ಗುಜರಾತ್, ಮಧ್ಯಪ್ರದೇಶದ ಗ್ರಾಮೀಣ ಕಾರ್ಮಿಕರಿಗೆ ದೇಶದಲ್ಲೇ ಅತ್ಯಂತ ಕಡಿಮೆ ದಿನಗೂಲಿ: ಆರ್‌ಬಿಐ

Date:

ಗುಜರಾತ್ ಮತ್ತು ಮಧ್ಯಪ್ರದೇಶದ ಗ್ರಾಮೀಣ ಕೃಷಿ ಕಾರ್ಮಿಕರು ದೇಶದಲ್ಲೇ ಅತ್ಯಂತ ಕಡಿಮೆ ದೈನಂದಿನ ವೇತನವನ್ನು ಪಡೆಯುತ್ತಿದ್ದಾರೆ. ಇದು ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಾಗಿದೆ ಎಂದು ಆರ್‌ಬಿಐ ಅಂಕಿಅಂಶಗಳು ತಿಳಿಸಿವೆ.

ಮಧ್ಯಪ್ರದೇಶದಲ್ಲಿ ಗ್ರಾಮೀಣ ಪ್ರದೇಶದ ಪುರುಷ ಕೃಷಿ ಕಾರ್ಮಿಕರು ಕೇವಲ 229.2 ರೂಪಾಯಿಗಳ ದೈನಂದಿನ ವೇತನವನ್ನು ಪಡೆದರೆ, ಮಾದರಿ ರಾಜ್ಯವೆಂದು ಹೇಳಿಕೊಳ್ಳುವ ಗುಜರಾತ್‌ನಲ್ಲಿ ಕೃಷಿ ಕಾರ್ಮಿಕರಿಗೆ ದೈನಂದಿನ ವೇತನ 241.9 ರೂ. ನೀಡಲಾಗುತ್ತಿದೆ. ಮಾರ್ಚ್ 2023ಕ್ಕೆ ಕೊನೆಗೊಂಡ ವರ್ಷದಲ್ಲಿ ರಾಷ್ಟ್ರೀಯ ಸರಾಸರಿ ವೇತನ 345.7 ರೂ. ಇದೆ.

ಮಧ್ಯಪ್ರದೇಶದಲ್ಲಿ ಒಬ್ಬ ಗ್ರಾಮೀಣ ಕೃಷಿ ಕಾರ್ಮಿಕನಿಗೆ ತಿಂಗಳಿಗೆ 25 ದಿನ ಕೆಲಸ ಸಿಕ್ಕಿದರೆ, ಅವರ ಮಾಸಿಕ ಗಳಿಕೆಯು ಸುಮಾರು 5,730 ರೂ.ಗಳಷ್ಟಿರುತ್ತದೆ. ಇದು ನಾಲ್ಕು ಅಥವಾ ಐದು ಜನರ ಕುಟುಂಬದ ವೆಚ್ಚವನ್ನು ಪೂರೈಸಲು ಸಾಕಾಗುವುದಿಲ್ಲ. ಕೇರಳದ ಗ್ರಾಮೀಣ ಕೃಷಿ ಕಾರ್ಮಿಕ ದಿನಕ್ಕೆ 764.3 ರೂ.ಗಳ ಅತ್ಯಧಿಕ ವೇತನವನ್ನು ಪಡೆಯುತ್ತಾನೆ. ಅವರು ತಿಂಗಳಲ್ಲಿ 25 ದಿನಗಳ ಕೆಲಸಕ್ಕೆ ಸರಾಸರಿ 19,107 ರೂ.ಗಳನ್ನು ಪಡೆಯುತ್ತಾರೆ. ಗುಜರಾತಿನಲ್ಲಿ, ಕೃಷಿ ಕಾರ್ಮಿಕರ ಮಾಸಿಕ ವೇತನವು ಸುಮಾರು 6,047 ರೂ.ಇದೆ.

ಇತರ ಕಳಪೆ ವೇತನದ ರಾಜ್ಯಗಳ ಪೈಕಿ ಉತ್ತರ ಪ್ರದೇಶದ ಗ್ರಾಮೀಣ ಕೃಷಿ ಕಾರ್ಮಿಕರು 2021-22ರಲ್ಲಿ ಸರಾಸರಿ 309.3 ರೂ ಮತ್ತು ಒಡಿಶಾದಲ್ಲಿ 285.1 ರೂ. ದೈನಂದಿನ ವೇತನವನ್ನು ಪಡೆದಿದ್ದಾರೆ. ಅತಿ ಹೆಚ್ಚು ಕೈಗಾರಿಕೀಕರಣಗೊಂಡ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಹಾರಾಷ್ಟ್ರದಲ್ಲಿ ಪುರುಷ ಕೃಷಿ ಕಾರ್ಮಿಕರಿಗೆ ದಿನಕ್ಕೆ 303.5 ರೂ. ವೇತನ ನೀಡಲಾಗುತ್ತಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರದ ಆರು ತಿಂಗಳ ‘ಅನನ್ಯ ಸಾಧನೆ’ ಮತ್ತು ವಿರೋಧ ಪಕ್ಷಗಳ ‘ಜವಾಬ್ದಾರಿ’

ರೇಟಿಂಗ್ ಸಂಸ್ಥೆ ಕ್ರಿಸಿಲ್‌ನ ಮಾಹಿತಿ ಪ್ರಕಾರ, ಈ ವರ್ಷದ ಸೆಪ್ಟೆಂಬರ್‌ನಲ್ಲಿ ಸಸ್ಯಾಹಾರಿ ಊಟದ ಬೆಲೆ 27.9 ರೂ ಮತ್ತು ಮಾಂಸಾಹಾರಿ ಊಟದ ಬೆಲೆ 61.4 ರೂ. ಇದೆ. ಇದರರ್ಥ ಐದು ಜನರ ಕುಟುಂಬವು ಸಸ್ಯಾಹಾರಿ ಊಟಕ್ಕೆ 140 ರೂ ಅಥವಾ ತಿಂಗಳಿಗೆ 8,400 ರೂ. ಪಾವತಿಸಬೇಕು.

ಕೇರಳದಲ್ಲಿನ ಹೆಚ್ಚಿನ ವೇತನವು ಇತರ ಕಳಪೆ ವೇತನದ ರಾಜ್ಯಗಳಿಂದ ಕೃಷಿ ಕಾರ್ಮಿಕರನ್ನು ಆಕರ್ಷಿಸುತ್ತದೆ. ಈ ಹಿನ್ನಲೆಯಲ್ಲಿ ಸುಮಾರು 25 ಲಕ್ಷ ವಲಸೆ ಕಾರ್ಮಿಕರು ಈ ರಾಜ್ಯದಲ್ಲಿ ವಾಸಿಸುತ್ತಿದ್ದಾರೆ ಎಂದು ಆರ್‌ಬಿಐ ಅಂಕಿಅಂಶಗಳು ಹೇಳುತ್ತವೆ.

ಜಮ್ಮು ಮತ್ತು ಕಾಶ್ಮೀರ,ಹಿಮಾಚಲ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಕೃಷಿ ಕಾರ್ಮಿಕರು ಅನುಕ್ರಮವಾಗಿ 550.4 ರೂ.,473.3 ರೂ. ಮತ್ತು 470 ರೂ. ದಿನಗೂಲಿಯನ್ನು ಪಡೆಯುತ್ತಿದ್ದಾರೆ.

ಆರ್‌ಬಿಐ ಅಂಕಿಅಂಶಗಳಂತೆ ಪುರುಷ ಕೃಷಿಯೇತರ ಕಾರ್ಮಿಕರು ಮಧ್ಯಪ್ರದೇಶದಲ್ಲಿ ಸರಾಸರಿ 246.3 ರೂ.,ಗುಜರಾತಿನಲ್ಲಿ 273.1ರೂ.ಮತ್ತು ತ್ರಿಪುರದಲ್ಲಿ 280.6 ರೂ.ದಿನಗೂಲಿ ಪಡೆಯುತ್ತಿದ್ದಾರೆ.ಇದು ರಾಷ್ಟ್ರೀಯ ಸರಾಸರಿ (348 ರೂ.)ಗಿಂತ ಕಡಿಮೆಯಾಗಿದೆ. ಈ ಕ್ಷೇತ್ರದಲ್ಲಿಯೂ ಕೇರಳವು ಮತ್ತೆ ಮುಂಚೂಣಿಯಲ್ಲಿದೆ.

ಮಾರ್ಚ್ 2023ಕ್ಕೆ ಅಂತ್ಯಗೊಂಡ ವರ್ಷದಲ್ಲಿ ಅಲ್ಲಿ ಕೃಷಿಯೇತರ ಕಾರ್ಮಿಕರು 696.6 ರೂ.ದಿನಗೂಲಿ ಗಳಿಸಿದ್ದರೆ, ನಂತರದ ಸ್ಥಾನಗಳಲ್ಲಿ ಜಮ್ಮು-ಕಾಶ್ಮೀರ (517.9 ರೂ.),ತಮಿಳುನಾಡು (481.5 ರೂ.) ಮತ್ತು ಹರಿಯಾಣ (451 ರೂ.) ರಾಜ್ಯಗಳಿವೆ.

ಇನ್ನು ಗ್ರಾಮೀಣ ಪುರುಷ ಕಟ್ಟಡ ಕಾರ್ಮಿಕರ ವಿಷಯಕ್ಕೆ ಬಂದರೆ ಇಲ್ಲಿಯೂ ಮಧ್ಯಪ್ರದೇಶ ಮತ್ತು ಗುಜರಾತ್ ಕನಿಷ್ಠ ಸ್ಥಾನಗಳಲ್ಲಿವೆ. ರಾಷ್ಟ್ರೀಯ ಸರಾಸರಿಯು 393.3 ರೂ.ಆಗಿದ್ದರೆ ಗುಜರಾತಿನನಲ್ಲಿ 323.2 ರೂ.,ಮಧ್ಯಪ್ರದೇಶದಲ್ಲಿ 278.7 ರೂ. ಮತ್ತು ತ್ರಿಪುರಾದಲ್ಲಿ 286.1 ರೂ.ಆಗಿತ್ತು.

