕೆ ಅಪಮಾನ"...

ಚಿತ್ರದುರ್ಗದಲ್ಲಿ ವಿಶೇಷವಾಗಿ ಸ್ವಾತಂತ್ರ್ಯ ದಿನಾಚರಣೆ: ಕುರಿಗಾಹಿಯಿಂದ ಧ್ವಜಾರೋಹಣ

ಇಡೀ ದೇಶಾದ್ಯಂತ 79ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತದೆ. ಶಾಲೆಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ, ರಾಜಕೀಯ...

Download Eedina App Android / iOS

X