ಭಾರತೀಯ ಟ್ರಾವೆಲ್ ಏಜೆಂಟ್‌ಗಳಿಗೆ ಟ್ರಂಪ್‌ ಸರ್ಕಾರದ ವಿಸಾ ನಿರ್ಬಂಧ; ಇನ್ನು ಮುಂದೆ ಅಮೆರಿಕ ಪ್ರವಾಸ ಕಷ್ಟವೆ?

Date:

Advertisements
ಡಿಎಸ್-160 ಅರ್ಜಿ ತುಂಬುವುದು, ಪಾಸ್‌ಪೋರ್ಟ್ ವಿವರಗಳ ನಿರ್ವಹಣೆ, ದಾಖಲೆಗಳ ಸಕಾಲಿಕ ಅಪ್ಲೋಡ್‌ ಮತ್ತು CAPTCHA ವ್ಯವಸ್ಥೆಯಿಂದಾಗಿ ಪ್ರತಿಯೊಬ್ಬರೂ ಸುಲಭವಾಗಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಸಾಧ್ಯವಿಲ್ಲ. ಅಮೆರಿಕದಲ್ಲಿ ನೆಲಸಿರುವ ತಮ್ಮ ಮಕ್ಕಳನ್ನು ನೋಡುವ, ಪ್ರವಾಸಕ್ಕೆ ತೆರಳುವ ಹಿರಿಯ ನಾಗರಿಕರು, ಗ್ರಾಮೀಣ ಪ್ರದೇಶದ ಜನರು ಹಾಗೂ ಇಂಗ್ಲಿಷ್ ಭಾಷೆಯ ಮೇಲೆ ಹಿಡಿತವಿಲ್ಲದವರು ಹೆಚ್ಚಿನ ತೊಂದರೆ ಅನುಭವಿಸಬೇಕಾಗುತ್ತದೆ...

ಡೊನಾಲ್ಡ್ ಟ್ರಂಪ್‌ ಅಮೆರಿಕದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಅಧಿಕಾರ ಸ್ವೀಕರಿಸಿದ ನಂತರ ಸುಂಕ ಏರಿಕೆ, ವಲಸಿಗರ ತಡೆ, ವಿದ್ಯಾರ್ಥಿಗಳ ವಿಸಾ ನಿರಾಕರಣೆ ಸೇರಿದಂತೆ ಹಲವು ಜನ ವಿರೋಧಿ ಕ್ರಮಗಳನ್ನು ವಿಶ್ವದ ಹಲವು ರಾಷ್ಟ್ರಗಳ ಮೇಲೆ ಕೈಗೊಂಡಿದ್ದಾರೆ. ಇವೆಲ್ಲ ನಿರ್ಬಂಧಗಳನ್ನು ಭಾರತಕ್ಕೂ ಹೇರಲಾಗಿದೆ. ಈಗ ಭಾರತದ ಮೇಲೆ ಮತ್ತೊಂದು ಗದಾ ಪ್ರಹಾರಕ್ಕೆ ಮುಂದಾಗಿರುವ ಅಮೆರಿಕ ಭಾರತೀಯ ಟ್ರಾವೆಲ್‌ ಏಜೆಂಟ್‌ಗಳಿಗೂ ಹೊಸ ನಿರ್ಬಂಧ ವಿಧಿಸಿದೆ. ದೇಶಕ್ಕೆ ಅಕ್ರಮ ವಲಸೆಗೆ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂಬ ಆರೋಪಗಳ ಮೇಲೆ ಭಾರತದ ಟ್ರಾವೆಲ್ ಏಜೆನ್ಸಿಗಳ ಮಾಲೀಕರು, ಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ವಲಸೆ ಮತ್ತು ರಾಷ್ಟ್ರೀಯತೆಯ ಕಾಯ್ದೆಯ ಸೆಕ್ಷನ್ 212(a)(3)(C) ಅಡಿಯಲ್ಲಿ ಅಮೆರಿಕ ಹೊಸ ವಿಸಾ ನಿರ್ಬಂಧ ಕಾನೂನನ್ನು ಜಾರಿಗೊಳಿಸಿದೆ. ಈ ನಿರ್ಬಂಧಗಳು ಭಾರತಕ್ಕೆ ಮಾತ್ರ ಸೀಮಿತವಲ್ಲ, ಆದರೆ ಭಾರತವು ಈ ರೀತಿಯ ಕ್ರಮಕ್ಕೆ ಒಳಗಾದ ಮೊದಲ ದೇಶವಾಗಿದೆ.

