ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ನಡುವೆ ನಡೆಯುತ್ತಿರುವ ಸಂಘರ್ಷದ ಬಿಸಿ ಗುಜರಾತಿನ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಇಂದು ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯಕ್ಕೂ ತಟ್ಟಿದೆ.
A fan breached the field to meet Virat Kohli. pic.twitter.com/c6U9aTrB0r
— Mufaddal Vohra (@mufaddal_vohra) November 19, 2023
ಇಂದಿನ ಫೈನಲ್ ಪಂದ್ಯದ ವೇಳೆ ಕೊಹ್ಲಿ ಅಭಿಮಾನಿ ಹಾಗೂ ಪ್ಯಾಲೆಸ್ತೀನ್ ಪರ ಪ್ರತಿಭಟನಾಕಾರನೋರ್ವ ಇದ್ದಕ್ಕಿದ್ದಂತೆ ಮೈದಾನಕ್ಕೆ ನುಗ್ಗಿದ್ದಾನೆ. ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಪಿಚ್ ಹತ್ತಿರಕ್ಕೆ ಧಾವಿಸಿ, ಕ್ರೀಸ್‌ನಲ್ಲಿದ್ದ ಕೊಹ್ಲಿಯನ್ನು ತಬ್ಬಿಕೊಂಡಿದ್ದಾನೆ.
ಆತ ‘ಪ್ಯಾಲೆಸ್ತೀನ್ ಮೇಲೆ ಬಾಂಬ್ ದಾಳಿ ನಿಲ್ಲಿಸಿ’ ಎಂದು ಬರೆದಿದ್ದ ಟೀ ಶರ್ಟ್ ಕೂಡ ಧರಿಸಿದ್ದಲ್ಲದೇ, . ಪ್ಯಾಲೆಸ್ತೀನ್ ಧ್ವಜ ಸಹ ಆತನ ಕೈಯಲ್ಲಿತ್ತು. ಅಲ್ಲದೇ, ಧ್ವಜದ ಬಣ್ಣವನ್ನು ಹೊಂದಿರುವ ಮಾಸ್ಕ್ ಕೂಡ ಧರಿಸಿದ್ದ. ಇದ್ದಕ್ಕಿದ್ದಂತೆ ಮೈದಾನಕ್ಕೆ ನುಗ್ಗಿದ ಪರಿಣಾಮ ಪಂದ್ಯಕ್ಕೆ ಸ್ವಲ್ಪ ಹೊತ್ತು ಅಡ್ಡಿಯಾಯಿತು.
ಬಳಿಕ ಭದ್ರತಾ ಲೋಪ ಗಮನಿಸಿ ಕ್ರೀಡಾಂಗಣಕ್ಕೆ ಓಡೋಡಿ ಬಂದ ಭದ್ರತಾ ಸಿಬ್ಬಂದಿಗಳು ಹಾಗೂ ಗುಜರಾತ್‌ನ ಕ್ರೈಂ ಬ್ರಾಂಚ್‌ನ ಪೊಲೀಸರು, ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೈದಾನಕ್ಕೆ ನುಗ್ಗಿದ ಯುವಕ ಯಾರು ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
#WATCH : The police arrested the Palestine supporter who breached the security during #ICCWorldCupFinal #CWC2023Final #CWC23Final #CWC23 #INDvsAUS #latestnews #BREAKING_NEWS #JUSTIN pic.twitter.com/0bfaASTCYy
— upuknews (@upuknews1) November 19, 2023
ಇನ್ನು ಯುವಕನ ಸಾಹಸಕ್ಕೆ ನೂರಾರು ಮಂದಿ ನೆಟ್ಟಿಗರು ಬೆಂಬಲ ವ್ಯಕ್ತಪಡಿಸಿದರೆ, ಭದ್ರತಾ ಲೋಪಕ್ಕೆ ಕಾರಣರಾದವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂದಿದೆ.