ಸ್ಲೋವಾಕಿಯಾ ಪ್ರಧಾನಿ ರಾಬರ್ಟ್ ಫಿಕೋ ಮೇಲೆ ಭೀಕರ ಗುಂಡಿನ ದಾಳಿ ನಡೆದಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿದೆ.
“ದಾಳಿಯಿಂದ ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜಧಾನಿ ಬ್ರಾಟಿಸ್ಲಾವಾದ ಈಶಾನ್ಯಕ್ಕೆ ಸುಮಾರು 150 ಕಿಲೋಮೀಟರ್ ದೂರದಲ್ಲಿರುವ ಹ್ಯಾಂಡ್ಲೋವಾ ನಗರದಲ್ಲಿ ಈ ಘಟನೆ ನಡೆದಿದೆ. ಶಂಕಿತ ಆರೋಪಿಯನ್ನು ಬಂಧಿಸಲಾಗಿದೆ” ಎಂದು ವರದಿ ತಿಳಿಸಿದೆ.
ಮಾಧ್ಯಮ ವರದಿಗಳ ಪ್ರಕಾರ, ರಷ್ಯಾದ ಪರ ಪ್ರಧಾನಿ ಅವರು ಕ್ಯಾಬಿನೆಟ್ ಸಭೆ ನಡೆಸುತ್ತಿದ್ದ ಹೌಸ್ ಆಫ್ ಕಲ್ಚರ್ ಹೊರಗೆ ಗುಂಡಿನ ದಾಳಿ ನಡೆದಿದೆ. ಪಿಎಂ ಫಿಕೋ ಹೌಸ್‌ನ ಹೊರಗೆ ಜನರೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಗುಂಡಿನ ದಾಳಿ ನಡೆದಿದ್ದು, ಇದರ ವಿಡಿಯೋಗಳು ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ.
⚡️⚡️⚡️ The moment of the assassination attempt on Slovak Prime Minister Robert Fico. Five shots are heard in the video. pic.twitter.com/0bhjX795md
— NEXTA (@nexta_tv) May 15, 2024
ಗುಂಡು ತಗುಲಿ ಗಾಯಗೊಂಡಿರುವ ಪ್ರಧಾನಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳದಲ್ಲಿದ್ದ ಪತ್ರಕರ್ತರ ಪ್ರಕಾರ, ಹಲವಾರು ಗುಂಡಿನ ಶಬ್ದಗಳು ಕೇಳಿಬಂದವು. ಗುಂಡು ಹಾರಿಸಿದ ಆರೋಪಿಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕ್ರೂರ ದಾಳಿಯಿಂದ ಆಘಾತಕ್ಕೊಳಗಾಗಿದ್ದೇನೆ ಎಂದು ಸ್ಲೋವಾಕಿಯಾದ ಅಧ್ಯಕ್ಷ ಜುಝಾನಾ ಸಪುಟೋವಾ ಹೇಳಿದ್ದಾರೆ.
ಗುಂಡು ತಗುಲಿದ ಬಳಿಕ ಭದ್ರತಾ ಸಿಬ್ಬಂದಿ ಪ್ರಧಾನಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಸುದ್ದಿ ಸಂಸ್ಥೆ NEXTA ಈ ವೀಡಿಯೊವನ್ನು ಹಂಚಿಕೊಂಡಿದೆ. ರಾಬರ್ಟ್ ಫಿಕೊ ಮೇಲಿನ ದಾಳಿಯ ನಂತರ, ಪ್ರಧಾನ ಮಂತ್ರಿಯ ಭದ್ರತಾ ಸಿಬ್ಬಂದಿ ಅವರನ್ನು ತಮ್ಮ ಬೆಂಗಾವಲು ಪಡೆ ಆಸ್ಪತ್ರೆಗೆ ಕರೆದೊಯ್ದರು.
ಸ್ಲೋವಾಕ್ ಮಾಧ್ಯಮದಿಂದ ಪಡೆದ ಆರಂಭಿಕ ಮಾಹಿತಿಯ ಪ್ರಕಾರ, ಫಿಕೊಗೆ ಹಲವಾರು ಬಾರಿ ಗುಂಡು ಹಾರಿಸಲಾಯಿತು. ಒಂದು ಗುಂಡು ಹೊಟ್ಟೆಗೆ ಹೊಕ್ಕಿದ್ದರೆ, ತಲೆಗೆ ಒಂದು ಗುಂಡು ಹೊಕ್ಕಿದೆ. ಸದ್ಯ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದೆ.
The Shooter who attempted to Assassinate the Prime Minister of Slovakia, Robert Fico earlier today has been Identified by Slovakian Media as a 71-Year-Old Poet and Member of the Pro-Western Progressive Party, Juraj Cintula from the Town of Levice. Cintula had previously been… pic.twitter.com/KebqzkD5NM
— OSINTdefender (@sentdefender) May 15, 2024
ಸ್ಥಳೀಯ ಟಿವಿ ಚಾನೆಲ್ ಮಾರ್ಕಿಜಾ ವರದಿ ಮಾಡಿರುವ ಪ್ರಕಾರ ದಾಳಿಕೋರನನ್ನು ಖಾಸಗಿ ಭದ್ರತಾ ಕಂಪನಿಯೊಂದ ಮಾಜಿ ಉದ್ಯೋಗಿ ಹಾಗೂ ಕವನ ಸಂಕಲನವೊಂದರ ಕರ್ತೃ 71 ವರ್ಷದ ಜುರಾಜ್ ಸಿಂಟುಲಾ ಎಂದು ತಿಳಿಸಿದೆ.
‼️ Robert #Fico was taken to hospital in Banská Bystrica after an assassination attempt pic.twitter.com/4XzmbU8wAJ
— NEXTA (@nexta_tv) May 15, 2024