ಅಮೆರಿಕ ವಿಧಿಸಿರುವ ವಿಸಾ ನಿರ್ಬಂಧಗಳು ನಿರ್ದಿಷ್ಟವಾಗಿ ಟ್ರಾವೆಲ್ ಉದ್ಯಮದ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡಿವೆ. ಅವರು ಕಾನೂನುಬಾಹಿರವಾಗಿ ಅಮೆರಿಕವನ್ನು ಪ್ರವೇಶಿಸಲು ಗ್ರಾಹಕರಿಗೆ ಸಹಾಯ ಮಾಡಿದ್ದಾರೆಂದು ಆರೋಪಿಸಲಾಗಿದೆ. ಅಮೆರಿಕದ ಈ ಕ್ರಮಗಳು ಅಂತಾರಾಷ್ಟ್ರೀಯ ಕಳ್ಳಸಾಗಣೆಯನ್ನು ತಡೆಯಲು ಮತ್ತು ಅಮೆರಿಕದ ವಲಸೆ ಕಾನೂನು ಉಲ್ಲಂಘಿಸಿದ ಎಲ್ಲರನ್ನೂ ಹೊಣೆಗಾರರನ್ನಾಗಿಸುತ್ತದೆ ಎಂದು ಅಲ್ಲಿನ ವಿದೇಶಾಂಗ ಸಚಿವಾಲಯ ನಿರ್ಬಂಧದ ಬಗ್ಗೆ ವಿವರಣೆಯನ್ನು ನೀಡಿದೆ. ಆದರೆ ಎಷ್ಟು ವ್ಯಕ್ತಿಗಳು ಅಥವಾ ಏಜೆನ್ಸಿಗಳನ್ನು ನಿರ್ಬಂಧಿಸಲಾಗಿದೆ ಎಂಬುದರ ಕುರಿತು ಯಾವುದೇ ಮಾಹಿತಿಯನ್ನು ಅಮೆರಿಕ ನೀಡಿಲ್ಲ. ಹೊಸ ಕಾಯ್ದೆಯ ಅನ್ವಯ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದವರಿಗೆ ಅಮೆರಿಕಕ್ಕೆ ಪ್ರವೇಶ ನಿಷೇಧಿಸುವ ಅಧಿಕಾರವನ್ನು ನೀಡುತ್ತದೆ ಎಂದು ಹೇಳಲಾಗುತ್ತಿದೆ.

ಅಮೆರಿಕದ ನಿರ್ಬಂಧಗಳ ಕಾನೂನು ಭಾರತದ ಟ್ರಾವೆಲ್ ಏಜೆನ್ಸಿಗಳು ಗ್ರಾಹಕರಿಗೆ ನಕಲಿ ದಾಖಲೆಗಳನ್ನು ಒದಗಿಸುವುದು, ವಿಸಾ ನಿಯಮಗಳನ್ನು ಉಲ್ಲಂಘಿಸುವುದು ಅಥವಾ ಅಕ್ರಮವಾಗಿ ಗಡಿಪಾರಾಗಲು ಸಹಾಯ ಮಾಡುವುದು ಇಂತಹ ಚಟುವಟಿಕೆಗಳು ಸೇರಿವೆ. ಭಾರತದ ಟ್ರಾವೆಲ್‌ ಏಜೆಂಟ್‌ಗಳು ಅಥವಾ ಏಜೆನ್ಸಿಗಳು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದರೆ, ಅವರಿಗೆ ಅಮೆರಿಕಕ್ಕೆ ಪ್ರವೇಶ ನಿಷೇಧವಾಗಬಹುದು. ಈ ನಿರ್ಬಂಧಗಳು ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುವ ಟ್ರಾವೆಲ್ ಏಜೆನ್ಸಿಗಳಿಗೆ ಯಾವುದೇ ತೊಂದರೆಯನ್ನು ಉಂಟುಮಾಡುವುದಿಲ್ಲ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಹೇಳಿದೆ. ಈ ನಿರ್ಬಂಧದ ಹಿಂದೆ ಅಮೆರಿಕ ಬೇರೆಯದೆ ಉದ್ದೇಶ ಹೊಂದಿದ್ದು, ತನ್ನ ದೇಶದ ಸಂಸ್ಥೆಗಳನ್ನು ಮತ್ತಷ್ಟು ಉತ್ತೇಜಿಸಲು ಭಾರತೀಯ ಟ್ರಾವೆಲ್‌ ಸಂಸ್ಥೆಗಳನ್ನು ನಿಯಂತ್ರಿಸಲು ಈ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿದೆ.

