ನವೆಂಬರ್ 19ರ ವಿಶ್ವ ಶೌಚಾಲಯ ದಿನದ ಅಂಗವಾಗಿ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಬೆಲ್ಜಿಯಂನ ರಾಜಧಾನಿ ಬ್ರಸೆಲ್ಸ್‌ನಲ್ಲಿನ ಒಳಚರಂಡಿಗೆ ಇಳಿದು ತ್ಯಾಜ್ಯ ನೀರನ್ನು ಪರಿಶೀಲಿಸಿದ್ದಾರೆ.
ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿರುವ ಬಿಲ್ ಗೇಟ್ಸ್, ”ಈ ವರ್ಷದ ವಿಶ್ವ ಶೌಚಾಲಯ ದಿನದಂದು ನಾನು ಬ್ರಸೆಲ್ಸ್‌ನ ಒಳಚರಂಡಿ ವ್ಯವಸ್ಥೆಯ ಹಿಂದಿನ ಇತಿಹಾಸ ಹಾಗೂ ಜಾಗತಿಕ ಆರೋಗ್ಯದಲ್ಲಿ ತ್ಯಾಜ್ಯನೀರಿನ ಪಾತ್ರವನ್ನು ಅನ್ವೇಷಿಸಿದೆ” ಎಂದು ಬರೆದುಕೊಂಡಿದ್ದಾರೆ.
“ಚರಂಡಿಯಲ್ಲಿ ದುರ್ವಾಸನೆ ಮತ್ತು ಇಲಿಗಳಿವೆ” ಎಂದು 68 ವರ್ಷದ ಗೇಟ್ಸ್ ವಿಡಿಯೋದಲ್ಲಿ ತಿಳಿಸಿದ್ದಾರೆ.
ಬ್ರಸೆಲ್ಸ್ ನಗರದ ಒಳಚರಂಡಿ ಇತಿಹಾಸದ ಬಗ್ಗೆ ಬಿಲ್ ಗೇಟ್ಸ್ ತಾವು ಹಂಚಿಕೊಂಡಿರುವ ವಿಡಿಯೋದಲ್ಲಿ, 1800 ರ ದಶಕದಲ್ಲಿ ಈ ನಗರದ ಸೆನ್ನೆ ನದಿಗೆ ಕೊಳಚೆನೀರು ಸೇರಿ ಅದು ಭಯಾನಕ ಕಾಲರಾ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಯಿತು ಎಂಬುದನ್ನು ತಿಳಿಸುತ್ತಾರೆ.
ಈ ಸುದ್ದಿ ಓದಿದ್ದೀರಾ? ಗುಜರಾತ್, ಮಧ್ಯಪ್ರದೇಶದ ಗ್ರಾಮೀಣ ಕಾರ್ಮಿಕರಿಗೆ ದೇಶದಲ್ಲೇ ಅತ್ಯಂತ ಕಡಿಮೆ ದಿನಗೂಲಿ: ಆರ್‌ಬಿಐ
ಬಿಲ್ ಗೇಟ್ಸ್ ಅವರು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‌ನ ಸಹ-ಸಂಸ್ಥಾಪಕರಾಗಿದ್ದಾರೆ. ಈ ಸಂಸ್ಥೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ನೈರ್ಮಲ್ಯ ಸೇರಿದಂತೆ ಜಾಗತಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸ್ವಚ್ಛಗೊಳಿಸುವ ಕೆಲಸವನ್ನು ಕೂಡ ಮಾಡುತ್ತದೆ.
ಕಳೆದ ಕೆಲವು ವರ್ಷಗಳಿಂದ ಪ್ರತಿ ವರ್ಷದ ವಿಶ್ವ ಶೌಚಾಲಯ ದಿನದಂದು ಬಿಲ್‌ಗೇಟ್ಸ್ ಅವರು, ವಿಶ್ವದ ವಿವಿಧ ದೇಶಗಳಲ್ಲಿ ಅತ್ಯಂತ ಹೆಚ್ಚು ಮಲಿನಗೊಂಡಿರುವ ನಗರಗಳು ಮತ್ತು ಸ್ಥಳಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.