ಭಾನುವಾರ ಬೆಳಿಗ್ಗೆ ಡೆಲವೇರ್ನಲ್ಲಿ ಕ್ವಾಡ್ ನಾಯಕರೊಂದಿಗೆ ವೇದಿಕೆಯನ್ನು ಹಂಚಿಕೊಂಡ ಯುಎಸ್ ಅಧ್ಯಕ್ಷ ಜೋ ಬೈಡೆನ್ ವೇದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪರಿಚಯಿಸಲು ಮರೆತಿರುವ ಘಟನೆ ನಡೆದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವಿಶ್ವದಾದ್ಯಂತ ಕ್ಯಾನ್ಸರ್ ಕೊನೆಗೊಳಿಸಲು ‘ಕ್ವಾಡ್ ಕ್ಯಾನ್ಸರ್ ಮೂನ್ಶೂಟ್’ ಉಪಕ್ರಮವನ್ನು ಬೈಡೆನ್, ಪಿಎಂ ಮೋದಿ, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಮತ್ತು ಜಪಾನ್ನ ಫ್ಯೂಮಿಯೊ ಕಿಶಿಡಾ ಅವರು ಪ್ರಾರಂಭಿಸಿದರು.
ಕ್ಯಾನ್ಸರ್ ಮೂನ್ಶಾಟ್ ಉಪಕ್ರಮದ ಕುರಿತು ಮಾತನಾಡಿದ ನಂತರ ಅಮೆರಿಕ ಅಧ್ಯಕ್ಷ ಬೈಡೆನ್ ಪ್ರಧಾನಿ ಮೋದಿಯವರನ್ನು ವೇದಿಕೆಯಲ್ಲಿ ಪರಿಚಯಿಸಬೇಕಿತ್ತು. ಆದರೆ ಯುಎಸ್ ಅಧ್ಯಕ್ಷರು ತಾನು ಯಾರನ್ನು ಪರಿಚಯಿಸಬೇಕು ಎಂಬುದನ್ನೇ ಮರೆತಿದ್ದಾರೆ. “ಮುಂದೆ ಯಾರು” ಎಂದು ಪ್ರಶ್ನಿಸಿದ್ದಾರೆ, ಗೊಂದಲಕ್ಕೊಳಗಾಗಿದ್ದಾರೆ.
“ನಾನು ಮುಂದೆ ಯಾರನ್ನು ಪರಿಚಯಿಸುತ್ತಿದ್ದೇನೆ?, ಮುಂದೆ ಯಾರು” ಎಂದು ಬೈಡೆನ್ ಪ್ರಶ್ನಿಸಿದ್ದಾರೆ. ಅದಾದ ಬಳಿಕ ಕಾರ್ಯಕ್ರಮದ ನಿರ್ವಾಹಕರು ಪ್ರಧಾನಿ ಮೋದಿ ಅವರ ಹೆಸರನ್ನು ಘೋಷಿಸಿದ್ದಾರೆ. ಬಳಿಕ ವೇದಿಕೆಯಲ್ಲೇ ಕುಳಿತಿದ್ದ ಮೋದಿ ಅವರು ಭಾಷಣ ಮಾಡಲು ಎದ್ದು ಪೋಡಿಯಂ ಬಳಿ ಬಂದಿದ್ದಾರೆ.
ಇದನ್ನು ಓದಿದ್ದೀರಾ? ಅಮೆರಿಕ ಚುನಾವಣೆ | ನಿಧಿ ಸಂಗ್ರಹಣೆ ಮತ್ತು ವೆಚ್ಚದಲ್ಲಿ ಟ್ರಂಪ್ಗಿಂತ ಬೈಡೆನ್ ಮೇಲುಗೈ
ಸದ್ಯ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಜೋ ಬೈಡೆನ್ ಇತ್ತೀಚೆಗೆ ಭಾರೀ ಮರೆವು ಹೊಂದಿದ್ದಾರೆ. ತಾನು ಎಲ್ಲಿದ್ದೇನೆ, ಮುಂದೇನು ಮಾಡಬೇಕು ಎಂಬುದನ್ನು ಕೂಡಾ ಮರೆತು ಬಿಡುತ್ತಾರೆ ಎಂದು ನೆಟ್ಟಿಗರು ಹೇಳಿದ್ದಾರೆ.
ಇತ್ತೀಚೆಗೆ ಜೋ ಬೈಡೆನ್ ಅವರು ಸಾರ್ವಜನಿಕ ಕಾರ್ಯಕ್ರಮಗಳ ಸಮಯದಲ್ಲಿ ದಿಢೀರ್ ಆಗಿ ಮಾತು ಮರೆಯುವ ಘಟನೆಗಳನ್ನು ನಡೆಯುತ್ತಿದೆ. ಆದ್ದರಿಂದ ನೆಟ್ಟಿಗರು 81 ವರ್ಷ ವಯಸ್ಸಿನ ಅಧ್ಯಕ್ಷರ ಮಾನಸಿಕ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಈ ವರ್ಷದ ಜುಲೈನಲ್ಲಿ, ಜೋ ಬೈಡೆನ್ ವಾಷಿಂಗ್ಟನ್ನಲ್ಲಿ ನಡೆದ ನ್ಯಾಟೋ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಅಲ್ಲಿ ಆಕಸ್ಮಿಕವಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಂದು ಉಲ್ಲೇಖಿಸಿದರು.
We really don’t have a president.
— Gunther Eagleman™ (@GuntherEagleman) September 21, 2024
Biden completely FORGOT he was at a press conference with the Prime Minister of India.
The entire world is laughing at us.
This guy is COOKED. pic.twitter.com/useM07uh0R