Advertisements

ಪ್ರಾಮಾಣಿಕ ಅರ್ಜಿದಾರರಿಗೆ ಅನುಕೂಲವೆಂದ ಟ್ರಂಪ್‌ ಸರ್ಕಾರ

ಅಮೆರಿಕದ ವಿದೇಶಾಂಗ ಸಚಿವಾಲಯದಿಂದ ಘೋಷಿಸಲಾದ ವಿಸಾ ಸಂಬಂಧ ನಿರ್ಬಂಧಗಳು ಭಾರತೀಯ ಟ್ರಾವೆಲ್ ಏಜೆಂಟ್‌ಗಳು ಹಾಗೂ ಏಜನ್ಸಿಗಳ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಯಿದೆ. ಭಾರತದಲ್ಲಿ ಲಕ್ಷಾಂತರ ಮಂದಿ ಪ್ರವಾಸ, ಉದ್ಯೋಗ, ಶಿಕ್ಷಣ ಅಥವಾ ಕುಟುಂಬ ಭೇಟಿಗಳ ಉದ್ದೇಶದಿಂದ ಅಮೆರಿಕದ ವಿಸಾಗಾಗಿ ಅರ್ಜಿ ಸಲ್ಲಿಸುತ್ತಾರೆ. ವಿಸಾ ನೀಡುವ ಟ್ರಾವೆಲ್‌ ಏಜೆನ್ಸಿಗಳು ಹಣ ಅಥವಾ ಶಿಫಾರಸ್ಸು ಮುಂತಾದ ಕಾರಣಗಳಿಗಾಗಿ ಪ್ರಾಮಾಣಿಕ ಅರ್ಜಿದಾರರನ್ನು ಕೈಬಿಡಲಾಗುತ್ತಿತ್ತು. ಅಲ್ಲದೆ ವಿಸಾ ಅಪಾಯಂಟ್‌ಮೆಂಟ್‌ನಲ್ಲಿ ಬ್ಲಾಕಿಂಗ್ ಮಾಡಲಾಗುತ್ತಿತ್ತು. ಅರ್ಹತೆಯಿಲ್ಲದ ಅರ್ಜಿದಾರರು ಅನ್ಯ ಮಾರ್ಗದಿಂದ ವಿಸಾಗಳನ್ನು ಪಡೆದುಕೊಳ್ಳುತ್ತಿದ್ದರು. ಇವೆಲ್ಲ ಅವ್ಯವಸ್ಥೆಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲವು ಏಜೆನ್ಸಿಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ಟ್ರಂಪ್‌ ಸರ್ಕಾರ ನಿರ್ಬಂಧಕ್ಕೆ ಮತ್ತೊಂದು ಕಾರಣ ನೀಡಿದೆ. ಅಲ್ಲದೆ CAPTCHA, ಒಟಿಪಿ ಮತ್ತು ಬಯೋಮೆಟ್ರಿಕ್ಸ್‌ ಆಧಾರಿತ ದೃಢೀಕರಣ ವ್ಯವಸ್ಥೆಗಳಂಥ ಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದು ಕೂಡ ತನ್ನ ಉದ್ದೇಶವನ್ನು ಸಮರ್ಥಿಸಿಕೊಂಡಿದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಬೆಂಗಳೂರು-ತುಮಕೂರು ಮೆಟ್ರೊ ಯೋಜನೆ ಯಾರಿಗಾಗಿ?

ಅಮೆರಿಕದ ಹೊಸ ನಿಯಮಗಳ ಪ್ರಕಾರ, ಏಜೆಂಟ್‌ಗಳು ಈಗೇನಿದ್ದರೂ ಗ್ರಾಹಕರಿಗೆ ಕೇವಲ ಮಾರ್ಗದರ್ಶನ ನೀಡಬೇಕಾಗುತ್ತದೆ. ಅವರು ತಮ್ಮ ಗ್ರಾಹಕರ ಪರವಾಗಿ ಡಿಎಸ್-160 ಅರ್ಜಿಗಳನ್ನು ಭರ್ತಿ ಮಾಡಬಾರದು ಅಥವಾ ಅವರ ಪರವಾಗಿ ಸಾಫ್ಟ್‌ವೇರ್‌ಗಳ ಮೂಲಕ ಯಾವುದೇ ವಿಸಾ ಅಪಾಯಂಟ್‌ಮೆಂಟ್ ಬುಕಿಂಗ್ ಮಾಡುವಂತಿಲ್ಲ. ʼಹೆಚ್ಚು ಬುಕಿಂಗ್‌ʼ ಹಾಗೂ ಮೂರನೇ ವ್ಯಕ್ತಿಗಳ ಮೂಲಕ ಕಾಯ್ದಿರಿಸುವಂತಿಲ್ಲ. ಅಲ್ಲದೆ ಸಂಸ್ಥೆಯು ತಮಗೆ ಬೇಕಾದವರು ಅಥವಾ ಸಂಸ್ಥೆಯ ಹೆಸರಿನಲ್ಲಿ ನೂರಾರು ಅಪಾಯಂಟ್‌ಮೆಂಟ್‌ಗಳನ್ನು ಲಾಕ್ ಮಾಡಲು ಸಾಧ್ಯವಿಲ್ಲ. ನೂತನ ನಿಯಮವು ಪ್ರತಿಯೊಬ್ಬ ಅರ್ಜಿದಾರರೂ ತಮ್ಮದೇ ಖಾತೆಯಲ್ಲಿ ಲಾಗಿನ್ ಆಗಿ, ತಮ್ಮ ವೈಯಕ್ತಿಕ ಮಾಹಿತಿಯನ್ನು ಸಲ್ಲಿಸಿ, CAPTCHA ಪೂರೈಸಿ, ಒಟಿಪಿ ಮೂಲಕ ದೃಢೀಕರಿಸಿಕೊಂಡ ನಂತರವೇ ಅಪಾಯೆಂಟ್‌ಮೆಂಟ್‌ ಬುಕ್ ಮಾಡಬಹುದಾಗಿದೆ. ಕಟ್ಟುನಿಟ್ಟಿನ ನಿಯಮಗಳಿಂದ ಒಂದಷ್ಟು ಅನುಕೂಲಗಳು ಆಗಬಹುದು. ಆದರೆ ಅಮೆರಿಕದ ಈ ಕ್ರಮದಿಂದ ಹಲವು ಅನಾನುಕೂಲಗಳು ಉಂಟಾಗಲಿವೆ.

ಸಾಮಾನ್ಯರಿಗೆ ಅಮೆರಿಕ ಭೇಟಿ ಕಷ್ಟವಾಗಬಹುದು

ಅಮೆರಿಕದ ಹೊಸ ನಿರ್ಬಂಧದಿಂದಾಗಿ ಉಂಟಾಗುವ ಅನಾನುಕೂಲತೆಗಳು ಕೂಡ ಕಡಿಮೆಯಿಲ್ಲ. ವಿಸಾ ಪ್ರಕ್ರಿಯೆಯು ಹಲವು ತಾಂತ್ರಿಕ ಅಂಶಗಳನ್ನು ಒಳಗೊಂಡಿರುವುದರಿಂದ ಏಜೆನ್ಸಿ ಸಹಾಯವಿಲ್ಲದೆ ಅರ್ಜಿ ಸಲ್ಲಿಸುವ ಬಹುತೇಕರಿಗೆ ಕಷ್ಟವಾಗಬಹುದು. ಡಿಎಸ್-160 ಅರ್ಜಿ ತುಂಬುವುದು, ಪಾಸ್‌ಪೋರ್ಟ್ ವಿವರಗಳ ನಿರ್ವಹಣೆ, ದಾಖಲೆಗಳ ಸಕಾಲಿಕ ಅಪ್ಲೋಡ್‌ ಮತ್ತು CAPTCHA ವ್ಯವಸ್ಥೆಯಿಂದಾಗಿ ಪ್ರತಿಯೊಬ್ಬರೂ ಸುಲಭವಾಗಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ, ಅಮೆರಿಕದಲ್ಲಿ ನೆಲಸಿರುವ ತಮ್ಮ ಮಕ್ಕಳನ್ನು ನೋಡುವ, ಪ್ರವಾಸಕ್ಕೆ ತೆರಳುವ ಹಿರಿಯ ನಾಗರಿಕರು, ಗ್ರಾಮೀಣ ಪ್ರದೇಶದ ಜನರು ಹಾಗೂ ಇಂಗ್ಲಿಷ್ ಭಾಷೆಯ ಮೇಲೆ ಹಿಡಿತವಿಲ್ಲದವರು ಹೆಚ್ಚಿನ ತೊಂದರೆ ಅನುಭವಿಸಬೇಕಾಗುತ್ತದೆ. ಈವರೆಗೆ ಏಜೆಂಟ್‌ಗಳ ಸಹಾಯದಿಂದಲೇ ಈ ಎಲ್ಲ ಹಂತಗಳನ್ನು ನಿರ್ವಹಿಸುತ್ತಿದ್ದವರು ಗೊಂದಲಕ್ಕೆ ಒಳಗಾಗುವ ಸಾಧ್ಯತೆಯಿದೆ. ಇದರಿಂದ ಅಮೆರಿಕಕ್ಕೆ ತೆರಳಲು ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಗಬಹುದು.

