ಎಕ್ಸಿಟ್ ಪೋಲ್‌ನಲ್ಲಿ ಯೂರೋಪಿಯನ್ ಒಕ್ಕೂಟದ ಬಲಪಂಥೀಯ ಪಕ್ಷಗಳಿಗೆ ಮುನ್ನಡೆಯಾದ ನಂತರ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರಾನ್ ಅವರು ಸಂಸತ್ತನ್ನು ವಿಸರ್ಜಿಸಿದ್ದು, ಈ ತಿಂಗಳ ಅಂತ್ಯದಲ್ಲಿ ತುರ್ತು ಚುನಾವಣೆ ಘೋಷಿಸಿದ್ದಾರೆ.
ಯೂರೋಪಿಯನ್ ಒಕ್ಕೂಟದ ಎಕ್ಸಿಟ್ ಪೋಲ್‌ನಲ್ಲಿ ಫ್ರಾನ್ಸ್‌ನ ವಿರೋಧ ಪಕ್ಷವಾದ ಮರೈನ್ ಲೀ ಪೆನ್ಸ್ ಪಕ್ಷವು ದೊಡ್ಡ ಗೆಲವು ಎಂದು ಪ್ರಕಟವಾದ ನಂತರ ಫ್ರಾನ್ಸ್ ಅಧ್ಯಕ್ಷೆ ಇಮ್ಯಾನುವೆಲ್ ಮ್ಯಾಕ್ರಾನ್ ಅವರು ಸಂಸತ್ತನ್ನು ವಿಸರ್ಜಿಸಿದ್ದಾರೆ.
ಎಕ್ಸಿಟ್ ಪೋಲ್‌ನಲ್ಲಿ ಜರ್ಮನಿ ಹಾಗೂ ಆಸ್ಟ್ರೀಯಾದ ಬಲಪಂಥೀಯ ಪಕ್ಷಗಳಿಗೆ ಮುನ್ನಡೆ ಎಂದು ಹೇಳಲಾಗಿದೆ. ಯೂರೋಪ್ ಒಕ್ಕೂಟದ 27 ಸದಸ್ಯ ರಾಷ್ಟ್ರಗಳಲ್ಲಿ ಮೂರು ದಿನಗಳ ಕಾಲ ನಡೆದ ಮತದಾನ ಭಾನುವಾರ ಮುಕ್ತಾಯವಾಯಿತು.
ಈ ಸುದ್ದಿ ಓದಿದ್ದೀರಾ? ಗಾಜಾ ಮೇಲೆ ಇಸ್ರೇಲ್ ದಾಳಿಯನ್ನು ಜನಾಂಗೀಯ ಹತ್ಯೆ ಎಂದು ಖಂಡಿಸಿದ ಅಮೆರಿಕದ ಮುಸ್ಲಿಂ ನರ್ಸ್ ಕೆಲಸದಿಂದ ವಜಾ
ಫ್ರಾನ್ಸ್‌ನ ಆಡಳಿತಾರೂಢ ರಾನೈಸ್ಸೆನ್ಸ್ ಪಕ್ಷಕ್ಕಿಂತ ಬಲಪಂಥೀಯ ಪಕ್ಷಗಳು ಶೇ.32 ಮತಗಳನ್ನು ಪಡೆದು ಜಯಗಳಿಸುತ್ತವೆ ಎಂದು ಎಕ್ಸಿಟ್ ಪೋಲ್‌ನಲ್ಲಿ ತಿಳಿಸಲಾಗಿದೆ.
ಸಂಸತ್ತಿನ ಕೆಳಮನೆಯ ಚುನಾವಣೆಗಳಲ್ಲಿ ಮೊದಲ ಹಂತವು ಜೂನ್ 30 ರಂದು ನಡೆದರೆ, ಎರಡನೇ ಹಂತವು ಜುಲೈ 7 ರಂದು ನಡೆಯಲಿದೆ ಎಂದು ಇಮ್ಯಾನುವೆಲ್ ಮ್ಯಾಕ್ರಾನ್ ತಿಳಿಸಿದ್ದಾರೆ.
“ ಮುಂಬರುವ ರಾಷ್ಟ್ರೀಯ ಚುನಾವಣೆಗಳಲ್ಲಿ ಫ್ರಾನ್ಸ್ ಜನತೆ ತಮ್ಮ ಪಕ್ಷಕ್ಕೆ ಬಹುಮತ ನೀಡಿದರೆ ತಾವು ಸರ್ಕಾರ ರಚಿಸುತ್ತೇವೆ” ಎಂದು ಇಮ್ಯಾನುವೆಲ್ ಮ್ಯಾಕ್ರಾನ್ ಹೇಳಿದ್ದಾರೆ
ಭಾನುವಾರದ ಎಕ್ಸಿಟ್ ಪೋಲ್‌ನಲ್ಲಿ ತಮ್ಮ ಪಕ್ಷಕ್ಕೆ ಹಿನ್ನೆಡೆಯಾದ ಕಾರಣ ಬೆಲ್ಜಿಯಂ ಪ್ರಧಾನಿ ಅಲೆಕ್ಸಾಂಡ್ರಿಯಾ ಡೆ ಕ್ರೋ ಅವರು ರಾಜೀನಾಮೆ ನೀಡಿದ್ದಾರೆ.
ಹಂಗೇರಿಯಾ ಪ್ರಧಾನಿ ವಿಕ್ಟರ್ ಒಬ್ರಯಾನ್ ಅವರ ಆಡಳಿತಾರೂಢ ಪಕ್ಷ ಕೆಡಿಎನ್‌ಪಿಗೂ ಕೂಡ ಬಹುಮತ ಬರಲಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
