ಭಾರತದ ಸರಬ್ಜಿತ್ ಸಿಂಗ್ ಹತ್ಯೆಯ ಆರೋಪಿ ಪಾಕಿಸ್ತಾನದ ಭೂಗತ ಪಾತಕಿ ಅಮೀರ್ ಸರ್ಫರಾಜ್‌ನನ್ನು ಇಬ್ಬರು ಅಪರಿಚಿತ ದುಷ್ಕರ್ಮಿಗಳು ಲಾಹೋರ್‌ನಲ್ಲಿ ಗುಂಡಿಕ್ಕಿ ಕೊಂದಿದ್ದಾರೆ.
ಪಾಕ್‌ನ ಪೊಲೀಸರಿಗೆ ಹಲವು ಪ್ರಕರಣಗಳಲ್ಲಿ ಪ್ರಮುಖವಾಗಿ ಬೇಕಾಗಿದ್ದ ಅಮೀರ್ ಸರ್ಪರಾಜ್ ಪಾಕಿಸ್ತಾನದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಸರಬ್ಜಿತ್ ಸಿಂಗ್‌ನನ್ನು 2013 ಏಪ್ರಿಲ್ 23ರಂದು ಅಮೀರ್ ಹಾಗೂ ಆತನ ಸಹಚರರು ಲಾಹೋರ್ ಜೈಲಿನಲ್ಲಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು.
ತೀವ್ರವಾಗಿ ಗಾಯಗೊಂಡಿದ್ದ ಸರಬ್ಜಿತ್ ಮೇ 2, 2013ರಂದು ಮೃತಪಟ್ಟಿದ್ದರು. ಸಾವಿಗೂ ಮುನ್ನ ಸರಬ್ಜಿತ್ ಪಾಕ್‌ನ ಜೈಲುಗಳಲ್ಲಿ 23 ವರ್ಷ ಕಾರಾಗೃಹ ಶಿಕ್ಷೆ ಅನುಭವಿಸಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಯಲಾಗುತ್ತಿರುವ ಸುಳ್ಳುಗಳು, ಬೆತ್ತಲಾಗುತ್ತಿರುವ ಬಿಜೆಪಿ
ಸಾಕ್ಷ್ಯಧಾರ ಕೊರತೆಯಿಂದ ಅಮೀರ್ ಸರ್ಪರಾಜ್‌ನನ್ನು ಪಾಕ್‌ನ ಕೋರ್ಟ್ 2018ರಲ್ಲಿ ನಿರಪರಾಧಿ ಎಂದು ತೀರ್ಪು ನೀಡಿತ್ತು.
ಗೂಢಾಚಾರ ಆರೋಪ ಹಾಗೂ ಪಾಕ್‌ನ ಪಂಜಾಬ್ ಪ್ರಾಂತ್ಯದಲ್ಲಿ 14 ನಾಗರಿಕರನ್ನು ಕೊಂದ ಆರೋಪದ ಮೇಲೆ ಭಾರತದ ಪಂಜಾಬ್‌ನ ನಿವಾಸಿ ಸರಬ್ಜಿತ್ ಸಿಂಗ್‌ನನ್ನು 1990ರಲ್ಲಿ ಬಂಧಿಸಲಾಗಿತ್ತು. 1991ರಲ್ಲಿ ಪಾಕ್‌ನ ಸೇನಾ ಕಾಯ್ದೆಯಡಿ ಸರಬ್‌ಜಿತ್‌ಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು.
ಸರಬ್‌ಜಿತ್‌ಗೆ ಗಲ್ಲು ಶಿಕ್ಷೆ ನೀಡಿರುವುದನ್ನು ಆತನ ಕುಟುಂಬ ಹಾಗೂ ಭಾರತ ಸರ್ಕಾರ ನಿರಾಕರಿಸಿತ್ತು. ಕೃಷಿ ಮಾಡುವ ಸಂದರ್ಭ ಅರಿವಿಲ್ಲದೆ ಸರಬ್ಜಿತ್ ಪಾಕ್ ಗಡಿ ಪ್ರವೇಶಿಸಿದ್ದರು ಎಂದು ಕುಟುಂಬದ ಸದಸ್ಯರು ಗೂಢಾಚಾರಿ ಆರೋಪವನ್ನು ತಳ್ಳಿ ಹಾಕಿದ್ದರು.
