ಇಸ್ರೇಲ್‌-ಹಮಾಸ್ ಯುದ್ಧ | 5 ತಿಂಗಳಲ್ಲಿ 30,000 ಪ್ಯಾಲೆಸ್ತೀನಿಯರ ಬಲಿ ಪಡೆದ ಇಸ್ರೇಲ್

Date:

Advertisements

ಗಾಜಾದ ಮೇಲೆ ನರಹಂತಕ ದಾಳಿ ನಡೆಸುತ್ತಿರುವ ಯುದ್ಧದಿಂದ ಹಿಂದೆ ಸರಿಯುವಂತೆ ಇಸ್ರೇಲ್ ಮೇಲೆ ಅಂತರರಾಷ್ಟ್ರೀಯ ಒತ್ತಡವು ಹೆಚ್ಚುತ್ತಲೇ ಇದೆ. ತಾತ್ಕಾಲಿಕ ಕದನ ವಿರಾಮಕ್ಕಾಗಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಒಪ್ಪಂದವು ಶೀಘ್ರವೇ ನಡೆಯಲಿದೆ. ಮುಂದಿನ ಸೋಮವಾರದ ವೇಳೆಗೆ ಕದನ ವಿರಾಮ ಘೋಷಣೆಯಾಗಲಿದೆ ಎಂದು ಫೆಬ್ರವರಿ 26ರಂದು ಅಮೆರಿಯಾ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ಸದ್ಯಕ್ಕೆ, ಇಸ್ರೇಲ್‌ ಅಂತಾರಾಷ್ಟ್ರೀಯ ಬೆಂಬಲವನ್ನು ಕಳೆದುಕೊಳ್ಳವು ಸಾಧ್ಯತೆಗಳಿವೆ.

ಇಸ್ರೇಲ್‌ನ ಸರ್ಕಾರ ಯುದ್ಧದಿಂದ ಹಿಂದೆ ಸರಿಯಲು ಮುಂದಾಗದಿದ್ದಾರೆ, ತಾತ್ಕಾಲಿಕ ಕದನ ವಿರಾಮಕ್ಕೆ ಬೈಡೆನ್ ಬಲವಾಗಿ ಒತ್ತಾಯಿಸುತ್ತಾರೆ. ಬೈಡೆನ್‌ ಅವರ ಇತ್ತೀಚಿನ ಹೇಳಿಕೆಗಳು ಮತ್ತು ಬೆಳವಣಿಕೆಗಳು ಗಮನಾರ್ಹ ಬದಲಾವಣೆಯನ್ನು ಸೂಚಿಸುತ್ತದೆ. ಈ ಹಿಂದೆ, ಇಸ್ರೇಲ್‌ಗೆ ಅಮೆರಿಕಾ ಬೆಂಬಲ ನೀಡಿತ್ತು. ಆದರೆ, ಪ್ಯಾಲೆಸ್ತೀನಿಯರ ಮೇಲೆ ಇಸ್ರೇಲ್ ನಡೆಸುತ್ತಿರುವ ಅಮಾನುಷ ದಾಳಿಯಿಂದಾಗಿ, ಹಲವರು ಇಸ್ರೇಲ್‌ಗೆ ನೀಡಿರುವ ಬೆಂಬಲ ಕುರಿತು ಅಮೆರಿಕಾ ಮೇಲೆ ತೀವ್ರವಾದ ದೇಶೀಯ ಮತ್ತು ಅಂತರರಾಷ್ಟ್ರೀಯ ಒತ್ತಡಗಳು ಎದುರಾಗಿವೆ. ಬಿಡೆನ್ ಮತ್ತು ಅವರ ಕ್ಯಾಬಿನೆಟ್ ಹಾಗೂ ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷಗಳ ಮೇಲೆ ಇಸ್ರೇಲ್‌ಗೆ ನೀಡಿರುವ ಬೆಂಬಲವನ್ನು ಹಿಂತೆಗೆದುಕೊಳ್ಳಬೇಕು ಮತ್ತು ತಕ್ಷಣದ ಕದನ ವಿರಾಮವನ್ನು ಒತ್ತಾಯಿಸಬೇಕು ಎಂದು ಪ್ಯಾಲೆಸ್ಟೈನ್ ಪರ ಕಾರ್ಯಕರ್ತರು ಪ್ರತಿದಿನ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಇದೆಲ್ಲದರ ಭಾಗವಾಗಿ, ಬೈಡೆನ್‌ ಹೇಳಿಕೆಗಳಲ್ಲಿ ಬದಲಾವಣೆಗಳು ಬಂದಿವೆ ಎನ್ನಲಾಗುತ್ತಿದೆ.

