ಮಹಿಳೆಯರು ಮಾತ್ರವಲ್ಲ, ಪುರುಷರ ಮೇಲೂ ಲೈಂಗಿಕ ದೌರ್ಜನ್ಯಗಳಾಗುತ್ತಿವೆ: ಕೇರಳ ಹೈಕೋರ್ಟ್

Date:

ಮಹಿಳೆಯರು, ಬಾಲಕಿಯರು ಮಾತ್ರವಲ್ಲ ಬಾಲಕರು ಹಾಗೂ ಪುರುಷರ ಮೇಲೂ ಲೈಂಗಿಕ ದೌರ್ಜನ್ಯಗಳಾಗಿವೆ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿ ದೇವನ್‌ ರಾಮಚಂದ್ರನ್‌ ನೇತೃತ್ವದ ಪೀಠ ಮಹಿಳೆಯರು ಪ್ರಮುಖ ಗಮನಾರ್ಹವಾಗಿ ಸಂತ್ರಸ್ತರಾಗಿದ್ದಾರೆ. ಅದೇ ರೀತಿ ಪುರುಷರ ಮೇಲೆ ಹಾಗಿರುವುದನ್ನು ನಿರ್ಲಕ್ಷಿಸುವುವಂತಿಲ್ಲ ಎಂದು ಮೌಖಿಕವಾಗಿ ಗಮನಿಸಿದರು.

“ಲೈಂಗಿಕ ದೌರ್ಜನ್ಯಗಳು ಬಾಲಕಿಯರಿಗೆ ಮಾತ್ರ ಸೀಮಿತಗೊಳಿಸಲಾಗಿಲ್ಲ, ಬಾಲಕರ ಮೇಲೆ ಕೂಡ ಉಂಟಾಗಿದೆ. ಅಪರೂಪವಾಗಿದ್ದರೂ ಇದು ಸಾಧ್ಯತೆಯಿದೆ. ಇವುಗಳು ನಡೆಯುತ್ತಿರುವ ಬಗ್ಗೆ ನನಗೆ ತಿಳಿದಿದೆ. ಆದರೆ ಸಾಮಾನ್ಯವಾಗಿ ನಾವು ಮಹಿಳೆಯರ ಬಗ್ಗೆ ಕಾಳಜಿ ವಹಿಸುತ್ತೇವೆ. ಕೆಲವು ಕಾರಣಗಳಿಂದಾಗಿ ಮಹಿಳೆಯರ ಮೇಲೆ ಸಾಮಾನ್ಯವಾಗಿ ಶೇ. 99 ರಷ್ಟು ಲೈಂಗಿಕ ದೌರ್ಜನ್ಯಗಳು ನಡೆಯುತ್ತವೆ” ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿಗೆ ʼವಿವಾದದ ಸರಕುʼ ಪೂರೈಕೆಯ ಗುತ್ತಿಗೆ ಪಡೆದಿವೆಯೇ ಕನ್ನಡದ ಮಾಧ್ಯಮಗಳು?

ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರನ್ನು ಪರೀಕ್ಷಿಸಲು ಸ್ತ್ರೀರೋಗತಜ್ಞರು, ಮೇಲಾಗಿ ಮಹಿಳಾ ಸ್ತ್ರೀರೋಗತಜ್ಞರನ್ನು ಮಾತ್ರ ಕರೆಯುವ ಪ್ರೋಟೋಕಾಲ್ ಅನ್ನು ಪ್ರಶ್ನಿಸಿ ವೈದ್ಯರು ಸಲ್ಲಿಸಿದ ಅರ್ಜಿಯನ್ನು ಪರಿಗಣಿಸುವಾಗ ನ್ಯಾಯಾಧೀಶರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಬಹುತೇಕ ಪ್ರಕರಣಗಳು ಮಹಿಳೆಯರು ಹಾಗೂ ಬಾಲಕಿಯರ ಮೇಲೆ ಉಂಟಾಗುವ ಕಾರಣ ಸಂತ್ರಸ್ತರಿಗೆ ಬೆಂಬಲಿಸಲು ಪ್ರೋಟೊಕಾಲ್‌ ಹೇಳುತ್ತದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು

“ನೀವು ಏಕೆ ಚಿಂತಿಸುತ್ತೀರಾ ಎಂಬುದು ತಿಳಿದಿಲ್ಲ. ನಾವು ಸಂತ್ರಸ್ತರಿಗೆ ಹೆಚ್ಚಿನ ಬೆಂಬಲ ನೀಡಲು ಪ್ರಯತ್ನಿಸುತ್ತೇವೆ. ನಿಮಗೆ ಇದು ಏನು ಉಂಟು ಮಾಡುವುದಿಲ್ಲ, ಎಲ್ಲವೂ ಉಂಟಾಗುವುದು ಸಂತ್ರಸ್ತರಿಗೆ” ಎಂದು ಅರ್ಜಿದಾರರಿಗೆ ತಿಳಿಸುವಾಗ ನ್ಯಾಯಾಧೀಶರಾದ ರಾಮಚಂದ್ರನ್ ತಿಳಿಸಿದರು.

ಆದಾಗ್ಯೂ, ಲೈಂಗಿಕ ದೌರ್ಜನ್ಯದ ಸಂತ್ರಸ್ತರು ಪುರುಷರು ಆಗಿರಬಹುದು. ಇತ್ತೀಚಿನ ದಿನಗಳಲ್ಲಿ ಪೋಕ್ಸೊ ಅಡಿಯ ಪ್ರಕರಣಗಳಲ್ಲಿ ಪುರುಷ ಸಂತ್ರಸ್ತರು ಹೆಚ್ಚಾಗುತ್ತಿರುವ ಬಗ್ಗೆ ಕೋರ್ಟ್ ಅಭಿಪ್ರಾಯಪಟ್ಟಿತು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನರೇಂದ್ರ ಮೋದಿಯೇ ಭಾರತದ ದೊಡ್ಡ ಸಮಸ್ಯೆ: ಎಂ ಕೆ ಸ್ಟಾಲಿನ್

ಪ್ರಸ್ತುತ ಭಾರತದ ದೊಡ್ಡ ಸಮಸ್ಯೆ ಪ್ರಧಾನಿ ನರೇಂದ್ರ ಮೋದಿ ಅವರೇ ಆಗಿದ್ದಾರೆ...

ಟಿಎಂಸಿ ಚುನಾವಣಾ ಪ್ರಣಾಳಿಕೆ ಬಿಡುಗಡೆ: ಸಿಎಎ, ಏಕರೂಪ ನಾಗರಿಕ ಸಂಹಿತೆ ನಿಷೇಧ

ತೃಣಮೂಲ ಕಾಂಗ್ರೆಸ್ ಪಕ್ಷ(ಟಿಎಂಸಿ) ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಇಂಡಿಯಾ ಒಕ್ಕೂಟ...

ಬಸ್‌ನ ಡ್ಯಾಶ್‌ಬೋರ್ಡ್‌ನಲ್ಲಿ ‘ಫ್ಯಾಮಿಲಿ ಫೋಟೋ’ ಇರಿಸಲು ಯುಪಿ ಚಾಲಕರಿಗೆ ಮನವಿ!

ರಸ್ತೆ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಉತ್ತರ ಪ್ರದೇಶ ಸಾರಿಗೆ ಇಲಾಖೆ...

ಭಾರತದ ಯುವಕರದು ವಿರಾಟ್ ಕೊಹ್ಲಿ ರೀತಿಯ ಮನಸ್ಥಿತಿ: ರಘುರಾಂ ರಾಜನ್

ಬೃಹತ್ ಸಂಖ್ಯೆಯ ಭಾರತದ ಯುವಕರು ವಿದೇಶಗಳಿಗೆ ಹೋಗಿ ಅಲ್ಲಿ ತಮ್ಮ ಉದ್ಯಮವನ್ನು...