ಮಾರ್ಚ್‌ 2023ಕ್ಕೆ ಅಂತ್ಯಗೊಂಡ ವರ್ಷದಲ್ಲಿ ಗ್ರಾಮೀಣ ಪುರುಷ ಕಟ್ಟಡ ಕಾರ್ಮಿಕರ ದಿನಗೂಲಿ ಕೇರಳದಲ್ಲಿ 852.5 ರೂ.,ಜಮ್ಮು-ಕಾಶ್ಮೀರದಲ್ಲಿ 534.5 ರೂ.,ತಮಿಳುನಾಡಿನಲ್ಲಿ 500.9 ರೂ. ಮತ್ತು ಹಿಮಾಚಲ ಪ್ರದೇಶದಲ್ಲಿ 498.3 ರೂ.ಆಗಿತ್ತು.

ಕ್ರಿಸಿಲ್ ಅಧ್ಯಯನದ ಪ್ರಕಾರ, ಗ್ರಾಮೀಣ ಆದಾಯದ ನಿರೀಕ್ಷೆಗಳು ಹವಾಮಾನದ ಬದಲಾವಣೆಗಳ ಮೇಲೆ ಅವಲಂಬಿತವಾಗಿರುತ್ತದೆ. ಕೃಷಿ ಮತ್ತು ಕೃಷಿಯೇತರ ಕಾರ್ಮಿಕರ ವೇತನ ಬೆಳವಣಿಗೆಯು 2022-23ರ ಅವಧಿಯಲ್ಲಿ ಅನುಕ್ರಮವಾಗಿ ಶೇ. 5.8 ಮತ್ತು ಶೇ. 4.9 ರಷ್ಟು ಕಡಿಮೆಯಾಗಿದೆ. ಗ್ರಾಮೀಣ ಉದ್ಯೋಗಗಳು ಕೃಷಿಯ ಮೇಲೆ ಅವಲಂಬಿತವಾಗಿದ್ದು, ಇದು ಮುಂಗಾರು ಮತ್ತು ಕೃಷಿ ಬೆಳೆಗಳ ಉತ್ಪಾದನೆಗಳ ಮೇಲೆ ಪ್ರಭಾವಿತವಾಗಿರುತ್ತದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಗಳದ ವೇಳೆ 4ನೇ ತರಗತಿ ವಿದ್ಯಾರ್ಥಿಗೆ 108 ಬಾರಿ ಕೈವಾರದಿಂದ ಚುಚ್ಚಿದ ಸಹಪಾಠಿಗಳು

ಖಾಸಗಿ ಶಾಲೆಯೊಂದರಲ್ಲಿ ನಡೆದ ಜಗಳದ ವೇಳೆ 4ನೇ ತರಗತಿಯ ವಿದ್ಯಾರ್ಥಿಯೊಬ್ಬನ ಮೇಲೆ...

ಥೈಲ್ಯಾಂಡ್, ಶ್ರೀಲಂಕಾ ಬಳಿಕ ಭಾರತೀಯರಿಗೆ ವೀಸಾ ಮುಕ್ತ ಪ್ರವೇಶಕ್ಕೆ ಮಲೇಷ್ಯಾ ಅನುಮತಿ

ಥೈಲ್ಯಾಂಡ್, ಶ್ರೀಲಂಕಾ ದೇಶಗಳ ನಂತರ ಈಗ ಮಲೇಷ್ಯಾ ಕೂಡ ಭಾರತೀಯರಿಗೆ ವೀಸಾ...

ಗುಜರಾತ್ | ಅಕಾಲಿಕ ಮಳೆಯಿಂದ ಸಿಡಿಲು ಬಡಿದು 20 ಮಂದಿ ಸಾವು

ಗುಜರಾತ್‌ನ 251 ತಾಲೂಕುಗಳ ಪೈಕಿ 230ಕ್ಕೂ ಹೆಚ್ಚು ತಾಲೂಕುಗಳಲ್ಲಿ ಗುಡುಗು ಸಹಿತ...

ಉತ್ತರ ಪ್ರದೇಶ: ದಲಿತ ಬಾಲಕನಿಗೆ ಹಲ್ಲೆ ನಡೆಸಿ ಮೂತ್ರ ಕುಡಿಯುವಂತೆ ಒತ್ತಾಯ

ಹದಿನಾಲ್ಕು ವರ್ಷದ ದಲಿತ ಸಮುದಾಯದ ಬಾಲಕನೊಬ್ಬನಿಗೆ ಅಮಾನುಷವಾಗಿ ಹಲ್ಲೆ ನಡೆಸಿ ಮೂತ್ರ...