ಗಾಝಾ ಮೇಲೆ ಇಸ್ರೇಲ್ ದಾಳಿ: 50 ಸಾವಿರ ಗರ್ಭಿಣಿಯರ ವೈದ್ಯಕೀಯ ಆರೈಕೆಯ ಲಭ್ಯತೆ ಬಗ್ಗೆ ವಿಶ್ವಸಂಸ್ಥೆ ಕಳವಳ

Date:

Advertisements

ಗಾಝಾದಲ್ಲಿ ಇಸ್ರೇಲ್‌ ದಾಳಿಯಿಂದ ಯುದ್ಧದ ಕಾನೂನುಗಳು ಮತ್ತು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನಿನ ದೈನಂದಿನ ಉಲ್ಲಂಘನೆಯಾಗುತ್ತಿರುವ ಬಗ್ಗೆ ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗ ಆತಂಕ ವ್ಯಕ್ತಪಡಿಸಿದೆ.

ಇಸ್ರೇಲ್ – ಹಮಾಸ್ ಯುದ್ಧ ಆರಂಭಗೊಂಡು ಹತ್ತು ದಿನದಲ್ಲಿ ಎರಡೂ ಕಡೆಯಿಂದ 4,200 ಮಂದಿ ಸಾವನ್ನಪ್ಪಿದ್ದು, ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ಸ್ಥಳಾಂತರಗೊಂಡಿದ್ದಾರೆ. ಗಾಜಾ ಪಟ್ಟಿಯ ಹಲವು ಪ್ರದೇಶಗಳು ನಾಶವಾಗಿ ಸ್ಮಶಾನ ಮೌನ ಆವರಿಸಿದ್ದು, ಮುಂಬರುವ ದಿನಗಳಲ್ಲಿ ನಾಗರಿಕರ ಮೇಲೆ ಗಂಭೀರವಾದ ಅಪಾಯವಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಆಘಾತ ವ್ಯಕ್ತಪಡಿಸಿದ್ದಾರೆ.

ಸಾವಿಗೀಡಾದವರಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿದ್ದಾರೆ. ಕನಿಷ್ಠ 11 ಪ್ಯಾಲೆಸ್ತೀನ್  ಪತ್ರಕರ್ತರು, 28 ವೈದ್ಯಕೀಯ ಸಿಬ್ಬಂದಿ ಮತ್ತು 14 ವಿಶ್ವಸಂಸ್ಥೆ ಸಿಬ್ಬಂದಿ ಸೇರಿದ್ದಾರೆ. ಅವಶೇಷಗಳಡಿಯಲ್ಲಿ ಇನ್ನೂ ಎಷ್ಟು ಶವಗಳಿರಬಹುದು ಎಂಬುದು ಸ್ಪಷ್ಟವಾಗಿಲ್ಲ. ಅನೇಕ ಕುಟುಂಬಗಳು ಪ್ರೀತಿಪಾತ್ರರನ್ನು ಕಳೆದುಕೊಂಡಿವೆ. ಅವರು ಮುಂದಿನ ಭವಿಷ್ಯದ ಬಗ್ಗೆ ಭಯಭೀತರಾಗಿದ್ದಾರೆ ಎಂದು ವಿಶ್ವಸಂಸ್ಥೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

Advertisements

ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಮಿಲಿಟರಿ ಕಾರ್ಯಾಚರಣೆಗಳು ಕಡಿಮೆಯಾಗುವ ಲಕ್ಷಣಗಳು ತೋರುತ್ತಿಲ್ಲ. ಗಾಝಾದ ಮೇಲಿನ ದಾಳಿಯಿಂದ ನೀರು ಸರಬರಾಜು, ಆಹಾರ, ಔಷಧ ಮತ್ತು ಇತರ ಮೂಲಭೂತ ಅಗತ್ಯಗಳ ಮೇಲೆ ಪರಿಣಾಮ ಬೀರುತ್ತಿದೆ. ಹಲವಾರು ಆರೋಗ್ಯ ಸೇವೆಗಳ ಘಟಕಗಳು ಬಾಂಬ್ ದಾಳಿಯಿಂದ ಹಾನಿಗೊಳಗಾಗಿವೆ. ಆರೋಗ್ಯ ಸೇವಾ ಘಟಕಗಳು ಬಾಂಬ್‌ ದಾಳಿಯಿಂದ ಹಾನಿಗೊಳಗಾಗಿರುವ ಕಾರಣದಿಂದ ಮುಂದಿನ ದಿನಗಳಲ್ಲಿ ವೈದ್ಯಕೀಯ ಆರೈಕೆಯ ಲಭ್ಯತೆಯ ಬಗ್ಗೆ ಗಂಭೀರ ಆತಂಕವುಂಟಾಗಿದೆ.

