ವಿದೇಶ ಪ್ರವಾಸ ಪ್ರಿಯ ನರೇಂದ್ರ ಮೋದಿ ರಷ್ಯಾ ಭೇಟಿ; ತನ್ನದೇ ಸಿನಿಮಾ ತಾನೇ ಹೀರೋ!

Date:

Advertisements

ವಿದೇಶ ಪ್ರವಾಸ ಪ್ರಿಯ ನರೇಂದ್ರ ಮೋದಿ ಮೂರನೇ ಅವಧಿಗೆ ಭಾರತದ ಪ್ರಧಾನಿಯಾದ ಬಳಿಕ ಎರಡನೇ ಬಾರಿಗೆ ರಷ್ಯಾಕ್ಕೆ ಭೇಟಿ ನೀಡಿದ್ದಾರೆ. ಅಕ್ಟೋಬರ್ 22ರಿಂದ ಅಕ್ಟೋಬರ್ 24ರವರೆಗೆ ಪ್ರಧಾನಿ ಮೋದಿ ರಷ್ಯಾ ಪ್ರವಾಸದಲ್ಲಿರಲಿದ್ದಾರೆ. ಜುಲೈನಲ್ಲಿ ರಷ್ಯಾಗೆ ತೆರಳಿದ್ದ ಮೋದಿ, ಅಲ್ಲಿನ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ರನ್ನು ತಬ್ಬಿಕೊಂಡು ಉಭಯ ದೇಶಗಳ ಸಂಬಂಧ ಇನ್ನಷ್ಟು ಗಟ್ಟಿಯಾಗಿದೆ ಎಂದಿದ್ದರು. ಇದೀಗ, ಮೂರು ತಿಂಗಳ ಬಳಿಕ ಮತ್ತೆ ರಷ್ಯಾಕ್ಕೆ ಹಾರಿದ್ದಾರೆ.

ಯಾವ ನಟರಿಗಿಂತಲೂ ತಾನು ಕಡಿಮೆಯೇನಿಲ್ಲ ಎಂಬಂತೆ ಕಳೆದ ಹತ್ತು ವರ್ಷಗಳಿಂದ ನಟಿಸಿ ಪ್ರವೀಣತೆ ಹೊಂದಿರುವ ಪ್ರಧಾನಿ ಮೋದಿ ಈಗ ಮತ್ತೆ ತನ್ನನ್ನು ತಾನು ಹೀರೋ ಎಂದು ಕರೆಸಿಕೊಳ್ಳಲು ಮುಂದಾಗಿದ್ದಾರೆ. ಉಕ್ರೇನ್‌ನಲ್ಲಿ ನರಮೇಧ ನಡೆಸುತ್ತಿರುವ ರಷ್ಯಾದೊಂದಿಗೆ ನಂಟನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿರುವ ಮೋದಿ, ರಷ್ಯಾ ತನ್ನ ಸೇನೆಗೆ ಭಾರತೀಯರನ್ನು ಬಲವಂತವಾಗಿ ಸೇರಿಸಿಕೊಳ್ಳುತ್ತಿದ್ದರೂ ಮೌನವಾಗಿದ್ದಾರೆ.

ರಷ್ಯಾದಲ್ಲಿ ಉದ್ಯೋಗಕೊಡಿಸುವ ಆಮಿಷವೊಡ್ಡಿ ಭಾರತೀಯ ಯುವಕರನ್ನು ಕೆಲವು ಏಜೆಂಟ್‌ಗಳು ರಷ್ಯಾಗೆ ಕರೆದೊಯ್ದು, ಯುದ್ಧ ಪೀಡಿತ ಪ್ರದೇಶದಲ್ಲಿ ರಷ್ಯಾ ಸೇನೆ ಜೊತೆ ಕೆಲಸ ಮಾಡುವಂತೆ ಒತ್ತಾಯಿಸಿ, ರಷ್ಯಾ ಸೇನೆಗೆ ಒಪ್ಪಿಸಿದ್ದಾರೆ. ರಷ್ಯಾ ಸೇನೆಗಾಗಿ ಕೆಲಸ ಮಾಡದಿದ್ದರೆ, ಜೈಲಿಗಟ್ಟುವುದಾಗಿ ಬೆದರಿಕೆ ಹಾಕಿದ್ದಾರೆ. ರಷ್ಯಾ ಸೇನೆಯ ಬಲವಂತದಿಂದ ಯುದ್ಧಪೀಡಿತ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದವರಲ್ಲಿ ಎಂಟು ಮಂದಿ ಭಾರತೀಯರು ಸಾವನ್ನಪ್ಪಿದ್ದಾರೆ. 40ಕ್ಕೂ ಅಧಿಕ ಮಂದಿ ಇಂದಿಗೂ ರಷ್ಯಾ ಸೇನೆಯಲ್ಲಿದ್ದು, ತನ್ನ ಕುಟುಂಬದೊಂದಿಗಿನ ಸಂಪರ್ಕವನ್ನೇ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ, ಆ ಸಂತ್ರಸ್ತರನ್ನು ಮರಳಿ ಕರೆತರುವ ಬಗ್ಗೆ ಮೋದಿ ಮಾತನಾಡಲಿಲ್ಲ. ರಷ್ಯಾ ಧೋರಣೆಯನ್ನು ಖಂಡಿಸಲಿಲ್ಲ.

Advertisements

ಇದನ್ನು ಓದಿದ್ದೀರಾ? ಉಕ್ರೇನ್ ಯುದ್ಧ | ಬಲವಂತವಾಗಿ ರಷ್ಯಾ ಸೇನೆಗೆ ನೇಮಕ; ರಾಜ್ಯದ ಮೂವರು ಸೇರಿ ನಾಲ್ವರು ಭಾರತೀಯರು ವಾಪಸ್

ಬದಲಾಗಿ, ರಷ್ಯಾ ಪ್ರಧಾನಿ ಪುಟಿನ್‌ರನ್ನು ಮೋದಿ ತಬ್ಬಿ ಕೊಂಡಾಡುತ್ತಿದ್ದಾರೆ. ಸದ್ಯ, ರಷ್ಯಾ ಸೇನೆ ತಾನು ಜೀತದಾಳುಗಳಂತೆ ಇರಿಸಿಕೊಂಡಿದ್ದ ಭಾರತೀಯರನ್ನು ಬಿಡುಗಡೆ ಮಾಡಿದೆ. ಅವರನ್ನು ಬಿಡುಗಡೆ ಮಾಡಿಸಿದ್ದು ನಾನೇ ಎಂಬ ಕ್ರೆಡಿಟ್ ತೆಗೆದುಕೊಳ್ಳಲು ಮೋದಿ ಯತ್ನಿಸುತ್ತಿದ್ದಾರೆ.

ರಷ್ಯಾದ ಕಜಾನ್‌ನಲ್ಲಿ ನಡೆಯುತ್ತಿರುವ 16ನೇ ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ಮೋದಿ ರಷ್ಯಾಗೆ ಹಾರಿದ್ದಾರೆ. “ಮಂಗಳವಾರ (ಅ.22) ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ನಡೆದ ದ್ವಿಪಕ್ಷೀಯ ಸಭೆಯಲ್ಲಿ ಮೋದಿ ಅವರು ರಷ್ಯಾ ಸೇನೆಯಲ್ಲಿ ಉಳಿದಿರುವ ಭಾರತೀಯ ಪ್ರಜೆಗಳನ್ನು ಶೀಘ್ರವಾಗಿ ಬಿಡುಗಡೆ ಮಾಡುವ ವಿಷಯದ ಬಗ್ಗೆ ಚರ್ಚಿಸಿದ್ದಾರೆ” ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಹೇಳಿದ್ದಾರೆ. ಆದರೆ, ಒಂದು ಕರೆಯಲ್ಲೇ ಯುದ್ಧ ನಿಲ್ಲಿಸಿದ ಮೋದಿಗೆ ಒಂದು ಕರೆಯಲ್ಲಿ ರಷ್ಯಾದಲ್ಲಿರುವ ಭಾರತೀಯರನ್ನು ಭಾರತಕ್ಕೆ ಕರೆತರಲು ಈವರೆಗೂ ಸಾಧ್ಯವಾಲಿಲ್ಲವೇ? ಅಲ್ಲದೆ, ಶೀಘ್ರದಲ್ಲೇ ಬಿಡುಗಡೆ ಮಾಡುವ ಬಗ್ಗೆ ಮಾತನಾಡಲಾಗಿದೆ ಎಂದರೆ, ಆ ಭಾರತೀಯರನ್ನು ಬಿಡುಗಡೆ ಮಾಡಲು ಇನ್ನೂ ಎಷ್ಟು ದಿನ ಬೇಕು. ಆದರೂ, ಪುಟಿನ್ ಜೊತೆಗೆ ಮೋದಿ ಅವರು ಇಷ್ಟು ಆಪ್ತತೆಯಿಂದ ವರ್ತಿಸಲು ಕಾರಣವೇನು? ಮೋದಿ ಹೆದರಿದ್ದಾರೆಯೇ?

ಇದನ್ನು ಓದಿದ್ದೀರಾ? ಪ್ರಧಾನಿ ಮೋದಿ ರಷ್ಯಾ ಭೇಟಿ: ನ್ಯಾಟೋ ಶೃಂಗಸಭೆಯಲ್ಲಿ ಅಮೆರಿಕ ಆಕ್ರೋಶ

ಹತ್ತು ವರ್ಷದಲ್ಲಿ ಏಳು ಬಾರಿಗೆ ಮೋದಿ ರಷ್ಯಾ ಭೇಟಿ

ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ 2014ರಿಂದ ಈವರೆಗೆ ಒಟ್ಟು 7 ಬಾರಿ ರಷ್ಯಾಕ್ಕೆ ಭೇಟಿ ನೀಡಿದ್ದಾರೆ. ರಷ್ಯಾ-ಉಕ್ರೇನ್ ಬಿಕ್ಕಟ್ಟು ಆರಂಭವಾಗಿ ಹಲವಾರು ವರ್ಷಗಳೇ ಉರುಳಿವೆ. ರಷ್ಯಾಗೆ 7 ಬಾರಿ ಭೇಟಿ ನೀಡಿರುವ ಮೋದಿ, ಉಕ್ರೇನ್‌ಗೆ ಕೇವಲ ಒಂದು ಬಾರಿ ಮಾತ್ರ ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ. ಆದಾಗ್ಯೂ, ವಿಶ್ವಗುರು ಎನಿಸಿಕೊಂಡಿರುವ ಮೋದಿಗೆ ಉಕ್ರೇನ್-ರಷ್ಯಾ ಯುದ್ಧ ನಿಲ್ಲಿಸಲಾಗಲಿಲ್ಲ. ಈ ನಡುವೆ, ‘ಭಾರತೀಯರನ್ನು ಕರೆ ತರಲು ಮೋದಿ ಯುದ್ಧವನ್ನೇ ನಿಲ್ಲಿಸಿದರು, ಪಪ್ಪಾ…’ ಎಂಬ ಜಾಹೀರಾತು ಮಾಡಿಸಿ, ಟ್ರೋಲಿಗರಿಗೆ ಹಬ್ಬದೌತಣ ನೀಡಿದ್ದೂ ಕೂಡಾ ನಡೆದು ಹೋಗಿದೆ.

ಉಕ್ರೇನ್ ರಷ್ಯಾ ಯುದ್ದದಿಂದಾಗಿ ಉಭಯ ರಾಷ್ಟ್ರಗಳಲ್ಲಿ ಹತ್ತು ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಅದರಲ್ಲೂ ಹೆಚ್ಚಿನ ಉಕ್ರೇನ್ ಪ್ರಜೆಗಳು ಯುದ್ದಕ್ಕೆ ಬಲಿಯಾಗಿದ್ದಾರೆ. ರಷ್ಯಾದ ಈ ರಕ್ತದ ಹಪಾಹಪಿಯನ್ನು ವಿರೋಧಿಸಬೇಕಾದ ಪ್ರಧಾನಿ ಮೋದಿ ರಷ್ಯಾದೊಂದಿಗೆ ಸ್ನೇಹವನ್ನು ಇನ್ನಷ್ಟು ಬಲಿಷ್ಠಗೊಳಿಸುತ್ತಿದ್ದಾರೆ.

