ನಿರಂತರ ಮಳೆಯಿಂದಾಗಿ ನೇಪಾಳದಲ್ಲಿ ಭಾರೀ ಪ್ರವಾಹ ಉಂಟಾಗಿದ್ದು ಈವರೆಗೆ ಕನಿಷ್ಠ 39 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಶುಕ್ರವಾರದಿಂದ ನೇಪಾಳದ ಕೆಲವು ಭಾಗಗಳು ಮಳೆಯಿಂದ ಜಲಾವೃತವಾಗಿದ್ದು, ವಿಪತ್ತು ಅಧಿಕಾರಿಗಳು ಹಠಾತ್ ಪ್ರವಾಹದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಕಠ್ಮಂಡುವಿನಲ್ಲಿ ಒಂಬತ್ತು ಮಂದಿ, ಲಲಿತ್‌ಪುರದಲ್ಲಿ 16 ಮಂದಿ, ಭಕ್ತಾಪುರದಲ್ಲಿ ಐವರು, ಕಾವ್ರೆಪಾಲಂಚೌಕ್‌ನಲ್ಲಿ ಮೂವರು, ಪಂಚತಾರ್ ಮತ್ತು ಧನಕುಟಾದಲ್ಲಿ ತಲಾ ಇಬ್ಬರು, ಝಾಪಾ ಮತ್ತು ಧಾಡಿಂಗ್‌ನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.
ಇದನ್ನು ಓದಿದ್ದೀರಾ? ನೇಪಾಳ | ನದಿಗೆ ಉರುಳಿದ 40 ಪ್ರಯಾಣಿಕರಿದ್ದ ಭಾರತದ ಬಸ್; 11 ಮಂದಿ ಸಾವು
ಪ್ರವಾಹದಲ್ಲಿ ಒಟ್ಟು 11 ಮಂದಿ ನಾಪತ್ತೆಯಾಗಿದ್ದಾರೆ. ಕಠ್ಮಂಡುವಿನಲ್ಲಿ 226 ಮನೆಗಳು ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿದೆ ಎಂದು ವರದಿಯಾಗಿದೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೇಪಾಳ ಪೊಲೀಸರ ಸುಮಾರು 3,000 ಭದ್ರತಾ ಸಿಬ್ಬಂದಿಯ ರಕ್ಷಣಾ ತಂಡವನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Incessant rain causes floods and landslides in many areas in Nepal disturbing normal life.
— DD News (@DDNewslive) September 28, 2024
Incessant rainfall for the past few days in Nepal has increased the water level in almost all the rivers from Arun in Sankhuwasabha in the east to Banaganga in Kapilvastu in the west to a… pic.twitter.com/IF8ZOQF4Ay