ಇಸ್ರೇಲ್‌ನ ನರಮೇಧಕ್ಕೆ ಅಮೆರಿಕಾದ ಬೆಂಬಲವನ್ನು ವಿರೋಧಿಸಿ ವಾಷಿಂಗ್ಟನ್-ಡಿಸಿಯಲ್ಲಿರುವ ಇಸ್ರೇಲಿ ರಾಯಭಾರ ಕಚೇರಿಯ ಎದುರು ಅಮೆರಿಕಾದ ಸೈನಿಕ ಆರನ್ ಬುಶ್ನೆಲ್ ಆತ್ಮಹತ್ಯೆ ಮಾಡಿಕೊಂಡರು. ಅವರು ಸಾವನ್ನಪ್ಪಿದ ಕೇವಲ 24 ಗಂಟೆಗಳ ನಂತರ ಬೈಡೆನ್‌ ಅವರ ಹೇಳಿಕೆಗಳು ಬಂದಿವೆ.

Advertisements

ಪ್ಯಾಲೆಸ್ತೀನ್ ಮೇಲೆ ಇಸ್ರೇಲ್‌ನ ಕ್ರೂರ ದಾಳಿ ಮುಂದುವರಿದಿದೆ

ಪ್ಯಾಲೆಸ್ತೀನ್‌ ಮೇಲೆ ಇಸ್ರೇಲ್‌ನ ಬಾಂಬ್ ದಾಳಿ ಮತ್ತು ನೆಲದ ದಾಳಿ ಮುಂದುವರೆದಿದೆ. ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, 2023ರ ಅಕ್ಟೋಬರ್ 7 ರಿಂದ ಇಲ್ಲಿಯವರೆಗೆ, 29,878 ಪ್ಯಾಲೆಸ್ಟೀನಿಯನ್ನರನ್ನು ಇಸ್ರೇಲ್‌ ಕೊಂದಿದೆ. ಅಲ್ಲದೆ, 70,215 ಮಂದಿ ಗಾಯಗೊಂಡಿದ್ದಾರೆ.

ಪ್ಯಾಲೆಸ್ತೀನ್‌ನ ಪರಿಸ್ಥಿತಿ ಆತಂಕದಲ್ಲಿದ್ದು, ಅಲ್ಲಿನ ಮಕ್ಕಳು ಹಸಿವಿನಿಂದ ಸಾಯುತ್ತಿದ್ದಾರೆ. ಅಲ್ಲಿಗೆ ಮಾನವೀಯ ನೆರವು ತಕ್ಷಣವೇ ತಲುಪದಿದ್ದರೆ, ಸಾವಿನ  ಸಂಖ್ಯೆಯು ಗಗನಕ್ಕೇರುತ್ತದೆ ಎಂದು ಆರೋಗ್ಯ ಸಚಿವಾಲಯ ವರದಿ ಮಾಡಿದೆ. ಗಾಜಾದಲ್ಲಿ 5,76,000 ಜನರು (ಜನಸಂಖ್ಯೆಯ 25%) ಸನ್ನಿಹಿತವಾದ ಕ್ಷಾಮವನ್ನು ಎದುರಿಸುತ್ತಿದ್ದಾರೆ ಎಂದು ಯುಎನ್ ಮಾನವೀಯ ವ್ಯವಹಾರಗಳ ಮುಖ್ಯಸ್ಥ ರಮೇಶ್ ರಾಜಸಿಂಗಮ್ ಫೆಬ್ರವರಿ 27 ರಂದು ಹೇಳಿದ್ದಾರೆ.