ಈ ಸುದ್ದಿ ಓದಿದ್ದೀರಾ? ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಒಬ್ಬ ರಾಕ್ಷಸ, ಕ್ರೂರಿ: ಅಸಾದುದ್ದೀನ್ ಓವೈಸಿ ಕಿಡಿ

ಯುದ್ಧದಲ್ಲಿ ಸಾವಿರಾರು ಜನರು ಗಾಯಗೊಂಡಿದ್ದಾರೆ. ಅಂದಾಜು 50,000 ಗರ್ಭಿಣಿ ಮಹಿಳೆಯರಿಗೆ, ಹಾಗೆಯೇ ದೀರ್ಘಕಾಲದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿರುವ ಜನರಿಗೆ ವೈದ್ಯಕೀಯ ಆರೈಕೆಯ ಲಭ್ಯತೆಯ ಕೊರತೆ ಎದುರಾಗಿದೆ. ಯುದ್ಧದ ಹಗೆತನದಿಂದ ಗಾಝಾದಲ್ಲಿ ವೈದ್ಯಕೀಯ ಹಾಗೂ ಮೂಲಸೌಕರ್ಯಗಳ ಮೇಲೆ ದಿಗ್ಬಂಧನ ವಿಧಿಸಿರುವ ಪರಿಣಾಮವಾಗಿ ಆರೋಗ್ಯ ಹಕ್ಕಿನ ಸೇವೆಗಳ ಕೊರತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ. ವೈದ್ಯಕೀಯ ಸೌಲಭ್ಯಗಳು, ವೈದ್ಯಕೀಯ ಸಿಬ್ಬಂದಿ, ಗಾಯಗೊಂಡವರು ಮತ್ತು ರೋಗಿಗಳ ವಿರುದ್ಧದ ದಾಳಿಯನ್ನು ಅಂತಾರಾಷ್ಟ್ರೀಯ ಮಾನವೀಯ ಕಾನೂನಿನ ಅಡಿಯಲ್ಲಿ ನಿಷೇಧಿಸಲಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ಅಮಾಯಕ ನಾಗರಿಕರ ಹತ್ಯೆ ತನಿಖೆಯಾಗಬೇಕು

ದಕ್ಷಿಣ ಗಾಜಾಕ್ಕೆ ಸ್ಥಳಾಂತರಿಸಲು ಪ್ರಯತ್ನಿಸುತ್ತಿರುವ ಪ್ಯಾಲೆಸ್ತೀನ್ ನಾಗರಿಕರು ಬಾಂಬ್‌ ಸ್ಫೋಟದಿಂದ ಕೊಲ್ಲಲ್ಪಟ್ಟರು ಎಂಬ ಆತಂಕ ಮೂಡಿಸುವ ವರದಿಗಳನ್ನು ಸ್ವತಂತ್ರವಾಗಿ ಮತ್ತು ಸಂಪೂರ್ಣವಾಗಿ ತನಿಖೆ ಮಾಡಬೇಕು. ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಗಳ ಎಲ್ಲ ಆರೋಪಗಳನ್ನು ತನಿಖೆ ಮಾಡಬೇಕು ಎಂದು ವಿಶ್ವಸಂಸ್ಥೆ ತಿಳಿಸಿದೆ.

“ನಾಗರಿಕರನ್ನು ಗುರಿಯಾಗಿಸುವುದು ಅಥವಾ ಅವರ ಪ್ರದೇಶದ ಮೇಲೆ ಬಾಂಬ್ ಸ್ಫೋಟಗಳು, ವಿವೇಚನಾರಹಿತ ಅಥವಾ ಅಸಮಂಜಸವಾದ ದಾಳಿಗಳನ್ನು ನಡೆಸುವುದನ್ನು ತಪ್ಪಿಸಲು ನಾವು ಇಸ್ರೇಲಿ ಪಡೆಗಳನ್ನು ಒತ್ತಾಯಿಸುತ್ತೇವೆ. ಯಾವುದೇ ಸಂದರ್ಭದಲ್ಲಿ ನಾಗರಿಕರ ಪ್ರಾಣಹಾನಿ, ನಾಗರಿಕರಿಗೆ ಗಾಯ ಮತ್ತು ನಾಗರಿಕ ವಸ್ತುಗಳಿಗೆ ಹಾನಿಯಾಗದಂತೆ ತಡೆಯಲು ಹಾಗೂ ಕಡಿಮೆ ಮಾಡಲು ನಾವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತೇವೆ” ಎಂದು ವಿಶ್ವಸಂಸ್ಥೆ ಪ್ರಕಟಣೆ ತಿಳಿಸಿದೆ.

ಈ ಸುದ್ದಿ ಓದಿದ್ದೀರಾ? ಜಾಗತಿಕ ಹಸಿವು ಸೂಚ್ಯಂಕ | ಹಸಿದವರ ದೇಶವಾದ ಭಾರತ; ಪಾಕಿಸ್ತಾನಕ್ಕಿಂತ ಕೆಳಕ್ಕೆ ಕುಸಿತ

