ಸುಮಾರು 75 ಜನರನ್ನು ತುಂಬಿಕೊಂಡು ಸಾಗುತ್ತಿದ್ದ ಬಸ್ ಬಂಡೆಯಿಂದ ಪ್ರಪಾತಕ್ಕೆ ಉರುಳಿದ್ದು, ಸುಮಾರು 21 ಮಂದಿ ಸಾವನ್ನಪ್ಪಿರುವ ಘಟನೆ ಶ್ರೀಲಂಕಾದಲ್ಲಿ ಭಾನುವಾರ ನಡೆದಿದೆ. ಘಟನೆಯಲ್ಲಿ 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ದಶಕಗಳಲ್ಲಿ ಶ್ರೀಲಂಕಾದಲ್ಲಿ ನಡೆದ ಅತ್ಯಂತ ಭೀಕರ ರಸ್ತೆ ಅಪಘಾತಗಳಲ್ಲಿ ಇದು ಒಂದಾಗಿದೆ ಎನ್ನಲಾಗಿದೆ. ಸರ್ಕಾರಿ ಸ್ವಾಮ್ಯದ ಬಸ್ ಕೋಟ್ಮಲೆಯ ಮಧ್ಯ ಗುಡ್ಡಗಾಡು ಪ್ರದೇಶದ ಮೂಲಕ ಪ್ರಯಾಣಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದೆ. ಬೆಳಗಿನ ಜಾವ ಬಂಡೆಯ ಪಕ್ಕದ ರಸ್ತೆಯಿಂದ ಉರುಳಿ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಶ್ರೀಲಂಕಾ| ಪ್ರೇಕ್ಷಕರೆಡೆಗೆ ನುಗ್ಗಿದ ರೇಸಿಂಗ್ ಕಾರು; ಏಳು ಮಂದಿ ಸಾವು
ಇದು ಸುಮಾರು 75 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಬಸ್‌ನ ಸಾಮರ್ಥ್ಯಕ್ಕಿಂತ ಸುಮಾರು 20 ಹೆಚ್ಚು ಮಂದಿ ಬಸ್‌ನಲ್ಲಿದ್ದರು. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
“ಇದು ಬಸ್‌ನಲ್ಲಿ ಸಮಸ್ಯೆ ಉಂಟಾಗಿರುವುದರಿಂದ ಸಂಭವಿಸಿರುವ ಅಪಘಾತವೇ ಅಥವಾ ಚಾಲಕ ನಿದ್ದೆಗೆ ಜಾರಿ ಅಪಘಾತ ಸಂಭವಿಸಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ನಾವು ಕಾರಣ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ” ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ತಿಳಿಸಿರುವುದಾಗಿ ಎಎಫ್‌ಪಿ ವರದಿ ಮಾಡಿದೆ.
බස් එකේ හමුදා නිලධාරියාගේ වික්රමය | බිහිසුණු බස් අනතුර සිදුවූ හැටිත් | මගියෙක් හෙළිකරයි pic.twitter.com/4u5GklM8Oh
— NewsCenter.lk (@NewsCenterLk) May 11, 2025
“ಹದಿನೈದು ಜನರು ಸಾವನ್ನಪ್ಪಿದ್ದಾರೆ ಮತ್ತು ನಾವು 30 ಜನರನ್ನು ಆಸ್ಪತ್ರೆಗೆ ಕಳುಹಿಸಿದ್ದೇವೆ. ಈ ಪೈಕಿ ಹೆಚ್ಚು ಮಂದಿ ಬೌದ್ಧರು” ಎಂದು ಅಧಿಕಾರಿ ತಿಳಿಸಿರುವುದಾಗಿ ವರದಿಯಾಗಿದೆ.
ಶ್ರೀಲಂಕಾದಲ್ಲಿ ವಾರ್ಷಿಕವಾಗಿ ಸರಾಸರಿ 3,000 ರಸ್ತೆ ಅಪಘಾತ ಸಾವುಗಳು ಸಂಭವಿಸುತ್ತಿದ್ದು, ದ್ವೀಪದ ರಸ್ತೆಗಳು ವಿಶ್ವದ ಅತ್ಯಂತ ಅಪಾಯಕಾರಿ ರಸ್ತೆಗಳಲ್ಲಿ ಒಂದಾಗಿದೆ. 2005ರ ಏಪ್ರಿಲ್‌ನಲ್ಲಿ ಪೋಲ್‌ಗಹವೆಲಾ ಪಟ್ಟಣದ ಲೆವೆಲ್ ಕ್ರಾಸಿಂಗ್‌ನಲ್ಲಿ ನಡೆದ ಅಪಘಾತದ ಬಳಿಕ ನಡೆದ ಅತ್ಯಂಕ ಭೀಕರ ಅಪಘಾತ ಇದಾಗಿದೆ ಎನ್ನಲಾಗಿದೆ. 2005ರ ಅಪಘಾತದಲ್ಲಿ 37 ಪ್ರಯಾಣಿಕರು ಸಾವನ್ನಪ್ಪಿದರು.
