ಎಕ್ಸಿಟ್ ಪೋಲ್‌ನಲ್ಲಿ ಯೂರೋಪಿಯನ್ ಒಕ್ಕೂಟದ ಬಲ ಪಂಥೀಯ ಪಕ್ಷಗಳ ಮುನ್ನಡೆ: ಸಂಸತ್ ವಿಸರ್ಜಿಸಿದ ಫ್ರಾನ್ಸ್ ಅಧ್ಯಕ್ಷ

Date:

ಎಕ್ಸಿಟ್‌ ಪೋಲ್‌ನಲ್ಲಿ ಯೂರೋಪಿಯನ್‌ ಒಕ್ಕೂಟದ ಬಲಪಂಥೀಯ ಪಕ್ಷಗಳಿಗೆ ಮುನ್ನಡೆಯಾದ ನಂತರ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರಾನ್‌ ಅವರು ಸಂಸತ್ತನ್ನು ವಿಸರ್ಜಿಸಿದ್ದು, ಈ ತಿಂಗಳ ಅಂತ್ಯದಲ್ಲಿ ತುರ್ತು ಚುನಾವಣೆ ಘೋಷಿಸಿದ್ದಾರೆ.

ಯೂರೋಪಿಯನ್‌ ಒಕ್ಕೂಟದ ಎಕ್ಸಿಟ್‌ ಪೋಲ್‌ನಲ್ಲಿ ಫ್ರಾನ್ಸ್‌ನ ವಿರೋಧ ಪಕ್ಷವಾದ ಮರೈನ್‌ ಲೀ ಪೆನ್ಸ್‌ ಪಕ್ಷವು ದೊಡ್ಡ ಗೆಲವು ಎಂದು ಪ್ರಕಟವಾದ ನಂತರ ಫ್ರಾನ್ಸ್‌ ಅಧ್ಯಕ್ಷೆ ಇಮ್ಯಾನುವೆಲ್ ಮ್ಯಾಕ್ರಾನ್‌ ಅವರು ಸಂಸತ್ತನ್ನು ವಿಸರ್ಜಿಸಿದ್ದಾರೆ.

ಎಕ್ಸಿಟ್‌ ಪೋಲ್‌ನಲ್ಲಿ ಜರ್ಮನಿ ಹಾಗೂ ಆಸ್ಟ್ರೀಯಾದ ಬಲಪಂಥೀಯ ಪಕ್ಷಗಳಿಗೆ ಮುನ್ನಡೆ ಎಂದು ಹೇಳಲಾಗಿದೆ. ಯೂರೋಪ್‌ ಒಕ್ಕೂಟದ 27 ಸದಸ್ಯ ರಾಷ್ಟ್ರಗಳಲ್ಲಿ ಮೂರು ದಿನಗಳ ಕಾಲ ನಡೆದ ಮತದಾನ ಭಾನುವಾರ ಮುಕ್ತಾಯವಾಯಿತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಗಾಜಾ ಮೇಲೆ ಇಸ್ರೇಲ್ ದಾಳಿಯನ್ನು ಜನಾಂಗೀಯ ಹತ್ಯೆ ಎಂದು ಖಂಡಿಸಿದ ಅಮೆರಿಕದ ಮುಸ್ಲಿಂ ನರ್ಸ್ ಕೆಲಸದಿಂದ ವಜಾ

ಫ್ರಾನ್ಸ್‌ನ ಆಡಳಿತಾರೂಢ ರಾನೈಸ್ಸೆನ್ಸ್‌ ಪಕ್ಷಕ್ಕಿಂತ ಬಲಪಂಥೀಯ ಪಕ್ಷಗಳು ಶೇ.32 ಮತಗಳನ್ನು ಪಡೆದು ಜಯಗಳಿಸುತ್ತವೆ ಎಂದು ಎಕ್ಸಿಟ್‌ ಪೋಲ್‌ನಲ್ಲಿ ತಿಳಿಸಲಾಗಿದೆ.

ಸಂಸತ್ತಿನ ಕೆಳಮನೆಯ ಚುನಾವಣೆಗಳಲ್ಲಿ ಮೊದಲ ಹಂತವು ಜೂನ್‌ 30 ರಂದು ನಡೆದರೆ, ಎರಡನೇ ಹಂತವು ಜುಲೈ 7 ರಂದು ನಡೆಯಲಿದೆ ಎಂದು ಇಮ್ಯಾನುವೆಲ್ ಮ್ಯಾಕ್ರಾನ್‌ ತಿಳಿಸಿದ್ದಾರೆ.

“ ಮುಂಬರುವ ರಾಷ್ಟ್ರೀಯ ಚುನಾವಣೆಗಳಲ್ಲಿ ಫ್ರಾನ್ಸ್‌ ಜನತೆ ತಮ್ಮ ಪಕ್ಷಕ್ಕೆ ಬಹುಮತ ನೀಡಿದರೆ ತಾವು ಸರ್ಕಾರ ರಚಿಸುತ್ತೇವೆ” ಎಂದು ಇಮ್ಯಾನುವೆಲ್ ಮ್ಯಾಕ್ರಾನ್‌ ಹೇಳಿದ್ದಾರೆ

ಭಾನುವಾರದ ಎಕ್ಸಿಟ್‌ ಪೋಲ್‌ನಲ್ಲಿ ತಮ್ಮ ಪಕ್ಷಕ್ಕೆ ಹಿನ್ನೆಡೆಯಾದ ಕಾರಣ ಬೆಲ್ಜಿಯಂ ಪ್ರಧಾನಿ ಅಲೆಕ್ಸಾಂಡ್ರಿಯಾ ಡೆ ಕ್ರೋ ಅವರು ರಾಜೀನಾಮೆ ನೀಡಿದ್ದಾರೆ.

ಹಂಗೇರಿಯಾ ಪ್ರಧಾನಿ ವಿಕ್ಟರ್‌ ಒಬ್ರಯಾನ್‌ ಅವರ ಆಡಳಿತಾರೂಢ ಪಕ್ಷ ಕೆಡಿಎನ್‌ಪಿಗೂ ಕೂಡ ಬಹುಮತ ಬರಲಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ರಷ್ಯಾ ಭೇಟಿ: ನ್ಯಾಟೋ ಶೃಂಗಸಭೆಯಲ್ಲಿ ಅಮೆರಿಕ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಮಾಸ್ಕೋ ಭೇಟಿಯ ಸಮಯದಲ್ಲಿ ಉಭಯ...

ಪ್ರಧಾನಿಗೆ ರಷ್ಯಾದ ಪ್ರತಿಷ್ಠಿತ ಪ್ರಶಸ್ತಿ: ಮೋದಿ ಮಾಡಿದ ಘನಕಾರ್ಯವಾದರೂ ಏನು?

ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ಅವರಿಗೆ...

ಶಾಲಾ ಮಿನಿಬಸ್ ಅಪಘಾತ; 12 ಮಕ್ಕಳು ದಾರುಣ ಸಾವು

ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್‌ವೊಂದು ಅಪಘಾತಕ್ಕೀಡಾಗಿದ್ದು, 12 ಮಕ್ಕಳು ಸಾವನ್ನಪ್ಪಿರುವ ದುರ್ಘಟನೆ...