ಶ್ರೀಲಂಕಾ| ಪ್ರೇಕ್ಷಕರೆಡೆಗೆ ನುಗ್ಗಿದ ರೇಸಿಂಗ್ ಕಾರು; ಏಳು ಮಂದಿ ಸಾವು

Date:

ಶ್ರೀಲಂಕಾದ ದಿಯಾತಲಾವಾದಲ್ಲಿ ಭಾನುವಾರ ನಡೆದ ಫಾಕ್ಸ್ ಹಿಲ್ ಸೂಪರ್ ಕ್ರಾಸ್ 2024 ರೇಸಿಂಗ್ ಈವೆಂಟ್‌ನಲ್ಲಿ ರೇಸಿಂಗ್ ಕಾರು ಪ್ರೇಕ್ಷಕರೆಡೆಗೆ ನುಗ್ಗಿದ್ದು ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು 20 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ಎಂಟು ವರ್ಷದ ಮಗುವೂ ಸೇರಿದೆ.

ಎರಡು ಅತಿವೇಗದ ರೇಸಿಂಗ್ ಕಾರುಗಳು ನಿಯಂತ್ರಣ ತಪ್ಪಿ ವೀಕ್ಷಕರ ಗುಂಪಿನೆಡೆಗೆ ನುಗ್ಗಿದೆ. ಈ ಕಾರಣದಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸ್ ಮಾಧ್ಯಮ ವಕ್ತಾರ ಡಿಐಜಿ ನಿಹಾಲ್ ತಲ್ದುವಾ ತಿಳಿಸಿರುವುದಾಗಿ ಶ್ರೀಲಂಕಾ ಮೂಲದ ಡೈಲಿ ಮಿರರ್ ವರದಿ ಮಾಡಿದೆ.

ಗಾಯಾಳುಗಳನ್ನು ದೀಯತಲಾವ ಮೂಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಗಂಭೀರ ಗಾಯಗೊಂಡ ಮೂವರನ್ನು ಬದುಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದನ್ನು ಓದಿದ್ದೀರಾ?  ಚುನಾವಣಾ ಪ್ರಚಾರದ ವೇಳೆ ಶೋಭಾ ಕರಂದ್ಲಾಜೆ ಕಾರು ಅಪಘಾತ: ಬಿಜೆಪಿ ಕಾರ್ಯಕರ್ತ ಸಾವು

ಮೃತರು ಶ್ರೀಲಂಕಾದ ಅವಿಸ್ಸಾವೆಲ್ಲಾ, ಮಾತಾರಾ, ಅಕುರೆಸ್ಸಾ ಮತ್ತು ಸೀದುವಾ ಪ್ರದೇಶದವರು ಆಗಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಇನ್ನು ಈ ಭೀಕರ ಅಪಘಾತದ ನಂತರ ಸಂಘಟಕರು ಎಲ್ಲಾ ಕಾರು ರೇಸ್‌ಗಳನ್ನು ರದ್ದುಗೊಳಿಸಿದ್ದಾರೆ ಎಂದು ಡೈಲಿ ಮಿರರ್ ವರದಿ ಹೇಳಿದೆ.

ಶ್ರೀಲಂಕಾ ಮಿಲಿಟರಿ ಅಕಾಡೆಮಿ ದಿಯಾತಲಾವಾ ಮತ್ತು ಶ್ರೀಲಂಕಾ ಆಟೋಮೊಬೈಲ್ ಸ್ಪೋರ್ಟ್ಸ್‌ನ ಸಹಯೋಗದಲ್ಲಿ ಫಾಕ್ಸ್ ಹಿಲ್ ಸೂಪರ್ ಕ್ರಾಸ್‌ನ ಅತ್ಯಾಕರ್ಷಕ 28 ನೇ ಆವೃತ್ತಿಯನ್ನು ಈ ಭಾನುವಾರ ದಯತಲಾವಾದಲ್ಲಿ ಆರಂಭಿಸಲಾಗಿತ್ತು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಲೋವಾಕಿಯಾ ಪ್ರಧಾನಿ ರಾಬರ್ಟ್ ಫಿಕೋ ಮೇಲೆ ಭೀಕರ ಗುಂಡಿನ ದಾಳಿ: ಪರಿಸ್ಥಿತಿ ಚಿಂತಾಜನಕ

ಸ್ಲೋವಾಕಿಯಾ ಪ್ರಧಾನಿ ರಾಬರ್ಟ್ ಫಿಕೋ ಮೇಲೆ ಭೀಕರ ಗುಂಡಿನ ದಾಳಿ ನಡೆದಿದ್ದು,...

ಲಂಡನ್‌ನಲ್ಲಿ ಭಾರತೀಯ ಮೂಲದ ಮಹಿಳೆಯ ಹತ್ಯೆ

ಲಂಡನ್‌ನ ಬರ್ಂಟ್ ಓಕ್‌ನಲ್ಲಿ 66 ವರ್ಷದ ಭಾರತೀಯ ಮೂಲದ ಬ್ರಿಟಿಷ್ ಪ್ರಜೆಯನ್ನು 22...

ಭಾರತ ಮತ್ತು ಇರಾನ್ ನಡುವೆ ಬಂದರು ಒಪ್ಪಂದ; ಭಾರತದ ಪಾಲಿಗೆ ದೊಡ್ಡ ವ್ಯವಹಾರ

ಭಾರತದ ತೈಲ ವ್ಯಾಪಾರದಲ್ಲಿ ಯಾವುದೇ ಅಡೆತಡೆ ಉಂಟಾದರೆ, ಅದು ತೈಲದ ಖರೀದಿ...