ಉಕ್ರೇನ್ ಪರವಾಗಿ ಅಲ್ಲದಿದ್ದರೂ ಭಾರತೀಯರನ್ನು ರಷ್ಯಾ ತನ್ನ ಲಾಭಕ್ಕೆ ಬಳಸಿಕೊಂಡಾಗಲಾದರೂ ಪ್ರಧಾನಿ ಮೋದಿ ಅವರು ರಷ್ಯಾ ನಡೆಯ ವಿರುದ್ದ ಧನಿ ಎತ್ತಬೇಕಾಗಿತ್ತು. ಅದನ್ನ ಬಿಟ್ಟು ರಷ್ಯಾದಲ್ಲಿ ಭಾರತೀಯರ ಮೇಲೆ ಅಮಾನುಷ ಹಿಂಸೆ ನಡೆದು, ಸಾವು ನೋವುಗಳು ಸಂಭವಿಸಿದ ಬಳಿಕ ರಕ್ಷಣೆಯ ನಾಟಕವಾಡಿದರೆ ಎಷ್ಟು ಸರಿ? ಪುಟಿನ್ ಹೇಳುವಂತೆ ಮೋದಿ-ಪುಟಿನ್ ಉತ್ತಮ ಸ್ನೇಹಿತರಾದರೆ ರಷ್ಯಾ ಸೇನೆಯಲ್ಲಿ ಸಾವಿನ ಕಪಿಮುಷ್ಠಿಯಲ್ಲಿರುವ ಭಾರತೀಯರೆಲ್ಲರನ್ನೂ ತವರೂರಿಗೆ ಕರೆತರಲಿ. ಒಮ್ಮೆ 40 ಜನರ, ಮತ್ತೊಮ್ಮೆ 60 ಜನರ ಬಿಡುಗಡೆ ಎಂಬ ಇನ್‌ಸ್ಟಾಲ್‌ಮೆಂಟ್ ಸಿಸ್ಟಮ್ ಯಾಕೆ?

Mayuri
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

1 COMMENT

  1. ಒಬ್ಬ ನಾರ್ಸಿಸಿಸ್ಟ್ ನಾಯಕ ತನ್ನೆಲ್ಲ ತಿಕ್ಕಲುತನ , ತೆವಲುತನದ ಮತ್ತಿನಲ್ಲಿ ಜನಮಾನಸವನ್ನು ತನ್ನ ಮೋಡಿಯ ಬಲೆಯನ್ನು ಬೀಸಿ ಬಂಧಿಯಾಗಿಸುವ ಪ್ಯಾಟರ್ನ್ ಇನ್ನು ಔಟ್ ಡೇಟ್ ಆಗುವ ದಿನ ದೂರವಿಲ್ಲ…ಇದೇ ರೀತಿಯ ಒಂದು ಪರೋಡಿ ಮಿ. ಬೀನ್ಸ್ ಹಾಲೀಡೆ ಸಿನೆಮಾದ ಕ್ಲೈಮಾಕ್ಸ್ ದೃಶ್ಯ ನೋಡಿ ಆನಂದಿಸಬಹುದು…
    https://youtu.be/uNg13Ju5HN8?si=3P80GLAv6qnkiJg_

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಝಾದಲ್ಲಿ ಕದನ ವಿರಾಮ ಪ್ರಸ್ತಾಪಕ್ಕೆ ಒಪ್ಪಿಕೊಂಡ ಹಮಾಸ್: ವರದಿ

ಗಾಝಾದ ಮೇಲೆ ಇಸ್ರೇಲ್ ದಾಳಿ ಕೊನೆಗೊಳಿಸುವ ನಿಟ್ಟಿನಲ್ಲಿ ಕದನ ವಿರಾಮ ಪ್ರಸ್ತಾಪದ...

ಚುನಾವಣೆ ಆಯೋಗದ ಪತ್ರಿಕಾಗೋಷ್ಠಿ ಆರೋಪಗಳಿಗೆ ಉತ್ತರ ಕೊಟ್ಟಿತೆ? ಉಳಿದಿರುವ ಪ್ರಶ್ನೆಗಳೇನು?

ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ಆಯೋಗದ ಈ ನಡೆಯನ್ನು "ಸಂವಿಧಾನಕ್ಕೆ ಅಪಮಾನ"...

ದರೋಡೆ ಮಾಡಿ ಕೊಡುಗೆ ನೀಡುವ ಮಾಡರ್ನ್ ರಾಬಿನ್ ಹುಡ್- ಮೋದಿ!

ಇಂಗ್ಲೆಂಡಿನ ಜನಪದ ಕಳ್ಳ ರಾಬಿನ್ ಹುಡ್ ಶ್ರೀಮಂತರ ಬಂಗಲೆಗಳನ್ನು ದರೋಡೆ ಮಾಡಿ...

Download Eedina App Android / iOS

X