ಇಲ್ಲಿಯವರೆಗೆ ತಮ್ಮ ಸ್ವಂತ ಸೂರುಗಳಿಂದ ನಿರಾಶ್ರಿತರಾದ ಸುಮಾರು 4 ಲಕ್ಷ ಮಂದಿ ವಿವಿಧ ಸ್ಥಳಗಳಲ್ಲಿ ಆಶ್ರಯ ಪಡೆದಿದ್ದಾರೆ. ಇವರಲ್ಲಿ ಹಲವರು ವಿಶ್ವಸಂಸ್ಥೆಯ ನಿರಾಶ್ರಿತ ಶಿಬಿರಗಳಲ್ಲಿದ್ದಾರೆ. ಇಸ್ರೇಲ್ ಆಡಳಿತವು ಜನರ ಸುರಕ್ಷತೆ ಅಥವಾ ಕಡ್ಡಾಯ ಮಿಲಿಟರಿ ಕಾರಣಗಳ ಆಧಾರದ ಮೇಲೆ ಆಕ್ರಮಣಕ್ಕೀಡಾದ ಪ್ರದೇಶಗಳ ಜನರನ್ನು ಕಾನೂನುಬದ್ಧವಾಗಿ ಸುರಕ್ಷಿತ ಸ್ಥಳಗಳಲ್ಲಿ ನೆಲೆ ಹಾಗೂ ಮೂಲ ಸೌಕರ್ಯ ಕಲ್ಪಿಸಬೇಕೆಂದು ಅಂತಾರಾಷ್ಟ್ರೀಯ ಕಾನೂನು ಬಯಸುತ್ತದೆ. ಆದರೆ ನಿರಾಶ್ರಿರಗೊಂಡ 10 ಲಕ್ಷ ಜನರಿಗೆ ಇಸ್ರೇಲ್ ಈ ರೀತಿಯ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಮಾನವ ಹಕ್ಕುಗಳ ಎಲ್ಲ ಕಾನೂನುಗಳನ್ನು ಇಸ್ರೇಲ್ ಉಲ್ಲಂಘಿಸಿದೆ ಎಂದು  ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನೆರವು ವಿತರಣೆಯನ್ನು ಸಕ್ರಿಯಗೊಳಿಸಲು ಮತ್ತು ಗಾಜಾದಲ್ಲಿ ಈಗಾಗಲೇ ಹೆಚ್ಚು ತೊಂದರೆಗೀಡಾದ ನಾಗರಿಕರಿಗೆ ಮತ್ತಷ್ಟು ನೋವು ಮತ್ತು ಸಾವುಗಳನ್ನು ತಡೆಗಟ್ಟಿ ಯುದ್ಧ ವಿರಾಮ ಘೋಷಿಸಬೇಕೆಂದು ವಿಶ್ವಸಂಸ್ಥೆ ಕರೆ ನೀಡುತ್ತದೆ.

ಇದಲ್ಲದೆ ಸುಮಾರು 199 ಇಸ್ರೇಲಿ ಪ್ರಜೆಗಳನ್ನು ಗಾಝಾದಲ್ಲಿ ಹಮಾಸ್ ಹೋರಾಟಗಾರರು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ನಾವು ಮತ್ತೊಮ್ಮೆ ಹಮಾಸ್ ಹೋರಾಟಗಾರರಿಗೆ ತಕ್ಷಣವೇ ಬೇಷರತ್ತಾಗಿ ಎಲ್ಲ ನಾಗರಿಕ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಮತ್ತು ಇಸ್ರೇಲ್ ವಿರುದ್ಧ ವಿವೇಚನಾರಹಿತ ಸ್ಪೋಟಕಗಳ ಬಳಕೆಯನ್ನು ನಿಲ್ಲಿಸುವಂತೆ ಒತ್ತಾಯಿಸುತ್ತೇವೆ ಎಂದು ತಿಳಿಸಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್‌ ಒತ್ತಡ

ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ...

ಗಾಝಾದಲ್ಲಿ ಹತ್ಯೆಯಾದ ಯುವ ಪತ್ರಕರ್ತರೊಬ್ಬರ ಭಿನ್ನ ಉಯಿಲು !

ನಾನು ಸಾಯುವುದಾದರೆ, ನನ್ನ ಸಿದ್ಧಾಂತಗಳ ಮೇಲೆ ದೃಢವಾಗಿರುವೆ. ದೇವರ ಮುಂದೆ ನಾನು...

ಗಾಝಾದಲ್ಲಿ ಇಸ್ರೇಲ್ ದಾಳಿ: ಐವರು ಅಲ್‌ಜಝೀರಾ ಪತ್ರಕರ್ತರು ಹತ

ಭಾನುವಾರ ಗಾಝಾ ನಗರದಲ್ಲಿ ಅಲ್‌ಜಝೀರಾ ಟೆಂಟ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ...

ಟ್ರಂಪ್‌ ಕೊಟ್ಟ ಏಟಿಗೆ ಚೀನಾದತ್ತ ತಿರುಗಿದ ಪ್ರಧಾನಿ; ಚೀನೀ ಭಜನೆ ಮಾಡುತ್ತಿದೆ ಮೋದಿ ಭಕ್ತ ಗಣ

ಅಮೆರಿಕ ಭಾರೀ ಮೊತ್ತದ ತೆರಿಗೆ ಹೇರಿದ ಬೆನ್ನಲ್ಲೇ, ಭಾರತವು ಚೀನಾದೊಂದಿಗೆ ಆರ್ಥಿಕ...

Download Eedina App Android / iOS

X