ಭಾರತೀಯ ಮೂಲದ ಕೇರಳದಿಂದ ವಲಸೆ ಹೋಗಿದ್ದ ದಂಪತಿ ಹಾಗೂ ಅವರ ಇಬ್ಬರು ಅವಳಿ ಮಕ್ಕಳು ಅಮೆರಿಕ ದ ಕ್ಯಾಲಿಫೋರ್ನಿಯಾದ ತಮ್ಮ ಮನೆಯಲ್ಲಿ ಕೊಲೆಯ ರೀತಿ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.
ಮೃತರನ್ನು ಆನಂದ್ ಸುಜಿತ್ ಹೇನ್ರಿ (42), ಆತನ ಪತ್ನಿ ಅಲೈಸ್ ಪ್ರಿಯಾಂಕಾ (40) ಹಾಗೂ ಇವರ 4 ವರ್ಷದ ಮಕ್ಕಳಾದ ನೋಹ್ ಮತ್ತು ನೇಯ್‌ತನ್ ಎಂದು ಗುರುತಿಸಲಾಗಿದೆ.
ಮೃತರ ಮನೆಗೆ ಸಂಬಂಧಿಕರೊಬ್ಬರು ಯೋಗಕ್ಷೇಮ ವಿಚಾರಿಸಲು ಕರೆ ಮಾಡಿದಾಗ ಯಾರೊಬ್ಬರೂ ಕರೆ ಸ್ವೀಕರಿಸದ ನಂತರ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಂಪತಿ ಆನಂದ್ ಮತ್ತು ಅಲೈಸ್ ಅವರ ಮೃತದೇಹಗಳು ಸ್ನಾನದ ಕೋಣೆಯ ಒಳಗೆ ಗುಂಡಿನ ಗಾಯದೊಂದಿಗೆ ಪತ್ತೆಯಾಗಿವೆ. ಮಕ್ಕಳ ಮೃತದೇಹಗಳು ಮಲಗುವ ಕೋಣೆಯಲ್ಲಿ ಬಿದ್ದಿದ್ದವು. ಸಾವಿನ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ.
”ಅಧಿಕಾರಿಗಳು ಬಂದ ನಂತರವೂ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಅಧಿಕಾರಿಗಳು ಮನೆಯ ಸುತ್ತಲೂ ಪರಿಶೋಧಿಸಿದ್ದು, ಬಲವಂತವಾಗಿ ಮನೆಯ ಒಳಗೆ ಪ್ರವೇಶಿಸಿರುವ ಕುರುಹುಗಳು ಪತ್ತೆಯಾಗಿಲ್ಲ.ಕಿಟಕಿ ತೆರದಿತ್ತು. ಅಧಿಕಾರಿಗಳು ನೋಡಿದಾಗ ನಾಲ್ವರು ಮೃತಪಟ್ಟಿದ್ದರು” ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾರ್ಪೊರೇಟ್‌ಗೆ ರೆಡ್ ಕಾರ್ಪೆಟ್, ರೈತರಿಗೆ ಮುಳ್ಳಿನ ಬೇಲಿ- ಇದು ಮೋದಿ ಶೈಲಿ
”ಗುಂಡುಗಳು ತುಂಬಿದ್ದ 9ಎಂಎಂ ಪಿಸ್ತೂಲ್ ಅನ್ನು ಸ್ನಾನದ ಕೋಣೆಯಿಂದ ವಶಪಡಿಸಿಕೊಳ್ಳಲಾಗಿದೆ. ಗನ್‌ಅನ್ನು 2020ರಲ್ಲಿ 1.1 ಮಿಲಿಯನ್ ಡಾಲರ್ ಕೊಟ್ಟು ದಂಪತಿಗಳು ಖರೀದಿಸಿದ್ದಾರೆ ಎಂದು ದಾಖಲೆಗಳು ಹೇಳುತ್ತವೆ” ಎಂದು ಪೊಲೀಸರು ಹೇಳಿದ್ದಾರೆ.
”ನಾವು ಮಾಹಿತಿ ಆಧರಿಸಿದ ಸದ್ಯದ ಪರಿಸ್ಥಿತಿಯಂತೆ ಸಾರ್ವಜನಿಕರಿಗೆ ತೊಂದರೆಯಿರದ ಘಟನೆಯಂತೆ ಕಂಡುಬರುತ್ತದೆ. ಏಕೆಂದರೆ ಜವಾಬ್ದಾರಿಯುತ ವ್ಯಕ್ತಿಯೊಬ್ಬರು ಮನೆಯಲ್ಲಿ ನೆಲೆಸಿದ್ದರು” ಎಂದು ಪೊಲೀಸ್ ಅಧಿಕಾರಿ ಸಾನ್ ಮಟೇವೊ ತಿಳಿಸಿದ್ದಾರೆ.
ಆರಂಭಿಕ ಮೌಲ್ಯಮಾಪನದ ವರದಿಯಂತೆ ಕೊಲೆ-ಆತ್ಮಹತ್ಯೆ ಸನ್ನಿವೇಶದಂತೆ ಕಂಡು ಬರುತ್ತದೆ. ಆದರೂ ಬೇರೆ ಸಾಧ್ಯತೆಗಳನ್ನು ಪೊಲೀಸರು ತಳ್ಳಿಹಾಕಿಲ್ಲ.
ಕೇರಳದಿಂದ ವಲಸೆ ಬಂದಿದ್ದ ಕುಟುಂಬ ಕಳೆದ 9 ವರ್ಷದಿಂದ ಅಮೆರಿಕದಲ್ಲಿ ನೆಲಸಿದೆ. ಆನಂದ್ ಸಾಫ್ಟ್‌ವೇರ್ ಇಂಜಿನಿಯರ್, ಅಲೈಸ್ ಅವರು ಸೀನಿಯರ್ ಅನಲಿಸ್ಟ್ ಆಗಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ನ್ಯೂಜರ್ಸಿಯಿಂದ ಸಾನ್ ಮಟಾವೊ ಕೌಂಟಿಗೆ ಮರು ವಾಸ್ತವ್ಯ ಬದಲಿಸಿದ್ದರು. ಕುಟುಂಬ, ಸ್ನೇಹಿತರು, ಸಹದ್ಯೋಗಿಗಳೊಂದಿಗೆ ಚೆನ್ನಾಗಿ ಹೊಂದಿಕೊಂಡಿದ್ದರು ಎಂದು ಹೇಳಲಾಗಿದೆ.
ನ್ಯಾಯಾಲಯದ ದಾಖಲೆಗಳಂತೆ ಆನಂದ್ ಅವರು 2016ರ ಡಿಸೆಂಬರ್‌ನಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ಮೂಲಕ ಪ್ರತ್ಯೇಕತೆಗೆ ಅರ್ಜಿ ಸಲ್ಲಿಸಿರಲಿಲ್ಲ. ಸ್ಥಳೀಯ ಅಪರಾಧ ತನಿಖಾ ಸಂಸ್ಥೆ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಪ್ರಕರಣದ ಉಸ್ತುವಾರಿ ವಹಿಸಿಕೊಂಡಿದೆ. ಕಳೆದ ಒಂದು ತಿಂಗಳಲ್ಲಿ ಭಾರತೀಯ ಮೂಲದ ಏಳು ಮಂದಿ ಅಮೆರಿಕದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.