ಕಳೆದ ಹಲವಾರು ತಿಂಗಳುಗಳಿಂದ 10 ಲಕ್ಷಕ್ಕಿಂತಲೂ ಹೆಚ್ಚು ಪ್ಯಾಲೆಸ್ಟೀನಿಯರು ಆಶ್ರಯ ಪಡೆದಿರುವ ಹಿಂದಿನ ಸುರಕ್ಷಿತ ವಲಯವಾದ ರಫಾದ ಮೇಲೆ ಮಾರ್ಚ್ 10ರಂದು ಆಕ್ರಮಣ ನಡೆಸುವುದಾಗಿ ಇಸ್ರೇಲ್‌ ಬೆದರಿಕೆವೊಡ್ಡಿದೆ ಎಂದು ಹೇಳಲಾಗಿದೆ. ಆದರೆ, ಇದನ್ನು ಇಸ್ರೇಲ್ ನಿರಾಕರಿಸಿದೆ. ಈ ಬೆದರಿಕೆಯು ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ಹಲವಾರು ದೇಶಗಳಿಂದ ವ್ಯಾಪಕ ಖಂಡನೆಗೆ ಗುರಿಯಾಗಿದೆ. ಇಸ್ರೇಲ್‌ನ ಪ್ರಮುಖ ಮಿತ್ರರಾಷ್ಟ್ರಗಳ ಯುರೋಪಿಯನ್ ಯೂನಿಯನ್‌ನ 27 ಸದಸ್ಯ ರಾಷ್ಟ್ರಗಳಲ್ಲಿ 26 ದೇಶಗಳು ಇಸ್ರೇಲ್‌ಅನ್ನು ವಿರೋಧಿಸಿವೆ. ಇಸ್ರೇಲ್‌ಗೆ ಎಚ್ಚರಿಕೆ ನೀಡುವ ಹೇಳಿಕೆಗೆ ಸಹಿ ಹಾಕಿವೆ. ದಕ್ಷಿಣ ಗಾಜಾದ ರಾಫಾ ಮೇಲಿನ ಯೋಜಿತ ಆಕ್ರಮಣವನ್ನು ನಿಲ್ಲಿಸುವಂತೆ ಮತ್ತು ಕದನ ವಿರಾಮಕ್ಕೆ ಆ ರಾಷ್ಟ್ರಗಳು ಒತ್ತಾಯಿಸಿವೆ.

ಗಾಜಾದ ಪಶ್ಚಿಮ ಭಾಗದಲ್ಲಿರುವ ಪ್ಯಾಲೆಸ್ತೀನಿಯರ ಮೇಲೆ ಇಸ್ರೇಲಿ ಆಕ್ರಮಣ ಮುಂದುವರೆಯುತ್ತಲೇ ಇದೆ. ಇಸ್ರೇಲ್ ಸೇನೆ ತಮ್ಮ ಮಿಲಿಟರಿ ದಾಳಿಗಳನ್ನು ಹೆಚ್ಚಿಸುತ್ತಿದೆ. ಕೊಲ್ಲುವುದು, ಗಾಯಗೊಳಿಸುವುದು ಮತ್ತು ಹಲವರನ್ನು ಬಂಧಿಸುತ್ತಿದೆ. ಇಸ್ರೇಲಿ ಪಡೆಗಳು ಮಂಗಳವಾರ (ಫೆ.27) ಟುಬಾಸ್ ನಗರದಲ್ಲಿ ದಾಳಿ ನಡೆಸಿ, ಮೂವರು ಯುವಕರನ್ನು ಕೊಂದಿವೆ. ಈ ಪ್ರದೇಶದಲ್ಲಿ ಈವರೆಗೆ 7,255 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರನ್ನು ಬಂಧಿಸಲಾಗಿದೆ.

ಮಾನವೀಯತೆಯ ಕರ್ತವ್ಯವಾಗಿದೆ ಜಾಗತಿಕ ಹೋರಾಟ

ಗಾಜಾದ ಮೇಲೆ ಇಸ್ರೇಲ್‌ನ ಆಕ್ರಮಣವು ‘ನಮ್ಮ ಜನರ ವಿರುದ್ಧ ವಿನಾಶಕಾರಿ ಯುದ್ಧ’ ಎಂದು ಪಾಪ್ಯುಲರ್ ಫ್ರಂಟ್ ಫಾರ್ ದಿ ಲಿಬರೇಶನ್ ಆಫ್ ಪ್ಯಾಲೆಸ್ಟೈನ್ (ಪಿಎಫ್‌ಎಲ್‌ಪಿ) ಮಂಗಳವಾರ ತನ್ನ ಹೇಳಿಕೆಯಲ್ಲಿ ಹೇಳಿದೆ. ಇಸ್ರೇಲ್ ದಾಳಿಯನ್ನು ಕಟುವಾಗಿ ಖಂಡಿಸಿದೆ.