ಸಾವಿರಾರು ಟ್ರಾವೆಲ್ ಏಜೆಂಟ್‌ಗಳು ತಮ್ಮ ಜೀವನೋಪಾಯವನ್ನು ಈ ಕ್ಷೇತ್ರದ ಮೇಲೆ ಅವಲಂಬಿತರಾಗಿದ್ದಾರೆ. ಆಟೋಮೇಷನ್‌ ನಿಷೇಧ ಮತ್ತು ಮೂರನೇ ವ್ಯಕ್ತಿಯ ಕಾಯ್ದಿರಿಸುವಿಕೆಯನ್ನು ನಿರ್ಬಂಧಗೊಳಿಸಿರುವುದರಿಂದ ಅನೇಕ ಜನರು ಉದ್ಯೋಗ ಕಳೆದುಕೊಳ್ಳುವ ಆತಂಕ ಎದುರಾಗುತ್ತದೆ. ವಿಶೇಷವಾಗಿ ಸಣ್ಣ ಮಟ್ಟದ ಏಜೆಂಟ್‌ಗಳು ತಮ್ಮ ವ್ಯವಹಾರ ಸಂಪೂರ್ಣವಾಗಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಹಳೆಯ ವಿಧಾನದಲ್ಲಿ ತ್ವರಿತವಾಗಿ ಸಾಗುತ್ತಿದ್ದ ಪ್ರಕ್ರಿಯೆ ಈಗ ಹೆಚ್ಚು ಸಮಯ ತೆಗೆದುಕೊಳ್ಳುವ ಸಂಭವವಿದೆ. ಇದರಿಂದಾಗಿ ಅಮೆರಿಕದಲ್ಲಿ ವಿದ್ಯಾರ್ಥಿಗಳು ಅಥವಾ ಉದ್ಯೋಗಾರ್ಥಿಗಳಿಗೆ ಬೇಗನೆ ವಿಸಾ ದೊರಕುವುದು ಅಸಾಧ್ಯವಾಗಬಹುದು. ಹೀಗಾಗಿ ಹಲವಾರು ಶೈಕ್ಷಣಿಕ ಸಂಸ್ಥೆಗಳು, ಕಂಪನಿಗಳು ಹಾಗೂ ಇದನ್ನೆ ನಂಬಿಕೊಡಿರುವ ಉದ್ಯಮಗಳು ತಾತ್ಕಾಲಿಕವಾಗಿ ನಷ್ಟ ಅನುಭವಿಸಬಹುದು. ಅಲ್ಲದೆ ವಾಣಿಜ್ಯ ಮತ್ತು ಶೈಕ್ಷಣಿಕ ಸಹಕಾರದ ಕ್ಷೇತ್ರಗಳಲ್ಲಿ ಈ ನಿರ್ಬಂಧಗಳು ಟ್ರಾವೆಲ್ ಉದ್ಯಮದ ಮೇಲೆ ಆರ್ಥಿಕ ಪರಿಣಾಮ ಬೀರಬಹುದು.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ಅಫ್ಘಾನಿಸ್ತಾನ | ಭೀಕರ ಅಪಘಾತ: ಹೊತ್ತಿ ಉರಿದ ಬಸ್, 17 ಮಕ್ಕಳು ಸೇರಿ 71 ಮಂದಿ ದಾರುಣ ಸಾವು

ಅಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರಾಂತ್ಯದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಬಸ್...

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

Download Eedina App Android / iOS

X