ಮೆಕ್ಸಿಕೋ ನಗರದ ಗ್ವಾನಾಜುವಾಟೊ ನಗರದಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿ ನಡೆದಿದ್ದು, 12 ಜನರು ಸಾವನ್ನಪ್ಪಿದ್ದಾರೆ.
ಬುಧವಾರ ನಡೆಯುತ್ತಿದ್ದ ಧಾರ್ಮಿಕ ಆಚರಣೆ ಸಂದರ್ಭದ ವೇಳೆ ಸಾಮೂಹಿಕ ಗುಂಡಿನ ದಾಳಿ ನಡೆದಿದೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇರಾಪುವಾಟೊ ನಗರದಲ್ಲಿ ಸೇಂಟ್ ಜಾನ್ ದಿ ಬ್ಯಾಪ್ಟಿಸ್ಟ್ ಆಚರಣೆಯ ವೇಳೆ ಜನರು ಬೀದಿಯಲ್ಲಿ ನೃತ್ಯ ಹಾಗೂ ಮದ್ಯಪಾನ ಮಾಡುತ್ತಿದ್ದರು. ಈ ವೇಳೆ ಬಂದೂಕುಧಾರಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮೋಜು ಮಾಡುತ್ತಿದ್ದ ಜನರು ಇದ್ದಕ್ಕಿದ್ದಂತೆ ಆತಂಕದಲ್ಲಿ ದಾಳಿಯಿಂದ ತಪ್ಪಿಸಿಕೊಳ್ಳಲು, ಓಡಿರುವುದು ಕಂಡು ಬಂದಿದೆ.
ಮೆಕ್ಸಿಕೋ ನಗರದ ವಾಯುವ್ಯದಲ್ಲಿರುವ ಗುವಾಂಜುವಾಟೊದಲ್ಲಿ ನಿಯಂತ್ರಣ ಸಾಧಿಸಲು ವಿವಿಧ ಸಂಘಟಿತ ಅಪರಾಧ ಗುಂಪುಗಳು ಹೋರಾಟ ನಡೆಸುತ್ತಿವೆ. ಹೀಗಾಗಿ ಮಿಕ್ಸಿಕೋದ ಅತ್ಯಂತ ಹಿಂಸಾತ್ಮಕ ರಾಜ್ಯಗಳಲ್ಲಿ ಈ ನಗರ ಒಂದಾಗಿದೆ.
ವರ್ಷದ ಮೊದಲ ಐದು ತಿಂಗಳಲ್ಲಿ ಈ ನಗರದಲ್ಲಿ ಒಟ್ಟು 1,435 ಹತ್ಯೆಗಳು ನಡೆದಿವೆ. ಕಳೆದ ತಿಂಗಳು ಕೂಡ ಇದೇ ರೀತಿಯ ಘಟನೆ ನಡೆದಿತ್ತು. ಗ್ವಾನಾಜುವಾಟೊದ ಸ್ಯಾನ್ ಬಾರ್ಟೊಲೊ ಡಿ ಬೆರಿಯೊಸ್‌ನಲ್ಲಿ ಕ್ಯಾಥೋಲಿಕ್ ಚರ್ಚ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ ನಡೆದಿತ್ತು. ಘಟನೆಯಲ್ಲಿ 7 ಜನರು ಸಾವನ್ನಪ್ಪಿದ್ದರು.
Will Diego Luna and the Hollywood crowd raise their voices when it comes to #Mexico's daily bloodbath or is bashing @realDonaldTrump their only safe script?
— David Wolf (@DavidWolf777) June 25, 2025
At least 10 dead and dozens injured in this party shooting yesterday.#Narcostate #Terrorism #morena https://t.co/hkrhuOS6wT pic.twitter.com/0yoRLfoMDC