“ನಮ್ಮ ಜನರ ಹಕ್ಕುಗಳನ್ನು ದ್ರವೀಕರಿಸುವ, ಅವರ ಅಸ್ತಿತ್ವದ ಅಂಶಗಳನ್ನು ನಾಶಮಾಡುವ ಮತ್ತು ವಿನಾಶದ ಜ್ವಾಲೆಯಲ್ಲಿ ಪ್ಯಾಲೆಸ್ತೀನಿಯರ ಹಕ್ಕುಗಳನ್ನು ತ್ಯಜಿಸುವಂತೆ ಒತ್ತಾಯಿಸಲಾಗುತ್ತಿದೆ. ಇದು ‘ಅಮೇರಿಕನ್ ಯುದ್ಧ’ವಾಗಿದೆ” ಎಂದು ಪಿಎಫ್‌ಎಲ್‌ಪಿ ಒತ್ತಿ ಹೇಳಿದೆ.

“ಯುಎಸ್ ಸರ್ಕಾರ ಮತ್ತು ಅದರ ಮಿತ್ರರಾಷ್ಟ್ರಗಳಾದ ಯುರೋಪ್, ಆಸ್ಟ್ರೇಲಿಯಾ ಮತ್ತು ಕೆನಡಾಗಳು ಜಿಯೋನಿಸ್ಟ್ ಹತ್ಯೆ ಯಂತ್ರವನ್ನು ಸಜ್ಜುಗೊಳಿಸಿವೆ ಮತ್ತು ಇಸ್ರೇಲ್‌ಗೆ ಪೂರೈಸಿವೆ. ರಾಜಕೀಯದ ತೆರೆಯಲ್ಲಿ ಆಕ್ರಮಣವನ್ನು ತಡೆಯುವ ಯಾವುದೇ ಪ್ರಯತ್ನವನ್ನು ಮಾಡದೆ, ಆ ಪ್ರಯತ್ನಕ್ಕೆ ವಿರುದ್ಧವಾಗಿ ವರ್ತಿಸುತ್ತಿವೆ” ಎಂದು ಆರೋಪಿಸಿದೆ.

“ಪಾಶ್ಚಿಮಾತ್ಯ ರಾಷ್ಟ್ರಗಳ ಬೆಂಬಲಿತ ಇಸ್ರೇಲ್‌ನಿಂದ ಪ್ಯಾಲೇಸ್ಟಿನಿಯನ್ ಜನರು ಎದುರಿಸುತ್ತಿರುವ ಕ್ರೌರ್ಯವನ್ನು ತಡೆಯಬೇಕಿದೆ. ಅದಕ್ಕಾಗಿ, ಪ್ರಪಂಚದಾದ್ಯಂತದ ಜನರು ಎಲ್ಲ ರೂಪಗಳಲ್ಲಿಯೂ ಪ್ರತಿಭಟನೆಗಳನ್ನು ಹೆಚ್ಚಿಸಬೇಕಿದೆ ಮತ್ತು ಯುದ್ಧವನ್ನು ನಿಲ್ಲಿಸಲು ಸರ್ಕಾರಗಳು, ರಾಜಕಾರಣಿಗಳು ರಾಜಕಾರಣಿಗಳು ಹಾಗೂ ಪಕ್ಷಗಳ ಮೇಲೆ ನೇರ ಒತ್ತಡವನ್ನು ತರಬೇಕಿದೆ” ಎಂದು ಸಂಘಟನೆ ಕರೆಕೊಟ್ಟಿದೆ.

ಈ ಸುದ್ದಿ ಓದಿದ್ದೀರಾ?: ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಬಿಡುಗಡೆಗೊಂಡಿದ್ದ ಅಪರಾಧಿ ಸಾವು

ಸಂಘಟನೆಯ ಹೇಳಿಕೆಯು ಪ್ರಪಂಚದಾದ್ಯಂತ ಎಲ್ಲ ನಗರಗಳಲ್ಲಿ ಸಾಮೂಹಿಕ ಪ್ರತಿಭಟನೆಗೆ ಕರೆ ಕೊಟ್ಟಿದೆ. ಸಾಮೂಹಿಕ ಭಾಗವಹಿಸುವಿಕೆ ಮತ್ತು ಏಕತೆಯನ್ನು ರೂಪಿಸಲು ಪ್ರಗತಿಪರ ಶಕ್ತಿಗಳಿಗೆ ಕರೆ ನೀಡಿದೆ.

ಪ್ಯಾಲೆಸ್ತೀನ್ ಜನರ ವಿರುದ್ಧ ಜಿಯೋನಿಸ್ಟ್ ಕೊಲ್ಲುವ ಯಂತ್ರವನ್ನು ಸರಬರಾಜುಗಳನ್ನು ನಿಲ್ಲಿಸಲು ಟ್ರೇಡ್ ಯೂನಿಯನ್‌ಗಳು ಮತ್ತು ಪ್ರಗತಿಪರ ಸಂಘಟನೆಗಳ ತೆಗೆದುಕೊಂಡ ನಿಲುವನ್ನು ಸಂಘಟನೆ ಸ್ವಾಗತಿಸಿದೆ.

