ಕಸಿದುಕೊಳ್ಳಲು ಪನಾಮಾ ಕಾಲುವೆಯು ಅಮೆರಿಕ ನೀಡಿದ ಉಡುಗೊರೆಯಲ್ಲ ಎಂದು ರಿಪಬ್ಲಿಕ್ ಆಫ್ ಪನಾಮಾದ ಅಧ್ಯಕ್ಷ ಜೋಸ್ ರೌಲ್ ಮುಲಿನೊ ಹೇಳಿದ್ದಾರೆ.
ಕೆನಡಾ, ಗ್ರೀನ್‌ಲ್ಯಾಂಡ್ ಜತೆಗೆ ಪನಾಮಾ ಕಾಲುವೆಯನ್ನು ಅಮೆರಿಕಾಗೆ ಸೇರಿಸಿಕೊಳ್ಳುತ್ತೇನೆ ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಸ್ವಿಟ್ಜರ್ಲೆಂಡ್‌ನ ಡಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ. ‘ಟ್ರಂಪ್ ಹೇಳಿದ್ದನ್ನು ಸಾರಾಸಗಟಾಗಿ ತಿರಸ್ಕರಿಸುತ್ತೇವೆ. ಪನಾಮಾ ಕಾಲುವೆಯು ಪನಾಮಾಕ್ಕೇ ಸೇರಿದ್ದಾಗಿದ್ದು, ಮುಂದೆಯೂ ಪನಾಮಾದ್ದೇ ಆಗಿರಲಿದೆ. ಈ ಕಾಲುವೆಯು ಅಮೆರಿಕ ನೀಡಿದ ಯಾವುದೇ ರಿಯಾಯಿತಿ ಅಥವಾ ಉಡುಗೊರೆಯಲ್ಲ’ ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕುಸಿಯುತ್ತಿರುವ ಸಾಮ್ರಾಜ್ಯದ ಹೊಸ ಅಧಿಪತಿ ಡೊನಾಲ್ಡ್ ಟ್ರಂಪ್
ಟ್ರಂಪ್ ಇಂತಹ ವಿಚಾರದಲ್ಲಿ ಗಂಭೀರವಾಗಿರಬೇಕು ಎಂದು ಅಧ್ಯಕ್ಷ ಜೋಸ್ ರೌಲ್ ಮುಲಿನೊ ತಿಳಿಸಿದ್ದಾರೆ.
ನಾವು ಕಾಲುವೆಯನ್ನು ಚೀನಾಗೆ ಕೊಟ್ಟಿರಲಿಲ್ಲ, ಪನಾಮಾಗೆ ನೀಡಿದ್ದೆವು. ನಾವು ಅದನ್ನು ವಾಪಸ್ ಪಡೆಯುತ್ತೇವೆ ಎಂದು ಟ್ರಂಪ್ ಹೇಳಿದ್ದರು.
1914ರಲ್ಲಿ ಉದ್ಘಾಟಿಸಲಾದ ಕಾಲುವೆಯನ್ನು ಅಮೆರಿಕ ನಿರ್ಮಿಸಿತ್ತು. ಎರಡು ದಶಕಗಳ ಹಿಂದೆ ಸಹಿ ಮಾಡಿದ ಒಪ್ಪಂದದಂತೆ 1999ರ ಡಿಸೆಂಬರ್ 31 ರಂದು ಪನಾಮಾಗೆ ಕಾಲುವೆಯನ್ನು ಹಸ್ತಾಂತರಿಸಲಾಗಿತ್ತು.