ಭಾರತದಲ್ಲಿ 11 ಪ್ರಮುಖ ಬಂದರಗಳಲ್ಲಿ ಕೆಸಲ ಮಾಡುವ 3,500 ಕಾರ್ಮಿಕರಿರುವ ‘ಜಲ ಸಾರಿಗೆ ಕಾರ್ಮಿಕರ ಫೆಡರೇಶನ್’,  ಇಸ್ರೇಲ್‌ ನಡಸುತ್ತಿರುವ ನರಮೇಧಕ್ಕೆ ಬಳಸಲು ಉದ್ದೇಶಿಸಿರುವ ಯಾವುದೇ ‘ಶಸ್ತ್ರಸಜ್ಜಿತ ಸರಕುಗಳನ್ನು ಹಡಗುಗಳಿಗೆ ಲೋಡ್‌ ಮಾಡುವುದಿಲ್ಲ ಮತ್ತು ಇಳಿಸುವುದಿಲ್ಲ ಎಂದು ಘೋಷಿಸಿದೆ.

ಅಲ್ಲದೆ, 2023ರ ನವೆಂಬರ್‌ನಲ್ಲಿ, ‘ಮುಗ್ಧ ಜನರ ಹತ್ಯೆ’ಗಾಗಿ ಇಸ್ರೇಲ್‌ಗೆ ಸಾಗಿಸಲು ಉದ್ದೇಶಿಸಲಾಗಿದ್ದ ಶಸ್ತ್ರಾಸ್ತ್ರಗಳನ್ನು ಲೋಡ್‌ ಮಾಡಲು ಬೆಲ್ಜಿಯಂನಲ್ಲಿ ಅಲ್ಲಿನ ಕಾರ್ಮಿಕರು ನಿರಾಕರಿಸಿದ್ದರು. ಅಲ್ಲಿನ, ‘ಕಾಮನ್ ಯೂನಿಯನ್ ಫ್ರಂಟ್’ ಸಂಘಟನೆ ಮತ್ತು ಇತರ ಸಂಘಟನೆಗಳು ಇಸ್ರೇಲ್ ಮೇಲೆ ಸಂಪೂರ್ಣ ಶಸ್ತ್ರಾಸ್ತ್ರ ನಿರ್ಬಂಧವನ್ನು ವಿಧಿಸಬೇಕೆಂದು ತಮ್ಮ ಸರ್ಕಾರಕ್ಕೆ ಒತ್ತಾಯಿಸಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್‌ ಒತ್ತಡ

ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ...

ಗಾಝಾದಲ್ಲಿ ಹತ್ಯೆಯಾದ ಯುವ ಪತ್ರಕರ್ತರೊಬ್ಬರ ಭಿನ್ನ ಉಯಿಲು !

ನಾನು ಸಾಯುವುದಾದರೆ, ನನ್ನ ಸಿದ್ಧಾಂತಗಳ ಮೇಲೆ ದೃಢವಾಗಿರುವೆ. ದೇವರ ಮುಂದೆ ನಾನು...

ಗಾಝಾದಲ್ಲಿ ಇಸ್ರೇಲ್ ದಾಳಿ: ಐವರು ಅಲ್‌ಜಝೀರಾ ಪತ್ರಕರ್ತರು ಹತ

ಭಾನುವಾರ ಗಾಝಾ ನಗರದಲ್ಲಿ ಅಲ್‌ಜಝೀರಾ ಟೆಂಟ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ...

ಟ್ರಂಪ್‌ ಕೊಟ್ಟ ಏಟಿಗೆ ಚೀನಾದತ್ತ ತಿರುಗಿದ ಪ್ರಧಾನಿ; ಚೀನೀ ಭಜನೆ ಮಾಡುತ್ತಿದೆ ಮೋದಿ ಭಕ್ತ ಗಣ

ಅಮೆರಿಕ ಭಾರೀ ಮೊತ್ತದ ತೆರಿಗೆ ಹೇರಿದ ಬೆನ್ನಲ್ಲೇ, ಭಾರತವು ಚೀನಾದೊಂದಿಗೆ ಆರ್ಥಿಕ...

Download Eedina App Android / iOS

X